https://ot11.snstatic.fi/sites/default/files/styles/og/public/imgs/article/unijuttu-120416.jpg

ಪ್ರತಿದಿನ ಒಂದೇ ಟೈಮಿಗೆ ಏಳ್ಬೇಕು, ಗಡಿಬಿಡಿ ಇಲ್ದೆ ಆಫೀಸ್ ತಲುಪಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಎಲ್ರಿಗೂ ಇದು ಸಿಕ್ಕಾಪಟ್ಟೆ ಕಷ್ಟ, ದಿನ ಏಳ್ತೀವಿ… ಆದ್ರೆ ಅದೇ ಟೈಮಿಗೆ ಪ್ರತಿದಿನ ಏಳೋದು ಒಂತರ ಕಷ್ಟ. ಒಂದೊಂದ್ಸರ್ತಿ ಕೆಲಸಕ್ಕೆ ಲೇಟೂ ಆಗೋಗಿರತ್ತೆ. ಅದಕ್ಕೆ ನಿಮ್ಮ ಈ ಕಷ್ಟ ನೋಡಕ್ಕಾಗದೆ ನಿಮಗೆ ಸಹಾಯ ಆಗ್ಲಿ ಅಂತ ಈ ಬರಹ… ಯಾವ ತಪ್ಪನ್ನ ಮಾಡದೆ ಇದ್ರೆ ದಿನಾ ಸರಿಯಾದ ಟೈಮಿಗೆ ಏಳಬಹುದು ಅಂತ ತಿಳ್ಕೊಳಿ. 

1. ಸರಿಯಾದ ದಿನಚರಿ ಇಲ್ದೇ ಇರೋದು 

ಒಂದೊಂದು ದಿನ ಒಂದೊಂದು ಸಮಯಕ್ಕೆ ಮಲಗೋದು ಕೆಟ್ಟ ಅಭ್ಯಾಸ. ನಮ್ಮ ದೇಹ ಅದಕ್ಕೆ ಹೊಂದಿಕೊಳ್ಳೋದಿಲ್ಲ. ಇದ್ರಿಂದ ಸುಸ್ತು, ಮತ್ತು ಬರೋ ತರ ಆಗೋದು ಎಲ್ಲಾ ಆಗತ್ತೆ. ಆದ್ರಿಂದ ಪ್ರತಿದಿನ ಒಂದೇ ಸಮಯಕ್ಕೆ ಮಲಗಿ. ಪ್ರತಿದಿನ ಒಂದೇ ಸಮಯಕ್ಕೆ ಮಲಗೋದನ್ನ ಅಭ್ಯಾಸ ಮಾಡಿಕೊಂಡ್ರೆ, ಸರಿಯಾದ ಸಮಯಕ್ಕೆ ಏಳೋದೂ ಅಭ್ಯಾಸ ಆಗತ್ತೆ.  

ಮೂಲ

2. ರಜಾ ಅಂತ ಜಾಸ್ತಿ ಹೊತ್ತು ಮಲ್ಗೋದು

ಪ್ರತಿದಿನ 5-6 ಗಂಟೆಕಾಲ ಮಲಗಿದ್ರೆ ರಜಾ ದಿನಗಳಲ್ಲೂ ಅಷ್ಟೇ ಸಮಯ ಮಲಗಿ. ರಜಾ ಇದೆ ಅಂತ ತುಂಬಾ ಸಮಯ ಮಲಗಿದ್ರೆ ಆರೋಗ್ಯ ಹಾಳು. ನಮ್ಮ ಬಯೊಲಾಜಿಕಲ್ ಕ್ಲಾಕ್ ಹಾಳಾಗಿ ಕೊಬ್ಬು, ಡಯಾಬಿಟಿಸ್ ಮತ್ತು ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆ ಜಾಸ್ತಿ ಆಗತ್ತೆ. ರಜಾ ಇದ್ರೂ ಪರ್ವಾಗಿಲ್ಲ ಪ್ರತಿದಿನ ಒಂದೇ ಸಮಯಕ್ಕೆ ಎದ್ದೇಳಿ. 

ಮೂಲ

3. ಅಲಾರಂ ಇಟ್ಟು ಸ್ನೂಜ್ ಜಾಸ್ತಿ ಬಳ್ಸೋದು 

5 ನಿಮಿಷ ಹೆಚ್ಚಿಗೆ ಮಲಗೋದ್ರಿಂದ ಏನೂ ಸಿಕ್ಕೋದಿಲ್ಲ, ಅದರ ಬದಲಿಗೆ ಇನ್ನೂ ಹೆಚ್ಚು ನಿದ್ದೆ ಬಂದು ಏಳಕ್ಕೆ ಮತ್ತೆ ಬೇಜಾರಾಗಿ, ಇನ್ನೂ ಜಾಸ್ತಿ ಸುಸ್ತಾಗತ್ತೆ, ಆಯಾಸ ಅನ್ನಿಸತ್ತೆ. ಹತ್-ಹತ್ ಅಲಾರಂ ಇಟ್ಕೋಳೋಕ್ಕಿಂತ ಒಂದೇ ಅಲಾರಂ ಇಟ್ಕೊಂಡು ಟಕ್ ಅಂತ ಏಳೋದು ಒಳ್ಳೇದು. ಗಟ್ಟಿ ಮನಸ್ಸು ಮಾಡಿ ಇದನ್ನ ಸ್ವಲ್ಪ ದಿನ ಅಭ್ಯಾಸ ಮಾಡಿ. ಆಗ ಪ್ರತಿದಿನ ಒಂದೇ ಟೈಮಿಗೆ ಏಳೋದು ಸುಲಭ ಆಗತ್ತೆ.

ಮೂಲ

4. ಜಾಸ್ತಿ ಲೈಟ್ ಬರೋ ಕಡೆ ಮಲ್ಗೋದು

ಲೈಟ್ ಇದ್ರೆ ನಿದ್ದೆ ಮಾಡಕ್ಕೆ ಬೇಕಾಗಿರೋ ಮೆಲಟೋನಿನ್ ಅನ್ನೋ ಹಾರ್ಮೋನ್ ಉತ್ಪತ್ತಿ ಕಮ್ಮಿ ಆಗಿ ನಿದ್ದೆ ಹೊರಟೋಗತ್ತೆ. ಮೊಬೈಲ್, ಟಿ.ವಿ, ಲ್ಯಾಪ್ಟಾಪ್, ಇದನೆಲ್ಲಾ ದೂರ ಇಡಿ. ಮಲಗೋ ಸಮಯದಲ್ಲಿ ಜಾಸ್ತಿ ಬೆಳಕು ಇರಬಾರದು ಅನ್ನೋದು ನೆನಪಿರಲಿ.

ಮೂಲ

5. ತಿಂಡಿ ತಿನ್ನದೇ ಇರೋದು

ಯಾವ್ದೇ ಕಾರಣಕ್ಕೂ ತಿಂಡಿ ತಿನ್ನದೇ ಇರ್ಬೇಡಿ. ರಾತ್ರಿ ಮಲಗಿದ ಸಮಯಕ್ಕೂ ಬೆಳಗ್ಗೆ ತಿಂಡಿ ತಿನ್ನೋ ಸಮಯಕ್ಕೂ ಅತೀ ಜಾಸ್ತಿ ಅಂತರ ಇದ್ರೆ ಒಳ್ಳೇದಲ್ಲ. ಸಿಕ್ಕಾಪಟ್ಟೆ ಲೇಟ್ ಮಾಡ್ಕೊಂಡು ತಿಂಡಿ ತಿನ್ನೋದೂ ಒಳ್ಳೇದಲ್ಲ… ಹಾಗೇ, ತಿಂಡಿ ತಿನ್ನದೇ ಹಾಗೇ ಇರೋದೂ ಒಳ್ಳೇದಲ್ಲ. ಹೀಗೆ ಮಾಡಿದ್ರೆ ದೇಹದಲ್ಲಿ ಒತ್ತಡ ಹೇರೋ ಹಾರ್ಮೋನ್ ಕಾರ್ಟಿಸೋಲ್ ಅಂಶ ಜಾಸ್ತಿ ಆಗಿ ದೇಹದಲ್ಲಿ ಸ್ಟ್ರೆಸ್ ಜಾತಿ ಆಗತ್ತೆ.

ಮೂಲ

6. ರಾತ್ರಿ ಸ್ಟಾರ್ಚ್ ಮತ್ತು ಸಿಹಿ ಅಂಶ ಜಾಸ್ತಿ ಇರೋ ಊಟ ತಿನ್ನೋದು 

ಮಲಗಕ್ಕೆ ಮುಂಚೆ ಈ ಪದಾರ್ಥ ತಿಂದ್ರೆ ಇದು ದೇಹದ ಕಾರ್ಟಿಸಾಲ್ ಅನ್ನೋ ಹಾರ್ಮೋನ್ ಅಂಶಾನ ಜಾಸ್ತಿ ಮಾಡತ್ತೆ. ಅದಕ್ಕೆ ಕೇಕು, ಪಿಜ್ಜಾ, ಆಲೂಗಡ್ಡೆ, ಸಕ್ಕರೆ ಅಂಶ ಜಾಸ್ತಿ ಇರೋ ಪದಾರ್ಥಾನ ರಾತ್ರಿ ಮಲಗಕ್ಕೆ ಮುಂಚೆ ತಿನ್ಬೇಡಿ. ಕಮ್ಮಿ ಅಂದ್ರೂ 5 ಗಂಟೆ ಗ್ಯಾಪ್ ಇರ್ಬೇಕು.

ಮೂಲ

7. ರೂಮ್ ಗಬ್ ಗಬ್ಬಾಗಿ ಇಟ್ಕೊಳೋದು 

ರೂಮ್ ಚನ್ನಾಗಿದ್ದು ನೀವು ಮಲಗೋ ಹಾಸಿಗೆ ಕ್ಲೀನಾಗಿದ್ರೆ ಚೆನ್ನಾಗಿ ನಿದ್ದೆ ಬರತ್ತೆ, ದಿನಾ ಸರಿಯಾದ ಸಮಯಕ್ಕೆ ಏಳಕ್ಕೆ ಇದು ಒಂತರ ಸಹಾಯ ಆಗತ್ತೆ. ರೂಮ್ ಗಬ್ಬಾಗಿದ್ರೆ, ಬಟ್ಟೆ ಮಡಿಸಿಟ್ಟಿಲ್ಲದಿದ್ರೆ, ನೀವು ಇವತ್ತೂ ಎಲ್ಲಾ ಕೆಲಸಗಳ್ನೂ ಮುಗ್ಸಿಲ್ವಲ್ಲಪ್ಪಾ ಅನ್ನೋ ಒತ್ತಡ ಕಾಡತ್ತಂತೆ. ಇದನ್ನ ನಾವ್ ಹೇಳ್ತಿಲ್ಲಾ, ಒಂದು ಸಂಶೋಧನೆಯಿಂದ ಗೊತ್ತಾಗಿರೋ ಸತ್ಯ.

ಮೂಲ

8. ರಾತ್ರಿ ಮಲಗಕ್ಕೆ ಮುಂಚೆ ಬಿಸಿ ನೀರಲ್ಲಿ ಸ್ನಾನ ಮಾಡೋದು 

ಮಲಗಕ್ಕೆ ಮುಂಚೆ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡೋದು ಚೆನ್ನಾಗಿ ಮಲಗಕ್ಕೆ ಒಳ್ಳೇದೇ. ಆದ್ರೆ ಸ್ನಾನ ಮಾಡಿದ ತಕ್ಷಣ ಮಲಗಬಾರದು. ಕಮ್ಮಿ ಅಂದ್ರು 1.5-2 ಗಂಟೆಕಾಲ ಬಿಸಿ ಸ್ನಾನಕ್ಕೂ ನಿದ್ದೆಗೂ ಗ್ಯಾಪ್ ಇರ್ಬೇಕು. ಇಲ್ದಿದ್ರೆ ಪಗಡ್ದಸ್ತಾಗಿ ನಿದ್ದೆ ಹೊಡೀತೀರ.

ಮೂಲ

ಈಗ ನೀವ್ ಎಷ್ಟ್ ತಪ್ಪು ಮಾಡ್ತಿದ್ರಿ ಅಂತ ಗೊತ್ತಾಯ್ತುಲ್ವಾ? ಆದಷ್ಟು ಸರಿ ಮಾಡ್ಕೊಳಿ. ಆಗ ಈ ನಿದ್ದೆ ಕಿರಿಕಿರಿ ಇರಲ್ಲ.