ಅಮೇರಿಕಾದ ಹನ್ನೆರಡು ಪ್ರತಿಶತದಷ್ಟು ಜನರು ಥೈರಾಯಿಡ್ ಸಮಸ್ಯೆಯಿಂದ ಬಳಲ್ತಾ ಇದ್ದಾರೆ. ಜೀವ್ನದಲ್ಲಿ ಒಂದ್ಸಲ ಆದ್ರೂ ಈ ಸಮಸ್ಯೆ ಬರತ್ತಂತ ಅವ್ರೇ ಹೇಳ್ತಾರೆ. ಚಿಟ್ಟೆಯಾಕಾರಾದಲ್ಲಿರೋ ಈ ಥೈರಾಯ್ಡ್ ಗ್ರಂಥಿಯ ಕೆಳ್ಗೆ ಎನಾದ್ರೂ ಊರಿಯೂತ ಇಲ್ಲಾ ಕಿರಿಕಿರಿ ಅನ್ಸಿದ್ರೂ “ಇಲ್ಲೊಂದ್ ಸಮಸ್ಯೆ ಖಂಡಿತ ಇದೆಯಂತ ತಿಳ್ಕೊಳ್ಳಿ”. ಹೈಪೋ ಥೈರಾಡಿಸಂ , ಹೈಪೆರ್ ಥೈರಾಡಿಸಂ , ಗಾಯ್ಟರ್ ಇವೆಲ್ಲಾ ಸಾಮಾನ್ಯವಾಗಿ ನೀವ್ ಕೇಳಿರೋ ಗಂಟಲಿನ ಸಮಸ್ಯೆ. ಇದೆಲ್ಲ ಬರೋದಕ್ಕೆ ಕಾರಣ ಥೈರಾಯ್ಡ್ ಗ್ರಂಥಿಯಲ್ಲಿ ಎನೋ ಆಗಿದೆಯಂತರ್ಥ. ಯೋಗ ಮಾಡಿದ ತಕ್ಷಣ ಸಮಸ್ಯೆ ಪರಿಹಾರ ಆಗತ್ತಂತಲ್ಲ. ಯೋಗ ಮಾಡೋದ್ರಿಂದ  ಥೈರಾಯ್ಡ್ ಗ್ರಂಥಿಯನ್ನ ಆರೋಗ್ಯಕರವಾಗಿ ಇಟ್ಕೊಳ್ಳೊಕೇ ಸಹಾಯ ಮಾಡತ್ತೆ. ನಿಧಾನ ನಿಧಾನ ನಿಮ್ ಚಯಾಪಚಯ ಕ್ರಿಯೆಗಳು ಒಳ್ಳೆ ರೀತಿಯಲ್ಲಿ ಸಾಗಿ ಮುಂದಕ್ಕೆ ಬರೋ ಕಾಯಿಲೆಗಳನ್ನ ಇವಾಗ್ಲೇ ತಡೆಗಟ್ಟತ್ತೆ. ಅದೆಷ್ಟೋ ಜನರಿಗೆ ಯೋಗ ಹೇಳ್ಕೊಟ್ಟು ಫಲಿತಾಂಶವನ್ನ ನೋಡಲಾಯ್ತು. ಯಾರೆಲ್ಲಾ ಹೈಫೋ ಥೈರಾಡಿಸಂನಿಂದ ಬಳಲ್ತಾ ಇದ್ದಾರೆ ಅವ್ರೆಲ್ಲಾ ಸತತ ಆರು ತಿಂಗಳ ಅಭ್ಯಾಸದಿಂದ ಗುಣಮುಖರಾಗಿರೋ ಫಲಿತಾಂಶ ಎಲ್ಲರಿಗೂ ಖುಷಿ ಕೊಟ್ಟಿತ್ತು. ಒಂದ್ವೇಳೆ ನೀವೇನಾದ್ರೂ ಹೈಪರ್ ಥೈರಾಡಿಸಂನಿಂದ ಬಳಲ್ತಾ ಇದ್ರೆ ಉಸಿರಾಟದ ವ್ಯಾಯಾಮಾನೋ ಇಲ್ಲ ಪ್ರಾಣಾಯಾಮಾನೋ ಮಾಡಿ. ಕುತ್ತಿಗೆಯನ್ನ ಹಿಗ್ಗಿಸೋ ಆಸನಗಳನ್ನ ಮಾಡೋಕೆ ಹೋಗ್ಬೇಡಿ. ಹಾಗಾದ್ರೆ ಒಂದೊಂದಾಗಿ ಯಾವ್ ಯಾವ್ ಆಸನಗಳು ಥೈರಾಯ್ಡ್ ಗ್ರಂಥಿಯನ್ನ ಆರೋಗ್ಯಕರವಾಗಿಡತ್ತೆ ಅನ್ನೋದನ್ನ ನೋಡೋಣ ಬನ್ನಿ.

1) ಉಷ್ಟ್ರಾಸನ

ಉಷ್ಟ್ರ ಅಂದ್ರೆ ಒಂಟೆ . ಈ ಆಸನ ಒಂಟೆಯನ್ನ ಹೋಲುದ್ರಿಂದ ಇದಕ್ಕೆ ಈ ಹೆಸ್ರು. ಇದು ಹೈಪೋ ಥೈರಾಡಿಸಂ ಸಮಸ್ಯೆಯನ್ನ ಕಮ್ಮಿಮಾಡ್ಸೋದಲ್ಲದೇ ಅಸ್ತಮಾದಂತಹ ಸಮಸ್ಯೆಗೂ ಸಹ ತುಂಬಾನೇ ಒಳ್ಳೆಯದು.

ವಿಶೇಷ ಸೂಚನೆ : ಕುತ್ತಿಗೆ ನೋವಿರೋರು ಯಾವ್ದೇ ಕಾರಣಕ್ಕೂ ಮಾಡಬಾರ್ದು. ಹಾಗೇ ಋತುಸ್ರಾವ ಆದ ಸಮಯದಲ್ಲಿ ಕೂಡಾ ಇದ್ನ ಮಾಡಬಾರದು.

ಮಾಡುವ ವಿಧಾನ

* ಮೊದಲಿಗೆ ನೆಲದ ಮೇಲೆ ಎರಡು ಮಂಡಿ ಮಡ್ಚಿ ವಜ್ರಾಸನದ ಭಂಗಿಯಲ್ಲಿ ಕೂತ್ಕೊಳ್ಳಿ. 

* ಮಂಡಿಯ ನಡುವೆ ಸೊಂಟದಷ್ಟು ಅಳತೆಯಿರೋ ಹಾಗೇ ಮಂಡಿಯ ಮೇಲೆ ನಿಂತ್ಕೊಳ್ಳಿ

* ಉಸಿರನ್ನ ತಗೊಳ್ತಾ ಬಲಗೈಯನ್ನ ಹಿಂದಕ್ಕೆ ತಗೊಂಡೋಗಿ ಬಲಹಿಮ್ಮಡಿಯ ಮೇಲೆ ಇಟ್ಕೊಳ್ಳಿ

* ಸ್ವಲ್ಪ ಹೊತ್ತು ಉಸಿರನ್ನ ಬಿಟ್ಟು ಹಾಗೇ ಎಡಗೈಯಲ್ಲೂ ಮಾಡಿ

* ಈ ಭಂಗಿಯಲ್ಲಿ ಸುಮಾರು 10 ರಿಂದ 15 ಬಾರಿ ಉಸಿರಾಟ ಮಾಡಿ

* ನಿಧಾನವಾಗಿ ಉಸಿರನ್ನ ಬಿಡುತ್ತಾ ಒಂದೊಂದಾಗಿ ಕೈಯನ್ನ ಮುಂದಕ್ಕೆ ತಗೊಂಡೋಗಿ ಪುನ: ಮಂಡಿಯ ಮೇಲೇ ಕೂತ್ಕೊಳ್ಳಿ

http://www.boldsky.com/img/2016/05/yoga-26-1464254393.jpg

2) ಭುಜಂಗಾಸನ

ಭುಜಂಗ ಅಂದ್ರೆ ಹಾವು ಅಥ್ವಾ ಸರ್ಪ ಅಂತರ್ಥ. ದೇಹವನ್ನ ಹಾವಿನ ರೀತಿಯಲ್ಲಿ ಇಟ್ಕೊಳ್ಳೋದ್ರಿಂದ ಇದಕ್ಕೆ ಈ ರೀತಿ ಹೆಸ್ರು ಬಂದಿದೆ. ಈ ಆಸನದಿಂದ ಕುತ್ತಿಗೆಯ ಭಾಗಕ್ಕೆ ತುಂಬಾನೇ ರಕ್ತಪರಿಚಲನೆಯಾಗಿ ಹೈಪೋಥೈರಾಡಿಸಂ , ಬೆನ್ನೋವು ಕಡ್ಮೆಯಾಗತ್ತೆ. ತುಂಬಾನೇ ಕುತ್ತಿಗೆ ನೋವಿರೋರು ಮಾಡ್ದೇ ಇರೋದೇ ಒಳ್ಳೆಯದು.

ಮಾಡುವ ವಿಧಾನ 

* ಮೊದಲಿಗೆ ಹೊಟ್ಟೆಯ ಮೇಲೆ ಮಲಕ್ಕೊಳ್ಳಿ

* ಎರಡೂ ಹಸ್ತವನ್ನ ಎದೆಯ ಅಕ್ಕಪಕ್ಕದಲ್ಲಿ ಇಟ್ಕೊಳ್ಳಿ. ಮೊಣಕೈಯನ್ನೋದು ಒಳ್ಗಡೆಯೇ ಇರ್ಲಿ

* ಈಗ ನಿಧಾನವಾಗಿ ಉಸಿರನ್ನ ತಗೊಳ್ತಾ ಎದೆಯನ್ನ ನಿಧಾನವಾಗಿ ಹೊಟ್ಟೆಯವರೆಗೂ ಎತ್ತಿ

* ಈ ಭಂಗಿಯಲ್ಲಿ ಒಂದತ್ತು ಉಸಿರಾಟ ಮಾಡಿ

* ನಿಧಾನವಾಗಿ ಉಸಿರನ್ನ ಬಿಡ್ತಾ ವಿಶ್ರಾಂತಿ ತಗೊಳ್ಳಿ

http://happyhindi.com/wp-content/uploads/2016/07/steps-of-bhujangasana-cobra-pose.jpg

3) ಧನುರಾಸನ

ಧನುರ್ ಅಂದ್ರೆ ಬಿಲ್ಲು. ಈ ಆಸನದ ಅಂತಿಮ ಭಂಗಿ ಬಿಲ್ಲಿನ ಆಕಾರದಲ್ಲಿರೋದ್ರಿಂದ ಇದ್ಕೆ ಈ ಹೆಸ್ರು ಬಂದಿದೆ. ಚಯಾಪಚಯ ಕ್ರಿಯೆಗಳು ಚೆನ್ನಾಗಿಲ್ಲಾಂದ್ರೆ ಈ ಆಸನ ತುಂಬಾನೇ ಒಳ್ಳೆಯದು. ಹಾಗೇ ನಾವೀಗಾಗ್ಲೇ ಹೇಳ್ದಂತೆ , ಕುತ್ತಿಗೆಯ ಭಾಗಕ್ಕೆ ತುಂಬಾನೇ ರಕ್ತ ಸಂಚಲನವಾಗೋದ್ರಿಂದ  ಹೈಪೋಥೈರಾಡಿಸಂ , ಬೆನ್ನೋವು ಕಡ್ಮೆಯಾಗತ್ತೆ. ಜೊತೆಗೆ ಆಸ್ತಮಾದಂತಹ ಕಾಯ್ಲೆಗೆ ಒಳ್ಳೆಯದು. ತುಂಬಾನೇ ಕುತ್ತಿಗೆ ನೋವಿರೋರು , ಗರ್ಭಿಣಿಯರು ಮಾಡ್ದೇ ಇರೋದೇ ಒಳ್ಳೆಯದು. ಹರ್ನಿಯಾ , ಅಲ್ಸರ್ ಆಗಿರೋರು ಈ ಆಸನವನ್ನ ಮಾಡೋದ್ ಬೇಡ್ ಅಂತಿದ್ದಾರೆ ಇದನ್ನ ಬಲ್ಲವರು.

ಮಾಡುವ ವಿಧಾನ 

* ಹೊಟ್ಟೆಯ ಮೇಲೇ ಮಲಕ್ಕೊಳ್ಳಿ 

* ಎರಡು ಕಾಲನ್ನ ಮಡ್ಚಿ ಕೈಯಿಂದ ಹಿಡ್ಕೊಳ್ಳಿ

* ನಿಧಾನವಾಗಿ ಉಸಿರನ್ನ ತಗೊಳ್ತಾ ಮೇಲಕ್ಕೆತ್ತಿ. 

* ಈ ಭಂಗಿಯಲ್ಲಿ ಒಂದತ್ತು ಉಸಿರಾಟವನ್ನ ಮಾಡಿ ಉಸಿರನ್ನ ಬಿಡ್ತಾ ಕೆಳಗಿಳ್ಸಿ. 

http://www.theyogatutor.com/templates/0/dhanur.jpg

4) ಸೇತುಬಂಧಾಸನ

ಸೇತು ಅಂದ್ರೆ ಸೇತುವೆ . ಈ ಆಸನ ಸೇತುವೆಯ ರೀತಿ ಹೋಲೋದ್ರಿಂದ ಇದ್ಕೆ ಈ ಹೆಸ್ರು ಬಂದಿದೆ. ನಾವೀಗಾಗ್ಲೇ ಹೇಳ್ದಂತೆ , ಕುತ್ತಿಗೆಯ ಭಾಗಕ್ಕೆ ತುಂಬಾನೇ ರಕ್ತ ಸಂಚಲನವಾಗೋದ್ರಿಂದ  ಹೈಪೋಥೈರಾಡಿಸಂ , ಬೆನ್ನೋವು ಕಡ್ಮೆಯಾಗತ್ತೆ. ಜೊತೆಗೆ ಆಸ್ತಮಾದಂತಹ ಕಾಯ್ಲೆ , ತಲ್ನೋವಿಗೆಲ್ಲಾ ಈ ಆಸನ ತುಂಬಾನೇ ಒಳ್ಳೆಯದು. ತುಂಬಾನೇ ಕುತ್ತಿಗೆ ನೋವಿರೋರು , ಗರ್ಭದ ಕೊನೆಯ ಹಂತದಲ್ಲಿರೋರು ಮಾಡ್ದೇ ಇರೋದೇ ಒಳ್ಳೆಯದು. ಹರ್ನಿಯಾ , ಅಲ್ಸರ್ ಆಗಿರೋರು ಈ ಆಸನವನ್ನ ಮಾಡೋದ್ ಬೇಡ್ ಅಂತಿದ್ದಾರೆ ಇದನ್ನ ಬಲ್ಲವರು.

ಮಾಡುವ ವಿಧಾನ 

* ಮೊದಲಿಗೆ ಬೆನ್ಮೇಲೆ ಮಲಕ್ಕೊಳ್ಳಿ

* ಎರಡು ಕಾಲನ್ನ ಮಡಿಯ ನೇರಕ್ಕೆ ಮಡ್ಚಿ

* ಕಾಲುಗಳ ನಡುವೆ ಸೊಂಟದಷ್ಟು ಅಂತರ ಇರ್ಲಿ

* ಸಾಧ್ಯ ಆದ್ರೆ ಕೈಯಿಂದ ಹಿಮ್ಮಡಿಯನ್ನ ಹಿಡ್ಕೊಳ್ಳಿ

* ಈಗ ನಿಧಾನವಾಗಿ ಉಸಿರನ್ನ ತಗೊಳ್ತಾ ಹೊಟ್ಟೆಯನ್ನ ಮೇಲಕ್ಕೆತ್ತಿ

* ಈ ಭಂಗಿಯಲ್ಲಿ ಒಂದತ್ತು ಬಾರಿ ಉಸಿರಾಟ ಮಾಡಿ

* ನಿಧಾನವಾಗಿ ಉಸಿರನ್ನ ಬಿಡ್ತಾ ಕೆಳ್ಗೆ ಬಿಟ್ಬಿಟ್ಟು ವಿಶ್ರಾಂತಿ ತಗೊಳ್ಳಿ

5) ಸರ್ವಾಂಗಾಸನ

ಹೆಸರೇ ಹೇಳುವಂತೆ ಇದು ಸರ್ವಾಂಗ ಸುಂದರ ಆಸನ. ಹೆಸರೇ ಹೇಳುವಂತೆ ಇದು ಸರ್ವಾಂಗ ಸುಂದರ ಆಸನ. ಒಬ್ಬ ಮುಖ್ಯಮಂತ್ರಿ ಹೇಗೇ ಒಂದು ರಾಜ್ಯವನ್ನ ನಡೆಸ್ತಾನೆ ಹಾಗೇ ಈ ಆಸನ ಇಡೀ ನಮ್ಮ ದೇಹವನ್ನ ಯಾವ್ದೇ ಅಪಾಯ ಬರದೇ ಇರೋ ಹಾಗೇ ನೋಡಿಕೊಳ್ಳೋ ಪಾತ್ರ ವಹಿಸತ್ತೆ. ಯಾಕಂದ್ರೆ ಈ ಆಸನವನ್ನ ಮಾಡೋವಾಗ ನಮ್ಮಲ್ಲಿರೋ ಎಂಡೋಕ್ರೈನ್ ಸಿಸ್ಟಮ್ ಚುರುಕಾಗತ್ತೆ. ಹೈಪೋ ಥೈರಾಡಿಸಂನಿಂದ ಬಳಲ್ತಾ ಇರೋರು ಈ ಆಸನವನ್ನ ಮಾಡೋದ್ರಿಂದ ದೇಹದಲ್ಲಿರೋ ಅಷ್ಟು ರಕ್ತ ಥೈರಾಯ್ಡ್ ಗ್ರಂಥಿಗೆ ಬರತ್ತೆ. ರಕ್ತ ಈ ರೀತಿ ಬರೋದ್ರಿಂದ ಕೆಲ್ಸ ಮಾಡ್ದೇ ನಿಂತ್ಕೊಂಡೇ ಇರೋ ಅದೆಷ್ಟೋ ಗ್ರಂಥಿಗಳು ತಮ್ ತಮ್ ಕೆಲ್ಸ ಮಾಡೋಕೆ ಶುರು ಮಾಡತ್ತೆ. ಇದ್ರಿಂದ ನಿಧಾನವಾಗಿ ಥೈರಾಯ್ಡ್ ಗ್ರಂಥಿ ಆರೋಗ್ಯಕರವಾಗಿ ಬೇಳಿತಾ ಹೋಗತ್ತೆ.

ಮಾಡುವ ವಿಧಾನ

* ಮೊದಲು ಬೆನ್ನ ಮೇಲೆ ಮಲಕ್ಕೊಳ್ಳಿ

* ಉಸಿರನ್ನ ತಗೊಳ್ತಾ ಎರಡು ಕಾಲನ್ನ ಬೆನ್ನಿನ ಸಮೇತ ಮೇಲಕ್ಕೆತ್ತಿ. ಎರಡು ಕೈಗಳ್ನ ಸೊಂಟದ ಮೇಲೇ ಇಟ್ಕೊಳ್ಳಿ. 

* ಆದಷ್ಟು ಭುಜ ಮತ್ತೆ ಕಾಲುಗಳು ಒಂದೇ ನೇರದಲ್ಲಿ ಬರತ್ತಾ ಅನ್ನೋದ್ನ ಗಮನಿಸಿ. 

* ಹಾಗೇ ನಿಮ್ಮ ಗದ್ದ ಎದೆಯ ಕುಳಿಗೆ ತಾಗಿದೆಯಾ ಇಲ್ಲವೋ ಅನ್ನೋದ್ನ ಗಮ್ನಿಸಿ. 

* ಇದೇ ಭಂಗಿಯಲ್ಲಿ ಒಂದಿಪ್ಪತ್ತು ಬಾರಿ ಉಸಿರಾಟ ಮಾಡಿ. 

* ಉಸಿರಾಟ ಮಾಡಿದ ನಂತರ ನಿಧಾನವಾಗಿ ಉಸಿರು ಬಿಡುತ್ತಾ ಕಾಲುಗಳನ್ನ ಕೆಳಗೆ ಇಳಿಸಿ. 

6) ವೀಪರೀತ ಕರಣಿ

ವಿಪರೀತ ಅಂದ್ರೆ ವಿರುದ್ದವಾದ ಅಥ್ವಾ ತಿರುಗಿಸು ಅನ್ನೋ ಅರ್ಥ ಬರತ್ತೆ. ಸಾಮಾನ್ಯವಾದ ಭಾಷೆಯಲ್ಲಿ ಹೇಳ್ಬೇಕಂದ್ರೆ ಎರಡು ಕಾಲನ್ನ ಗೋಡೆಗೆ ತಾಗ್ಸ್ಕೊಂಡು ಬೆನ್ಮೇಲೆ ಮಲ್ಗಿಯಂತ. ಈ ಆಸನದಿಂದ ಬರೇ ಹೈಪೋ ಥೈರಾಡಿಸಂ ಸಮಸ್ಯೆಯನ್ನ ಕಮ್ಮಿಮಾಡ್ಸೋದಲ್ಲದೇ ಇಡೀ ದೇಹವನ್ನ ಪುನರ್ಜೀವಗೊಳಿಸತ್ತೆ. ಒತ್ತಡ ಮತ್ತೆ ನಿದ್ದೆ ಕಮ್ಮಿಯಾಗಿದ್ರೆ ಈ ಆಸನವನ್ನ ಮಾಡಿದ್ರೆ ಸಾಕು ಎಲ್ಲಾ ಗುಣವಾಗತ್ತೆ.

ವಿಶೇಷ ಸೂಚನೆ : ಕುತ್ತಿಗೆ ನೋವಿರೋರು ಯಾವ್ದೇ ಕಾರಣಕ್ಕೂ ಮಾಡಬಾರ್ದು. ಹಾಗೇ ಋತುಸ್ರಾವ ಆದ ಸಮಯದಲ್ಲಿ ಕೂಡಾ ಇದ್ನ ಮಾಡಬಾರದು.

ಮಾಡುವ ವಿಧಾನ

* ಮೊದಲು ಬೆನ್ನ ಮೇಲೆ ಮಲಕ್ಕೊಳ್ಳಿ

* ಉಸಿರನ್ನ ತಗೊಳ್ತಾ ಎರಡು ಕಾಲನ್ನ ಬೆನ್ನಿನ ಸಮೇತ ಮೇಲಕ್ಕೆತ್ತಿ. ಎರಡು ಕೈಗಳ್ನ ಸೊಂಟದ ಮೇಲೇ ಇಟ್ಕೊಳ್ಳಿ. 

* ಈವಾಗ ನಿಮ್ ದೇಹ 45 ಡಿಗ್ರಿ ಆಕಾರದಲ್ಲಿ ಬರೋ ಹಾಗೇ ನೋಡ್ಕಳ್ಳಿ

* ಎರಡು ಕಾಲುಗಳು 90 ಡಿಗ್ರಿ ಆಕಾರದಲ್ಲಿ ಇರೋ ಹಾಗೇ ನೋಡ್ಕೊಳ್ಳಿ

* ಇದೇ ಭಂಗಿಯಲ್ಲಿ ಒಂದಿಪ್ಪತ್ತು ಬಾರಿ ಉಸಿರಾಟ ಮಾಡಿ. 

* ಉಸಿರಾಟ ಮಾಡಿದ ನಂತರ ನಿಧಾನವಾಗಿ ಉಸಿರು ತಗೊಳ್ತಾ ಕಾಲುಗಳನ್ನ ಮೇಲೆಕ್ಕೆತ್ತಿ , ನಿಧಾನವಾಗಿ ಕಾಲ್ಗಳನ್ನ ಇಳಿಸ್ತಾ ಬೆನ್ನನ್ನ ನೆಲಕ್ಕೆ ತಾಗ್ಸಿ. 

7) ಹಲಾಸನ

ಹಲ ಅಂದ್ರೆ ನೇಗಿಲು. ಈ ಆಸನ ಮಾಡ್ದಾಗ ನಮ್ ದೇಹ ನೇಗಿಲಿನ ತರ ಇರತ್ತೆ. ಬರೇ ಹೈಪೋ ಥೈರಾಡಿಸಂ ಸಮಸ್ಯೆಯನ್ನ ಕಮ್ಮಿ ಮಾಡೋದಲ್ದೇ ಹೊಟ್ಟೆಯ ಸ್ನಾಯುಗಳನ್ನ ಕೂಡಾ ಬಲಗೊಳಿಸತ್ತೆ. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ನರಮಂಡಲದ ವ್ಯವಸ್ಥೆಯನ್ನ ಚೆನ್ನಾಗಿಟ್ಕೊಳತ್ತೆ. ಹಾಗೇ ಹಾಶಿಮೋಟೋಸ್ ಅನ್ನೋ ಕಾಯ್ಲೇಯನ್ನ ಗುಣಪಡಿಸತ್ತೆ.

ವಿಶೇಷ ಸೂಚನೆ : ಕುತ್ತಿಗೆ ನೋವಿರೋರು ಯಾವ್ದೇ ಕಾರಣಕ್ಕೂ ಮಾಡಬಾರ್ದು. ಹಾಗೇ ಋತುಸ್ರಾವ ಆದ ಸಮಯದಲ್ಲಿ ಕೂಡಾ ಇದ್ನ ಮಾಡಬಾರದು.

ಮಾಡುವ ವಿಧಾನ

* ಮೊದಲು ಬೆನ್ನ ಮೇಲೆ ಮಲಕ್ಕೊಳ್ಳಿ

* ಉಸಿರನ್ನ ತಗೊಳ್ತಾ ಎರಡು ಕಾಲನ್ನ ಬೆನ್ನಿನ ಸಮೇತ ಮೇಲಕ್ಕೆತ್ತಿ. ಎರಡು ಕೈಗಳ್ನ ಸೊಂಟದ ಮೇಲೇ ಇಟ್ಕೊಳ್ಳಿ. 

* ಆದಷ್ಟು ಭುಜ ಮತ್ತೆ ಕಾಲುಗಳು ಒಂದೇ ನೇರದಲ್ಲಿ ಬರತ್ತಾ ಅನ್ನೋದ್ನ ಗಮನಿಸಿ. 

* ಹಾಗೇ ನಿಮ್ಮ ಗದ್ದ ಎದೆಯ ಕುಳಿಗೆ ತಾಗಿದೆಯಾ ಇಲ್ಲವೋ ಅನ್ನೋದ್ನ ಗಮ್ನಿಸಿ. 

* ಉಸಿರನ್ನ ಬಿಡುತ್ತಾ ಎರಡು ಕಾಲುಗಳನ್ನ ನೆಲಕ್ಕೆ ತಾಗ್ಸಿ. 

* ಇದೇ ಭಂಗಿಯಲ್ಲಿ ಒಂದಿಪ್ಪತ್ತು ಬಾರಿ ಉಸಿರಾಟ ಮಾಡಿ. 

* ಉಸಿರಾಟ ಮಾಡಿದ ನಂತರ ನಿಧಾನವಾಗಿ ಉಸಿರು ತಗೊಳ್ತಾ ಕಾಲುಗಳನ್ನ ಮೇಲೆಕ್ಕೆತ್ತಿ , ನಿಧಾನವಾಗಿ ಕಾಲ್ಗಳನ್ನ ಇಳಿಸ್ತಾ ಬೆನ್ನನ್ನ ನೆಲಕ್ಕೆ ತಾಗ್ಸಿ.

8) ಮತ್ಸ್ಯಾಸನ

ಮತ್ಸ್ಯ ಅಂದ್ರೆ ಮೀನು. ಈ ಆಸನವನ್ನ ಮಾಡೋವಾಗ ನಮ್ ಕುತ್ತಿಗೆ ಮತ್ತೆ ತಲೆಯ ಭಾಗ ತುಂಬಾನೇ ಹಿಂದಕ್ಕೆ ಬಾಗೋದ್ರಿಂದ ಒಳ್ಳೆಯ ರೀತಿಯ ರಕ್ತಪರಿಚಲನೆಯಾಗತ್ತೆ.

ವಿಶೇಷ ಸೂಚನೆ : ಕುತ್ತಿಗೆ ನೋವಿರೋರು ಯಾವ್ದೇ ಕಾರಣಕ್ಕೂ ಮಾಡಬಾರ್ದು. ಹಾಗೇ ಋತುಸ್ರಾವ ಆದ ಸಮಯದಲ್ಲಿ ಕೂಡಾ ಇದ್ನ ಮಾಡಬಾರದು.

ಮಾಡುವ ವಿಧಾನ:

* ಮೊದಲು ಬೆನ್ನ ಮೇಲೆ ಮಲಕ್ಕೊಳ್ಳಿ

* ಕಾಲುಗಳನ್ನ ಚಾಚಿಟ್ಕೊಳ್ಳಿ. ಎರಡು ಪಾದ ಒಂದೊಕ್ಕೊಂದು ಸೇರಿರ್ಲಿ. 

* ಕೊನೆಯ ಎರಡು ಬೆರಳನ್ನ ತೊಡೆಯ ಕೆಳಭಾಗದಲ್ಲಿಟ್ಕೊಳ್ಳಿ

* ಈಗ  ಉಸಿರನ್ನ ತಗೊಳ್ತಾ  ಮೊಣಕೈಯ ಸಹಾಯದಿಂದ , ತಲೆಯನ್ನೆತ್ತಿ ಕಾಲ್ಬೇರಳನ್ನ ನೋಡಿ

* ಉಸಿರ್ ಬಿಡ್ತಾ ತಲೆಯನ್ನ ಹಿಂದಕ್ಕೆ ಬಾಗ್ಸಕೊಂಡು ತಲೇನ ನೆಲಕ್ಕೆ ತಾಗ್ಸಿ

*  ಇದೇ ಭಂಗಿಯಲ್ಲಿ ಸುಮಾರು ಒಂದ್ನಿಷ ಇರಿ

ಇದಲ್ಲದೇ ಈ ಆಸನದಿಂದ ಹೊಟ್ಟೆಯ ಸ್ನಾಯುಗಳು ಬಲಗೊಳ್ಳತ್ತೆ.

​ ​http://st1.thehealthsite.com/wp-content/uploads/2014/04/fish-pose.jpg
ಚಿತ್ರ 4 , 5 , 7  : ಸಂತೋಷ್ ಕುಮಾರ್. ಯೋಗದರ್ಶನಂ ಗೋಕುಲಂ ಮೈಸೂರು.

ಪ್ರಾಣಾಯಾಮ

ಹೈಪರ್ ಮತ್ತೆ ಹೈಪೋ ಥೈರಾಡಿಸಂಗೆ ಉಜ್ಜಾಯಿ ಪ್ರಾಣಾಯಾಮ ತುಂಬಾನೇ ಒಳ್ಳೆಯದು. ಈ ಪ್ರಾಣಾಯಾಮ ಮಾಡೋದ್ರಿಂದ ಗಂಟಲಲ್ಲಿ ಶಮನದ ಕಾರ್ಯ ಶುರುಮಾಡ್ಕೊಳತ್ತೆ. ಇದ್ರಿಂದ ಗಂಟಲಲ್ಲಿರೋ ನಿರ್ನಾಳ ಗ್ರಂಥಿಗೆ ಒಂದೊಳ್ಳೆ ವ್ಯಾಯಾಮ ಸಿಕ್ಕಿ ಸಮಸ್ಯೆಯನ್ನ ಕಮ್ಮಿ ಮಾಡ್ಸತ್ತೆ.

ಮಾಡುವ ವಿಧಾನ

ಯಾವ್ದಾದ್ರೂ ಸುಖವಾಗಿರೋ ಆಸನದಲ್ಲಿ ಕುತ್ಕೊಳ್ಳಿ. ನಿಧಾನವಾಗಿ ಮೂಗಿನಿಂದ ಉಸಿರನ್ನ ತಗೊಳ್ಳಿ. ಈಗ ಗಂಟಲಲ್ಲಿ ಉಸಿರನ್ನ ಬಿಡಿ. ಇದೇ ತರ ಒಂದೈದು ಬಾರಿ ಮಾಡಿ.