http://newstodaypk.com/wp-content/uploads/2017/10/Get-Long-and-Strong-Hair.jpg

ಕೂದಲು ದಪ್ಪಕ್ಕೆ, ಉದ್ದಕ್ಕೆ, ಕಪ್ಪಗೆ, ಮಿರಿ ಮಿರಿ ಮಿಂಚ್ತಾ ಇರಬೇಕು ಅನ್ನೋದು ಎಲ್ಲರ ಆಸೆ. ಆದರೆ ಆಸೆಪಟ್ಟಂತ ಕೂದಲು ಇರೋದು ಮಾತ್ರ ಅಪರೂಪ. ಅಂತ ಅಪರೂಪದ ಕೂದಲು ನಿಮ್ಮದಾಗಬೇಕು, ನಿಮ್ಮ ಕೂದಲ ಸಮಸ್ಯೆ ಪರಿಹಾರ ಆಗಬೇಕಂದ್ರೆ, ಒಂದ್ಸಲ ಅಡುಗೆಮನೆಗೆ ಹೋಗಿ ಬನ್ನಿ. ಅಲ್ಲಿರೋ ಮೊಸರು ತೊಗೊಂಡು ನಾವು ಹೇಳೋ ತರ ಬಳಸಿದ್ರೆ ಸಾಕು. ನಿಮ್ಮ ಸಮಸ್ಯೆ ಮಂಗಮಾಯ ಆಗತ್ತೆ. ಮೊಸರಲ್ಲಿ ಲಾಕ್ಟಿಕ್ ಆಸಿಡ್, ಜಿಂಕ್, ಪ್ರೋಟಿನ್ಗಳು ಜಾಸ್ತಿ ಇರೋದ್ರಿಂದ ನಿಮ್ಮ ಕೂದಲ ಆರೋಗ್ಯ ಕಾಪಾಡತ್ತೆ.

1. ಪರಂಗಿ ಹಣ್ಣು + ಮೊಸರು -> ತಲೆಹೊಟ್ಟು ಓಡಿ ಹೋಗತ್ತೆ

searchhomeremedy.com
ಎರಡನ್ನೂ ಅರ್ಧರ್ಧ ಕಪ್ ತೊಗೊಂಡು ಚೆನ್ನಾಗಿ ಬೆರೆಸಿ, ತಲೆಗೆ ಹಚ್ಕೊಂಡು ಅರ್ಧ ಗಂಟೆ ಬಿಟ್ಟು ಮೃದುವಾದ ಶಾಂಪೂ ಬಳಸಿ ತಲೆಸ್ನಾನ ಮಾಡಿ. ಬೇಕಿದ್ರೆ, ಅರ್ಧ ಹೋಳು ನಿಂಬೆರಸ ಕೂಡ ಸೇರಿಸ್ಕೋಬೋದು. ಒಣ ಚರ್ಮ, ಹೊಟ್ಟು ಇಂತವೆಲ್ಲಾ ಸರಿ ಹೋಗತ್ತೆ. 

2. ಮೊಟ್ಟೆ ಬಿಳಿ ಭಾಗ + ಮೊಸರು -> ಮಂಕಾಗಿರೋ ಕೂದಲು ಮಿರಿಮಿರಿ ಮಿಂಚತ್ತೆ

zliving.com
ಮೊಟ್ಟೆ ಬಿಳಿ ಭಾಗ, ಅರ್ಧ ಕಪ್ ಮೊಸರು, ಸ್ವಲ್ಪ ಆಲಿವ್ ಎಣ್ಣೆ ಎಲ್ಲಾ ಸೇರಿಸಿ ತಲೆಗೆ ಹಚ್ಚಿ. ಕಾಲು ಗಂಟೆ ಬಿಟ್ಟು ತಲೆ ಸ್ನಾನ ಮಾಡಿ ಸಾಕು. ಕೂದಲು ಫಳಫಳ ಅನ್ನತ್ತೆ. 

3. ಬಾಳೇ ಹಣ್ಣು + ಮೊಸರು -> ಸಿಕ್ಕಾದ ಕೂದಲು ಬಿಡಿಯಾಗತ್ತೆ

xhaircare.com
ಕೆಲವು ಸಲ ಕೂದಲು ಎಷ್ಟು ಬಾಚಿದ್ರೂ ಗಂಟಾಗಿ, ಕಾಟ ಕೊಡತ್ತೆ. ಆಗ ಚೆನ್ನಾಗಿ ಕಳೆತ ಬಾಳೇಹಣ್ಣಿಗೆ ಸಾಕಷ್ಟು ಮೊಸರು ಸೇರಿಸಿ ತಲೆಗೆ ಹಚ್ಚಿ, 20 ನಿಮಿಷ ಬಿಟ್ಟು ಬರೀ ನೀರಲ್ಲಿ ತೊಳೀರಿ. ಸಾಕು.

4. ನಿಂಬೆರಸ + ವಿನೆಗರ್ + ಮೊಸರು -> ತಲೆಬುಡದ ಜಿಡ್ಡು ಹೋಗತ್ತೆ

i.ytimg.com
ಒಂದು 15-20 ನಿಮಿಷ ತಲೇಲೆ ಇರಲಿ. ಆಮೇಲೆ ಚೆನ್ನಾಗಿ ತಲೆಸ್ನಾನ ಮಾಡಿ. ಹೆಚ್ಚಾದ ಜಿಡ್ಡಿನಂಶದಿಂದ ಕೂದಲು ಗಲೀಜಾಗಿ, ಬೆಳೀತಿಲ್ಲ ಅನ್ನೋರಿಗೆ ಇದು ಒಳ್ಳೇದು.

5. ಮೆಂತ್ಯೆ ಪುಡಿ + ಮೊಸರು -> ಕೂದಲು ಉದುರೋದು ನಿಲ್ಲತ್ತೆ

hairbuddha.wphscdn.com
ಚಮಚ ಮೆಂತ್ಯೆ ಪುಡಿಗೆ ಅರ್ಧ ಕಪ್ ಮೊಸರು ಸೇರಿಸಿ ತಲೆಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ಪ್ರತಿವಾರ ಹೀಗೆ ಮಾಡೋದ್ರಿಂದ ಕೂದಲು ಉದುರೋದು ನಿಂತು, ಕೂದಲು ಒತ್ತಾಗಿ ಬೆಳೆಯತ್ತೆ.

ಇಷ್ಟು ತಿಳ್ಕೊಂಡ್ರೆ ಬೇಕಾದಷ್ಟು. ನಿಮ್ಮ ಕೂದಲ ಎಲ್ಲಾ ಸಮಸ್ಯೆಗೆ ರಾಮಬಾಣ- ಮೊಸರು ಅಂತಾಯ್ತು.