https://pixabay.com/static/uploads/photo/2014/07/28/11/16/children-403582_960_720.jpg

ಟಿವಿ ಮುಂದ ತಾಸಗಂಟಲೆ ಕುಂತ ನೋಡದರಿಂದ ಹೆಲ್ತ ಹಾಳಾಕ್ಕತಿ ಅಂತ ಎಲ್ಲಾರಿಗೂ ಗೊತ್ತೈತಿ. ಆದರೂ ಟಿವಿ ನೋಡ ಚಟಾ ಮಾತ್ರ ಬಿಡಂಗಿಲ್ಲ. ಇದೊಂದ ಥರಾ ನಿಲ್ಲೆ ನಿಲ್ಲೆ ಪತಂಗ, ಬೇಡ ಬೇಡ ಬೆಂಕಿಯ ಸಂಗ ಅಂದ್ರ ಕೇಳತತ್ಯಾ? ಅದ ಥರಾನ ಇದು. ಟಿವಿ ನೋಡದ್ರಿಂದ ನಿಮ್ಮ ಹೆಲ್ತ ಈ 10 ರೀತ್ಯಾಗ ಕೆಟಗಂತ ಹೊಕ್ಕತಿ. ಈಗರ ಎಚ್ಚರಾದ್ರ ಹೆಲ್ತಿನ ದೃಷ್ಟ್ಯಾಗ ಛೊಲೋ.

10. ದೇಹದಾಗ ಕೊಲೆಸ್ಟ್ರಾಲ್ ಹೆಚಿಗಿ ಆಕ್ಕತಿ

ಟಿವಿ ಮುಂದ ತಾಸಗಂಟಲೆ ಕುಂದ್ರದ್ರಿಂದ ನಮ್ಮ ದೇಹದಾಗ ಕೊಬ್ಬಿನ ಅಂಶಾ ಹೆಚಿಗಿ ಆಗಿ ಅದು ಹಾರ್ಟಿನ ಭಾಳ ಟೈಪಿನ ಸಮಸ್ಯಾಕ ಕಾರಣ ಆಕ್ಕತಿ ಅನ್ನಾಕತ್ಯಾರ ಯೂನಿರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಡಾಕ್ಟರಗುಳು. ಮಕ್ಕಳು ದಿನಾ ನಾಕ ತಾಸ ಟಿವಿ ಮುಂದ ಕುಂದ್ರದ್ರಿಂದ ಮುಂದ ಅವರಿಗೆ ಹಾರ್ಟಿಗೆ ಸಂಬಂಧಪಟ್ಟ ರೋಗಗುಳ ಬರ ಛಾನ್ಸ್ ಐತೆಂತ. ಟಿವಿ ಮುಂದೇನ ಕುಂತ ಎಕ್ಸರ್ಸೈಜ ಇಲ್ಲದಂಗ ಜಂಕ್ ಫುಡ್ ತಿನಕಂತ ತಿನಕಂತ ಅವರಿಗೇ ಗೊತ್ತಿಲ್ಲದಂಗ ದೇಹದಾಗ ಕೊಲೆಸ್ಟ್ರಾಲ್ ಸೇರಿಕೆಂತತಿ.

9. ಟಿವಿ ನೋಡದ್ರಿಂದ ಮಕ್ಕಳೊಳಗ ಹಿಂಸೆ ಬುದ್ಧಿ ಬೆಳೀತೇತಿ

ಟೀವ್ಯಾಗ ಬರೋ ಅಂತಾ ಹೊಡದಾಟ ಬಡದಾಟ ನೋಡಿಕೆಂತ ಮಕ್ಕಳ ಅದನ್ನ ಜಲ್ದೀ ಕಲತಬಿಡತಾವು. ಮಕ್ಕಳೊಳಗ ಒಂದೀಟ ಸಿಟ್ಟ ಇರದ ಸಹಜ. ಆದರ ಟೀವಿ ಪ್ರಭಾವಕ್ಕ ಒಳಗಾಗಿ ಮಕ್ಕಳೊಳಗ ಹಿಂಸಾ ಪ್ರವೃತ್ತಿ ಬೆಳೀತೇತಿ ಅಂತಾರ ಸ್ಪೆಶಲಿಸ್ಟಗುಳು. ಅಂದ್ರ ಎಲ್ಲಾ ಮಕ್ಕಳೊಳಗೂ ಹಿಂಸಾ ಪ್ರವೃತ್ತಿ ಬೆಳೀತೇತಿ ಅಂತ ಹೇಳಾಕಾಗಲ್ಲ. ಅಂದ್ರ ಸಿಗರೇಟ್, ಬೀಡಿ ಸೇದ್ದಿರಿಗೆಲ್ಲಾ ಕ್ಯಾನ್ಸರ್ ಬರಲ್ಲಲ್ಲಾ. ಇದೂ ಸೈತ ಹಂಗನ ಅಂತಾರಪಾ ಡಾಕ್ಟರು.

8. ಟಿವಿ ನೋಡಿಕೆಂತ ನೋಡಿಕೆಂತ ಮಕ್ಕಳ ದಡ್ಡರಾಕ್ಕಾರ

ಟಿವಿ ನೋಡದ್ರಿಂದ ಮಕ್ಕಳೊಳಗ ಕಲಿಯೋ ಕೆಪ್ಯಾಸಿಟಿ ಕಡಿಮಿ ಆಕ್ಕತಿ ಅವಾಗ ಸಾಲ್ಯಾಗ ಕಡಿಮಿ ಮಾರ್ಕ್ಸ್ ಬರದು, ಸಾಲ್ಯಾಗ ಹೇಳಿದ್ದ ತಿಳೀಲಾರದಂಗ ಆಗದು ಇಂತಾ ಪ್ರಾಬ್ಲೆಮ್ಸ ಬರತಾವು. ಟಿವಿ ನೋಡ ಮಕ್ಕಳಿಗಿಂತ ನೋಡದ ಇರ ಮಕ್ಕಳು ಶಾರ್ಪ್ ಆಗಿರತಾರ ಅಂತ ಅಧ್ಯಯನಗುಳು ಹೇಳತಾವು. ಡೇಲಿ ಎರಡ ತಾಸ ಟಿವಿ ನೋಡಿದ್ರೂ ಸಾಕ. ಮಕ್ಕಳ ದಡ್ಡರಾಕ್ಕಾರ ಅಂತಾವು ರಿಸರ್ಚುಗುಳು. ಆದರ ಇಂಟರ್ನೆಟ್ ಮುಂದ ಕುತಗಳ್ಳದ್ರಿಂದ ಈ ರೀತಿ ಆಗಲ್ಲಂತ. ಮಕ್ಕಳು ಶಾರ್ಪಾಕ್ಕಾವಂತ.

7 ಟಿವಿ ಹೆಚಿಗಿ ನೋಡದ್ರಿಂದ ಗಂಡಸರೊಳಗ ವೀರ್ಯಾಣು ಕೊರತಿ ಆಕ್ಕತಿ

ಟೀವಿ ಕಡಿಮಿ ನೋಡರಿಗಿಂತ ಹೆಚಿಗಿ ನೋಡೋರೊಳಗ ಶೇ.44 ರಷ್ಟ ವೀರ್ಯಾಣು ಕೊರತಿ ಆಕ್ಕತಿ ಅನ್ನದ ರಿಸರ್ಚ್ ಒಳಗ ಗೊತ್ತಾಗೇತಿ. ವಾರದಾಗ 20 ತಾಸು ಟೀವಿ ನೋಡಿದರೂ ಈ ಸಮಸ್ಯಾ ಬರ್ತತೆಂತ. ಟೀವ್ಯಾಗ ಬರ ಜಂಕ್ ಫುಡ್ ಎಡ್ವರ್ಟೈಸಗುಳ್ನ ನೋಡಿಕೆಂತ ತಿನಬಕು ಅನಿಸಿ ಯದ್ವಾತದ್ವಾ ತಿನ್ನದ್ರಿಂದ ಹಿಂಗ ಆಗಾಕತ್ತೈತಿ ಅಂತಾರ ಸ್ಪೆಶಲಿಸ್ಟ್ಗುಳು ಆದರ ವಾರದಾಗ 14 ತಾಸ ಎಕ್ಸರ್ಸೈಜ್ ಮಾಡ ಗಂಡಸರೊಳಗ ವೀರ್ಯಾಣುಗಳ ಕ್ವಾಂಟಿಟಿ ಹೆಚಿಗಿ ಇರ್ತತೆಂತ.

6. ಟೀವಿ ಹೆಚಿಗಿ ನೋಡಿದ್ರ ಮಕ್ಕಳಿಗೆ ಕೆಟ್ಟ ಚಟಾ ಬರತಾವು

ಡೇಲಿ ಮಿನಿಮಮ್ಮ ಮೂರ ತಾಸ ಟೀವಿ ನೋಡ ಮಕ್ಕಳೊಳಗ ಕೆಟ್ಟ ಗುಣಾ ಬರಾಕತ್ತ್ಯಾವಂತ. 2000 ಮತ್ತ 2002ರಾಗ ಹುಟ್ಟಿದ 11000 ಮಕ್ಕಳ ಮ್ಯಾಲ ಬ್ರಿಟೀಶ್ ಸಂಶೋಧಕರು ರಿಸರ್ಚ್ ಮಾಡಿ ಹಿಂಗ ಹೇಳಾಕತ್ತ್ಯಾರ. ಡೇಲಿ 3 ತಾಸ ಟೀವಿ ನೋಡ ಮಕ್ಕಳೊಳಗ ಕಳ್ಳತನಾ ಮಾಡ ಗುಣ, ಹೊಡದಾಡ ಗುಣ ಬೆಳೀತೇತೆಂತ. ಆದರ ವಾರದಾಗ ಮೂರ ತಾಸ ವೀಡಿಯೋ ಗೇಮ್ ಆಡ ಮಕ್ಕಳೊಳಗ ಈ ಟೈಪಿನ ಕೆಟ್ಟ ಗುಣಾ ಏನೂ ಕಂಡ ಬಂದಿಲ್ಲಂತ.

5. ಕ್ಯಾನ್ಸರ್ ಪೇಶೆಂಟಗುಳ ಹೆಲ್ತ ಇನ್ನೂ ಹೆಚಿಗಿ ಕೆಟಗಂತ ಹೊಕ್ಕತಿ

ಈ ಮುಂಚೆ ಹೆಚಿಗಿ ಟೀವಿ ನೋಡಿಕೆಂತ ಇದ್ದ, ಈಗ ಕ್ಯಾನ್ಸರ ರೋಗ ಬಂದಿರ ಪೇಶೆಂಟಗುಳ ಹೆಲ್ತ ಇನ್ನೂ ಹೆಚಿಗಿ ಕೆಟಗಂತ ಹೊಕ್ಕತಿ ಅಂತಾವು ರಿಸರ್ಚುಗುಳು. ಅಮೇರಿಕಾದ ನ್ಯಾಶನಲ್ ಕ್ಯಾನ್ಸರ್ ಇನ್ಸಟಿಟ್ಯೂಟ್ನ್ಯಾಗ ಮಾಡಿದ ರಿಸರ್ಚಿನಿಂದ ಹಿಂಗ ಆಕ್ಕತಿ ಅಂತ ಗೊತ್ತಾಗೇತಿ. ಟೀವಿ ನೋಡದನ್ನ ಕಡಿಮಿ ಮಾಡಿಕೆಂತ, ಹೆಚಿಗಿ ದೇಹಕ್ಕ ಎಕ್ಸರ್ಸೈಜ್ ಸಿಗ ಅಂತ ಕೆಲಸಾ ಮಾಡರ ಹೆಲ್ತ ಛೊಲೋ ಇರತತಿ ಅಂತ ರಿಸರ್ಚ್ ಹೇಳತತಿ.

4. ಹೆಚಿಗಿ ಟೀವಿ ನೋಡ ಮಕ್ಕಳಿಗೆ ನಿದ್ದಿ ಕಡಿಮಿ ಆಕ್ಕತಿ

ಹೆಚಿಗಿ ಟೀವಿ ನೋಡದ್ರಿಂದ ಮಕ್ಕಳ ನಿದ್ದಿ ಮಾಡ ಪ್ರಮಾಣ ಕಡಿಮಿ ಆಕ್ಕತಿ. ಇದರಿಂದಾ ಬ್ಯಾರೇ ಬ್ಯಾರೇ ಟೈಪಿನ ಪ್ರಾಬ್ಲೆಮ್ಸ್ ಮಕ್ಕಳೊಳಗ ಆಕ್ಕಾವು. ದಿನಕ್ಕ ಐದ ತಾಸಿಗಿಂತಾ ಹೆಚಿಗಿ ಹೊತ್ತ ಟೀವಿ ನೋಡದ್ರಿಂದ ಒಂದ ತಾಸ ನಿದ್ದಿ ಕಡಿಮಿ ಆಕ್ಕತೆಂತ. ಅದರಾಗೂ ಮಕ್ಕಳ್ಳ ರೂಮಿನ್ಯಾಗ ಟೀವಿ ಇದ್ರ ಅದರ ಎಫೆಕ್ಟ್ ಇನ್ನೂ ಹೆಚಿಗಿ ಅಂತಾರ ಸ್ಪೆಶಲಿಸ್ಟ್ಗುಳು. ಇದ ಹೆಣ್ಣ ಮಕ್ಕಳಿಗಿಂತಾ ಗಂಡ ಮಕ್ಕಳೊಳಗ ಹೆಚಿಗಿ ಎಫೆಕ್ಟ್ ಮಾಡಾಕತ್ತತಿ ಅಂತಾವು ರಿಸರ್ಚುಗುಳು.

3. ಹೆಚಿಗಿ ಟೀವಿ ನೋಡ ಮಕ್ಕಳ ಜಲ್ದೀ ಮಾತ ಕಲೇದಿಲ್ಲ

ಯಾವ ಮಕ್ಕಳ ಹೆಚಿಗಿ ಹೊತ್ತ ಟೀವಿ ಮುಂದನ ಕುಂತರ್ತಾವೋ ಅಂತಾ ಮಕ್ಕಳ ಜಲ್ದೀ ಮಾತಾಡದನ್ನ ಕಲೆಂಗಿಲ್ಲಂತ. ಟೀವಿ ನೋಡಂತಾ ಮಕ್ಕಳೊಳಗ ಶಬ್ಧಾನ ಗ್ರಹಿಸ ಶಕ್ತಿ ಕಡಿಮಿ ಆಕ್ಕತೆಂತ. ಅದ ಎಲ್ಲಾರ ಜತೀಗೆ ಮಿಂಗಲ್ ಆಗಿ ಮಾತಾಡ ಮಕ್ಕಳ ಹೆಚ್ಚ ಹೆಚ್ಚ ಶಬ್ಧಾನ ಕಲತು ಜಲ್ದೀ ಮಾತಾಡಾಕ ಕಲೀತಾವಂತ. ಹಂಗಂತ ರಿಸರ್ಚುಗುಳು ಹೇಳತಾವು.

2. ಹೆಚಿಗಿ ಟೀವಿ ನೋಡ ಹುಡುಗೂರೊಳಗ ಕುಡೇ ಚಟಾ ಹೆಚಿಗಿ ಆಕ್ಕತಿ

18-29 ರ ಏಜಿನ ಹುಡುಗೂರ ಹೆಚಿಗಿ ಟೀವಿ ನೋಡದ್ರಿಂದ ನಡುವ ನಡುವ ಬರ ಅಡ್ವರ್ಟೈಸ್ಗಳಿಂದ ಕುಡೇ ಪ್ರಮಾಣನೂ ಹೆಚಿಗಿ ಆಕ್ಕತೆಂತ. ಈಗಾಗಲೇ ಕುಡೇದ ಕಲಿತಿರ ಹುಡುಗೂರೊಳಗ ಈ ಟೈಪ ಆಕ್ಕತಿ ಅಂತಾವು ರಿಸರ್ಚು. ಹೆಚಿಗಿ ಟೀವಿ ನೋಡ ಹುಡುಗೂರೊಳಗ ಕ್ವಾಂಟಿಟಿ 1.5 ಬಾಟಲಿ ಅಸ್ಟ ಹೆಚಿಗಿ ಆಕ್ಕತೆಂತ.

1. ಹೆಚಿಗಿ ಟೀವಿ ನೋಡದ್ರಿಂದ ಆಯಸ್ಸ ಕಡಿಮಿ ಆಕ್ಕೆಂತ ಹೊಕ್ಕತೆಂತ

ಆಸ್ಟ್ರೇಲಿಯಾದಾಗ ಮಾಡಿದ ರಿಸರ್ಚಿನಿಂದ ಈ ಖರೇ ಗೊತ್ತಾಗೇತಿ. ದಿನಕ್ಕ 6 ತಾಸ ಟೀವಿ ನೋಡೋರ ಆಯಸ್ಸ 4.8 ವರ್ಷದಸ್ಟ ಕಡಿಮಿ ಆಕ್ಕತೆಂತ. 25 ವರ್ಷ ಆಗಿರೋರು 1 ತಾಸ ಟೀವಿ ನೋಡದ್ರಿಂದ ಅವರ ಆಯಸ್ಸ 22 ನಿಮಿಷ ಕಡಿಮಿ ಆಕ್ಕತೆಂತ. ಮೂರ ತಾಸಿಗೂ ಹೆಚಿಗಿ ಟಾಯಮ ಒಂದ ಕಡೆ ಕುಂದರದು, ಟಿವಿ ನೋಡದ್ರಿಂದ ಹಾರ್ಟಿನ ಪ್ರಾಬ್ಲೆಮ್ಸ್ ಬರ್ತಾವು ಅಂತ ವಾರ್ನಿಂಗ್ ಮಾಡಾಕತ್ತ್ಯಾರ ಸ್ಪೆಶಲಿಸ್ಟ್ಗುಳು.

ಖರೇ ಅಂದ್ರೂ ಹೆದರಿಕಿ ಆಕ್ಕತೆಪಾ.. ಇರೋ ಟೀವೀನ ಇವತ್ತ ತಗಂಡ ಹೋಗಿ ಎಲ್ಲೆರ ಒಗದ ಬರಾಕಂತೂ ಆಗಲ್ಲಾ. ಆದರ ಅದನ್ನ ನೋಡದ ಒಂದೀಟ ಕಡಿಮಿ ಮಾಡೋದು ಬೆಟರ್….