https://www.healtheminds.com/wp-content/themes/newbeginnings/images/healtheminds.jpg

ಬಾಸ್ ಹತ್ರ ಸಂಬ್ಳ ಜಾಸ್ತಿ ಕೇಳ್ಬೇಕು ಅಂದ್ರೆ ಕೆಲವರಿಗೆ ಮೈ ಎಲ್ಲ ಹಿಡಿಯಾಗ್‌ಬಿಡುತ್ತೆ. ಅವಾಗ ಇದ್ರ ಬಗ್ಗೆ ಯಾರ್ ತಲೆ ಕೆಡ್ಸ್ಕೊಳ್ತಾರಪ್ಪ, ಬಂದದ್ದಷ್ಟು ಬರ್ಲಿ ಅನ್ಕೊಂಡ್ ಬಿಡ್ತಾರೆ. ಆದ್ರೆ ಸ್ವಲ್ಪ ಬುದ್ಧಿ ಉಪಯೋಗ್ಸಿದ್ರೆ ಆರಾಮಾಗಿ ಸಂಬ್ಳ ಜಾಸ್ತಿ ಮಾಡಿಸಿಕೊಳ್ಳಬಹುದು ಗೊತ್ತಾ? ಹೇಗೆ ಅಂತೀರಾ? ಕೆಳ್ಗಡೆ ಇರೋದನ್ನ್ ಸ್ವಲ್ಪ ಓದಿ.

1. ಬರೀ ಸಂಬ್ಳದ ಬಗ್ಗೆ ಮಾತಾಡಬೇಡಿ

ಈಗೀಗ ಕಂಪನಿಗಳಲ್ಲಿ ಸಂಬ್ಳದ ಜೊತೆ ಅಲೋವೆನ್ಸ್ಗಳು, ಬೋನಸ್ಗಳು, ಆಫೀಸ್ ಇರೋ ಜಾಗ, ಕೆಲ್ಸಕ್ಕೆ ಬಂದು ಹೋಗೋ ಟೈಮ್ ಮತ್ತೆ ಆಫೀಸ್ ಬಂದು ಹೋಗಕ್ಕೆ ಸಿಗೋ ಟ್ರಾವೆಲ್ ಅಲೋವೆನ್ಸ್ ಎಲ್ಲದರ ಬಗ್ಗೇನೂ ಯೋಚ್ನೆ ಮಾಡ್ಕೊಂಡು ಬಾಸ್ ಮುಂದೆ ಹೋಗಿ ನಿಂತ್ಕೊಳಿ. ಸರಿಯಾಗಿ ಲೆಕ್ಕ ಹಾಕಿ ನೋಡಿ, ನಿಮಗೇ ಗೊತ್ತಾಗುತ್ತೆ ಇದರಿಂದಾನೂ ನಿಮ್ಮ ಕೈಗೆ ದುಡ್ಡು ಸಿಕ್ಕಂಗಾಗುತ್ತೆ ಅಂತ. ಸಿಕ್ಕರೆ ಸಿಗಲಿ, ಯಾರಿಗುಂಟು ಯಾರಿಗಿಲ್ಲ?!

ಮೂಲ

2. ಇಷ್ಟು ಸಿಗಬೇಕು ಅಂತ ಒಂದು ಗುರಿ ಇಟ್ಕೊಳಿ

ನಿಮ್ಮ ಲೆವೆಲ್‌ನಲ್ಲಿ ಕೆಲ್ಸ ಮಾಡೋ ಬೇರೆಯವ್ರಿಗೆ ಎಷ್ಟು ಸಂಬ್ಳ ಕೊಡ್ತಾ ಇದ್ದಾರೆ, ಅವ್ರ ಕೆಲ್ಸ ಏನು ಅನ್ನೋದರ ಬಗ್ಗೆ ಎಲ್ಲ ಸ್ವಲ್ಪ ರಿಸರ್ಚ್ ಮಾಡಿ. ನಂಗ್ಯಾಕೆ ಕಡ್ಮೆ ಆವ್ರಿಗ್ಯಾಕೆ ಜಾಸ್ತಿ ಕೊಡ್ತಿದ್ದಾರೆ ಅನ್ನೋದನ್ನ ನೋಡ್ಕೊಂಡು ಮಾತಾಡಕ್ಕೆ ರೆಡಿ ಆಗಿ. ಆಗ ನಿಮ್ಮ ಕೆಲಸಾನ ನೀವೇ ಕಡಿಮೆ ಅನ್ಕೊಳಲ್ಲ.

ಮೂಲ

3. ನಿಮ್ನ ಕಂಡ್ರೆ ಇಷ್ಟ ಆಗೋ‌ ತರಹ ನಡ್ಕೊಳಿ

ದುಡ್ಡೇ ದೊಡ್ಡಪ್ಪ ಅನ್ನೋತರ ಮಾತಾಡ್ಲೇ ಬೇಡಿ. ಮೊಟ್ಟ ಮೊದಲನೇದಾಗಿ ನಿಮ್ನ ಕಂಡರೆ ಇಷ್ಟ ಆಗೋ ತರಹ ನಡ್ಕೋಬೇಕು. ಆಮೇಲೆ ಸಂಬಳದ ಬಗ್ಗೆ ಮಾತಾಡೋದು ಸುಲಭ. ಅದು ಬಿಟ್ಟು ನೀವು ಬಂದಿರೋದೇ ದುಡ್ಡು ಜಾಸ್ತಿ ಕೇಳಕ್ಕೆ ಅನ್ನೋ‌ ತರಹ ಕಾಣಿಸ್ಕೋಬೇಡಿ.

ಮೂಲ

4. ಬಾಸ್ ಜಾಗದಲ್ಲಿ ನಿಂತು ಯೋಚ್ನೆ ಮಾಡಿ

ಬಾಸ್ ಜಾಗದಲ್ಲಿ ನಿಂತು ಯೋಚ್ನೆ ಮಾಡಿದ್ರೆ, ನಮಗೆ ಯಾಕೆ ಈ ಸಂಬ್ಳ ಬರ್ತಿದೆ ಅನ್ನೋದು ಆರಾಮಾಗಿ ಗೊತ್ತಾಗುತ್ತೆ. ಬಾಸ್ ಏನು ಎಕ್ಸ್‌ಪೆಕ್ಟ್ ಮಾಡ್ತಿದ್ದಾನೆ ಅನ್ನೋದನ್ನ ಮೊದ್ಲು ತಿಳ್ಕೊಳ್ಳಿ. ಅದು ಬಿಟ್ಟು ನಿಮ್ಮ ಪುಂಗಿ ನೀವು ಊದ್ತಾನೇ ಇದ್ರೆ ಮಾತು ಎಲ್ಲಿಂದ ಎಲ್ಲೀಗೋ ಹೋಗುತ್ತೆ.

ಮೂಲ

5. ಬಾಸ್ 'ಇಲ್ಲ' ಅಂದ್ರೆ ಏನ್ ಹೇಳ್ಬೇಕು ಅಂತ ಮುಂಚೇನೇ ಯೋಚನೆ ಮಾಡ್ಕೊಂಡ್ ಹೋಗಿರಿ

ಯಾರ್ನಾದ್ರೂ ಯಾವುದರ ಬಗ್ಗೇನಾದ್ರೂ ಒಪ್ಪಿಸಬೇಕಾದ್ರೆ… ಅವರು ಒಪ್ಪದಿದ್ದಾಗ ಏನ್ ಮಾಡ್ಬೇಕು ಅಂತ ಗೊತ್ತಿರಬೇಕು. ಹೌದು ತಾನೇ? ಬಾಸ್ ಯಾವುದಕ್ಕೆ ಹೂಂ ಅನ್ನಬಹುದು ಯಾವುದಕ್ಕೆ ಇಲ್ಲ ಅನ್ನಬಹುದು ಅನ್ನೋದನ್ನ ಮೊದ್ಲು ಪಟ್ಟಿ ಮಾಡ್ಕೊಳ್ಳಿ. ಆಮೇಲೆ ಇಲ್ಲ ಅಂದ್ರೆ ಹೇಗೆ ಮಾತಾಡ್ಬೇಕು ಅನ್ನೋದರ ಬಗ್ಗೆ ಮೊದಲೇ ಯೋಚ್ನೆ ಮಾಡ್ಕೊಂಡಿರಿ. ಆಗ ಅಲ್ಲಿ "ಬೆಬೆಬೆ" ಅನ್ನಬೇಕಾಗಲ್ಲ.

ಮೂಲ

6. ಈ ಮೀಟಿಂಗ್ ಹೇಗ್ ನಡೀಬೋದು ಅಂತ ಪ್ರಾಕ್ಟೀಸ್ ಮಾಡ್ಕೊಂಡ್ ಹೋಗಿ

ಬಾಸ್ ಹತ್ರ ಮಾತಾಡೊ ಮುಂಚೆ ಹೇಗೆ ಮಾತಾಡ್ತೀರಾ ಅನ್ನೋದನ್ನ ಒಬ್ಬ ಹತ್ತಿರದ ಫ್ರೆಂಡ್ ಮುಂದೆ ಮಾತಾಡಿ ಪ್ರ್ಯಾಕ್ಟೀಸ್ ಮಾಡ್ಕೊಳ್ಳಿ. ಫ್ರೆಂಡ್ ಒಪ್ಪಿದ ಅಂದ್ರೆ ಬಾಸ್ ಒಪ್ಪೋ ಸಾಧ್ಯತೆ ಇದೆ ಅಂತರ್ಥ.

ಮೂಲ

7. ಬಾಸ್ ಹತ್ರ ಮಾತಾಡೋ ಮುಹೂರ್ತ ಸರಿಯಾಗಿ ಇಟ್ಕೊಳಿ 🙂

ಬಾಸ್ ಏನೋ ಕೆಲ್ಸದ ಗಡಿಬಿಡಿಯಲ್ಲಿದ್ದಾಗ ಅಥವಾ ಬೇರೆ ಯಾವುದೋ ಟೆನ್ಶನ್ನಲ್ಲಿದ್ದಾಗ ಮಾತಾಡ್ಲಿಕ್ಕೆ ಹೋಗ್ಲೇ ಬೇಡಿ. ಸಾಮಾನ್ಯವಾಗಿ ಸೋಮವಾರ ಬೆಳಗ್ಗೆ ಅಥವಾ ಶುಕ್ರವಾರ ಸಂಜೆ ಬಾಸ್ ಹತ್ರ ಸಂಬ್ಳದ ಬಗ್ಗೆ ಮಾತಾಡಕ್ಕೆ ಹೋಗ್ಲೇಬಾರ್ದು. ಆಗ ಪಾಲ್ಟಿಗೆ ಒಂಥರಾ ತಲೆ ಕೆಟ್ಟಿರುತ್ತೆ 🙂

ಮೂಲ

8. ನಿಮಗೂ ಸರಿ ಹೊಂದೋಹಂಗೆ ಮುಹೂರ್ತ ಇಟ್ಕೊಳಿ

ನೀವೇ ಸಕ್ಕತ್ ಟೆನ್ಶನ್ನಲ್ಲಿ ಇರೋವಾಗ ಇಂಥಾ ಮೀಟಿಂಗ್ ಇಟ್ಕೊಂಡ್ರೆ ಒಳ್ಳೇದಲ್ಲ. ಕಣ್ಣು ಮುಚ್ಕೊಂಡು ಸ್ವಲ್ಪಹೊತ್ತು ಆರಾಮಾಗಿ ಉಸ್ರಾಡಿ ಆದ್ರ ನಂತ್ರ ಬಾಸ್ ಹತ್ರ ಹೋಗೋಹಾಗೆ ಇಟ್ಕೊಳಿ.

ಮೂಲ

ಟೆನ್ಶನ್ ಬಿಟ್ಟಾಕಿ. ಇಷ್ಟು ನೆನಪಿಟ್ಟುಕೊಂಡು ಧೈರ್ಯವಾಗಿ ಹೋಗಿ ಕೇಳಿ. ಯಾಕೆ, ಸಂಬಳ ಏನು ಸುಮ್ನೆ ಕೇಳ್ತೀರಾ? ಕೆಲಸ ಮಾಡಲ್ವಾ?