https://antekante.com/sites/default/files/images/mahaveer.jpg

ವಿನಾಶದ ಅಂಚಲ್ಲಿದ್ದ ಧರ್ಮಮಾರ್ಗಾನ ಮತ್ತೆ ಜಗತ್ತಲ್ಲಿ ಚೆನ್ನಾಗಿ ಬೇರೂರೋ ಹಾಗೆ ಮಾಡಿದ ಜೈನ್ ತೀರ್ಥಂಕರ ಮಹಾವೀರನ ತಾಯಿ ಬಸುರಿಯಾಗಿದ್ದಾಗ ಬಿದ್ದ ಆ 14 ಕನಸುಗಳನ್ನ ಅಂತೆಕಂತೆ ಇಲ್ಲಿ ನಿಮಗೋಸ್ಕರ ಕೊಟ್ಟಿದೆ. ಭಾಳಾ ಗಟ್ಟಿಗ, ಭಾಳಾ ಧೈರ್ಯಶಾಲಿ, ಸದ್ಗುಣ ಸಂಪನ್ನ ಮತ್ತು ಒಬ್ಬ ಮಹಾನ್ ಚೇತನ ಮಗುವಾಗಿ ಹುಟ್ಟತ್ತೆ ಅನ್ನೋದೇ ಈ ಕನಸುಗಳು ಆ ಮಹಾತಾಯಿಗೆ ಕೊಟ್ಟ ಮುನ್ಸೂಚನೆಗಳಾಗಿದ್ವು. 

ಮೊದಲನೇ ಕನಸು -> ಆನೆ.

ಈ ಕನಸಿನ ಅರ್ಥ ಏನಪ್ಪಾ ಅಂದ್ರೆ, ಮಹಾರಾಣಿಗೆ ಮುಂದೆ ಹುಟ್ಟೋ ಮಗು ಮಹಾ ಸಂಸ್ಕಾರವಂತ ಅಂತಾ ಅನ್ನುಸ್ಕೊಳ್ಳತ್ತೆ.  ಮಹಾರಾಣಿ ಕನ್ಸಲ್ಲಿ ಕಂಡ ಆ ಆನೆಗೆ ನಾಲ್ಕು ಸೊಂಡಿಲುಗಳಿದ್ವು.  ಆ ಸೊಂಡಿಲುಗಳು ಸೂಚ್ಸೋ ಪ್ರಕಾರ, ಸನ್ಯಾಸಿಗಳು, ಸನ್ಯಾಸಿನಿಯರು, ಸಾಮಾನ್ಯ ಪುರುಷರು, ಮತ್ತೆ ಸಾಮಾನ್ಯ ಸ್ತ್ರೀಯರು ಅನ್ನೋ ನಾಲ್ಕು ಘಟಕಗಳಿರೋವಂತಾ ಆಧ್ಯಾತ್ಮಿಕ ರಥಕ್ಕೆ ಮುಂದೆ ಹುಟ್ಟೋ ಈ ಮಗು ಮಾರ್ಗದರ್ಶಕವಾಗಿರತ್ತೆ.

western.solution

ಎರಡನೇ ಕನಸು -> ಒಂದು ಎತ್ತು.

ಮುಂದೆ ಹುಟ್ಟೋ ಮಗು ಭಾಳಾ ಧಾರ್ಮಿಕ ಮನೋಭಾವದ್ದಾಗಿರತ್ತೆ ಮತ್ತೆ ಜೊತೆಗೆ ಓರ್ವ ಮಹಾನ್ ಆಧ್ಯಾತ್ಮಿಕ ಗುರುವೂ ಆಗತ್ತೆ ಅನ್ನೋದೇ ಈ ಕನ್ಸಿನ ಸೂಚ್ನೆ ಆಗಿತ್ತು.  ಜಗತ್ತಿಗೆ ಧರ್ಮ ಕೃಷೀನಾ ಕೈಗೊಳ್ಳೋಕೆ ಈ ಮಗು ನೆರ್ವಾಗತ್ತೆ.

ಮೂರನೇ ಕನಸು -> ಒಂದು ದೊಡ್ದ ಸಿಂಹ.

ಈ ಕನ್ಸಿನ ಅರ್ಥ ಏನಂದ್ರೆ, ಆಕೆಗೆ ಮುಂದೆ ಹುಟ್ಟೋ ಮಗು, ಸಿಂಹದಷ್ಟೇ ಪ್ರಬಲಾನೂ, ಶಕ್ತಿಶಾಲಿನೂ ಆಗಿರತ್ತೆ ಅಂತಾ.  ಆ ಮಗುವಿಗೆ ಯಾವ್ದೇ ಭಯ ಇರೋದಿಲ್ಲ.  ದೇವಮಾನವನ ಥರಾ ಇರೋ ಆ ಮಗು ಇಡೀ ಜಗತ್ತನ್ನೇ ಆಳೋ ಸಾಮರ್ಥ್ಯಾನಾ ಗಳಿಸ್ಕೊಳ್ಳತ್ತೆ.

nationalzoo.si.edu

ನಾಲ್ಕನೇ ಕನಸು -> ಲಕ್ಷ್ಮೀ

ಈ ಕನ್ಸು ಸೂಚ್ಸೂ ಪ್ರಕಾರ, ರಾಣಿಗೆ ಮುಂದೆ ಹುಟ್ಟೋ ಮಗು ಅಪಾರ ಸಂಪತ್ತು, ಕೀರ್ತಿ, ಮತ್ತೆ ಶೋಭೇನಾ ಅನುಭವಿಸತ್ತೆ ಅಂತಾ.  ಎಲ್ರಿಗೂ ಕೈ ಎತ್ತಿ ಕೊಡೋವಂತಾ ಮಹಾದಾನಿ ಅರ್ಥಾತ್ ತೀರ್ಥಂಕರನಾಗ್ತಾನೆ ಅನ್ನೋ ಸಂದೇಶಾನಾ ಆ ಕನ್ಸು ಕೊಡತ್ತೆ.

craftsofindia.com

ಐದನೇ ಕನಸು -> ಆಕಾಶದಿಂದ ಇಳೀತಾ ಇರೋ ಒಂದು ಸುಂದರ ಹೂಮಾಲೆ

ಈ ಕನ್ಸು ಸೂಚಿಸಿದ್ದು ಏನಪ್ಪಾ ಅಂದ್ರೆ, ಆಕೆಗೆ ಹುಟ್ಟೋ ಮಗನ ಭೋದನೆಗಳು ಸುಗಂಧ ಬ್ರಹ್ಮಾಂಡದ ಉದ್ದಗಲಕ್ಕೂ ಹರಡ್ಕೊಳ್ಳತ್ತೆ ಮತ್ತೆ ಆತನನ್ನ ಎಲ್ರೂ ಬಹಳವಾಗಿ ಗೌರ್ವಸ್ತಾರೆ ಅಂತಾ.

indiantraditionalflowers.com

ಆರನೇ ಕನಸು -> ಚಂದ್ರ

ಈ ಕನ್ಸು ಸೂಚ್ಸೋ ಪ್ರಕಾರ, ರಾಣಿಗೆ ಮುಂದೆ ಹುಟ್ಟೋ ಮಗು ಜಗತ್ತಿನ ಎಲ್ಲಾ ಜೀವರಾಶಿಗಳ ದುಗುಡ, ದು:ಖ, ದುಮ್ಮಾನಗಳ್ನ ಕಡ್ಮೆ ಮಾಡೋಕೆ ನೆರ್ವಾಗತ್ತೆ.  ಜಗತ್ತಲ್ಲಿ ನೆಮ್ದಿಯಿಂದ ಬಾಳೋಕೆ ಅಗತ್ಯವಾಗಿ ಬೇಕಾಗಿರೋ ಶಾಂತಿ ನೆಲೆ ಆಗೋ ಥರಾ ಮಾಡತ್ತೆ ಈ ಮಗು.  ಸಮಸ್ತ ಮಾನವಕುಲ ದೊಡ್ಡ ಪ್ರಮಾಣದಲ್ಲಿ ಆಧ್ಯಾತ್ಮಿಕ ಪ್ರಗತಿ ಸಾಧ್ಸೋಕೆ ನೆರ್ವಾಗತ್ತೆ ಈ ಮಗು.

ಏಳನೇ ಕನಸು -> ಸೂರ್ಯ

ಮಹಾರಾಣಿಗೆ ಮುಂದೆ ಹುಟ್ಟೋ ಮಗು ಅಗಾಧ ಜ್ಞಾನ ಇರೋವಂತದ್ದಾಗಿರತ್ತೆ ಮತ್ತೆ ಈ ಮಾಯಾಪ್ರಪಂಚದ ಭ್ರಮೆ, ಮಿಥ್ಯೆಗಳನ್ನ ಮೆಟ್ಟಿನಿಲ್ಲತ್ತೆ ಅನ್ನೋ ಸೂಚ್ನೆ ಕೊಡತ್ತೆ ಈ ಏಳ್ನೇ ಕನ್ಸು.

http://www.miguelclaro.com/wp/wp-content/uploads/2013/01/SunBurningClouds-net.jpg

ಎಂಟನೇ ಕನಸು -> ಸುವರ್ಣಸ್ತಂಭದ ಮೇಲೆ ದೊಡ್ಡ ಪತಾಕೆ ಹಾರಾಡೋದು

ಮಹಾರಾಣಿಗೆ ಮುಂದೆ ಹುಟ್ಟೋ ಮಗು, ಧರ್ಮದ ಲಾಂಛನವನ್ನೇ ಕೊಂಡೊಯ್ಯುತ್ತದೆ ಅನ್ನೋದರ ಸೂಚಕ ಈ ಕನ್ಸು.  ಬ್ರಹ್ಮಾಂಡದ ಉದ್ದಗಲಕ್ಕೂ ಧರ್ಮಾನಾ ಮರುಸ್ಥಾಪನೆ ಮಾಡತ್ತೆ ಈ ಮಗು ಅನ್ನೋದನ್ನೇ ಸೂಚ್ಸೋವಂತದ್ದಾಗಿತ್ತು ಈ ಕನ್ಸು.

ಒಂಭತ್ತನೇ ಕನಸು -> ಶುದ್ಧ ನೀರು ತುಂಬಿರೋ ಬಂಗಾರದ ಕೊಡ

ಈ ಕನ್ಸು ಸೂಚ್ಸೋ ಪ್ರಕಾರ, ಮುಂದೆ ಆಕೆಗೆ ಹುಟ್ಟೋ ಮಗು ಎಲ್ಲಾ ರೀತಿಯಿಂದ್ಲೂ ದೋಷರಹಿತವಾಗಿರತ್ತೆ ಮತ್ತೆ ಜಗತ್ತಿನ ಎಲ್ಲಾ ಜೀವರಾಶಿಗಳ ಬಗ್ಗೆ ಅತೀವ ದಯೆ, ಕರುಣೆಗಳಿಂದ ಕೂಡಿರತ್ತೆ.  ಮುಂದೆ ಈ ಮಗು ಓರ್ವ ಮಹಾನ್ ಧಾರ್ಮಿಕ ವ್ಯಕ್ತಿ ಅಂತಾ ಅನ್ನಿಸ್ಕೊಳ್ಳುತ್ತೆ ಅಂತಾನೂ ಈ ಕನ್ಸು ಸೂಚ್ಸುತ್ತೆ.

http://www.naturalhandicrafts.com/image/cache/data/golden%20items/GPC022-990x557.jpg

ಹತ್ತನೇ ಕನಸು -> ತಾವರೆ ಹೂಗಳಿಂದ ತುಂಬಿದ್ದ ಕೆರೆ

ಈ ಕನ್ಸಿನ ಸಾರಾಂಶ ಏನಪ್ಪಾ ಅಂದ್ರೆ, ಆಕೆಗೆ ಜನಿಸೋ ಮಗು ಜಗತ್ತಿನ ಎಲ್ಲಾ ಆಕರ್ಷಣೆಗಳನ್ನ ಮೀರಿ ನಿಲ್ಲತ್ತೆ.  ಹುಟ್ಟು, ಸಾವು, ಮತ್ತೆ ದು:ಖಗಳು ಅಂತಾ ಅನ್ನುಸ್ಕೊಂಡಿರೋ ವಿಷಚಕ್ರದಲ್ಲಿ ಸಿಕ್ಕಿಹಾಕ್ಕೊಂಡು ಒದ್ದಾಡೋವಂತಾ ಮಾನವರಿಗೆ ಮುಕ್ತಿಮಾರ್ಗಾನಾ ಕರುಣಿಸೋವಂತವನಾಗಿರ್ತಾನೆ ಮುಂದೆ ಹುಟ್ಟೋ ಈ ಮಗ.

ಹನ್ನೊಂದನೇ ಕನಸು ->ಸಾಗರ

ಈ ಕನ್ಸು ಸೂಚ್ಸೋ ಪ್ರಕಾರ, ಆಕೆಯ ಮಗ ಎಲ್ರನ್ನೂ ಆಕರ್ಷಿಸೋವಂತಾ ಮತ್ತೆ ಹಾಗೇನೇ ಪ್ರಶಾಂತವಾದ ವ್ಯಕ್ತಿತ್ವ ಇರೋವಂತವ್ನು ಆಗಿರ್ತಾನೆ.  ಅನಂತ ಜ್ಞಾನವನ್ನ ಸಾಧ್ಸೋ ಈ ಮಗು; ಹುಟ್ಟು, ಸಾವು, ಮತ್ತು ಜಗದ ದು:ಖದುಮ್ಮಾನಗಳನ್ಸಿಕೊಳ್ಳೋವಂತಾ ಭವಸಾಗರದಿಂದ ಪಾರಾಗೋಕೆ ಸಮರ್ಥವಾಗತ್ತೆ.  ಹೀಗಾಗಿ, ಅಂತಿಮವಾಗಿ ಆತನ ಆತ್ಮ ಮೋಕ್ಷವನ್ನ ಸಾಧ್ಸತ್ತೆ.

nrdc.org

ಹನ್ನೆರಡನೇ ಕನಸು -> ಪುಷ್ಪಕವಿಮಾನ

ಸ್ವರ್ಗದಲ್ಲಿರೋ ದೇವಾನುದೇವತೆಗಳೂ ಕೂಡಾ ಆಕೆಯ ಮಗನ ಆಧ್ಯಾತ್ಮಿಕ ಬೋಧನೆಗಳ್ನ ಗೌರವಿಸ್ತಾರೆ ಮತ್ತೆ ಮಾನ್ಯ ಮಾಡ್ತಾರೆ ಅನ್ನೋದೇ ಈ ಕನ್ಸಿನ್ ಸಾರ.

2.bp.blogspot.com

ಹದಿಮೂರನೇ ಕನಸು ->ಆಭರಣಗಳ ದೊಡ್ಡ ರಾಶಿ

ನಿಷ್ಕಳಂಕವಾಗಿರೋವಂತಾ ಅನಂತ ಸುಗುಣಗಳ್ನ ಮತ್ತೆ ಬುದ್ಧಿಸಾಮರ್ಥ್ಯಾನಾ ಈ ಮಗು ಹೊಂದಿರತ್ತೆ ಜೊತೆಗೆ ಇವುಗಳ ಬಲದಿಂದ ಮಹಾನ್ ಚೇತನ ಅಂತಾ ಅನ್ನುಸ್ಕೊಳ್ಳತ್ತೆ ಅನ್ನೋದು ಈ ಕನ್ಸಿನ ತಿರುಳು.

indusbusinessjournal.com

ಹದಿನಾಲ್ಕನೇ ಕನಸು -> ಹೊಗೆ ಇಲ್ಲದಿರೋ ಅಗ್ನಿ ಜ್ವಾಲೆ

ಜಗತ್ತಲ್ಲಿ ಧರ್ಮಾನಾ ಪುನರ್ರೂಪ್ಸಿ, ಅದನ್ನ ಪುನ: ಪ್ರತಿಷ್ಟಾಪನೆ ಮಾಡ್ತಾನೆ ಈ ಮಗ ಅನ್ನೋದನ್ನ ಸೂಚ್ಸುತ್ತೆ ಮಹಾರಾಣಿ ಕಂಡ ಈ ಹದ್ನಾಲ್ಕನೇ ಕನ್ಸು.  ಅಂಧಾನುಕರಣೆ ಮತ್ತೆ ಮೂಢನಂಬಿಕೆಗಳ್ನ ಈ ಮಗು ತೊಡೆದು ಹಾಕತ್ತೆ.  ತನ್ನ ಕರ್ಮಗಳೆಲ್ಲಾನೂ ದಹಿಸಿಕೊಂಡು ಮುಂದೆ ಮೋಕ್ಷಾನಾ ಕಂಡ್ಕೊಳ್ಳತ್ತೆ ಈ ಮಗು ಅನ್ನೋದು ಹದ್ನಾಲ್ಕನೇ ಕನ್ಸಿನ ಸಾರಾಂಶ.

coalmaster.co.uk