ಒಬ್ಬ ತಮಿಳಂಗೆ ಒಂದು ದಿನ ಅವನ ಕನ್ನಡಿಗ ಫ್ರೆಂಡ್ ಸಿಕ್ನಂತೆ.

ಫ್ರೆಂಡು ರೋಲ್ಸ್ ರಾಯ್ಸ್ ಕಾರ್ ಇಟ್ಕೊಂಡು ಒಳ್ಳೇ ಮಹಾರಾಜನ ಥರ ಇದ್ನಂತೆ. ನೀರ್ ಥರ ದುಡ್ಡು ಕರ್ಚು ಮಾಡ್ತಿದ್ದಿದ್ದು ನೋಡಿ ತಮಿಳ ‘ಅಷ್ಟೋಂದು ದುಡ್ಡು ಎಲ್ಲಿಂದ ಸಿಗ್ತೋ?’ ಅಂದನಂತೆ.

ಅದಕ್ಕೆ ಕನ್ನಡಿಗ ‘ನಾನು ಬಿಳೀ ಕರಡಿ ಬೇಟೆ ಆಡಕ್ಕೆ ಹಿಮಾಚಲ್ ಪ್ರದೇಶ್ಗೆ ಹೋಗಿದ್ದೆ. ಅದರ ಚರ್ಮಕ್ಕೆ ಚಿನ್ನದ ಬೆಲೆ ಇದೆ’ ಅಂದ್ನಂತೆ.

‘ಅದನ್ನ ಹೆಂಗೆ ಹಿಡಿಯೋದು?’

‘ಸಕ್ಕತ್ ಸಿಂಪಲ್ಲು ಮಗಾ. ಚಳಿಗಾಲದಲ್ಲಿ ಹೋದ್ರೆ ಅಲ್ಲಿ ಗುಹೆ ಒಳಗೆ ಕರಡಿ ದಿನಗಟ್ಟಲೆ ನಿದ್ದೆ ಮಾಡ್ಕೊಂಡಿರತ್ತೆ. ಸುಲಭವಾಗಿ ಗುಂಡು ಹೊಡೆದು ಸಾಯಿಸಬಹುದು.’

ಮೂರು ತಿಂಗಳಾದಮೇಲೆ ಇಬ್ಬರೂ ಮತ್ತೊಮ್ಮೆ ಸಿಕ್ರಂತೆ.

ಈ ಸಾರಿ ನೋಡಿದರೆ ತಮಿಳನಿಗೆ ಮೈಯೆಲ್ಲ ಬ್ಯಾಂಡೇಜು. ಕೈಕಾಲು ಸೊಂಟ ಎಲ್ಲಾ ಮುರಿದು ಕುಂಟ್ತಾ ಇದ್ನಂತೆ.

ತಬ್ಬಿಬ್ಬಾದ ಕನ್ನಡಿಗ ‘ಇದೇನೋ ಇದು? ಏನಾಯ್ತು?’ ಅಂತ ಕೇಳಿದನಂತೆ.

‘ನೀನು ಹೇಳ್ದಂಗೇ ನಾನು ಹಿಮಾಚಲ್ ಪ್ರದೇಶ್ಗೆ ಹೋಗಿದ್ದೆ. ಅಲ್ಲ್ಂದು ಗುಹೆ ಒಳಗೆ ಒಂದು ಚೂರೂ ಸದ್ದು ಮಾಡದೆ ಗನ್ ಹಿಡ್ಕೊಂಡು ಹೋದೆ… ಅಚಾನಕ್ಕಾಗಿ ಒಂದು ಟ್ರೈನ್ ಬಂದುಬಿಡ್ತು…’