http://i.telegraph.co.uk/multimedia/archive/02254/scales-2_2254652b.jpg

 ಏನು ತಿಂದ್ರೂ ದಪ್ಪ ಆಗ್ತಿಲ್ಲಾ….. ಎಲ್ಲರ ಹಾಗೆ ಬಗೆ ಬಗೆ ಬಟ್ಟೆ ತೊಡೋಕಾಗ್ತಿಲ್ಲ ಅಂತ ತಲೆ ಮೇಲೆ ಕೈ ಹೊತ್ತು ಕೂತಿರೋರೆಲ್ಲಾ ಒಮ್ಮೆ ನೋಡಿ ನೀವು ಸರಿಯಾಗಿ ಊಟ ಮಾಡ್ತಿದೀರಾ ಅಂತ.

 ಜೊತೇಲಿ ತಿನ್ನೋ ಒಂದೇ ಕಾರಣ ಅಲ್ಲದೇ ಇನ್ನು ಹಲವಾರು ಕಾರಣಗಳು ನಿಮ್ಮ ದೇಹದ ತೂಕ ಹಾಗೆ ಆಕಾರನ ನಿರ್ಧಾರ ಮಾಡುತ್ತೆ.

1. ನಿಮ್ಮ ಊಟದಲ್ಲಿ ಪ್ರೋಟೀನ್ ಅಂಶ ಹೆಚ್ಚಿರೋಹಾಗೆ ನೋಡ್ಕೊಳ್ಳಿ

ಪ್ರೋಟೀನ್ ನ್ "ಬಿಲ್ಡಿಂಗ್ ಬ್ಲಾಕ್ಸ್" ಅಂತಾರೆ…. ಅಂದ್ರೆ ದೇಹನ ಕಟ್ಟೋ ಅಂಶ ಪ್ರೋಟೀನ್. ಹಾಗಾಗಿ ನಿಮ್ಮ ಊಟದಲ್ಲಿ ಪ್ರೋಟೀನ್ ಅಂಶ ಹೆಚ್ಚಿದ್ರೆ ದೇಹದ ತೂಕ ಹೆಚ್ಚಾಗುತ್ತೆ.

ದಿನಾ ಸೊಪ್ಪು ತರಕಾರಿ ಜೊತೆ ದ್ರಾಕ್ಷಿ ಗೋಡಂಬಿ ಎಲ್ಲಾನೂ ತಿನ್ನೋದು ಮರೀಬೇಡಿ.

 

2. ಹಾಲು – ಹಾಲಿನ ಪದಾರ್ಥನ ದಿನ ನಿತ್ಯ ಸೇವಿಸಿ

ಹಾಲು ಅಂದ್ರೆ ಹಾಲು ಮಾತ್ರ… ಕಾಫಿ- ಟೀ ಅಲ್ಲ. ಕಾಫಿ- ಟೀ ನಲ್ಲಿ ಬಳಸೋ ಹಾಲು ನಿಮಗೇ ಯಾವುದೇ ರೀತಿ ಸಹಾಯ ಮಾಡಲ್ಲ.,

ರಾತ್ರಿ ಮಲಗೋವಾಗ ಗಟ್ಟಿ ಮೊಸರು ಸಕ್ಕರೆ ಜೊತೆ ತಿನ್ನಿ. ಬೇಡ ಅಂದ್ರೂ ದಪ್ಪ ಆಗ್ತೀರ.

 

3. ಹೆಚ್ಚು ಸಾರಿ ತಿನ್ನೊ ಅಭ್ಯಾಸ ಮಾಡ್ಕೊಳ್ಳಿ

ಒಂದೇ ಸಾರಿ ತಿನ್ನೋಕಿಂತ ಎರಡು ಗಂಟೆಗೊಮ್ಮೆ ಸ್ವಲ್ಪ ಸ್ವಲ್ಪ ಆಹಾರ ತಿನ್ನೋ ಅಭ್ಯಾಸ ಮಾಡ್ಕೊಳ್ಳಿ ತಿನ್ನೋದು  ಮೈಗೆ ಹತ್ತುತ್ತೆ.

 

4. ಮೊಟ್ಟೆ ದಿನಾ ತಿಂದ್ರೆ ಒಳ್ಳೇದು

ಮೊಟ್ಟೆ ದಿನಕ್ಕೆ ಒಂದಾದ್ರು ತಿನ್ನಿ, ಆದ್ರೆ ಬೇಯಿಸೇ ತಿನ್ನಬೇಕು.

ಇನ್ನು ಮಾಂಸಾಹಾರಿಗಳಾದ್ರೆ ವಾರಕ್ಕೊಮ್ಮೆ ಸೇವಿಸಿ, ಒಳ್ಳೇದು.

 

5. ಹೊರಗಿನ ಆಹಾರ ತಿನ್ನೋದು ಕಡಿಮೆ ಮಾಡಿ

ಹೊರಗಿಂದು ಕರಿದಿದ್ದು ಎಲ್ಲ ತಿನ್ನೋದ್ರಿಂದ ನೀವು ತಿನ್ನೋ ಪೌಷ್ಠಿಕ ಆಹಾರ ಕೂಡ ಲಾಭ ಆಗಲ್ಲ. ಅದ್ರಿಂದ ಹೊರಗಿಂದು ತಿನ್ನೋದು ಕಡಿಮೆ ಮಾಡಿ.

 

6. ನಿದ್ದೆ ಸರಿಯಾಗಿ ಮಾಡ್ಡೇ ಹೋದ್ರೆ ದಪ್ಪ ಆಗಲ್ಲ

ನಿಮ್ಮ ನಿದ್ದೆ – ಯೋಚ್ನೆಗಳ ಮೇಲೆ ಗಮನ ಇರಲಿ, ಇವುಗಳಲ್ಲಿ ವ್ಯತ್ಯಾಸ ಆದ್ರೂ ದಪ್ಪ ಆಗಲ್ಲ.

 

7. ಕೆಟ್ಟ ಅಭ್ಯಾಸಗಳಿಂದ ದೂರ ಇರಿ

ಧೂಮಪಾನ- ಮಧ್ಯಪಾನ ಹೆಚ್ಚಾಗಿ ಮಾಡ್ತಿದ್ರೆ ಅದು ಕೂಡ ನಿಮ್ಮನ್ನ ದಪ್ಪ ಆಗೋಕೆ ಬಿಡಲ್ಲ.

ಇದೆಲ್ಲ ಮಾಡೋಕೆ ಶುರು ಮಾಡಿ ನೋಡಿ, ಆದಷ್ಟು ಬೇಗ ದಪ್ಪ ಆಗ್ತೀರ, ಅದೂ ಆರೋಗ್ಯಕರವಾಗಿ.