https://d18l82el6cdm1i.cloudfront.net/solvable/2a03814790.8f85625394.Et0c4y.jpeg

ಮೊಟ್ಟೆ ತಿನ್ನೋದ್ರಿಂದ ಆಗೋ ಉಪಯೋಗದ ಬಗ್ಗೆ ಬೇಕಾದಷ್ಟು ಎಲ್ರೂ ಮಾತಾಡೋದನ್ನ ಕೇಳಿರ್ತೀರ. ಆದ್ರೆ ರೀಸರ್ಚ್ ಮಾಡಿ ಸೂಪರ್ ಖಡಕ್ ಆಗಿರೋ ಈ 9 ಉಪಯೋಗದ ಬಗ್ಗೆ ಕೇಳಿದ್ರೆ ಖಂಡಿತ ಇವತ್ನಿಂದಾನೇ 2 ಮೊಟ್ಟೆ ತಿನ್ನೋದಕ್ಕೆ ಶುರು ಮಾಡ್ತೀರಿ. ಅಂತಾದ್ದೇನಿದೆ ಅಂತೀರಾ!? ಹೇಳ್ತೀವಿ ಕೇಳಿ.

1. ಕಣ್ ದೃಷ್ಟಿ ಚುರುಕಾಗುತ್ತೆ

ಇತ್ತೀಚಿಗೆ ಗೊತ್ತಾಗಿರೋ ವಿಷ್ಯ ಏನಪ್ಪಾ ಅಂದ್ರೆ, ಮೊಟ್ಟೇಲಿ ಸಿಕ್ಕಾಪಟ್ಟೆ ಜಾಸ್ತಿ ಲುಟೆನ್ ಅನ್ನೋ ಅಂಶ ಇದೆ. ಇದು ಕಣ್ಣಿನ ದೃಷ್ಠಿ ತುಂಬಾ ಚುರುಕಾಗೊ ಹಾಗೆ ಮಾಡುತ್ತೆ. ಎಷ್ಟೇ ವಯಸ್ಸಾದ್ರೂ ಕಣ್ಣಿನ ದೃಷ್ಠಿ ನಿಮಗೆ ಕೈ ಕೊಡೋದಿಲ್ಲ.

ಮೂಲ

2. ಮೂಳೆ ಸ್ಟ್ರಾಂಗ್ ಆಗುತ್ತೆ

ಒಂದು ಸ್ಪೂನು ಮೀನೆಣ್ಣೆ ಕುಡಿದ್ರೆ ಎಷ್ಟು ವಿಟಮಿನ್ ಡಿ ಸಿಗುತ್ತೋ ಅಷ್ಟೇ ವಿಟಮಿನ್ ಡಿ ಒಂದು ಮೊಟ್ಟೆ ತಿಂದ್ರೂ ಸಿಗುತ್ತೆ ಕಣ್ರೀ. ಟಿ ವಿನಲ್ಲೆಲ್ಲಾ ನೋಡಿರ್ತೀರಲ್ಲ ನಮ್ಮ ಮೂಳೆಗಳು ಸ್ಟ್ರಾಂಗ್ ಆಗಿರ್ಬೇಕು ಅಂದ್ರೆ ನಮಗೆ ಕ್ಯಾಲ್ಸಿಯಂ ಬೇಕು, ಆ ಕ್ಯಾಲ್ಸಿಯಂನ್ನ ಮೂಳೆಗಳು ಹೀರ್ಕೊಬೇಕು ಅಂದ್ರೆ ವಿಟಮಿನ್ ಡಿ ಇರಬೇಕು ಅಂತ. ಅದು ಬೇಕಾದಷ್ಟು ಈ ಮೊಟ್ಟೆನಲ್ಲಿದೆ. ಇದರಿಂದ ನಮ್ಮ ಮೂಳೆಗಳೂ ಹಲ್ಲುಗಳೂ ಸೂಪರ್ ಸ್ಟ್ರಾಂಗ್ ಆಗುತ್ತೆ.

ಮೂಲ

3. ಚರ್ಮ, ಕೂದಲು, ಲಿವರ್ ಶಕ್ತಿ ಬರತ್ತೆ

ಬಯೋಟಿನ್ , ವಿಟಮಿನ್ ಬಿ 12 ಇವೆರಡು ನಾವು ತಿನ್ನೋ ಊಟದ ಮೂಲಕ ನಮ್ಮ ದೇಹ ಸೇರಿ ಅದರಿಂದ ಚರ್ಮ, ಕೂದಲು ಮತ್ತೆ ಲಿವರ್ ಎಲ್ಲವೂ ಶಕ್ತಿ ಪಡ್ಕೊಳ್ಳುತ್ತೆ. ಈ ಪಾಸ್ಫೋಲಿಪಿಡ್ಸ್  ಇದ್ಯಲ್ಲಾ… ಇದು, ದೇಹದಲ್ಲಿರೋ ಟಾಕ್ಸಿನ್ ಹೊರ್ಗಾಕೋದಿಕ್ಕೆ ಸಹಾಯ ಮಾಡುತ್ತೆ.

ಮೂಲ

4. ಹೃದಯದ ಖಾಯಿಲೆ ಬರೋ ಚಾನ್ಸ್ ಕಡಿಮೆ

ಒಂದು ಹೊಸ ಸಂಶೋಧನೆ ಪ್ರಕಾರ, ಮೊಟ್ಟೆಗಳಲ್ಲಿ ಕೊಲೆಸ್ಟ್ರಾಲ್ ಕಂಟ್ರೋಲ್ ಮಾಡೋದಕ್ಕೆ ಬೇಕಾಗಿರೋ ಫಾಸ್ಪಟೈಡ್ಸ್ ಅನ್ನೋ ವಸ್ತು ಇದೆ. ಇದ್ರಲ್ಲಿ ಒಮೆಗಾ3 ಕೂಡ ಇರೋದ್ರಿಂದ ನಮ್ಮ ದೇಹದಲ್ಲಿರೋ ಟ್ರೈಗ್ಲಿಸರೈಡ್ ಲೆವೆಲ್ಲನ ಕಡ್ಮೆ ಮಾಡಿ ನಮ್ಗೆ ಹೃದಯದ ಯಾವ ಕಾಯಿಲೆನೂ ಬರದೆ ಇರೋ ಹಾಗೆ ಕಾಪಾಡುತ್ತೆ. ಅಂದ್ಮೇಲೆ ಮೊಟ್ಟೆ ತಿಂದ್ರೆ ಹೃದಯ ಗಟ್ಟಿಯಾಗುತ್ತೆ ಅಂತಾಯ್ತಲ್ಲಾ?

ಮೂಲ

5. ಸಣ್ಣಗಾಗ್ತೀರಿ

ಅಮೇರಿಕಾದ ಸೈಂಟಿಸ್ಟ್ ಏನಂತಾರೆ ಗೊತ್ತಾ? ಅವರ ಸಂಶೋಧನೆ ಪ್ರಕಾರ ಕಡ್ಮೆ ಕ್ಯಾಲೋರಿ ಡಯೆಟ್ ಮಾಡಿ ಸಣ್ಣ ಆಗೋ ಯೋಚ್ನೆ ಇರೋರೆಲ್ಲಾ ಅದರ ಜೊತೆ ಜೊತೆಗೆ ಮೊಟ್ಟೇನೂ ತಿಂದ್ರೆ ಎರಡು ಪಟ್ಟು ಬೇಗ್ನೆ ಸಣ್ಣಕ್ಕಾಗ್ತಾರಂತೆ. ಕಾರಣ ಏನಂದ್ರೆ, ಪ್ರೋಟೀನಿರೋ ಈ ಮೊಟ್ಟೆ ತಿನ್ನೋದ್ರಿಂದ ತುಂಬಾ ಹೊತ್ತು ಹೊಟ್ಟೆ ತುಂಬಿದಂಗಿದ್ದು ಮತ್ತೆ ಮತ್ತೆ ಹಸಿವಾಗೋಲ್ಲ. ಹಾಗಿದ್ಮೇಲೆ ಸಣ್ಣ ಆಗೇ ಆಗ್ತೀರಿ.

ಮೂಲ

6. ಕ್ಯಾನ್ಸರಿಂದ ದೂರ ಇರ್ತೀರಿ

ಕೋಲಿನ್ ಅನ್ನೋ ಅಂಶ ನಮ್ಮ ಮೆದುಳಿಗೆ ಬೇಕೆ ಬೇಕು. ಇದು ಕ್ಯಾನ್ಸರ್ ಬರದೇ ಇರೋ ಥರ ತಡೆಯುತ್ತೆ. ಸಂಶೋಧನೆಗಳ ಪ್ರಕಾರ, ಹುಡ್ಗೀರು ವಯಸ್ಸಿಗೆ ಬರ್ತಾ ಇದ್ದ ಹಾಗೇ ದಿನಾಲೂ ಮೊಟ್ಟೆ ತಿನ್ನೋ ಅಭ್ಯಾಸ ಮಾಡ್ಕೊಂಡ್ರೆ, ಸ್ತನ ಕ್ಯಾನ್ಸರ್ ಬರೋ ರಿಸ್ಕು 18% ಕಡ್ಮೆ ಆಗುತ್ತೆ.

ಮೂಲ

7. ಬಸುರಿಯರಿಗೆ ಹುಟ್ಟೊ ಮಕ್ಕಳು ಚೆನ್ನಾಗಿರ್ತಾರೆ

ಲೈಂಗಿಕ ಹಾರ್ಮೋನುಗಳು ಉತ್ಪತ್ತಿ ಆಗೋದಕ್ಕೆ ವಿಟಮಿನ್ ಬಿ ಕೂಡ ಸಹಾಯ ಮಾಡುತ್ತೆ. ವಿಟಮಿನ್ ಬಿ9 ಗೆ ಫೋಲಿಕ್ ಆಸಿಡ್ ಅಂತ ಕೂಡ ಕರೀತಾರೆ. ಇದ್ರಿಂದ ಭ್ರೂಣ ಬೆಳ್ಯೋಕೆ ಬೇಕಾಗಿರೋ ಕೆಂಪು ರಕ್ತ ಕಣ ಉತ್ಪತ್ತಿ ಆಗುತ್ತೆ. ಮಗು ಬೆಳ್ಯೋವಾಗ ಮಾನಸಿಕ ತೊಂದ್ರೆ ಬರದಂಗೆ ತಡೆಯುತ್ತೆ. ಇದೇ ಕಾರಣಕ್ಕೆ ಬಸ್ರಿ ಹೆಂಗಸ್ರಿಗೆ ವಿಟಮಿನ್ ಬಿ9 ತುಂಬಾನೇ ಮುಖ್ಯ. ಅದಕ್ಕೆ ಮೊಟ್ಟೆ ತಿನ್ಬೇಕು ಅಂತಿರೋದು. ಒಂದ್ ಮೊಟ್ಟೇಲಿ 7.0 ಮೈಕ್ರೋ ಗ್ರಾಂ ನಷ್ಟು ವಿಟಮಿನ್ ಸಿಗುತ್ತೆ.

ಮೂಲ

8. ಯಂಗ್ ಆಗಿ ಕಾಣಿಸ್ತೀರಿ

ಡಚ್ ಸೈಂಟಿಸ್ಟ್ಗಳು ಮಾಡಿರೋ ರಿಸರ್ಚ್ ಪ್ರಕಾರ, 35 ರಿಂದ 40 ವಯಸ್ಸಿನ ಹೆಂಗಸರ ಮುಖದ ಚರ್ಮ ತುಂಬಾ ಕಳೆ ಕಳೆಯಾಗಿ ಕಾಣಿಸ್ತಂತೆ. ಆ ವಯಸ್ನಲ್ಲಿ ಸಾಮಾನ್ಯ ಅನ್ನಿಸೋ ಎಲ್ಲಾ ತರದ ಚರ್ಮದ ತೊಂದ್ರೆನೂ ಸರಿಯಾಯ್ತಂತೆ. ಗಂಡಸರ ಕಣ್ಣ ಸುತ್ತ ಇದ್ದ ನೆರಿಗೆ ಎಲ್ಲಾ ಅಳ್ಸೋಗಿ ಚೆನ್ನಾಗ್ ಕಾಣಿಸ್ತಂತೆ. ಇವ್ರೆಲ್ಲಾ ಮಾಡಿದ್ದು ಒಂದೇ ಕೆಲ್ಸ ಏನಪ್ಪಾ ಅಂದ್ರೆ ಮಿಸ್ಸಿಲ್ದೇ ಮೊಟ್ಟೆ ತಿಂದಿದ್ದು.

ಮೂಲ

9. ನೆನಪಿನ ಶಕ್ತಿ ಹೆಚ್ಚತ್ತೆ

ಇದ್ರಲ್ಲಿರೋ ಫಾಸ್ಫೋಲಿಪಿಡ್ ನಮ್ಮ ಮೆದುಳಲ್ಲಿರೋ ಸೆಲ್ಗಳು ಕೊಲಿನ್ ಅಂಶಾನ ಸರಿಯಾದ ಪ್ರಮಾಣದಲ್ಲಿರೋ ಹಾಗೆ ನೋಡ್ಕೋಳುತ್ತೆ. ಈ ಕೊಲಿನ್ ನಮ್ಮ ಮೆದುಳು ಸರಿಯಾಗಿ ಬೆಳವಣಿಗೆ ಆಗೋದಕ್ಕೆ, ಸರಿಯಾಗಿ ಕೆಲಸ ಮಾಡೋದಿಕ್ಕೆ ಬೇಕೇ ಬೇಕು. ನೀವು ದಿನಕ್ಕೆರಡು ಮೊಟ್ಟೆ ತಿಂದ್ನೋಡಿ ನಿಮ್ಮ ನೆನಪಿನ ಶಕ್ತಿ ಹೆಂಗ್ ಶಾರ್ಪ್ ಆಗುತ್ತೆ ಅನ್ನೋದನ್ನ ನೋಡಿ ಆಶ್ಚರ್ಯಪಡ್ತೀರಿ.

ಮೂಲ

ಈ ಪ್ಲಾಸ್ಟಿಕ್ಕೂ, ನಿಜವಾದ್ದೂ ಅನ್ನೋ ತಲೆಬಿಸಿ ಎಲ್ಲಾ ಬಿಟ್ಟು ಮೊಟ್ಟೆ ತಿನ್ನಕ್ಕೆ ಶುರು ಮಾಡಿ… ಆಮೇಲೆ ನೋಡಿ ಚಮತ್ಕಾರಾನ!