Woman holding gift box, cropped

ಹಬ್ಬಗಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ! ಹಬ್ಬಗಳಲ್ಲಿ ನಮ್ಮ ದುಃಖ, ನೋವು ಎಲ್ಲ ಮರೆತು ಖುಷಿ ಖುಷಿಯಾಗಿ ದೇವರಿಗೆ ಭಕ್ತಿಯಿಂದ ಪೂಜೆ ಮಾಡಿ, ಒಳ್ಳೆ ಊಟ ಮಾಡಿ, ಆರಾಮಾಗಿ ಮನೆಯವರು, ನೆಂಟರ ಜೊತೆ ಕಾಲ ಕಳಿಬಹುದು. ನಮ್ಮ ದೇಶದಲ್ಲಂತೂ ಹಬ್ಬಗಳಿಗೆ ಕೊರತೆ ಇಲ್ಲ. ವರ್ಷ ಪೂರ್ತಿ ಒಂದಲ್ಲ ಒಂದು ಹಬ್ಬ ಇದ್ದೇ ಇರತ್ತೆ. ಪ್ರತಿ ಹಬ್ಬಕ್ಕೂ ಅದರದೇ ಆದ ವಿಶಿಷ್ಟತೆ ಕೂಡ ಇದೆ.

ಬೇರೆ ಎಲ್ಲ ಹಬ್ಬಗಳಿಗಿಂತಲೂ ಬೆಳಕಿನ ಹಬ್ಬ ದೀಪಾವಳಿ ಅಂದ್ರೆ ದೇಶ ಪೂರ್ತಿ ಸಂಭ್ರಮ ಪಡೋ ಸಮಯ. 5 ದಿನಗಳ ಕಾಲ ಆಚರಿಸೋ ಈ ಹಬ್ಬದಲ್ಲಿ ನೆಂಟರಿಗೆ, ಗೆಳೆಯರಿಗೆ ಉಡುಗೊರೆ ಕೊಡೋ ವಾಡಿಕೆ ಇದೆ. ಉಡುಗೊರೆ ಕೊಡೋದು ಎಲ್ರಿಗೂ ಇಷ್ಟ ಅನ್ನೋದು ನಿಜ. ಆದ್ರೂ, ಉಡುಗೊರೆ ಕೊಡೋಕೆ ಮುಂಚೆ ಸ್ವಲ್ಪ ಎಚ್ಚರ ವಹಿಸಬೇಕು.

ಲಕ್ಷ್ಮಿದೇವಿಯ ಪ್ರಕಾರ ಅಮಂಗಳಕರವಾದ ಈ 7 ಉಡುಗೊರೆಗಳನ್ನ ಯಾರಿಗೂ ಕೊಡ್ಬೇಡಿ.

1 . ಲಕ್ಷ್ಮಿ – ಗಣೇಶ ವಿಗ್ರಹಗಳು

ನಿಮ್ಮ ಮನೆಗೆ ಲಕ್ಷ್ಮಿ – ಗಣೇಶರ ವಿಗ್ರಹಗಳನ್ನ ತರೋದು ಒಳ್ಳೇದೇ. ಆದ್ರೆ, ಬೇರೆಯವರಿಗೆ ಕೊಡೋದ್ರಿಂದ ನಿಮ್ಮ ಮನೆಯ ಸಂಪತ್ತನ್ನ ಹೊರಗೆ ಕಳಿಸಿದಂತೆ ಆಗತ್ತೆ. ಹಾಗಾಗಿ, ಬೇರೆಯವರಿಗೆ ಉಡುಗೊರೆಯಾಗಿ ಈ ವಿಗ್ರಹಗಳನ್ನ ಕೊಡ್ಬೇಡಿ.

2 . ಲೋಹದ ವಸ್ತುಗಳು

ಚಿನ್ನ, ಬೆಳ್ಳಿ, ತಾಮ್ರದ ವಸ್ತುಗಳನ್ನ ಮನೆಗೆ ತರೋದು ಶುಭ ಅನ್ನೋ ನಂಬಿಕೆ ಇದೆ. ಆದ್ರೆ ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ,ಕಂಚು – ಈ 5 ಲೋಹದ ವಸ್ತುಗಳಿಂದ ಮಾಡಿರೋ ವಸ್ತುಗಳನ್ನ ಬೇರೆಯವರಿಗೆ ಉಡುಗೊರೆಯಾಗಿ ಕೊಡ್ಬೇಡಿ.

3 . ಕಬ್ಬಿಣ ಮತ್ತು ಸ್ಟೀಲ್ ವಸ್ತುಗಳು

ಕಬ್ಬಿಣ ಮತ್ತು ಸ್ಟೀಲ್ ಇರೋ ವಸ್ತುಗಳಿಂದ ದೂರ ಉಳಿದುಬಿಡಿ. ಆದ್ರೆ, ಅಲ್ಯೂಮಿನಿಯಂ ಒಳ್ಳೆದು ಅನ್ನೋ ನಂಬಿಕೆ ಇದೆ.

4 . ರೇಷ್ಮೆ

ರೇಷ್ಮೆ ಬಟ್ಟೆಗಳನ್ನ ಉಡುಗೊರೆಯಾಗಿ ಕೊಡ್ಬೇಡಿ. ಸ್ವೀಕರಿಸೋ ಮನೆಗೆ ರೇಷ್ಮೆ ಒಳ್ಳೇದಲ್ಲ.

5 . ಹಳೆಯ ಮತ್ತು ಬಳಸಿರೋ ವಸ್ತುಗಳು

ಹೊಸ ವಸ್ತುಗಳನ್ನ ಉಡುಗೊರೆಯಾಗಿ ಕೊಡಬಹುದು. ಆದ್ರೆ ಬಳಸಿದ ಮತ್ತು ಹಳೇ ವಸ್ತುಗಳನ್ನ ಯಾವತ್ತೂ ಉಡುಗೊರೆಯಾಗಿ ಕೊಡ್ಬೇಡಿ.

6. ಎಣ್ಣೆ ಮತ್ತು ಮರದ ವಸ್ತುಗಳು

ನೀವು ನಿಮ್ಮ ಮನೆಗಾಗಲಿ, ಅಥವಾ ಉಡುಗೊರೆಯಾಗಿ ಎಣ್ಣೆ ಮತ್ತು ಮರದ ವಸ್ತುಗಳನ್ನ ಕೊಳ್ಳಲೇಬಾರದು. ಇದು ಅಪಶಕುನ ಅನ್ನೋ ನಂಬಿಕೆ ಇದೆ.

7 . ಕಪ್ಪು ವಸ್ತುಗಳು

ಕಪ್ಪು ಬಣ್ಣ ಶನಿ ದೇವರ ಸಂಕೇತ. ಹಾಗಾಗಿ ನಿಮ್ಮ ಉಡುಗೊರೆಯಾಗಿ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ವಸ್ತುಗಳನ್ನ ಕೊಡ್ಬೇಡಿ.