https://antekante.com/sites/default/files/images/times-you-need-to-be-quiet-in-life-1600x900.jpg

ಮಾತು ಬೆಳ್ಳಿ ಮೌನ ಬಂಗಾರ, ಮಾತು ಕಡಿಮಿ ಮಾಡಿ ಕೆಲಸ ಜಾಸ್ತಿ ಮಾಡ್ರಿ, ಮಾತು ಎಷ್ಟ ಕಡಿಮೆ ಇರ್ತೈತೊ ಅಷ್ಟ ಛೊಲೋ. ಇಂಥಾ ಮಾತುಗಳನ್ನ ನೀವು ಕೇಳೆ ಇರ್ತೀರಾ. ಹಿಂಗಂತ ಹೇಳಿ ಎಲ್ಲಾ ಸಮಯದಾಗೂ ಮಾತಾಡದಂಗ ಸುಮ್ಮನಿರ್ರಿ ಅಂತಲ್ಲ. ಮಾತಾಡಾಕ ಒಂದ ಟೈಮ ಇದ್ರ, ಮಾತಾಡದಂಗ ಇರಾಕ ಮತ್ತೊಂದ ಟೈಮ ಇರ್ತತಿ.. ನೀವೆಷ್ಟೆ ಮಾತುಗಾರರಾಗಿದ್ರೂ ಈ ಕೆಳಗಿನ ಸಂದರ್ಭಗಳೊಳಗ ಮಾತಾಡದಂಗ ಬಾಯಿಮುಚ್ಕೊಂಡ ಿರೋದ ಶಾಣೆತನ. ಇದ ನಿಮ್ಮ ವ್ಯಕ್ತಿತ್ವಕ್ಕ ಒಂದ ಕಳೆ ಕೊಡ್ತೈತಿ.

1. ನಿಜವಾದ ವಿಷಯ ನಿಮಗ ಗೊತ್ತಿಲ್ಲದೇ ಇರೋವಾಗ

ಇಂತಾ ಸಮಯದಾಗ ನಮ್ಮ ಅಭಿಪ್ರಾಯಕ್ಕೆ ನಾವು ಯೋಗ್ಯರಾಗಿರಂಗಿಲ್ಲ , ಯಾಕಂದ್ರ ನಮಗ ಗಿತ್ತಿರೋದರ ಮ್ಯಾಲಷ್ಟ ನಮ್ಮ ಅಭಿಪ್ರಾಯ ನಿಂತ್ಕೊಂಡಿರ್ತೈತಿ. ಹಂಗ ನನಗ ಏನು ಗೊತ್ತss ಇಲ್ಲ ಅಂತಾನೂ ಯಾರು ಹೇಳಂಗಿಲ್ಲ,. ಇದನ್ನ ನೀವು ಒಪ್ಯರ ಒಪ್ರಿ, ಬಿಟ್ಟರ ಬಿಡ್ರಿ. ಖರೆ ಏನು ಅನ್ನೊದು ನಮಗ ಗೊತ್ತಿಲ್ಲದ ಮ್ಯಾಗ ನಾವು ಅದರ ಬಗ್ಗೆ ಮಾತಾಡ್ಬಾರ್ದು, ಯಾಕಂದ್ರ ನಿಜಾಂಶ ನಮಗ ಸರಿಯಾಗಿ ಗೊತ್ತಿರಂಗಿಲ್ಲ, ಸೂಕ್ಶ್ಮ ಹಾಗೂ ಗಂಭೀರ ವಿಷಯಗಳು ಬಂದಾಗ, ನಿಜಾಂಶ ಗೊತ್ತಿಲ್ದೆ ಇದ್ರ ಬಾಯಿ ಮುಚ್ಕೊಂಡು ತೆಪ್ಪಗಿರೋದು ಬುದ್ಧಿವಂತರ ಲಕ್ಷಣ..

2. ಸಿಟ್ಟ ನೆತ್ತಿಗೆರಿದಾಗ

ಕೋಪದಾಗ ಮುಗ ಕೊಯಕೊಂಡ್ರು ಅನ್ನಂಗ, ಸಿಟ್ಟನ್ಯಾಗ ನಾವೇನ ಮಾಡ್ತವಿ ಅಂತ ನಮಗss ಗೊತ್ತಾಗಂಗಿಲ್ಲ. ಬಾಯಿಗೆ ಬಂದಿದ್ದೆಲ್ಲಾ ಒದರ ಬಿಡ್ತವಿ. ಸಿಟ್ಟ ಇಳದ ಮ್ಯಾಲೆ ನಾ ಹಂಗ ಮಾತಾಡ್ಬಾರ್ದಿತ್ತು, ನಾ ಹಿಂಗ ಮಾತಾಡ್ಬಾರ್ದಿತ್ತು, ನಾ ಮಾತಾಡಿದ ಶಬ್ಧಗಳಿಂದ ಬ್ಯಾರೆದೊರ್ಗೆ ಎಷ್ಟ ನೋವಾಕ್ಕತಿ ಅಂತ ಗೊತ್ತಾಕ್ಕತಿ. ಆದರ ಮಾತು ಆಡಿದ್ರ  ಆತು ಮುತ್ತು ಒಡೆದ್ರ ಹೋತು ಅನ್ನೋ ಹಂಗ ಇವಾಗ ಪಶ್ಚಾತ್ತಾಪ ಪಟ್ಕೊಂಡ್ರ ಏನಿ ಪ್ರಯೋಜನ ಆಗಂಗಿಲ್ಲ.

ಸಿಟ್ಟ ಬಂದಾಗ ಮಾತಿನ ಮ್ಯಾಗ ಹಿಡ್ತ ಇರಂಗಿಲ್ಲ ಹಂಗಾಗಿ ಸಿಟ್ಟ ಬಂದಾಗ ಬಾಯಿಗೆ ಬೀಗಾ ಹಾಕ್ಕೊಳ್ಳೊದು ಛೋಲೊ.

mylifeyoga.com

3. ನಮ್ಮ ಮಾತಿಗೆ ಮರ್ಯಾದಿ ಸಿಗದೇ ಇದ್ದಾಗ

ಯಾವತ್ತೂ ಆಡಬಾರದಾಗಿದ್ದ ಮಾತುಗಳನ್ನ ಮಾತಾಡಿದ್ರ, ನಮ್ಮ ಮರ್ಯಾದಿ ಹೋಗೊದು ಗ್ಯಾರಂಟಿ. ಯಾವಾಗ ಇಂಥಾ ಮಾತುಗಳು ನಮಗ ಅಥವಾ ಬ್ಯಾರೆದವರಿಗೆ ನೋವ, ಅವಮಾನ ಆಗ್ಬಹುದು ಅಂತ ಅನಸಿದಾಗ ಬಾಯಿ ಬಿಡದಂಗಿದ್ರ ಭಾಳ ಉತ್ತಮ..

4. ಹಿಂದೆಂದೂ ಕೇಳಿರದ ವಿಷಯದ ಬಗ್ಗೆ ಚರ್ಚೆ ನಡದಾಗ

ಎಲ್ಲ ವಿಷಯದಾಗೂ, ಎಲ್ಲಾ ಟೈಮನಾಗೂ ಮೂಗ ತೂರಿಸಿ ಮಾತಾಡ್ಬಾರ್ದು, ಕೆಲವ ಸಂದರ್ಭದೊಳಗ  ನಾವು ಮಾತಾಡದಂಗ ಸುಮ್ಮನ ಕೇಳಿಸ್ಕೊಳ್ಳೊದು ಛೋಲೊ. ಸುಮ್ಮನ ಕೇಳಿಸ್ಕೊಳ್ಳದಲ್ಲ, ಲಕ್ಷೆಕೊಟ್ಟ ಕೇಳಿಸ್ಕೊಬೇಕು. ಹೀಂಗ ಕೇಳಿಸ್ಕೊಳ್ಳೋದ್ರಿಂದ ಹೊಸ ಹೊಸ ವಿಚಾರಗಳು ಬರ್ತಾವು. ನಿಮ್ಮ ಬುದ್ದಿಶಕ್ತಿ ಹೆಚ್ಚಾಕ್ಕತಿ, ಸಂಭಂದಗಳೂ ಸುಧಾರಿಸ್ಕೊಂತಾವು. ಎಲ್ಲ ನಿಮ್ಮ ಮಾತಿನ ಅವಶ್ಯಕತೆ ಇರೋದಿಲ್ವೊ, ಮಾತಾಡಾಕ ಸರಿಯಾದ ಜಾಗ ಅನಸಮಗಿಲ್ವೊ ಅಲ್ಲಿ ಮಾತಾಡದಂಗ ಸುಮ್ಮನ ಕೇಳಿಸ್ಕೊಂಡ್ರ ಭಾಳ ಲಾಭಾಕ್ಕತಿ..

trainingconnection.com

5. ಮಾತಾಡಾಕ ವಿಷಯ ಇಲ್ಲದಿರೋವಾಗ

ಚರ್ಚಿಸೋದು, ಮಾತುಕತೆ ಛೋಲೊನ. ಮಾತಾಡಾಕ ವಿಷಯಾನ ಇಲ್ಲದಿದ್ದಾಗ, ಅಲ್ಲಿ ನಮ್ಮ ಮಾತಿನ ಅವಶ್ಯಕತೆ ಇರಂಗಿಲ್ಲ ಅಂತಾ ಟೈಮನ್ಯಾಗ ನಾವು ಮ್ಯಾಗ ಬಿದ್ದು ಮಾತಾಡ್ಬೇಕಂತೇನಿಲ್ಲ, ಅವಾಗಲ್ಲಿ ಮೌನ ಅನಿವಾರ್ಯಾಗಿರ್ತೈತಿ, ಮಾತಾಡದಂಗಿರೋದು ಕಷ್ಟ ಅನಸಿದ್ರೂ ಮಾತಾಡದೇ ಇರೋದು ಛೊಲೋ .

6. ನಮ್ಮನ್ನ ಯಾರರ ಅಣಕಿಸಿ, ಚುಚ್ಚಿ ಮಾತಾಡೊವಾಗ

ಒಬ್ಬರನ್ನೊಬ್ಬರು ಇಷ್ಟಾ ಪಡದೇ ಇರಾಕ ಕಾರಣ ಇರಾಕಬೇಕು ಅಂತೇನಿಲ್ಲ.. ಹಂಗ ನಿಮ್ಮನ್ನ ಕಾಡಸ್ಬೇಕು, ನಿಮ್ಮನ್ನ ಅಣಗಿಸ್ಬೇಕು ಅನ್ಕೊಂಡವರಿಗೂ ಯಾವ ಕಾರಣಾನೂ ಬೇಕಾಗಿರೋದಿಲ್ಲ. ಸುಮ್ಮನ ಮನಸ್ಸಿಗೆ ನೋವಾಗೊಹಂಗ ಚುಚ್ಚಿ ಚುಚ್ಚಿ ಮಾತಾಡ್ತಿರ್ತಾರ. ಅಂತಾರ ಮುಂದ ನಿಮ್ಮನ್ನ ನೀವು ಕಂಟ್ರೋಲ ಮಾಡ್ಕೊಂಡು ಅವರ ಮಾತನ್ನ ಕೇಳಿದ್ರು ಕೇಳಸ್ಕೊಂಳ್ಳದಂಗ ಇದ್ರಾಯ್ತು ಅಷ್ಟ. ಅವಾಗ ಅವರು ತಮ್ಮ ಮಾತನ್ನ ಅಲ್ಲಿಗೆ ನಿಲ್ಲಸಿಬಿಡ್ತಾರ. ಇಂತ ವಿಷಯಕ್ಕೆಲ್ಲಾ ಮೌನದಿಂದಾನ ನಾಂದಿ ಹಾಡ್ಬೇಕು.

familyeducation.com

7. ನಮಗ ನಮ್ಮ ಮ್ಯಾಗಿನ ಕಂಟ್ರೋಲ ತಪ್ಪಿದಾಗ…..

ನಮ್ಮೊಳಗಿರೋ ಕೆಟ್ಟ ವರ್ತನೆಗಳನ್ನ ಸರಿಪಡಿಸ್ಕೊಂಡು ಬದಲಾಗಾಕ ಪ್ರಯತ್ನ ಮಾಡೊದು ಭಾಳ ಛೋಲೊ. ಯಾಕಂದ್ರ ನಮ್ಮ ವರ್ತನೆ ಮತ್ತ ನಮ್ಮ ಅಭ್ಯಾಸಗಳನ್ನ ಬದಲಾಸ್ಕೊಳ್ಳೊದು ಸುಲಭದ ಮಾತಲ್ಲ. ನಾವೇನರ ಅದರ ಕಡೆ ಲಕ್ಷೆ ಕೊಡದಂಗಿದ್ದಾಗ ಅದು ಬಂದss ಬರ್ತೈತಿ.

ಅದ್ರಾಗೂ ಮಾತಿನ ವಿಷಯಕ್ಕ ಬಂದ್ರ ನಾವು ಯಾರ ಜೊತಿಗೆ ಹೆಂಗ ಮಾತಾಡ್ತವಿ ಅನ್ನ ವಿಷಯಕ್ಕ ಬಂದ್ರ ಬ್ಯಾರೆ ಥರದ ವಿಚಾರ, ಭಾವನೆಗಳು ಹರ್ಕೊಂಡ ಬರ್ತಾವು. ಇವುಗಳ ಮ್ಯಾಗ ನಮಗ ಹಿಡಿತ ಸಿಗೋತನಕ ಬಾಯಿಮುಚ್ಕೊಂಡಿರೋದು ಭಾಳ ಒಳ್ಳೇದು.

8. ಮನಸ್ಸು ಕೆಟ್ಟಾಗ

ನಮ್ಮ ಮನಸ್ಸು ಕೆಟ್ಟಾಗ ನಮ್ಮೊಳಗ ನಕಾರಾತ್ಮಕ ಭಾವನೆಗಳss ಹೆಚ್ಚಾಗಿರ್ತಾವು, ಅಂತಾ ಟೈಮನ್ಯಾಗ ಮಾತಾಡ್ಬಾಡ್ರಿ. ನೀವು ಹಂಗ, ಯಾವ ಪರಿಸ್ಥಿತ್ಯಾಗಿದ್ರೂ ಬ್ಯಾರೆರ್ನ ಮಾತಾಡ್ಸಾಕಬೇಕು ಅಂತ ರೂಲ್ಸೇನಿಲ್ಲ. ನಕಾರಾತ್ಮಕ ಭಾವನೆಗಳಿದ್ದಾಗ ನಾವು ತೊಗೊಳ್ಳೋ ನಿರ್ಧಾರಗಳ ಮ್ಯಾಗ ಮೋಡ ಕವಿದಂಗ ಇರ್ತೈತಿ. ಇಂಥಾ ಸಮಯದಾಗ ಹಾದಿ ತಪ್ಪೊ ಸಾಧ್ಯತೆ ಭಾಳ ಇರ್ತತಿ. ಬಾಯಿಗೆ ಬೀಗಾ ಹಾಕ್ಕೊರಿ.

therapychai.files.wordpress.com

9. ಮುಖ್ಯ ಕೆಲಸದಲ್ಲಿರೋವಾಗ

ಕೆಲಸ ಮಾಡಬಕಾರ ಖಾಲಿಪಿಲಿ ಬ್ಯಾಡದಿರೋ ವಿಷಯಗಳ ಬಗ್ಗೆ ಮಾತಾಡದು ನೀವು ಬೇಜವಾಬ್ದಾರಿಗಳು ಅನ್ನೊದನ್ನ ಎತ್ತಿ ತೋರಸ್ತೈತಿ. ಹರಟೆ ಹೊಡ್ಕೊಂತ ನೀವು ಕೆಲಸ ಮಾಡಿದ್ರೂ, ಬ್ಯಾರೆಯವರಿಗೆ ನಿಮ್ಮ ಮ್ಯಾಗ ಈ ಭಾವನೆ ಹುಟ್ಕೊಂತೈತಿ. ಅಂದಮ್ಯಾಲೆ ಮಾತಾಡದಂತ ತೆಪ್ಪಗಿರೋದು ಒಳ್ಳದು ಹೌದಲ್ಲ?

10. ನಿಮ್ಮ ಪ್ರೀತಿ ಪಾತ್ರರಿಗೆ ನಿಮ್ಮ ಮಾತು ನೋವ ಕೊಡ್ತತಿ ಅನಸಿದಾಗ

ನಿಮ್ಮ ಮಾತಿಂದ ಬ್ಯಾರೆದೊರ ನಡೆತೆಗೆ ಮಸಿ ಬಳಿದಂಗ ಆಕ್ಕತಿ ಅಂದ್ರ, ನೋವ ಕೊಡ್ತತಿ ಅಂದ್ರ, ಅವರ ಬಗ್ಗೆ ಮಾತಾಡೋದು ಶಾಣೆತನ ಅಲ್ಲ. ಅದ್ರಾಗೂ ಇದು ನಮ್ಮ ಬಾಳ ಸಂಗಾತಿ, ಸಂಭಂದಿಕರು, ಒಡಹುಟ್ಟಿದವರು, ಸ್ನೇಹಿತರು ಅಥವಾ ನಿಮ್ಮ ಜೊತಿಗೆ ಕೆಲಸ ಮಾಡೋರು, ಯಾರ ಬಗ್ಗೆನರ ಮಾತಾಡ ಟೈಮನ್ಯಾಗ ಮಾತಾಡಂಗಿರೋದು ಜಾಣತನ.

ಯಾರದರ ಜೊತಿಗೆ ನಿಮಗ ತೊಂದ್ರೆ ಐತಿ ಅನಸಿದ್ರ ಅವರ ಹತ್ರ ನೇರವಾಗಿ ಹೋಗಿ ಮಾತಾಡ್ರಿ. ನಕಾರಾತ್ಮಕ ಭಾವನೆಗಳನ್ನ ಬಿಟ್ಟ, ನಿಮ್ಮ ನಡವಳಿಕೆನ ತೋರಸ್ರಿ.

i1.wp.com

ಏನಿದು ಹೆಚ್ಚು ಕಡಿಮೆ ದಿವಸ ನಡೆಯೋ ಎಲ್ಲ ವಿಷಯದಾಗೂ ಬಾಯಿ ಮುಚ್ಚಕೊಂಡಿರ್ರಿ ಅನ್ನಕತ್ತಾರ ಅಂತ ಅನ್ಕೊಬ್ಯಾಡ್ರಿ. ನಾವು ಹೇಳಾಕತ್ತಿದ್ದು ಸಮಯ ಸಂದರ್ಭಕ್ಕ ತಕ್ಕಂಗ, ಅವಶ್ಯಕತೆ ಇದ್ರಷ್ಟ ಹಿತ ಮಿತವಾಗಿ ಮಾತಾಡಿದ್ರ ಎಲ್ಲರಿಗೂ ಛೋಲೊ. ಮಾತು ಎಷ್ಟು ಮುಖ್ಯಾನೋ ಮೌನ ಕೂಡಾ ಅಷ್ಟ ಮುಖ್ಯ.