http://www.pamper.co.in/blog/wp-content/uploads/2015/08/rest_post_workout.jpg

ಈ ತೊಂಬತ್ತರ ದಶಕದಲ್ಲಿ ಒಬ್ಬ ಸೂಪರ್ ಮಾಡೆಲ್ ಅನ್ನೊಸ್ಕೊಂಡಿದ್ದ ಸಿಂಡಿ ಕ್ರಾಫ಼ರ್ ವ್ಯಾಯಾಮ ಹೇಗ್ಮಾಡಿದ್ರೆ ಒಳ್ಳೇದು ಅಂತ ತೋರ್ಸಿಕೊಡೋ ಸುಮಾರ್ ವಿಡಿಯೋಗಳ್ನ ಮಾಡಿ ರಿಲೀಸ್ ಮಾಡಿ ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದ್ಲು. ಈ ವ್ಯಾಯಾಮಗಳು ತುಂಬಾನೇ ಸಿಂಪಲ್ಲಾಗಿರೋದಲ್ದೇನೇ ಒಳ್ಳೇ ರಿಸಲ್ಟೂ ಸಿಗ್ತಾ ಇತ್ತಂತೆ‌. ಅಂತೆಕಂತೆ ಅಂತಾ ಒಳ್ಳೇ ವಿಷ್ಯಾನ ನಿಮ್ಮ ಹಂಚ್ಕೋಳ್ದೇ ಇದ್ರೆ ಹೇಗ್ ಹೇಳಿ!? ಅದಿಕ್ಕೇ ಇವತ್ತು ಆ ವಿಷ್ಯಾನೇ ಬರೀತಿದೀವಿ. ಓದ್ಕೋಂಡ್ ಹೋಗಿ ಆಮೇಲೆ ಟ್ರೈ ಮಾಡಿ‌ ಓಕೆ?!

1. ಅರೆಮಂಡೀಲಿ ಕೂರೋದು

ಕಾಲಿನ ವ್ಯಾಯಾಮ ಮಾಡೋದು ತುಂಬಾ ಇಂಪಾರ್ಟೆಂಟು. ಯಾಕಂದ್ರೆ ನಮ್ಮಿಡೀ ದೇಹನ ಸಮತೋಲನದಲ್ಲಿಡೋದಕ್ಕೆ ಕಾಲುಗಳು ಗಟ್ಟಿಮುಟ್ಟಾಗಿ ಇರ್ಲೇಬೇಕಲ್ಲ. ನಿಮ್ಮೆರಡೂ ಕಾಲುಗಳನ್ನ ಭುಜದ ಅಳತೆಗಿಂತ ಅಗಲವಾಗಿಟ್ಕೊಂಡ್ ನಿಂತ್ಕೋಳ್ಳಿ. ನಿಮ್ಮ ಪಾದಗಳು ಚಿತ್ರದಲ್ಲಿರೋ ತರ ಆಚೆಕಡೆ ತಿರುಗಿರ್ಬೇಕು. ಕೈಗಳನ್ನ ಬೇಕಾದ್ರೆ ಸೊಂಟದ ಮೇಲೆ ಇಟ್ಕೊಂಡು ಅರೆಮಂಡೀಲಿ ಕೂತು ಎದ್ದು ಮಾಡಿ. ಇದನ್ನೇ ಒಂದ್ ಹತ್ಸಲ ರಿಪೀಟ್ ಮಾಡಿ.

2. ಲಂಜಸ್

ಇದೂ ಕೂಡ ತುಂಬಾ ಸಿಂಪಲ್ಲು. ಒಂದ್ ಹೆಜ್ಜೆ ಮುಂದೆ ಇಟ್ಟು ಅರೆಮಂಡೀಲಿ ಕೂರೋದು ಏಳೋದು. ಇದನ್ನೊಂದ್ ಹತ್ ಸಲ ಮಾಡಿ.

3. ಚೇರ್ ಮೇಲೆ ಕೂರೋ ತರ

ಮೊದ್ಲು ನೇರವಾಗಿ ನಿಂತ್ಕೋಳ್ಳಿ. ಇಗ್ಲೂ ಅರೆಮಂಡೀನಲ್ಲೇ ಕೂತ್ಕೋಬೇಕು. ಆದ್ರೆ ಸ್ವಲ್ಪ ಬೇರೆ ತರ. ಹೇಗೆ ಅಂತೀರ!? ಚೇರ್ ಮೇಲೆ ಬೆನ್ನು ಬಾಗಿಸದೆ ಕೂತ್ಕೋತೀರಲ್ಲ ಹಾಗೆ ಮಾಡಿ. ಇದನ್ನ ಒಂದ್ ಹತ್ಸಲನಾದ್ರೂ ಮಾಡಿ. ಇದಾದ್ಮೇಲೆ‌ ಮತ್ತೊಂದ್ ಹತ್ ಸಲ ಲಂಜಸ್ ಮಾಡಿ.

https://files.brightside.me/files/news/part_48/487010/21565910-39093860-3-0-1522414821-1522414825-1500-1-1522414825-728-04f9ebaa03-1522998757.jpg

4. ಎರಡೂ ಕಾಲುಗಳೂ ಒಟ್ಟಾಗಿ ಮಾಡೋ ಅರೆಮಂಡಿ.

ಈ ವ್ಯಾಯಾಮ ಕೂಡ  ಹಾಗೇನೇ, ಅದೇ ಚೇರ್ ಮೇಲೇ ಕೂತ್ಕೋಳೋ ಹಾಗೆ ಒಂದ್ ವ್ಯಾಯಾಮ ಹೇಳಿದ್ವಲ್ಲ ಅದೇ ತರ ಆದ್ರೆ ಕೈಗಳನ್ನ ಮುಂದಕ್ಕೆ ಚಾಚಿ ಮಾಡೋದಷ್ಟೇ‌. ಈ ವ್ಯಾಯಾಮ ಆದ್ಮೇಲೂ ಕೂಡ ಇನ್ನೂ ಹತ್ ಲಂಜಸ್ ಮಾಡ್ಬೇಕು.

5. ಪುಷಪ್ ಆದ್ರೆ ಅರ್ಧಂಬರ್ದ

ಹೊಟ್ಟೆ ಮತ್ತೆ ಎದೆಯ ಭಾಗಕ್ಕೆ ವ್ಯಾಯಾಮ ಮಾಡೋದು ಹೇಗ್ಗೊತ್ತಾ? ಒಂದು ಯೋಗ ಮ್ಯಾಟ್ ಮೇಲೆ ಮಗುಚಿ ಮಲಗಿ. ಕೈಗಳ ಸಹಾಯದಿಂದ ಸೊಂಟದ ಮೇಲಿನ ದೇಹವನ್ನ ಮಾತ್ರ ಮೇಲೆತ್ತಿ. ಇದೇ ತರ ಹತ್ತು ಬಾರಿ ಮಾಡ್ಬೇಕು.

6. ಮಲ್ಕೊಂಡೇ ಮಾಡೋ ವ್ಯಾಯಾಮ

ಯೋಗ ಮ್ಯಾಟ್ ಮೇಲೆ ಅಂಗಾತವಾಗಿ ಮಲಗಿ. ಕಾಲುಗಳನ್ನ ಮಡಚಿ, ಕೈಗಳೆರಡನ್ನೂ ತಲೆಯ ಹಿಂದಿಟ್ಟುಕೊಂಡು ಬೆನ್ನಿನ ಭಾಗಾನ ನೆಲಕ್ಕೇ ತಾಗಿಸಿಕೊಂಡೇ ಅರ್ಧ ಮಾತ್ರ ಏಳೋ ಪ್ರಯತ್ನ ಮಾಡಿ. ಇದನ್ನ ಇಪ್ಪತ್ತು ಸಲವಾದ್ರೂ ಮಾಡಿ.

7. ಪೂರ್ತಿ ದೇಹದ ವ್ಯಾಯಾಮ

ಮ್ಯಾಟ್ ಮೇಲೆ‌ ಕಾಲು ಮಡಚಿಕೊಂಡು ಮಲಗಿ, ತಲೆಯ ಹಿಂಬಾಗದಲ್ಲಿ ಎರಡೂ ಕೈಗಳನ್ನೂ ಇಟ್ಟುಕೊಂಡು ಇಡೀ ದೇಹವನ್ನ ಚಿತ್ರದಲ್ಲಿ ತೋರಿಸಿರೋ ಹಾಗೆ ಮೇಲೆತ್ತಿ. ಇದನ್ನೂ ಕೂಡ ಇಪ್ಪತ್ತು ಸಲ ಮಾಡಿ.

8. ಹೊಟ್ಟೆಯ ಭಾಗಕ್ಕೆ ವ್ಯಾಯಾಮ

ಮ್ಯಾಟ್ ಮೇಲೆ ಮಲಗಿ, ನಿಮ್ಮ ಬಲಗಾಲು ನಿಮ್ಮ ಎಡಗೈನ ಮೊಣಕೈಗೆ ತಾಗಿಸಿ. ಇದೇ ರೀತಿ ನಿಮ್ಮ ಎಡಗಾಲನ್ನ ಬಲಗೈನ ಮೊಣಕೈಗೆ ತಾಗಿಸಿ. ಇದನ್ನ ಮಾಡೋವಾಗ ನಿಮ್ಮ ಮತ್ತೊಂದು ಕೈ ನೆಲದ ಮೇಲೋ ಇಲ್ಲಾ ನಿಮ್ಮ ಹೊಟ್ಟೆಯ ಮೇಲೋ ಇರಬೇಕು. ಇಪ್ಪತ್ತು ಸಲ ಇದನ್ನೇ ಪುನಃ ಪುನಃ ಮಾಡುತ್ತಿರಿ.


https://files.brightside.me/files/news/part_48/487010/21566210-39095010-9-0-1522414922-1522414927-1500-1-1522414927-728-04f9ebaa03-1522998757.jpg

9. ಕಾಲಿನ ವ್ಯಾಯಾಮ

ಈ ವ್ಯಾಯಾಮ ಮಾಡೋದ್ರಿಂದ ಹೊಟ್ಟೆ ಮತ್ತದರ ಸುತ್ತಲಿನ ಮಾಂಸಖಂಡಗಳಿಗೆಲ್ಲಾ ಒಳ್ಳೆ ವ್ಯಾಯಾಮ ಆಗುತ್ತೆ. ಮ್ಯಾಟ್ ಮೇಲೆ ಮಲಕ್ಕೊಂಡು ಎರಡೂ ಕೈಗಳ್ನೂ ನೆಲದಮೇಲಿಟ್ಟು ಎರ್ಡೂ ಕಾಲುಗಳನ್ನ ಮೇಲೆತ್ತೋದು. ಇದನ್ನೂ ಇಪತ್ತು ಸಲ ಮಾಡ್ಬೇಕು.


ನಿಮ್ಮ ಊಟ ತಿಂಡಿ ಎಲ್ಲಾ ಸರ್ಯಾಗಿರೋ ಪ್ರಮಾಣದಲ್ಲೇ ಇದ್ದು ಅದ್ರ ಜೊತೇಗೆ ಈ ವ್ಯಾಯಾಮ ಕೂಡ ಮಾಡಿದ್ರೆ ನಿಮ್ಮ ದೇಹಕ್ಕೆ ಒಳ್ಳೆ ಶೇಪ್ ಬರುತ್ತೆ‌. ಸೂಪರ್ರಾಗ್ ಕಾಣೋದು ಇಷ್ಟು ಸುಲಭ ಅಂತ ಗೊತ್ತಾದ್ಮೇಲೆ ವ್ಯಾಯಾಮ ಮಾಡೋಕ್ಯಾಕೆ ಹಿಂದೇಟು. ಶುರು ಹಚ್ಕೋಳಿ ಮತ್ತೆ!

ಚಿತ್ರಗಳು: files.brightside.me