https://cdn.brilio.net/news/2017/06/08/127030/636695-water-wheel-.jpg

ಮಹಾರಾಷ್ಟ್ರದ ಔರಂಗಬಾದ್ನ ಲಕ್ಷ್ಮೀಬಾಯಿ ನೀಲ್ ಅನ್ನೋ ಮಹಿಳೆ ದಿನನಿತ್ಯದ ಮನೆಗೆಲಸದಿಂದ ಹೈರಾಣಾಗಿ ಹೋಗಿದ್ಲು. ಅವ್ಳೊಬ್ಲಿಗೇನಾ ಮನೆಗೆಲ್ಸ ಇರೋದು ನಮ್ಗೇನ್ ಇಲ್ವಾ ಅಂತ ಕೇಳ್ಬೇಡಿ ಹೆಂಗಸರೇ. ಈ ಲಕ್ಷ್ಮೀಬಾಯಿ ನೀಲ್ ಬೆಳಿಗ್ಗೆ ಕೆಲ್ಸ ಶುರು ಹಚ್ಕೊಂಡ್ರೆ ಅದು ಮುಗೀಯೋದು  ಮಧ್ಯರಾತ್ರಿನೇ. ಮಲ್ಗೋ ಟೈಮಿಗೆ ಸಹಿಸಲಿಕ್ಕಾಗಲ್ಲ ಅಂತ ನೋವಿರತ್ತೆ. ಬೆಳಿಗ್ಗೆಯಿಂದ ಅಂತ ಕೆಲ್ಸ ಎನಿರತ್ತೆ ಅಂತ ಕೇಳದವ್ರಿಗೆ ಹೇಳ್ತಿವಿ ನೋಡಿ . ದಿನನಿತ್ಯ ಮನೆಯ ಕೆಲಸದ ನಿರ್ವಹಣೆಗೆ ನೀರು ಬೇಕೇ ಬೇಕು. ಅದಕ್ಕೋಸ್ಕರ ಲಕ್ಷ್ಮೀಬಾಯಿ ನೀಲ್ ಐದು ಮೈಲು ದೂರದಲ್ಲಿರೋ ಬಾವಿಯತ್ರ ಹೋಗಿ ಸುಮಾರು 20 ಲೀಟರ್ ಆಗೋವಷ್ಟು ನೀರನ್ನ ತರ್ಬೇಕು. ಇವ್ರತ್ರ ಇದ್ದಿದ್ದೇ ಒಂದ್ ಸ್ಟೀಲ್ ಕೊಡಪಾನ ಅಷ್ಟೆ. ಅದ್ರಲ್ಲಿ ನೀರ್ ತರೋದು ಅಂದ್ರೆ ಬೇವಿನೇಲೆ ಮೇಲೆ ಊಟ ಬಡ್ಸದಂಗ ಇರತ್ತೆ. ಸರ್ಯಾಗ್ ಲೆಕ್ಕ ಹಾಕಿದ್ರೆ ಒಂದೈದು ಬಾರಿ ಹೋಗಿ ಬರ್ಬೇಕು. ಐವತ್ತು ಮೈಲಿ ಕೊಡಪಾನ ತಲೆಮೇಲಿಟ್ಕೊಂಡು ನಡೆಯೋದಂದ್ರೆ ಸುಲಭಾನ ? ಈಗ ಹೇಳಿ ಮಧ್ಯರಾತ್ರಿಗೆ ಅವಳದೆಲ್ಲಾ ಕೆಲ್ಸ ಮುಗಿದ್ಮೇಲೆ ಆ ನೋವಲ್ಲೇ ನಿದ್ರೆ ಮಾಡ್ಬೇಕಲ್ಲ. 

ಇಂತಹ ಜೀವ್ನ ನಡೆಸ್ತಾ ಇದ್ದ ಈ ಲಕ್ಷ್ಮೀಬಾಯಿಗೆ ಸಹಾಯ ಮಾಡಿದ್ದು ಒಂದು ಎನ್ ಜಿ ಒ . ಅವ್ರೇನ್  ನೀರ್ ಹೊತ್ಕಂಡ್ ಬಂದಿಲ್ಲ. ಲಕ್ಷ್ಮೀಬಾಯಿಯ ಹೊರೆಯನ್ನ ಒಂದ್ ಆವಿಷ್ಕಾರದ ಮೂಲಕ ಕಮ್ಮಿ ಮಾಡ್ಸಿದ್ರು. ಆ ಆವಿಷ್ಕಾರವೇ ನೀರಿನ ಚಕ್ರ. ಹೌದು ಸಿಲಿಂಡರಾಕಾರದ ಈ ಉಪಕರಣದಲ್ಲಿ 45 ಲೀಟರ್ ನೀರನ್ನ ಹಿಡಿಸೋವಷ್ಟು ಸಾಮರ್ಥ್ಯವಿದೆ. ಇದನ್ನೇನೂ ಇವ್ರು ಹೊತ್ಕಂಡ್ ಬರ್ಬೇಕಾಗಿಲ್ಲ ಇದ್ನ ನೀವು ಉರುಳ್ಸಕೊಂಡ್ ತಗೊಂಡ್ ಬರ್ಬೇಕು. 2015 ರಲ್ಲಿ ಹ್ಯಾಬಿಟ್ಯಾಟ್ ಇಂಡಿಯಾದವ್ರು ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಸುಮಾರು 500 ಜನರಿಗೆ ಈ ನೀರಿನ ಚಕ್ರವನ್ನ ವಿತರಿಸಿದ್ರು. ಅದ್ರಲ್ಲಿ ಲಕ್ಷ್ಮೀಬಾಯಿ ಕುಟುಂಬವೂ ಒಂದು. 

https://www.thebetterindia.com/wp-content/uploads/2017/06/Laxmibai-Neel.jpg
 

"ನಮಗೆ ತಿಳಿದ ಮಟ್ಟಿಗೆ ನೀರು ಅತಿಮುಖ್ಯವಾಗಿ ಬೇಕಾಗಿರೋ ವಸ್ತು. ಹಳ್ಳಿಗಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದ್ರೂ ಇದು ತುಂಬಾ ದೊಡ್ಡ್ ಸಮಸ್ಯೆಯೇ. ಈ ಹಳ್ಳಿಗರಿಗೆ ನೆರವು ನೀಡಬೇಕು ಅನ್ನೋದು ನಮ್ ಉದ್ದೇಶವಾಗಿತ್ತು. ಭಾರತದಲ್ಲಿ ನೀರಿನ ಸಮಸ್ಯೆ ತುಂಬಾನೇ ಇದೆ. ಎಷ್ಟೋ ಹಳ್ಳಿಗಳಲ್ಲಿ ಬರಗಾಲದಿಂದ ನೀರಿನ ಸೆಲೆಯೇ ಬತ್ತಿ ಹೋಗಿದೆ. ಸ್ನಾನ ಮಾಡೋಕ್ಕಿರ್ಲಿ ಕುಡಿಯೋಕು ನೀರಿಲ್ಲದ ಪರಿಸ್ಥಿತಿ ಇದೆ. ಎಷ್ಟೋ ದೂರದಿಂದ ನೀರನ್ನ ಹೊತ್ತು ತರೋ ಹಳ್ಳಿ ಮಹಿಳೆರಿಗೆ ನಾವೇನಾದ್ರೂ ಸಹಾಯ ಮಾಡ್ಬೇಕಂತ ಬಯ್ಸದಾಗ್ಲೇ ನಮ್ಗೆ ಈ ನೀರಿನ ಚಕ್ರದ ಉಪಕರಣದ ಆವಿಷ್ಕಾರಕ್ಕೆ ತೊಡಗಿದೆವು "   – ರಾಜನ್ ಸ್ಯಾಮುಯೆಲ್ , ಹ್ಯಾಬಿಟ್ಯಾಟ್ ಫಾರ್ ಹ್ಯುಮನಿಟಿ . 

ನೀರಿನ ಚಕ್ರವನ್ನ ಕಂಡು ಹಿಡಿದ್ಮೇಲೆ ಅದ್ನ ಬೇರೆ ಬೇರೆ ಭೂ ಪ್ರದೇಶದಲ್ಲಿ ಪರೀಕ್ಷೆ ಮಾಡಿಸಲಾಯ್ತು. ಅದೆಷ್ಟೋ ಮೈಲುಗಳ ಕಾಲ ನಡ್ಕೊಂಡೋಗಿ ನೀರನ್ನ ಹೊತ್ಕಂಡು ಬರ್ಬೆಕಾದ ಸಂದರ್ಭದಲ್ಲಿ ಬರ್ತಾ ಇದ್ದ ಆ ಕಾಯಿಲೆಗಳು ಕ್ರಮೇಣ ಕಮ್ಮಿಯಾಯ್ತಂತೆ. ಈ ನೀರಿನ ಚಕ್ರವನ್ನ ಒಳ್ಳೆಯ ಪಾಲೀಥೀನನ್ನ ಬಳ್ಸಿಯೇ ತಯಾರ್ಸಿದ್ದಾರೆ. ಜೊತೆಗೆ ಯಾವ್ದೇ ತರದ ಅಪಾಯ ಇದ್ರಿಂದ ಬರಲ್ಲ. ಮಾಮೂಲಿ ತರೋ ನೀರೀನ ಪ್ರಮಾಣಕ್ಕಿಂತ ಇದ್ರಲ್ಲಿ ಜಾಸ್ತಿನೇ ತರ್ಬಹುದು. ಒಂದೇ ಸಲ ನೀವು 45 ಲೀಟರ್ ನಿಮ್ ಮನೆಗೆ ತಗೊಂಡ್ ಹೋಗ್ಬಹುದಂತೆ. ನಾಲ್ಕೈದ್ ಸಲ ನೀವು ಮೈಲುಗಟ್ಟಲೆ ನಡೀಬೇಕಂತಿಲ್ಲ. ಹಾಗೇ ಈ ನೀರಿನ ಚಕ್ರದಲ್ಲಿ ಲೋಹದ ಕೈ ಕೂಡ ಇದೆ. ಉರುಳ್ಸಕೊಂಡ್ ಬರ್ತಾ ಇದ್ರೆ ನೀವು 45 ಲೀಟರ್ ನೀರ್ ತಗೊಂಡ್ ಬರ್ತಾ ಇದ್ದೇನೆ ಅಂತ ಅನ್ಸದೇ ಇಲ್ಲ. 

https://cdn.brilio.net/news/2017/06/08/127030/636695-water-wheel-.jpg
 

" ಮಾರ್ಗದರ್ಶಕವಾಗಿರೋ ಈ ಉಪಕರಣ ನಿಜಕ್ಕೂ ಅದ್ಭುತವೇ. ಈ ಉಪಕರಣದ ಸಹಾಯದಿಂದ ಮಹಿಳಾ ಸಬಲೀಕರಣ ಆಗಿದ್ದಲ್ಲದೇ , ಪುರುಷರು ಮಹಿಳೆಯರ ಕಷ್ಟವನ್ನ ಅರ್ಥ ಮಾಡ್ಕೊಳ್ಳೊಕೆ ಶುರು ಮಾಡಿದ್ರಂತೆ. ಹಾಗೇ ಗ್ರಾಮದ ಮುಖ್ಯಸ್ಥರು ಹಾಗೂ ಇತರ  ಗಣ್ಯರೆಲ್ಲ ಸೇರಿ ಎಲ್ಲರಿಗೂ ಮಹಿಳೆಯ ಕಷ್ಟ್ ಎನೂಂತ ಅರಿವಾಗ್ತಾ ಇದೆಯಂತೆ " – ರಾಜನ್ ಸ್ಯಾಮುಯೆಲ್ , ಹ್ಯಾಬಿಟ್ಯಾಟ್ ಫಾರ್ ಹ್ಯುಮನಿಟಿ

 ಹ್ಯಾಬಿಟ್ಯಾಟ್ ಫಾರ್ ಹ್ಯುಮನಿಟಿ ಇಂಡಿಯಾದವ್ರು ಇದುವರೆಗೆ ಔರಂಗಬಾದ್ , ಲಾತೂರ್ , ನಂದೇದ್ , ಒಸ್ಮನಾಬಾದ್ , ಕರ್ಜಾಟ್ನ ಸುಮಾರು 3000ಕ್ಕಿಂತ ಹೆಚ್ಚು ಕುಟುಂಬಗಳಿಗೆ ನೀರನ ಚಕ್ರವನ್ನ ವಿತರಿಸಿದ್ದಾರಂತೆ. 

ಒಸ್ಮನಾಬಾದ್ನ ಸುನಂದ ಅನ್ನೋ ಮಹಿಳೆ ಮದ್ವೆಯಾದ್ಮೇಲೆ ಅವ್ಳ ಗಂಡ್ ಪದೇ ಪದೇ ತೊಂದ್ರೆ ಕೊಡ್ತಾ ಇದ್ನಂತೆ. ಇದ್ರಿಂದ ನೊಂದಿದ್ದ ಅವ್ಳಿಗೆ ತವರು ಮನೆಗೆ ಹೋಗು ಅಂತ ಮತ್ತೆ ಮತ್ತೆ ಪೀಡಿಸ್ತಾ ಇದ್ದ. ಇದೇ ಸಮಯದಲ್ಲಿ  ಹ್ಯಾಬಿಟ್ಯಾಟ್ ಫಾರ್ ಹ್ಯುಮನಿಟಿ ಇಂಡಿಯಾದವ್ರು ಅವ್ಳಿಗೆ ಒಂದ್ ಮನೆಯನ್ನ ಕಟ್ಟಿಸಿಕೊಳ್ಳೋಕೆ ಸಹಾಯ ಮಾಡಿದ್ರಂತೆ. ಕಟ್ಟಡ್ ಕಾಮಗಾರಿ ಅಂದ್ಮೇಲೆ ನೀರಿನ ಅವಶ್ಯಕತೆ ಇದ್ದೇ ಇರತ್ತೆ. ನೀರನ್ನ ಪೂರೈಸೋದಕ್ಕೆ ಸುನಂದಾ ಇದೇ ನೀರಿನ ಚಕ್ರವನ್ನ ಉಪಯೋಗ್ಸತಾ ಇದ್ದಾಳಂತೆ. ಒಂದಿಷ್ಟು ನೀರಿಗೋಸ್ಕರ ಸುಮಾರು ಮೈಲುಗಟ್ಟಲೇ ನಡಿಬೇಕಾಗಿದ್ದ ಸಂದರ್ಭದಲ್ಲಿ ಇವಾಗ ಒಂದೇ ಸಮಯಕ್ಕೆ ಸುಮಾರು 500 ಲೀಟರ್ನಷ್ಟು ನೀರನ್ನ ತಗೊಂಡ್ ಬರಬಹುದು ಅಂತ ಸುನಂದಾನೇ ಹೇಳ್ತಾಳೆ. 

https://www.thebetterindia.com/wp-content/uploads/2017/06/Sunanda-Kharate.jpg
 

ಕೆಲವರು ದುಡ್ಡಿಗೋಸ್ಕರ ಆವಿಷ್ಕಾರ ಮಾಡಿದ್ರೆ ಇನ್ ಕೆಲವರು ಜನ್ರ ಕಷ್ಟಗಳು ಕಮ್ಮಿಯಾಗ್ಲಿಯಂತ ಆವಿಷ್ಕಾರ ಮಾಡ್ತಾರೆ. ಸಹಾಯ ಮಾಡ್ಬೇಕಂತ ಮನ್ಸು ಮಾಡಿದ್ರೆ ದಾರಿ ತನ್ನಿಂದ ತಾನೇ ತೋರತ್ತೆ ಅಲ್ವಾ.