http://4.bp.blogspot.com/-mgPJHJ3SwMo/VakxOQGH7gI/AAAAAAAAA6w/Dl7zVXlyCcc/w1200-h630-p-k-no-nu/hammer%2Bwar.jpg

ದುರ್ಯೋಧನ ಅನ್ನೋ ಹೆಸರಿನ ಅರ್ಥನೇ ಅವನನ್ನ ಯಾರೂ ಸೋಲಿಸಕ್ಕೆ ಆಗಲ್ಲ ಅಂತ. ದುರ್ಯೋಧನ ಮಹಾದುಷ್ಟ ಅಂತಾರೆ. ಆದರೆ ಯಾರೂ ಪೂರ್ತಿ ದುಷ್ಟರೂ ಅಲ್ಲ ಅಥ್ವಾ ಪೂರ್ತಿ ಒಳ್ಳೆಯವ್ರೂ ಅಲ್ಲ. ಒಳ್ಳೆಯವರು ಅಂತ ಯಾರಾದ್ರೂ ಹೆಸರು ಮಾಡಿದ್ ಮೇಲೆ ಅವರ ಕೆಟ್ಟತನಗಳನ್ನ ಸ್ವಲ್ಪ ಮುಚ್ಚಿ ಹಾಕುತ್ತೆ ಪ್ರಪಂಚ. ಕೆಟ್ಟವ್ರು ಅಂತ ಒಬ್ರನ್ನ ಲೇಬಲ್ ಮಾಡಿದ್ ಮೇಲೆ ಅವರ ಒಳ್ಳೆತನಗಳು ನಮ್ಗೆ ಕಾಣ್ಸೊಲ್ಲ. ದುರ್ಯೋಧನನ ವಿಷ್ಯದಲ್ಲೂ ಹೀಗಾಗಿರ್ಬಹುದು ಅಂತ ನಂಬೋಕೆ ಕೆಲವು ಕಾರಣ ಇದೆ. ನೀವೇ ಓದಿ ನೋಡಿ.

1. ದುರ್ಯೋಧನ ಸುರಸುಂದರ

ಇವ್ನು ಎಂಥ ಸುಂದರ ಅಂದ್ರೆ ಕೃಷ್ಣನ ತಂಗಿ ಸುಭದ್ರೆಗೆ ಇವ್ನನ್ನ ನೋಡ್ತಿದ್ ಹಾಗೆ ಇವ್ನ ಮೇಲೆ ಪ್ರೀತಿ ಹುಟ್ತು. ಆದರೆ ದುರ್ಯೋಧನ ಕರ್ಣನ್ನ ಸಪೋರ್ಟ್ ಮಾಡಿ ಅವ್ನನ್ನ ಅಂಗ ದೇಶದ ರಾಜ ಮಾಡಿದ್ರಿಂದ ಎಲ್ಲಾ ಬದಲಾಗಿಹೋಯ್ತು.

2. ಕರ್ಣನ ಒಬ್ಬನೇ ಒಬ್ಬ ಸ್ನೇಹಿತ ಅಂದ್ರೆ ಅದು ದುರ್ಯೋಧನ

ಕರ್ಣನ್ನ ಎಲ್ಲಾರೂ ಅವಮಾನ ಮಾಡ್ತಾರೆ, ಆದ್ರೆ ದುರ್ಯೋಧನ ಕೈ ಬಿಡಲ್ಲ. ಅವನನ್ನ ಅಂಗದೇಶದ ರಾಜನನ್ನಾಗಿ ಮಾಡ್ತಾನೆ. ಮುಂದೆ ಇವ್ರಿಬ್ರೂ ಪ್ರಾಣಸ್ನೇಹಿತರು.

ಮೂಲ

3. ದುರ್ಯೋಧನ ಪಕ್ಷಪಾತ ಇಲ್ಲದೇ ಎಲ್ಲಾ ವಿಚಾರದ ಬಗ್ಗೆ ಯೋಚ್ನೆ ಮಾಡ್ತಿದ್ದ

ಅಧಿಕಾರ ಮತ್ತು ಪ್ರತಿಭೆಯ ಬಗ್ಗೆ ದುರ್ಯೋಧನ ಕೇಳಿದ ಲಾಜಿಕಲ್ ಪ್ರಶ್ನೆಗಳಿಗೆ ಉತ್ತರಿಸಲಾಗದೆ ದ್ರೋಣಚಾರ್ಯರು ಭೀಷ್ಮಂಗೆ ದುರ್ಯೋಧನನ ಬಗ್ಗೆ ದೂರು ಹೇಳ್ತಿದ್ರು. ಇವನ ಪ್ರಶ್ನೆಗಳು ವ್ಯವಸ್ಥೆಯ ದೋಷಗಳನ್ನ ಎತ್ತಿ ತೋರಿಸ್ತಿತ್ತು, ಇದನ್ನ ಸಂಪ್ರದಾಯವಾದಿ ಬುದ್ದಿ ಇದ್ದವ್ರು ಒಪ್ಕೊತಿರ್ಲಿಲ್ಲ.

4. ಏಕಲವ್ಯನಿಗೆ ಹೇಳ್ಕೊಡಲ್ಲ ಅಂದಾಗ ದುರ್ಯೋಧನನಿಗೆ ಬೇಜಾರಾಗಿತ್ತು

ಅರ್ಹತೆ ಇದ್ರೂ ಜಾತಿಬೇಧದಿಂದಾಗಿ ಏಕಲವ್ಯನಿಗೆ ದ್ರೋಣ ಬಿಲ್ವಿದ್ಯೆ ಹೇಳಿಕೊಡೊಲ್ಲ. ಆಗ ದುರ್ಯೋಧನನಿಗೆ ಬೇಜಾರಾಗಿತ್ತು. ಈ ರೀತಿಯ ವ್ಯವಸ್ಥೆ ಅವನಿಗೆ ಬೇಸರ ತರ್ತಿತ್ತು.

ಮೂಲ

5. ದೀನ ದುರ್ಬಲರ ಬಗ್ಗೆ ಅನುಕಂಪ ತೋರಿಸ್ತಿದ್ದ

ಬಿಲ್ವಿದ್ಯೆ ಕಲಿಸೋ ಪ್ರಸಂಗದಲ್ಲಿ ಮರದಲ್ಲಿದ್ದ ಗಿಳಿಯನ್ನ ತೋರ್ಸಿ ದ್ರೋಣಾಚಾರ್ಯರು ಅಲ್ಲೇನಿದೆ ಅಂದಾಗ ಅರ್ಜುನ ಕೊಟ್ಟ ಉತ್ತರ ಎಲ್ರಿಗೂ ಗೊತ್ತು. ಆದರೆ ದುರ್ಯೋಧನನಿಗೆ ಅಲ್ಲಿ ಆ ಗಿಳಿ ಮೇಲೆ ಅನುಕಂಪ ಬಂದಿತ್ತಂತೆ. ಗಿಳಿಯನ್ನ ಕೊಲ್ಲೋದು ಅವ್ನಿಗೆ ಇಷ್ಟ ಇರ್ಲಿಲ್ಲ.

6. ಗದಾಯುದ್ಧದಲ್ಲಿ ಭೀಮನ ಸರಿಸಮಾನ ಆಗಿದ್ದ

ಬಲರಾಮನಿಗೂ(ಕೃಷ್ಣನ ಅಣ್ಣ) ದುರ್ಯೋಧನ ಅಂದ್ರೆ ಇಷ್ಟ. ಅದ್ರಿಂದ್ಲೇ ಅವನು ದುರ್ಯೋಧನನಿಗೆ ಗದಾವಿದ್ಯೆ ಹೇಳಿಕೊಡ್ತಾನೆ. ಇದನ್ನ ಚೆನ್ನಾಗಿ ಕಲಿತುಕೊಂಡ ದುರ್ಯೋಧನನಿಗೆ ಗದಾವಿದ್ಯೆಯಲ್ಲಿ ಸಾಟಿ ಆಗ್ತಿದ್ದು ಭೀಮ ಒಬ್ನೇ.

ಮೂಲ

7. ಸಮಾಜದ ಕೆಳವರ್ಗಗಳ ಬಗ್ಗೆ, ಬಡವರ ಬಗ್ಗೆ ದುರ್ಯೋಧನನಿಗಿದ್ದ ಕಾಳಜಿ ನೋಡಿ ಭೀಷ್ಮ ಮೆಚ್ಚಿದ್ದ

ಭೀಷ್ಮನಿಗೆ ಒಳಗಿಂದೊಳಗೇ ದುರ್ಯೋಧನನ ಬಗ್ಗೆ ಮಮತೆ ಇತ್ತು. ದುರ್ಯೋಧನನಿಗೂ ಭೀಷ್ಮನ ಬಗ್ಗೆ ಗೌರವ.

ಮೂಲ

8. ವ್ಯವಸ್ಥೆಯನ್ನ ಪ್ರಶ್ನಿಸೋ ಧೈರ್ಯ ಇತ್ತು

ದುರ್ಯೋಧನನಿಗೆ ಸಮಾಜದಲ್ಲಿದ್ದ ಅಸಮಾನತೆ ಎದ್ದು ಕಾಣ್ತಿತ್ತು. ಜಾತಿಬೇಧ, ಜಾತಿಯ ಆಧಾರದಲ್ಲಿ ಕೆಲವರಿಗೆ ಅರ್ಹತೆ ಇದ್ರೂ ಸೌಲಭ್ಯಗಳು ಸಿಗದೆ ಹೋಗೋದು ಅವನಿಗೆ ಬೇಜಾರು ಉಂಟು ಮಾಡ್ತಿತ್ತು.

9. ಮಾಡಿದ ತಪ್ಪಿನ ಜವಾಬ್ದಾರಿ ಹೊತ್ತಿದ್ದ

ದ್ರೌಪದಿಯ ವಸ್ತ್ರಾಪಹರಣ ಆದ್ಮೇಲೆ ಕೌರವರೆಲ್ಲ ಒಬ್ಬೊಬ್ರು ಒಂದೊಂದು ಸಮಜಾಯಿಷಿ ಕೊಡ್ತಾರೆ. ಆದರೆ ದುರ್ಯೋಧನ ಏನೂ ಹೇಳೊಲ್ಲ.

ಮೂಲ

ದುರ್ಯೋಧನ ಇಷ್ಟೆಲ್ಲಾ ಒಳ್ಳೇದು ಮಾಡಿದ್ರೂ ಅವನ ಉದ್ದೇಶ ಸರಿ ಇತ್ತಾ?

ದುರ್ಯೋಧನ ಪಾಂಡವರ ಬಗ್ಗೆ ಸಾಧಿಸಿದ ಛಲ ಯಾರಿಗೆ ತಾನೆ ಗೊತ್ತಿಲ್ಲ. ದುರ್ಯೋಧನ ರಾಜ್ಯಭಾರ ಮಾಡಕ್ಕೆ ಸಲಹೆ ತೊಗೊತಿದ್ದಿದ್ದು ತನ್ನ ಮಾವ ಶಕುನಿಯಿಂದ. ಶಕುನಿ ಕಣಿಕ ನೀತಿ ಪಾಲಿಸ್ತಿದ್ದ. ಈ ಕಣಿಕ ನೀತಿ ಎಲ್ಲಾರ್ಗೂ ಮೇಲ್ನೋಟಕ್ಕೆ ಚೆನ್ನಾಗಿದ್ಯಲ್ಲ ಅನ್ನಿಸುತ್ತೆ ಆದ್ರೆ ಒಳಗೊಳಗೇ ದೊಡ್ಡ ದೊಡ್ಡ ಮೋಸದ ಜಗತ್ತು ನಿರ್ಮಾಣ ಮಾಡುವ ಹಾಗೆ ಮಾಡ್ಸುತ್ತೆ. ದುರ್ಯೋಧನನೂ ಈ ಕಣಿಕ ನೀತಿ ಅನುಕರಿಸಿದ್ದು. ಅವನು ಮಾಡಿದ ಎಲ್ಲಾ ಕಾರ್ಯ ಇನ್ನೊಬ್ಬರಿಗೆ, ನೊಂದವರಿಗೆ ಸಹಾಯ ಮಾಡ್ತಿರೋ ಥರ ಕಾಣಿಸ್ತಿದ್ರೂ ಅದ್ರಿಂದ ಜನಕ್ಕೆ ದೊಡ್ಡ ಮೋಸ ಆಗ್ತಿತ್ತು. ದುರ್ಯೋಧನ ಕರ್ಣನ ಗೆಳೆತನ ಮಾಡಿದ್ದು ನಮಗೆಲ್ಲ ಆದರ್ಶ ಅನ್ನಿಸಿದ್ರೂ ಒಳಗೊಳಗೆ ಅವನ ಕೆಲಸಗಳ ಉದ್ದೇಶ ಮಾತ್ರ ಸರಿಯಾಗಿರ್ಲಿಲ್ಲ. ಪಾಂಡವರನ್ನ ಬಗ್ಗುಬಡೀಬೇಕು, ಅದಕ್ಕೆ ಅವರಷ್ಟು ಶಕ್ತರು ಬೇಕು ಅನ್ನೋದು ಅವನ ನಿಜವಾದ ಮನಸ್ಸಾಗಿತ್ತು.