https://2.bp.blogspot.com/-_pnv-r7NgkU/T7zOIs869eI/AAAAAAAAc0I/kdwNi2e3lqI/s1600/1.jpg

ಜೀವನದಲ್ಲಿ ನಾವು ಅಂದ್ಕೊಳ್ಳೋದು ಯಾವತ್ತಾದ್ರೂ ಸರಿಯಾಗಿ ಆಗಿದ್ದು ನೋಡಿದ್ದೀರಾ? ಹೀಗಾಗ್ಬೇಕು ಅಂದ್ಕೊಂಡ್ರೆ ಆದ್ರ ಉಲ್ಟಾ ಆಗೋದೇ ಜಾಸ್ತಿ. ಅಂತದ್ರಲ್ಲಿ ಪ್ರತಿದಿನ ಹೀಗೇ ಏನೋ ಒಂದಾಗ್ತಿದ್ರೆ ಯಾವನಿಗೆ ಬೇಜಾರಾಗಲ್ಲ ಹೇಳಿ? ಅಯ್ಯೋ! ಮೈ ಎಲ್ಲಾ ಪರ ಪರ ಅಂತ ಪರ್ಚ್ಕೊಂಡು ಬಿಡೋಣ ಅಂತ ಅನ್ಸ್ತಾ ಇರುತ್ತೆ. ಅಂತೆಕಂತೆ ಇರೋವಾಗ ಯಾಕ್ರೀ ಮೈಯೆಲ್ಲಾ ಪರ್ಚ್ಕೊಳ್ಳೋದು? ಈಗ ಜೀವನ್ದಲ್ಲಿ ಏನೂ ಸರಿ ಹೋಗ್ತಿಲ್ಲ ಅಂದಾಗ ಹೇಗ್ ಅದ್ನ ನಿಭಾಯಿಸ್ಬೇಕು ಅನ್ನೋದರ ಬಗ್ಗೆ ಉಪಾಯ ಹೇಳ್ತೀವಿ ಓದಿ.

1. ಎಲ್ಲರ ಜೀವನ್ದಲ್ಲೂ ಏಳು ಬೀಳು ಸಹಜ ಅಂತ ತಿಳ್ಕೊಳಿ

ಅಯ್ಯೋ ನನಗೆ ಮಾತ್ರ ಯಾಕೆ ಹೀಗಾಗುತ್ತೆ? ನಂಗ್ ಮಾತ್ರ ನೋವು, ತೊಂದ್ರೆ ಅನ್ನೋ ಯೋಚ್ನೆ ಮೊದ್ಲು ಬಿಟ್ಬಿಡಿ. ಮನುಷ್ಯರು ಅಂದ್ಮೇಲೆ ತಪ್ಪುಗಳೂ ಆಗುತ್ತೆ, ಪ್ರಯತ್ನ ಫಲಿಸದೇನೂ ಇರುತ್ತೆ. ಹಾಗಂತ ತಲೆ ಮೇಲೆ ಕೈಇಟ್ಕೊಂಡು ಕೂತ್ಕೊಳ್ಳೋ ಅವಶ್ಯಕತೆ ಏನಿಲ್ಲ. ಜೀವ್ನಾನ ಪಾಸಿಟಿವ್ವಾಗಿ ನೋಡಿ, ನನ್ಗೂ ಮುಂದೆ ಒಳ್ಳೆ ದಿನ ಬರತ್ತೆ ಅಂತ ಮುನ್ನುಗ್ಗಿ.

2. ಇರೋ ತೊಂದ್ರೇನ ಒಪ್ಕೊಳಿ

ಆಗಿರೋದು ಆಗಿಹೋಯ್ತು. ಅದನ್ನ ಆಗಿಲ್ಲ , ಆಗ್ಬಾರ್ದಿತ್ತು ಅಂತ ಯೋಚ್ನೆ ಮಾಡ್ತ ಕೂತ್ಕೊಳ್ಳೋದಕ್ಕಿಂತ, ಆಗಿದ್ದು ಆಯ್ತು ಮುಂದೇನು ಮಾಡ್ಬೇಕು ಅನ್ನೋದನ್ನ ನೋಡಿದ್ರೆ ಯಾವ ಸಮಸ್ಯೆನೂ ನಮಗೆ ದೊಡ್ಡದು ಅಂತ ಆನ್ಸೋದೇ ಇಲ್ಲ.

ಮೂಲ

3. ನಿಮ್ಮನ್ನ ನೀವೇ ತೆಗಳ್ಕೋಬೇಡಿ

ನಿಮ್ಮಿಂದ ತಪ್ಪು ಆಯ್ತು ಅಥ್ವಾ ನೀವು ಮಾಡೋ ಕೆಲ್ಸ ಫಲಿಸಲಿಲ್ಲ ಅಂತ ನಿಮ್ಮನ್ನ ನೀವು ತೆಗಳಿಕೊಳ್ಳೋದು, ನಿಮ್ಮನ್ನ ನೀವು ಬೇರೆಯವ್ರ ಮುಂದೆ ತಿರಸ್ಕಾರದಿಂದ ನೋಡೋದೆಲ್ಲಾ ಮಾಡಿದ್ರೆ, ಜನರಿಗೆ ನಿಮ್ಮ ಬಗ್ಗೆ ಇರೋ ಬೆಲೆ ಕಡಿಮೆ ಆಗುತ್ತೆ ವಿನಃ ಬೇರೆ ಏನೋ ಪ್ರಯೋಜನ ಆಗಲ್ಲ.

4. ನಿಮ್ಮ ಜವಾಬ್ದಾರಿ ಅರ್ಥ ಮಾಡ್ಕೊಳಿ

ಯಾವ ಕೆಲ್ಸ ಒಪ್ಕೊಂಡಿದ್ದೀರೋ ಆದ್ರ ಪ್ರತಿ ನಿಮ್ಮ ಜವಾಬ್ದಾರಿ ಇದೆ ಅನ್ನೋದನ್ನ ಮೊದ್ಲು ಅರಿತುಕೊಂಡು , ಆ ಜವಾಬ್ದಾರೀನ ನಿಭಾಯಿಸೋದು ಕಲ್ತುಕೊಳ್ಳಿ. ಸುಮ್ನೆ ಟೈಮ್ ಪಾಸ್ ಮಾಡೋದ್ರಿಂದ ಏನೋ ಪ್ರಯೋಜನ ಇಲ್ಲ.

ಮೂಲ

5. ಬೇಕಾದ್ರೆ ಬೇರೆಯವ್ರಿಂದ ಸಹಾಯ ತಗೊಳಿ

ಮನುಷ್ಯ ಮಾಡೋ ದೊಡ್ಡ ತಪ್ಪು ಅಂದ್ರೆ ಇನ್ನೊಬ್ರ ಸಹಾಯ ಪಡ್ಕೊಳ್ಳಕ್ಕೆ ಹಿಂಜರಿಯೋದು. ನಾನ್ ಅವ್ನ ಹತ್ರ ಸಹಾಯ ಕೇಳಿದ್ರೆ ಅವ್ನು ಏನು ಅಂದ್ಕೋತಾನೋ, ಸಹಾಯ ಮಾಡಲ್ಲ ಅಂದ್ರೆ ಎನ್ ಮಾಡೋದು ಅನ್ನೋ ಯೋಚ್ನೆ ಅಲ್ಲೇ ಸಮಯ ಕಳೀತೀವೇ ವಿನಃ ಸಹಾಯ ಪಡ್ಕೊಂಡು ಹೇಗೆ ಕೆಲ್ಸ ಮುಗ್ಸೋದು ಅನ್ನೋ ಯೋಚ್ನೇನೇ ನಮಗೆ ಬರಲ್ಲ.

6. ಜೀವನ್ದಲ್ಲಿ ಬರೀ ಕತ್ತಲೇನೇ ಇರಲ್ಲ ಅಂತ ನೆನಪಿಟ್ಕೊಳಿ

ಒಂದು ಕೆಲ್ಸ ಮಾಡ್ತ ಏನೋ ತೊಂದ್ರೆ ಬಂತು ಅಂತ ಅದು ಯಾವಾಗ್ಲೂ ಬರುತ್ತೆ, ಅಥ್ವಾ ಬಂದ ತೊಂದ್ರೆ ಕೊನೆ ತನಕ ಇರುತ್ತೆ ಅಂತ ಯೋಚ್ನೆ ಮಾಡೋದು ತಪ್ಪು. ನಮ್ಮ ಅನುಭವ ಕಡಿಮೆ ಇರೋದ್ರಿಂದ ಕೂಡ ತೊಂದ್ರೆ ಬರೋ ಚಾನ್ಸಸ್ ಇರುತ್ತೆ. ಅದನ್ನ ಅರಿತುಕೊಂಡು ಮುನ್ನಡೆದರೆ ಒಳ್ಳೇದು.

ಮೂಲ

7. ತೊಂದ್ರೆ ಆಗಿದ್ದಕ್ಕೆ ಸರಿಯಾದ ಕಾರಣ ತಿಳ್ಕೊಳಿ

ಆ ತೊಂದ್ರೆ ಹೇಗೆ ಬಂತು? ಯಾಕೆ ಬಂತು? ಎನ್ ಮಾಡಿದ್ರೆ ಅದನ್ನ ಸರಿ ಮಾಡಬಹುದು ಅನ್ನೋ ಬಗ್ಗೆ ಗಮನ ಇಟ್ಟು ಯೋಚ್ನೆ ಮಾಡಿ. ಮುಂದಿನ್‌ ಸಲ ಆದ್ರೂ ಆ ತೊಂದ್ರೇನ ಅವಾಯ್ಡ್ ಮಾಡೋ ಬಗ್ಗೆ ಈಗಿಂದ್ಲೇ ಯೋಚ್ನೆ ಮಾಡೋದ್ರಿಂದ ಸಹಾಯ ಆಗುತ್ತೆ.

8. ಆದ ತೊಂದರೆಯಿಂದ ಪಾಠ ಕಲಿತ್ಕೊಳಿ

ತೊಂದ್ರೆ ಆಗಿದ್ದು ಆಯ್ತು. ಅಯ್ಯೋ ಅಂತ ಅಳ್ತಾ ಕೂತ್ಕೊಳ್ಳೋದಕ್ಕಿಂತ  ಆ ತೊಂದರೆಯಿಂದ ಪಾಠ ಕಲ್ತ್ಕೊಂಡು, ನಾವು ಕಲಿತು ಬೇರೆಯವ್ರಿಗೂ ತಿಳಿ ಹೇಳೋದ್ರಿಂದ ಇನ್ನೊಬ್ರಿಗೂ ನಮ್ಮಿಂದ ಹೆಲ್ಪ್ ಆಗುತ್ತೆ ಅನ್ನೋ ವಿಷ್ಯ ಮನದಟ್ಟು ಮಾಡ್ಕೊಳ್ಳಿ.

ಮೂಲ

9. ಒಂದ್ಸಲ ಜಾರಿದ ಕಾಲು ಪದೇ ಪದೇ ಜಾರುತ್ತೆ ಅಂತ ಭಯ ಪಡ್ಬೇಡಿ

ಎಲ್ಲೋ ನೆಲ ಒದ್ದೆ ಇತ್ತು, ನೀವು ಗಮನ ಕೊಟ್ಟಿಲ್ಲಾ, ಜಾರಿ ಬಿದ್ರಿ ಅಂತ ಹೇಳಿ ಪ್ರತಿ ಸಲ ಹೀಗೇ ಆಗುತ್ತೆ ಅನ್ನೋ ಭಯ ಬೇಡ. ಮೊದಲನೇ ಸಲ ಬಿದ್ದ ನೀವು ಎರಡನೇ ಸಲ ಎಚ್ಚರವಾಗಿ ಇದ್ದೇ ಇರ್ತೀರಾ ಅನ್ನೋ ನಂಬಿಕೆ ನಿಮಗೆ ಇದ್ರೆ ಎಂಥಾ ತೊಂದ್ರೆ ಬಂದ್ರೂ ಮೆಟ್ಟಿ ನಿಲ್ಲೋ ಶಕ್ತಿ ನಿಮಗೆ ಬಂದೇ ಬರುತ್ತೆ. ಒಂದ್ಸಲ ಟ್ರೈ ಮಾಡಿ ನೋಡಿ.

ಮೇಲೆ ಹೇಳಿರೋ ವಿಷಯಗಳನ್ನ ನೆನಪಿಟ್ಕೊಂಡ್ರೆ, ಯಾವ್ದೇ ಕಷ್ಟ ಆದ್ರೂ ನೀವು ಅದನ್ನ ದಾಟಿ, ಜಯಿಸ್ಕೊಂಡ್ ಬರೋದು ಗ್ಯಾರೆಂಟಿ!