http://www.enlightenlifestyle.com/wp-content/uploads/2016/02/How-To-Get-Rid-Of-Negative-Thoughts-And-Emotions.jpg

“ನಮ್ಮ ಮಿದಳಿನ ವಿನ್ಯಾಸಾ, ಬ್ಯಾಡಾಗಿರೋ ವಿಷಯಕ್ಕೆಲ್ಲಾ  ಭಾಳ ಸೂಕ್ಷ್ಮ ಆಗಿ ರಿಯಾಕ್ಟ್ ಮಾಡೋ ಹಂಗ ಇರತತಿ. ಅದರಾಗೂ ಭೇದಭಾವಾ ಅನ್ನೋದನ್ನಂತೂ ಮೆದುಳು ಮಾಹಿತಿ ಬರೋ ಆರಂಭದ ಸ್ಟೇಜಿನ್ಯಾಗನ ಪತ್ತೆ ಹಚ್ಚಿ ಬಿಡತತಿ.”

 ನಮ್ಮ ಹಣೇಬರಾನ ಹಿಂಗ, ನಂಗ ಅದು ಇಲ್ಲಾ,ಇದು ಇಲ್ಲಾ, ….. ಹಿಂಗ , ಭಾಳ ಮಂದಿ ನೆಗೆಟಿವ್ ಆಗಿ ವಿಚಾರಾ ಮಾಡೋದನ್ನ ರೂಡಿ ಮಾಡಿಕೆಂಡ ಬಿಟ್ಟಿರತಾರ. ಬ್ಯಾರೆ ದೇಶದ ಜನಾ ಇದರ ಬಗ್ಗೆ ಒಂದ ಪ್ರಯೋಗಾನ ಮಾಡ್ಯಾರ ನೋಡ್ರಿ.

ಒಂದ ಗುಂಪ ಜನಕ್ಕ ಮದಲ ಪೊಸಿಟಿವ್ ವಿಚಾರಾ ಬರೋವಂತಾ ಚಿತ್ರಗೊಳನ್ನ ತೋರಿಸಿದರು. ಅಂದರ ಚಂದದ ಹೂವು, ಮುದ್ದು ಪ್ರಾಣಿ, ದೊಡ್ಡ ಗಾಡಿ….ಹಿಂಗ. ಆಮೇಲೆ ನೆಗೆಟಿವ್ ಅಥವಾ ನ್ಯೂಟ್ರಲ್ ಭಾವನೆ ಬರೋವಂತಾ ಚಿತ್ರಾ ತೋರಸಿದರಂತ. ಪೊಸಿಟಿವ್ ವಿಚಾರದ ಚಿತ್ರಾ ತೋರಿಸಿದಾಗ ಅವರ ಮಿದಳಿನ್ಯಾಗ  ಮಿಂಚ ಹರದಷ್ಟ ಶಕ್ತಿ ಹೊಮ್ಮಿತಂತ. ಅದ ನೆಗೆಟಿವ್ ಚಿತ್ರಾ ತೋರಿಸಿದಾಗ ಮಿದಳಿನ್ಯಾಗಿನ ಶಕ್ತಿ, ಉತ್ಸಾಹಾ ಎಲ್ಲಾ ಕುಂದಿ ಹೋಗಿಬಿಡತಂತ.

ಅದಕ್ಕ ನಾವು ಯಾವಾಗ್ಲೂ ಚೊಲೋದನ್ನ ವಿಚಾರಾ ಮಾಡಬೇಕು. ಯಾಕಂದ್ರ ಕೆಟ್ಟ ವಿಚಾರಗಳು ಏನ ಇರತಾವು  ನಮ್ಮ ಮಿದಳನ  ಅತಿಕ್ರಮಿಸಿ ಬಿಡತಾವು. ತಲೀನ ಓಡಿಸಿಗೊಡಂಗಿಲ್ಲ ಅವು. ಪೊಸಿಟಿವ್ ವಿಚಾರಾ ಮಾಡಿದರ ಮನಸ್ಸೂ ಚಟುವಟಿಕಿಯಿಂದ ಇರತೇತಿ, ಸಮಸ್ಯೆಗೊಳಿಗೆ ಪರಿಹಾರಾನೂ ಸಿಗತಾವು.

ಈ ನೆಗೆಟಿವ್ ಯೋಚನೆಗಳುನೂ ನಮಗ ಏನಾರ ತ್ರಾಸ ಆದಾಗ, ಅರಾಮಿಲ್ಲದಾಗನ ಬರತಾವು. ಅಂತಾ ಟೈಮಿನ್ಯಾಗ  ನಾವು ತಲೀನ,ಮನಸ್ಸನ ಶಾಂತ ಇಟಗಾಬೇಕು. ಅದಕ್ಕ ನಾವು ಅಂತಾ ಟೈಮಿನ್ಯಾಗ ಪೊಸಿಟಿವ್ ಆಗಿ ವಿಚಾರಾ ಮಾಡಬೇಕು.

ಹಂಗಾರ ನಮ್ಮ ಕೆಟ್ಟ ಪರಿಸ್ಥಿತ್ಯಾಗನೂ ಚೊಲೋ ವಿಚಾರಾ ಹೆಂಗ ಮಾಡೋದು ?ನಾವು ಹೇಳತೇವಿ ಕೇಳರಿ.

1. ರೆಸ್ಟ್ ಕೊಡ್ರಿ

ತ್ರಾಸಿನ ಟೈಮಿನ್ಯಾಗ ಕಣ್ಣಮುಚ್ಚಿ ಮನಸ ಮತ್ತ ತಲೀಗೆ ಸಲ್ಪ ರೆಸ್ಟ್ ಕೊಡ್ರಿ. ನಿಮ್ಮ ದಿನ ಹೆಂಗ ಇರಬೇಕು ಅನ್ನೋದರ ಬಗ್ಗೆ ಮೊದಲ ಒಂದ ಚೌಕಟ್ಟ ಹಾಕ್ಕೆಂಡಿರ್ರಿ.  ಅದರ ಪ್ರಕಾರಾ ಸರಿಯಾಗಿ ಪ್ಲ್ಯಾನ್ ಹಕ್ಕೆಂಡ್ ಮುಂದ ಹೆಜ್ಜಿ ಇಡ್ರಿ.

sheryljonesqueenofhearts.files.wordpress.com

2. ಡೀಪ್ ಆಗಿ ಉಸರ ಒಳಗ ತಗಂಡು ನಿಧಾನಕ ಹೊರಗ ಬಿಡರಿ

ಕಷ್ಟಕ್ಕೂ ಒಂದ ಕೊನೆ, ಒಂದ ಉತ್ತರ ಇದ್ದ ಇರತತಿ. ಆದರ ಟೈಮ ಕೂಡಿ ಬರಬೇಕು. ನೀವು ಕೆಟ್ಟ ವಿಚಾರ ಮಾಡೋದರಿಂದಾ ನಿಮ್ಮ ಹೆಲ್ತ್ ಕೆಡೋದೂ ಅಲ್ಲದ, ಹಗ್ಗಾ ಹಾವ ಅನಸಾಕ ಸುರುವಾಗತೇತಿ. ಅದಕ್ಕ ಅಂಥಾ ಪರಿಸ್ಥಿತಿ ಏನಾರ ಬಂದರ ಮೊದಲ ಡೀಪ್ ಆಗಿ ಉಸರ ಒಳಗ ತಗಂಡು ನಿಧಾನಕ ಹೊರಗ ಬಿಡರಿ. ಮನಸ ಶಾಂತ ಆಗತೇತಿ. ಮುಂದಿನ ದಾರಿ ಹುಡಕಾಕ ಸುಲಭ ಆಗತೇತಿ.

 • ನಿಮಗ ಬೇಕಾಗಿರೋದು ಬರೇ ಐದ ನಿಮಿಷ. ಹೆಂಗ ಮಾಡೋದು ಅಂತ ಹೇಳತೇವಿ ನೋಡರಿ
 • ಮೊದಲ ಬೆನ್ನ ಸೀದಾಮಾಡಿ, ಭುಜಾ ಹಿಂದ ದಬ್ಬಿ, ಎದಿ ಸಲ್ಪ ಉಬ್ಬಿಸಿ ನೆಟ್ಟಗ ಕುಂದರ್ರಿ.
 • ಕೈಗಳನ್ನ ಶಾಂತವಾಗಿ ಕೆಳಗ ಬಿಡರಿ. ಕಣ್ಣ ಮುಚ್ಚಿದ್ದರ ಛೊಲೋ.
 • ನಿಮ್ಮ ಮನಸ್ಸನ್ನ ಸರಾಟದ ಮ್ಯಾಲೆ ಕೇಂದ್ರೀಕರಸರಿ.3 ಸೆಕೆಂಡ ಡೀಪ್ ಆಗಿ ಉಸರ ಒಳಗ ತಗರ್ರಿ. ನಿಮ್ಮ ಹೊಟ್ಟಿ, ಶ್ವಾಸಕೋಶಗಳು ತುಂಬಿದಂಗ ಅನಸೋತನಾ ಉಸರ ತಗರ್ರಿ.
 • ಈಗ ಬಾಯಿಂದಾ ತುಟಿನ್ನ ಮುಂದ ಚಾಚಿ ಮೆಲ್ಲಕ ಉಸರ ಹೊರಗ ಬಿಡರಿ.

ಹಿಂಗ 5-6 ಸಲಾ ಮಾಡರಿ.

ಇದನ್ನ ಮಾಡಿ ನೋಡರಿ. ಮನಸಿಗೆ ಎಷ್ಟ ಸಮಾಧಾನ ಸಿಗತತಿ ಅಂತ.​

edc2.healthtap.com

3. ಸಂಗೀತಾ ಕೇಳರಿ

ಸಂಗೀತಕ್ಕ ಮನಸ್ಸಿನ ರೋಗಾ ಅರಾಮ ಮಾಡೋ ಶಕ್ತಿ ಐತಿ. ಕಣ್ಣ ಮುಚಿಗೆಂಡ ಕಿವೀಗೆ ಹಿತಾ ಅನಿಸ ಅಂಥಾ ಸಂಗೀತಾ ಕೇಳಿ ನೋಡ್ರಿ. ಮನಸ್ಸ ಪ್ರಶಾಂತ ಅನಸತತಿ. ಮುಂದ ಏನ ಆಲೋಚನೆ ಮಾಡಾಕೂ ಮನಸ್ಸು, ಬುದ್ಧಿ ರೆಡಿ ಇರತಾವು.

4. ಇರದ್ರೊಳಗ ಸುಖಾ ಕಂಡಕೊಳ್ಳದ ಕಲೀಬೇಕು

ಮನಷ್ಯಾ ಯಾವಾಗೂ ತನ್ನ ಸುಖಾ ಹುಡುಕತಾನ ಇರತಾನ. "ನಾ ಕಾಲೇಜ ಮುಗಿಸಿದ ಮ್ಯಾಲೆ ಸುಖವಾಗಿರತನಿ…, ಸ್ವಂತ ಮನಿ ಇದ್ದರ ಸುಖವಾಗಿರತನಿ…, ಕೆಲಸ ಸಿಕ್ಕರ…, ದುಡ್ಡ ಸಿಕ್ಕರ… ಆ ಹುಡಿಗಿ ಸಿಕ್ಕರ…" ಹಿಂಗ ಪಟ್ಟಿ ಬೆಳಕಂತನ ಹೊಕ್ಕತಿ. ಇಂಥಾ ಕೊನಿ ಇಲ್ಲದ್ದ ನಿರೀಕ್ಷೆಗಳಿಂದಾ ನಮ್ಮ ಮನಸಿಗೆ ಪ್ರೆಶರ್ ಆಕ್ಕತಿ. ಅವು ಸಿಗೋದು ಸಲ್ಪ ತಡಾ ಆದರೂ ಮನಸ್ಸು ನೆಗೆಟಿವ್ ವಿಚಾರದ ಕಡೆ ತಿರಗತತಿ. ಅದಕ್ಕ ಇರದ್ರೊಳಗ ಸುಖಾನ ಕಂಡಕೊಳ್ಳದ ಕಲಕಾಬೇಕು.

5. ನಗು ಮುಖಾ ಇರಲಿ

‘ನಗು’ಗ ಅದರದ ಆದ ಮಂತ್ರಶಕ್ತಿ ಐತಿ. ಸ್ವಚ್ಛ ಮನಸ್ಸ ಇದ್ದರಿಗೆ ಅಷ್ಟ ಛೊಲೋತ್ನ್ಯಾಗ ನಗಾಕ ಬರತತಿ. ಅಂಥಾ ನಗು ನಮ್ಮ ಮುಖದ ಮ್ಯಾಲಿದ್ದರ ಎಂಥಾ ಕೆಟ್ಟ ಯೋಚನೆನೂ ಸರದ ಹೋಗಿ ಬಿಡತಾವು. ನಗು,ಸಂತೋಷಾ.. ಇದ್ದರ ನಮ್ಮ ಮಿದಳನೂ ಕೂಲ್ ಆಗಿ ಉಲ್ಲಾಸದಿಂದಾ ಇರತತಿ. ಆವಾಗ ನಾವು ಏನಬೇಕಾರೂ ಸಾಧಸಬೌದು. ಮನಸ ತುಂಬಾ ನಕ್ಕಂತ ಇದ್ದರ ಹೆಲ್ತಿಗೂ ಚೊಲೊ, ಭಾಳ ಕಾಲನೂ ಬದಕಬೌದು.

img2.thejournal.ie

6. ಸರಳ ಇರೋದ ಕಲೀಬೇಕು   

ಈ ಜೀವನಾ ಭಾಳ ಸರಳ ಇರತತಿ. ನಾವ ಅದನ್ನ “ಜೀವನದ ಹೋರಾಟಾ, ಸವಾಲಂತ ತಿಳಕೋರಿ, ಸಾಧನೆ ಮಾಡರಿ, ಮಣ್ಣು-ಮಸಿ” ಅಂತ ಕಠಿಣ ಮಾಡಕೋತೇವಿ. ಸರಳಾಗಿ ನಮ್ಮ ಕೆಲಸಾ ನಾವು ಸರಿಯಾಗಿ ಮಾಡಕೆಂತ ನಮ್ಮ ಜೀವನಾ ನಾವು ನಡಿಸಿಗೆಂಡ ಹೋದರ ಇಡೀ ಸಮಾಜನ ಸುಸೂತ್ರಾಗಿ ನೆಡೀತತಿ. ಕೆಟ್ಟ ಆಲೋಚನೆ ಅಲ್ಲಾ ಕೆಟ್ಟ ಇರೋ ಅಂಥಾದ್ದ ಏನೂ ನಮ್ಮ ಹತ್ತರ ಸುಳಿಯಂಗಿಲ್ಲಾ. ಅಕಸ್ಮಾತ ಬಂದರೂ ನಮ್ಮ ಸರಳತೆಯಿಂದಾ ಅಷ್ಟೇನ ದೊಡ್ಡ ಅಪಾಯಾ ಮಾಡಂಗಿಲ್ಲ ನಮಗ.

ಸರಳ ಜೀವನಾ ಅಂದ್ರ ಹೆಂಗ ? ಇಲ್ಲಿ ಕೇಳರಿ

 • ಅವಶ್ಯ ಇದ್ದಷ್ಟ ವಸ್ತುಗಳನ್ನ, ಆಹಾರಾನ ಬಳಸೋದು.
 • ಏನ್ನೂ ವೇಸ್ಟ್ ಮಾಡಬಾರದು
 • ಎಲ್ಲಾರನ್ನೂ ತೆರೆದ ಮನಸ್ಸಿನಿಂದಾ ಒಪ್ಪಿಕೊಳೋದು
 • ಸಾಲಾ ಮಾಡಲಾರದೇ ಜೀವನಾ ನೆಡಸೋದು
 • ದೊಡ್ಡ ದೊಡ್ಡ ಕಾರು, ಏ.ಸಿ, ಹೋಮ್ ಥೇಟರ್ ಗಳ ಐಷಾರಾಮಿಗೆ ಜೋತ ಬೀಳದೇ ಇರೋದು
 • ಕಡಿಮಿ ನಿರೀಕ್ಷೆಗಳನ್ನ ಇಟ್ಟಗೊಳ್ಳೋದು.

ಹೇಳಿದ್ದವುನ್ನ ಅಳವಡಿಸಿಗೆರ್ರಿ, ಜೀವನ ಎಷ್ಟ ಪ್ರಶಾಂತವಾಗಿ ಖುಷಿಯಿಂದ ಇರತತಿ ನೋಡರಿ.