http://www.mangaloretaxi.com/wp-content/uploads/manjrabadfort1.jpg

ಟಿಪ್ಪು ಸುಲ್ತಾನ್ ಈ ಜಾಗಕ್ಕೆಹೋಗಿ ತುಂಬಾ ಖುಷಿ ಪಟ್ಟನ೦ತೆ, ಅಲ್ಲೊಂದು ಕೋಟೆ ಕೂಡ ಕಟ್ಟಿದ್ನಂತೆ. ಯಾವುದು ಆ ಕೋಟೆ ಅಂತೀರಾ? ಅದೇ ಮಂಜ್ರಾಬಾದ್. ಅದರ ಬಗ್ಗೆನೇ ಇವತ್ತಿನ ಅಂತೆ ಕಂತೆ. 

ಈ ಕೋಟೆಗೆ ಯಾಕೆ ಈ ಹೆಸರು?

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಒಂದು ಸಲ ಈ ಜಾಗಕ್ಕೆ ಹೋಗಿ, ಇಲ್ಲಿ ನಿಂತು ಸುತ್ತಲೂ ನೋಡಿದಾಗ ಸುಂದರವಾಗಿರೋ ಹಸಿರು ಸಿರಿಯನ್ನ ನೋಡಿ ಆತನ ಮನಸ್ಸು ಸಂತುಷ್ಟವಾಯ್ತಂತೆ. ಆಗ ಟಿಪ್ಪು ಮನ್ ಅಬಾದ್ ಅಂದ್ರೆ ಮನಸ್ಸು ಸಂತುಷ್ಟ ವಾಯ್ತು ಅಂತ ಮಂಜು ಕವಿದ ಮುಂಜಾನೆಯಲ್ಲಿ ಕೂಗಿದನಂತೆ. ಕಣ್ಣು ಹಾಯಿಸಿದಷ್ಟು ದೂರಾನೂ ರಮ್ಯ ಹಸಿರಿನ ಪ್ರಕೃತಿ ಟಿಪ್ಪು ಹಾಗೆ ಕೂಗುವ ಹಾಗೆ ಮಾಡ್ತಂತೆ. ಅದೇ ಕಾರಣಕ್ಕೆ ಈ ಜಾಗ ಮಂಜರಾಬಾದ್ ಅನ್ನೋ ಹೆಸರನ್ನ  ಪಡ್ಕೊಂತು.

ಈ ಕೋಟೆ ತಲುಪುವುದಕ್ಕೆ 250 ಮೆಟ್ಟಿಲುಗಳನ್ನು ಹತ್ತಿ ಹೋಗ್ಬೇಕು. ಸಮುದ್ರ ಮಟ್ಟದಿಂದ ಸುಮಾರು 3240 ಅಡಿ ಎತ್ತರದಲ್ಲಿ ಈ ಕೋಟೇನ ಕಟ್ಟಿದ್ದಾರೆ. ಸುಮಾರು 5 ಎಕರೆ ಪ್ರದೇಶದಲ್ಲಿ ನಕ್ಷತ್ರಾಕಾರದಲ್ಲಿ ಇರೋವಂಥ ಈ ಕೋಟೆ ನೋಡೋದಿಕ್ಕೆ ತುಂಬಾನೇ ಸೊಗಸಾಗಿದೆ.

ಮೂಲ

ಟಿಪ್ಪು ಸುಲ್ತಾನ್ ಈ ಕೋಟೆ ಕಟ್ಟಿದ್ ಯಾಕೆ ?

ಟಿಪ್ಪು ಸುಲ್ತಾನ್ ಆಳ್ತಾ ಇದ್ದಂತಹ ಸಮಯದಲ್ಲಿ ಮೈಸೂರಿನ ಗಡಿ ಭಾಗಗಳ ರಕ್ಷಣೆಗೋಸ್ಕರ, ಕರಾವಳಿ ತೀರದಲ್ಲಿ ಈ ಕೋಟೆನ ಟಿಪ್ಪು ಸುಲ್ತಾನ್ ಕಟ್ಟಿಸಿದ್ದಂತೆ. ಈ ಕೋಟೆಯಲ್ಲಿ ಸೈನಿಕರಿಗೆ ವಿಶ್ರಾಂತಿ ಪಡೆಯೋದಿಕ್ಕೆ, ಮದ್ದು ಗುಂಡುಗಳನ್ನು ಸಂಗ್ರಹಿಸಿ ಇಟ್ಕೊಳ್ಳೋದಕ್ಕೆ ಅಂತ ಎಲ್ಲಾ ಸವಲತ್ತನ್ನು ಕೂಡ ನಿರ್ಮಿಸಲಾಗಿತ್ತು . ದುರದೃಷ್ಟ ಅಂದ್ರೆ ಟಿಪ್ಪು ಸುಲ್ತಾನ್ ಈ ಕೋಟೆಗೆ ಕೇವಲ ನಾಲ್ಕು ಸರ್ತಿ ಮಾತ್ರ ಹೋಗೋದಿಕ್ಕೆ ಸಾಧ್ಯವಾಯಿತು.

ಮೂಲ

ಅದ್ಯಾಕೆ ಟಿಪ್ಪು ಸುಲ್ತಾನ್ ಗೆ ಈ ಕೋಟೆಗೆ ಆಗಾಗ ಹೋಗೋಕೆ ಸಾಧ್ಯವಾಗಲಿಲ್ಲ?

ಇಷ್ಟೆಲ್ಲ ಯೋಚನೆ ಮಾಡಿ ರಕ್ಷಣಾತ್ಮಕವಾಗಿ ನಿರ್ಮಿಸಿದ್ದ ಈ ಕೋಟೆ ಒಳಗಡೆ ಕುಳಿತು ಹೊರಗಿನ ಶತ್ರುಗಳ ಚಲನವಲನ ಗಮನಿಸಲಿ ಅಂತಾನೇ ಸಾಕಷ್ಟು ರೀತಿಯಲ್ಲಿ ಬುದ್ಧಿವಂತಿಕೆಯಿಂದ ಕೋಟೆಯನ್ನು ನಿರ್ಮಾಣ ಮಾಡಿದ್ದರು. ದುರಾದೃಷ್ಟ ಅಂದ್ರೆ 1792 ರಲ್ಲಿ ಟಿಪ್ಪು ಮತ್ತೆ ಬ್ರಿಟಿಷರ ಜೊತೆಗೆ ನಡೆಸಿದಂತಹ ಒಂದು ಹೋರಾಟದಲ್ಲಿ ಸೋಲನ್ನು ಅನುಭವಿಸಿ ಶ್ರೀರಂಗಪಟ್ಟಣದ ಒಪ್ಪಂದ ಮಾಡಿಕೊಳ್ಳಬೇಕಾಗುತ್ತೆ. ಅದಾದ ನಂತರ ಈ ಮಂಜರಾಬಾದ್ ಕೋಟೆ ಬ್ರಿಟಿಷರ ಕೈ ವಶ ಆಗೋಯ್ತು.ಇದೇ ಕಾರಣಕ್ಕೆ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಇಲ್ಲಿಗೆ ಹೆಚ್ಚು ಬಾರಿ ಭೇಟಿ ಕೊಡೋದಿಕ್ಕೆ ಸಾಧ್ಯವಾಗಲಿಲ್ಲ.

ಮೂಲ

ಈ ಕೋಟಿ ವಿನ್ಯಾಸ ಹೇಗಿದೆ ಗೊತ್ತಾ?

ಆಗಿನ ಕಾಲದಲ್ಲೇ ಟಿಪ್ಪು ಈ ಮಂಜರಾಬಾದ್ ಕೋಟೆಯನ್ನ ಫ್ರೆಂಚ್ ಇಂಜಿನಿಯರ್ ಗಳ ವಿನ್ಯಾಸ ಮತ್ತು ತಾಂತ್ರಿಕ ಸಹಕಾರದ ಜೊತೆಗೆ ಕಟ್ಟಿಸಿದ್ದ . ೮ ಮೂಲೆಗಳಿರೋ ಈ ಕೋಟೆ ತುಂಬಾನೇ ಚೆನ್ನಾಗಿದೆ. ಮೇಲುಗಡೆಯಿಂದ ನೋಡಿದ್ರೆ ಈ ಕೋಟೆ ನಕ್ಶತ್ರಾಕಾರದಲ್ಲಿ ಕಾಣುತ್ತೆ. ಕೋಟೆಯ ಮಧ್ಯದಲ್ಲಿ ಒಂದು ಬಾವಿ ಇದೆ. ಅಲ್ಲಲ್ಲಿ ಸುರಂಗ ಮಾರ್ಗಗಳನ್ನು ಕೂಡ ನೋಡಬಹುದು . ಇಸ್ಲಾಮಿಕ್ ಶೈಲಿನಲ್ಲಿ ಕಟ್ಟಿರುವಂತಹ ಕೋಟೆ ಒಳಗಡೆ ನೀರಿನ ಕೊಳ, ಮದ್ದುಗುಂಡು ಸಂಗ್ರಹಿಸೋಕೆ ಜಾಗ, ಊಟದ ಮನೆ ಸ್ನಾನದ ಕೋಣೆ ಕೂಡ ಇದೆ.

ಮೂಲ

ಪರಮಾತ್ಮ ಸಿನಿಮಾದ ಪರವಶನಾದೆನು ಅನ್ನೋ ಹಾಡಿನಲ್ಲಿ ಮೇಲ್ಗಡೆಯಿಂದ ಈ ಕೋಟೆ ಹೇಗೆ ಕಾಣುತ್ತೆ ಅಂತ ತೋರಿಸಿದ್ದಾರೆ. ಅದನ್ನು ನೋಡಿದ ಮೇಲೆ ಜನರ ದಂಡೇ ಇಲ್ಲಿಗೆ ಹೋಗಿ ಬರ್ತಾ ಇದೆ. ನಿಮಗೂ ಕೂಡ ಈ ಕೋಟಿ ನೋಡಬೇಕು ಅನ್ನಿಸ್ತಾ ಇದೆಯಾ?

ಈ ಕೋಟೆ ಎಲ್ಲಿದೆ ಅಂತೀರಾ ಬೆಂಗಳೂರಿನಿಂದ 221 ಕಿಲೋಮೀಟರ್, ಮೈಸೂರಿನಿಂದ 156  ಕಿಲೋಮೀಟರ್, ಸಕಲೇಶಪುರದಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ. ಈ ಕೋಟೆಗೆ ಹೋಗ್ಬೇಕು ಅಂದ್ಕೊಳ್ತಾ ಇದ್ರೆ ಧರ್ಮಸ್ಥಳಕ್ಕೆ ಹೋಗುವಾಗ ಅಥವಾ ಮಂಗಳೂರಿಗೆ ಹೋಗುವಾಗ ಈ ಜಾಗ ಕೂಡ ನೋಡಿ ಬನ್ನಿ.