http://a4.images.thrillophilia.com/image/upload/s--110MiBFe--/c_fill,f_auto,fl_strip_profile,h_800,q_jpegmini,w_1300/v1/images/photos/000/028/053/original/Ramanagar_Adventure_3.jpg.jpg?1453311052

ವಾರ ಪೂರ್ತಿ ಕೆಲಸ ಮಾಡಿ ಸಾಕಾಗಿದಿರಾ? ಶನಿವಾರ-ರವಿವಾರ ಬಂದ್ರ ಸಾಕು ಎಲ್ಲೆರ ಹೋಗಿಬರ್ಬೇಕು ಅನಸ್ತಿರ್ತತಿ. ಆವಾಗ ಟ್ರೆಕ್ಕಿಂಗ್ಗ್ ಹೋಗಾಕ ಆಸಕ್ತಿ ಇರೋರಿಗೆ ಕರ್ನಾಟಕ ಸ್ವರ್ಗ ರೀsssss. ನಮ್ಮಲ್ಲಿ ಬೆಂಗಳೂರಿನ ಸಮಿಪಿರೋ ಈ 14 ಅದ್ಭುತವಾದ ಸ್ಥಳಗಳಿಗೆ ಜೀವನದಾಗ ಒಂದ ಸರ್ತಿನಾರ್ದು ಹೋಗ್ಬನ್ನಿ…..

1. ಮುಳ್ಳಯ್ಯನಗಿರಿ

ಕರ್ನಾಟಕದ ಅತ್ಯಂತ ಎತ್ತರದ ಜಾಗ ಇದು. ಮುಳ್ಳಯ್ಯನಗಿರಿ 6, 330 ಅಡಿ ಎತ್ತರ ಐತಿ. ಈ ಜಾಗ ಟ್ರೆಕ್ಕಿಂಗ್ ಮಾಡೋರಿಗೆ ಸವಾಲಿದ್ದಂಗ. ಟ್ರೆಕ್ಕಿಂಗ್ ಮಾಡ್ತಾ ಮಾಡ್ತಾ ಭದ್ರಾ ವನ್ಯಜೀವಿ ಧಾಮಾನ ನೋಡ್ಕೊಂತ ಹೋಗ್ಬಹುದು. ಮೈಜುಮ್ ಅನಿಸೋ ಜಾಗಗಳು ಇಲ್ಲದಾವು.

2. ರಾಮನಗರ

ಬೆಂಗಳೂರಿಂದ ಕೇವಲ 50 ಕಿ.ಮೀ ಇರೋ ಜಾಗ ಇದು. ಟ್ರೆಕ್ಕಿಂಗಿಗೆ ಹೇಳಿ ಮಾಡಿಸಿದಂತದ್ದು. ಇಲ್ಲಿ ಟ್ರೆಕ್ಕಿಂಗ್ ಜೊತೆ ಕೆಲವೊಂದಿಷ್ಟು ಆಟ ಆಡ್ಕೊಂತ ಮಜಾ ತಗೋಬಹುದು. ಹಂಗ ಕಲ್ಲುಬಂಡೆಗಳನ್ನು ಹತ್ತೋ ಸಾಹಸ, ಇಲ್ಲಿನ ಕೆಲವೊಂದು ಅಪರೂಪದ ಪಕ್ಷಿಗಳನ್ನ ನೋಡುತ್ತಾ ಟ್ರೆಕ್ಕಿಂಗನ್ನ ಇನ್ನಷ್ಟು ಮಜಾ ಮಾಡ್ಬಹುದು.

3. ತಡಿಯಾಂಡಮೋಲ್

ಕೊಡಗನ್ಯಾಗಿರೋ ಅತ್ಯಂತ ಎತ್ತರದ ಜಾಗ. ಇಲ್ಲಿ ಟ್ರೆಕ್ಕಿಂಗ್ ಮಾಡೋರು ಅದ್ಭುತವಾದ ಅನುಭವ ಪಡ್ಕೋಬಹುದು. ಸುತ್ತಲೂ ಇರೋ ಶೋಲಾ ಕಾಡುಗಳು ಕಣ್ಣತುಂಬತಾವು.  ಇದರ ಎತ್ತರ 1748 ಮೀಟರ್. ಪಶ್ಚಿಮಘಟ್ಟಗಳ ತಾಜಾ ಗಾಳಿ, ಅಲ್ಲಿನ ಪ್ರಾಣಿ ಪಕ್ಷಿಗಳನ್ನ ನೋಡ್ಕೊಂತ ಟ್ರೆಕ್ಕಿಂಗ್ ಮಾಡ ಮಜಾನೇ ಬ್ಯಾರೆ.

4. ನಿಶಾನಿ ಮೊಟ್ಟೆ

ಭಾಳ ಸುಂದರವಾದ ಜಾಗ. ರಾತ್ರಿ ಹೊತ್ತನ್ಯಾಗಂತೂ ಈ ಜಾಗ ನೋಡೋದ ಒಂದ ಹಬ್ಬ ಅಂತ ಹೇಳ್ಬಹುದು. ಅಲ್ಲಲ್ಲಿ ಧುಮುಕೋ ನೀರು ಟ್ರೆಕ್ಕಿಂಗ್ ಹೋದೋರಿಗೆ ಇನ್ನಷ್ಟು ಹುರುಪ ತುಂಬತತಿ.

5. ನಾರಾಯಣಗಿರಿ

ಇದು ಜಲಮಂಗಲ ಹತ್ತಿರ ಐತಿ. ಟ್ರೆಕ್ಕಿಂಗ್ ಹೊಗೊರಿಗೆ ಅದ್ಭುತವಾದ ಜಾಗ. ಬೆಂಗಳೂರಿಗೂ ಹತ್ತಿರ ಆಕ್ಕತಿ. ಈ ಗುಡ್ಡದ ಮ್ಯಾಗ ಹಳೇ ಕೋಟೆ ಐತಿ. 3,845 ಅಡಿ ಎತ್ತರ ಇರೋ ಗುಡ್ಡಾ ಹತ್ತಿದ್ರ ಅಲ್ಲಿ ಇತಿಹಾಸದ ಒಂದಷ್ಟು ಜಾಗಗಳನ್ನೂ ಕಾಣ್ಬಹುದು. ರಾತ್ರಿ ಹೊತ್ತನ್ಯಾಗ ಇಲ್ಲೆ ಕ್ಯಾಂಪ್ ಹಾಕ್ಬಹುದು. ರಾತ್ರಿ ಹೊತ್ತು ನಕ್ಷತ್ರ ನೋಡ್ಕೊಂತ ಒಳ್ಳೆ ಕಾಲ ಕಳಿಬಹುದು ಇಲ್ಲೆ.

6. ಮಾಕಳಿದುರ್ಗ

ಬೆಂಗಳೂರಿಂದ 60 ಕಿ.ಮೀ ದೂರದಾಗ ಮಾಕಳಿದುರ್ಗ ಐತಿ. ಚಿಕ್ಕಬಳ್ಳಾಪುರದಿಂದ 10 ಕಿ.ಮೀ ಆಕ್ಕತಿ. ಇಲ್ಲಿ ಸುಮಾರು ಬೆಟ್ಟಗಳದಾವು ಟ್ರೆಕ್ಕಿಂಗ್ ಹೋಗೋರಿಗೆ ಒಳ್ಳೆಯ ಅನುಭವನ್ನ ಪಡ್ಕೊಬಹುದು. ಇಲ್ಲಿ ಟ್ರೆಕ್ಕಿಂಗ್ ಮಾಡ್ದಷ್ಟೂ ಐತಿ. ಇಲ್ಲಿಂದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಭಾಳ ಹತ್ತಿರ ಅಕ್ಕತಿ.

7. ಕೊಡಚಾದ್ರಿ

ಪಶ್ಚಿಮಘಟ್ಟದಲ್ಲಿನ ಸುಂದರವಾದ ದೃಶ್ಯಗಳನ್ನ ನೋಡ್ಕೊಂತ ಟ್ರೆಕ್ಕಿಂಗ್ ಮಾಡ್ಬಹುದು. ಒಂದ ರೀತಿ ಆಕಾಶಕ್ಕ ಚಾಚಿಕೊಂಡಂತ ಬೆಟ್ಟಗಳು. ಸುತ್ತಲೂ ಇರೋ ಹಸಿರು ಗಿಡಮರ ಬಳ್ಳಿಗಳು ಕಣ್ಣಿಗೆ ತಂಪೆರ್ತಾವು. ಟ್ರೆಕ್ಕಿಂಗ್ ಮಾಡೋದರ ಜತಿಗೆ ಇಲ್ಲಿ ಧುಮುಕೋ ಜಲಪಾತಗಳನ್ನ ನೋಡೋದ ಒಂದು ಖುಷಿ. ಅರಸಿನಗುಂಡಿ, ಹಿಡ್ಲುಮನೆ ಜಲಪಾತಗಳು ಅದಾವ ಇಲ್ಲೆ. ಸರ್ವಜ್ಞ ಪೀಠ ಮತ್ತೊಂದು ಆಕರ್ಷಣೆ ಅಂತ ಹೇಳ್ಬಹುದು. ಮೂಕಾಂಬಿಕಾ ನ್ಯಾಶನಲ್ ಪಾರ್ಕ್ ಕೂಡ ಐತಿ. ಟ್ರೆಕ್ಕಿಂಗ್ ಜೊತೆಗೆ ಮನರಂಜನೇನೂ ಸಿಗತೈತಿ.

8. ಕುಮಾರಪರ್ವತ

ಪಶ್ಚಿಮ ಘಟ್ಟಗಳಲ್ಲಿನ ಮೂರನೇ ಅತಿ ಎತ್ತರವಾಗ ಜಾಗ. ಇದನ್ನ ಪುಷ್ಪಗಿರಿ ಅಂತಾನೂ ಅಂತಾರ. ಅದ್ಭುತವಾದ ಸುಂದರವಾದ ಜಾಗ. ಭಾಳ ಕಡಿದಾಗಿರುವಂತ ಟ್ರೆಕ್ಕಿಂಗ್ ಜಾಗ ಇದು. ಒಂದ ಸರ್ತಿ ಹತ್ತಿದ್ರ ಸಾಕು ಅಲ್ಲಿಂದ ನೋಡೋದ ಒಂದು ಅದ್ಭುತವಾದ ಅನುಭವ. ಇದರ ಎತ್ತರ 5,624 ಅಡಿ. ದೊಡ್ಡ ದೊಡ್ಡ ಮರಗಳು, ಸುತ್ತಲೂ ಹರಡಿಕೊಂಡಂತ ಹಸಿರಿನ ಮದ್ಯ ನಡ್ಕೊಂಡ ಹೋಕ್ಕಿದ್ರ ಅದರ ಮಜಾನ ಬ್ಯಾರೆ.

9. ಕಬ್ಬಾಳದುರ್ಗ

ಬೆಂಗಳೂರಿಗೆ ಸಮಿಪಿರೋ ಅದ್ಭುತವಾದಂತಹ ಟ್ರೆಕ್ಕಿಂಗ್ ಜಾಗ. ಭಾಳ ಕಡಿದಾಗಿರೋ ಕಾರಣ ಹತ್ತೊದು ಕಷ್ಟಾಕ್ಕತಿ. ಅನುಭವ ಇರೋರಿಗೆ ಹತ್ತೊದು ಸುಲಭ. ಇಲ್ಲಿ ಹಸಿರು ಗಿಡಮರ ಅಷ್ಟಾಗಿಲ್ಲ ಆದ್ರೂ ಟ್ರೆಕ್ಕಿಂಗ್ ಮಾಡೋರಿಗೆ ಒಳ್ಳೆಯ ಜಾಗ ಅಂತ ಹೇಳ್ಬಹುದು.

10. ಕುದುರೆಮುಖ

ಅತ್ಯಂತ ಸುಂದರವಾಗಿರುವ ಟ್ರೆಕ್ಕಿಂಗ್ ಜಾಗಗಳಲ್ಲಿ ಇದೂ ಕೂಡಾ ಒಂದಾಗೇತಿ. ಹಸಿರು ಗಿಡಮರಗಳಿಂದ ತುಂಬಿಕೊಂಡಿರೊ ಜಾಗ. ಇಲ್ಲೆ ಟ್ರೆಕ್ಕಿಂಗ್ ಮಾಡೋರಿಗೆ ಸುಸ್ತ ಆಗಲ್ಲ. ಶೋಲಾ ಕಾಡುಗಳ ರಮಣೀಯವಾದ ಜಾಗಗಳನ್ನ ನೋಡ್ಕೊಂತ ಹೋಗೊದೆ ಒಂದು ಮೈಮರೆಸೋ ಅನುಭವ. ಕುದುರೆಮುಖ ಬೆಟ್ಟದ ಮ್ಯಾಗ ಹೋದ್ರ ಅಲ್ಲಿ ಕುದುರೆಮುಖ ನ್ಯಾಶನಲ್ ಪಾರ್ಕ್ ಐತಿ. ಒಟ್ಟನಲ್ಲಿ ಮರೆಯಲಾಗದಂತಹ ಅನುಭವ ಕೊಡೋಂತ ಟ್ರೆಕ್ಕಿಂಗ್ ಸ್ಪಾಟ್ ಇದು.

11. ಆಗುಂಬೆ

ಆಗುಂಬೆಯಾ ಆ ಪ್ರೇಮ ಸಂಜೆಯಾ…ಅನ್ನೋ ಹಾಡನ್ನ ಕೇಳೇ ಇರ್ತಿರಾ. ಇಲ್ಲಿನ ಸುಂದರವಾದ ವಾತಾವರಣ, ಸೂರ್ಯಾಸ್ತ ನೋಡೋದ ಒಂದು ಮರೆಯಲಾಗದ ಅನುಭವ. ಕಾಡು ಇಲ್ಲಷ್ಟ ಕಾಣಸ್ತತಂತ ಕಾಳಿಂಗ ಸರ್ಪಗಳನ್ನ ನೋಡ್ಕೊಂತ ರೋಮಾಂಚಕವಾಗಿ ಸಾಗುವಂತ ಟ್ರೆಕ್ಕಿಂಗ್ ಸ್ಥಳ ಇದಾಗಿದೆ. ಸುಮಾರು ವಿಧಧ ಪ್ರಾಣಿ ಪಕ್ಷಿಗಳನ್ನ ಇಲ್ಲಿ ಕಾಣ್ಬಹುದು. ಪ್ರಾಣಿಪಕ್ಷಿಗಳನ್ನ ಇಷ್ಟಪಡೋರಿಗೆ ಇದು ಒಳ್ಳೆಯ ಟ್ರೆಕ್ಕಿಂಗ್ ಪ್ಲೇಸ್.

12. ಮಂಚನಬೆಲೆ

ಬೆಂಗಳೂರಿಂದ ಸುಮಾರು 50 ಕಿ.ಮೀ ದೂರ ಐತಿ. ಮಂಚನಬೆಲೆ ಡ್ಯಾಂ ಹತ್ರ ಕ್ಯಾಂಪ್ ಮಾಡ್ಬಹುದು. ಇಲ್ಲಿನ ಕಲ್ಲುಬಂಡೆಗಳನ್ನ ಹತ್ತೋ ಸಾಹಸ ಮಾಡ್ರಿ ಟ್ರೆಕ್ಕಿಂಗ್ ಖುಷಿ ಕೊಡ್ತತಿ. ರಾತ್ರಿ ಟ್ರೆಕ್ಕಿಂಗಗೆ ಒಂದು ಒಳ್ಳೆ ಸ್ಥಳ. ಈಜೊದರ ಜೊತೆ ಸಾಹಸ ಕ್ರೀಡೆಗಳನ್ನ ಇಷ್ಟಪಡೋರಿಗಂತೂ ಇದು ಭಾಳ ಒಳ್ಳೆ ಜಾಗ.

13. ಅಂತರಗಂಗೆ

ಬೆಂಗಳೂರಿನಿಂದ ಭಾಳ ಹತ್ತಿರ ಐತಿ. ಸುಮಾರು 70 ಕಿ.ಮೀ ದೂರ ಅಷ್ಟ. ಕೋಲಾರದಾಗಿರೋ ಶತಶೃಂಗ ಪರ್ವದ ಮ್ಯಾಲೆ ಈ ಅಂತರಗಂಗೆ ಐತಿ. ಇಲ್ಲಿನ ಗುಹೆಗಳು, ಕಾಡು ಮೇಡು ಸುತ್ತೋದ ಒಂದು ಸುಂದರವಾ ಅನುಭವ. ರಾತ್ರಿ ಹೊತ್ತನ್ಯಾಗ ಇಲ್ಲಿ ಟ್ರೆಕ್ಕಿಂಗ್ ಮಾಡ್ಕೊಂತ ರೋಮಾಂಚನ ಪಡಿಬಹುದು.

14. ಕುಂತಿಬೆಟ್ಟ

ಪಾಂಡವಪುರದ ಹತ್ತಿರ ಇರೋ ಟ್ರೆಕ್ಕಿಂಗ್ ಸ್ಥಳ ಇದು. ಬೆಂಗಳೂರಿಗೆ ಭಾಳ ಹತ್ತಿರೈತಿ. ತುಂಬಾ ಉತ್ಸಾಹ ಇರಂತಾರಿಗೆ ಇದು ಒಳ್ಳೆ ಟ್ರೆಕ್ಕಿಂಗ್ ಸ್ಪಾಟ್. ಬೆಂಗಳೂರಿಂದ 130 ಕಿ.ಮೀ ದೂರ ಐತಿ.

ಎಲ್ಲಿಗ ಹೊಕ್ಕಿರಿ ಹಂಗಾರ ನೀವು?