https://files.brightside.me/files/news/part_31/315460/12352160-EN_00973379_9013-1489483372-650-d99596116d-1489670286.jpg

ಭೂಮಿಮೇಲಿರೋ ಅತ್ಯದ್ಭುತವಾದ್ ದೇಶಗಳಲ್ಲಿ ಜಪಾನ್ಗೆ ಮೊದಲ್ನೇ ಸ್ಥಾನ ಕೊಡ್ಬೋದು. ಶತಶತಮಾನಗಳಿಂದನೂ ತನ್ನದೇ ಆದ ಪ್ರಾಚೀನ ಸಂಸ್ಕೃತಿ, ಪರಂಪರೆನ ಒಂದ್ಕಡೆ ಕಾಪಾಡ್ಕೊಂಡು ಬರೋದಲ್ದೇ, ಹೊಸ ಹೊಸ ಆವಿಷ್ಕಾರ ತಂತ್ರಜ್ಞಾನನ ಇನ್ನೊಂದ್ ಕಡೆ ಬೆಳಿಸ್ತಿದಾರೆ.

ಇಲ್ಲಿ ನಿಮ್ಗೋಸ್ಕರ, ಜಪಾನ್ ಯಾಕೆ ಅಷ್ಟರ್ ಮಟ್ಟಿಗೆ ವಿಶಿಷ್ಟ ಅನ್ಸತ್ತೆ ಅಂತ ತೋರ್ಸಕ್ಕೆ 16 ಕಾರಣಗಳ್ನ ಕೊಟ್ಟಿದೀವಿ. ಇದನ್ನ ಓದಿದ್ಮೇಲೆ ಕಣ್ಮುಚ್ಕೊಂಡು ಜಪಾನಿಗೆ ಟ್ರಿಪ್ ಪ್ಲಾನ್ ಮಾಡ್ತೀರಿ.

1. ಜಪಾನ್ ರಾಜಧಾನಿ ಟೋಕಿಯೋ ಪ್ರಪಂಚದಲ್ಲೇ ಅತ್ಯಂತ ಸುರಕ್ಷಿತವಾದ ಮೆಟ್ರೊಪಾಲಿಟನ್ ಸಿಟಿ

ಮೂಲ

ಇತ್ತೀಚೆಗೆ ಜನ ಬರೀ ಉದ್ಯೋಗಕ್ಕೆ ಒಳ್ಳೆ ಜಾಗ ಯಾವ್ದು ಅಂತ ನೋಡ್ತಿಲ್ಲ, ಜೊತೆಗೆ ಎಲ್ಲಿ ಸುರಕ್ಷಿತವಾಗಿ ಜೀವ್ನ ಸಾಗುಸ್ಬೋದು, ಸೇಫ್ಟಿ ಇದ್ಯಾ, ಅನುಕೂಲವಾಗಿದ್ಯಾ ಅಂತೆಲ್ಲ ನೋಡ್ತಿದಾರೆ. ಅದನ್ನೆಲ್ಲಾ ದೃಷ್ಟಿನಲ್ಲಿ ಇಟ್ಕೊಂಡು ನೋಡುದ್ರೆ, ಜಪಾನ್ ತುಂಬಾನೇ ಸೊಫೆಸ್ಟಿಕೇಟೆಡ್ ಊರು. ಇದನ್ನ ನಾವ್ ಹೇಳ್ತಿಲ್ಲ ಕಣ್ರಿ 'ದ ಎಕನಾಮಿಕ್ ಇಂಟಲಿಜೆನ್ಸ್ ಯೂನಿಟ್ ರಿಸರ್ಚ್ ಸೆಂಟರ್' ಅವರು ಸರ್ವೇ ಮಾಡಿ ಜಪಾನ್ಗೆ ಮೊದಲ್ನೇ ಸ್ಥಾನ ಕೊಟ್ಟಿದಾರೆ… ಇನ್ನು ಸಿಂಗಪೂರ್ ಎರಡ್ನೇ ಸ್ಥಾನದಲ್ಲಿದ್ರೆ, ಜಪಾನಿಂದೇ ಇನ್ನೊಂದ್ ಊರು ಒಸಕ ಮೂರ್ನೇ ಸ್ಥಾನ ಗಳಿಸ್ಕೊಂಡಿದೆ.

2. ಸೂಚನಾಫಲಕದಲ್ಲಿ ವಾಕ್ಯದ ಬದ್ಲು ಚಿತ್ರಗಳ ಮೂಲಕಾನೇ ಸೂಚನೆ ಹಾಕಿರ್ತಾರೆ

ಮೂಲ

ಜಪಾನಲ್ಲಿ ಎಲ್ಲೇ ಹೋದ್ರೂ ಕಳೆದುಹೋಗೋ ಭಯ ಇರಲ್ಲ. ಭಾಷೆ ಬರ್ದೇ ಇದ್ರೂ ಆರಾಮಾಗಿ ನಿಭಾಯಿಸ್ಬೋದು. ಹೇಗೆ ಅಂತೀರ? ಎಲ್ಲಾ ಸಾರ್ವಜನಿಕ ಸ್ಥಳದಲ್ಲೂ ಗೈಡು ಮತ್ತೆ ಸೂಚನಾ ಫಲಕಗಳ್ನ ಹಾಕಿರ್ತಾರೆ. ಇದರ ಸ್ಪೆಷಾಲಿಟಿ ಅಂದ್ರೆ ಬರೀ ಅವರ ಭಾಷೆನಲ್ಲಿ ಹಾಕಿರದಲ್ದೇ ಇಂಗ್ಲೀಷಲ್ಲೂ ಬರ್ದಿರ್ತಾರೆ ಜೊತೆಗೆ ಇಂಗ್ಲೀಷೂ ಬರ್ಲಿಲ್ಲ ಅನ್ನೋರಿಗೋಸ್ಕರ ಚಿತ್ರಗಳ್ನೂ ಹಾಕಿರ್ತಾರೆ. ಮಾತಿಗಿಂತ, ಪದಗಳ್ಗಿಂತ ಶಕ್ತಿಶಾಲಿ ಈ ಚಿತ್ರಗಳು ಅಲ್ವ.

3. ಜಪಾನಿನ ಪುಟಾಣಿಗಳ್ಗೆ ಒಂದೇ ದಿನ ಹುಟ್ಟಿದ ಹಬ್ಬ ಆಚರಿಸ್ತಾರೆ

ಮೂಲ

ಜಪಾನಿನಲ್ಲಿರೋ 3, 5 ಮತ್ತೆ 7 ವರ್ಷದ್ ಎಲ್ಲಾ ಪುಟಾಣಿಗಳ್ಗೂ ನವೆಂಬರ್ 15 ಹುಟ್ಟುಹಬ್ಬದ ಸಂಭ್ರಮ. ಈ ಹಬ್ಬನ ಅವರು 'ಶಿತಿ-ಗೊ-ಸ್ಯಾನ್' ಅಂತ ಕರಿತಾರೆ. ಹಾಗಂದ್ರೆ 'ಏಳು-ಐದು-ಮೂರು' ಅಂತ. ಜಪಾನಲ್ಲಿ ಬೆಸಸಂಖ್ಯೆಗಳ್ನ ಮಾಂತ್ರಿಕ ಶಕ್ತಿಯಿರೋವಂಥ ಸಂಖ್ಯೆಗಳು ಅಂತ ನಂಬ್ತಾರೆ. ಹಾಗೆನೇ ಆ ವಯಸ್ಸಲ್ಲಿರೋ ಮಕ್ಕಳಿಗೆ ಬೆಳವಣಿಗೆ ಹಂತದಲ್ಲಿ ಅದು ತುಂಬಾ ಮಹತ್ವವಾದ್ ಘಟ್ಟ ಅಂತನೂ ಪರಿಗಣಿಸಿ ಹಬ್ಬದ್ ಥರ ಆಚರಿಸ್ತಾರೆ.

4. ಸಾರ್ವಜನಿಕವಾಗಿ ಒಟ್ಟಿಗೆ ವ್ಯಾಯಾಮ ಮಾಡ್ತಾರೆ

ಮೂಲ

ಸ್ಕೂಲ್ ಮಕ್ಕಳು, ಕೆಲ್ಸಕ್ ಹೋಗೋರೆಲ್ರೂ ತಮ್ಮ ದಿನ ಶುರುಮಾಡೋದೇ ಒಟ್ಟಿಗೆ ವ್ಯಾಯಾಮ ಮಾಡದ್ರಿಂದ. ಇದನ್ನ ಜಪಾನಲ್ಲಿ ಸುಮಾರು 1928ನೇ ಇಸವಿಯಿಂದನೂ ಮಾಡ್ಕೊಂಡ್ ಬರ್ತಿದಾರೆ. ಎಲ್ಲಾರು ಒಟ್ಟಿಗೆ ವ್ಯಾಯಾಮ ಯಾಕೆ ಮಾಡ್ತಾರೆ ಅಂದ್ರೆ ಆರೋಗ್ಯ ಚೆನ್ನಾಗಿಟ್ಕೊಬೋದು ಮತ್ತೆ ಎಲ್ಲರ ಜೊತೆ ಬೆರಿಬೋದು ಅಂತ. ಜಪಾನಂಥ ಕೋಮುವಾದಿ ರಾಷ್ಟ್ರದಲ್ಲಿ, ಪ್ರಜೆಗಳ್ ಮಧ್ಯ ಸಾಮರಸ್ಯ ಮೂಡ್ಸಕ್ಕೆ ತುಂಬ ಅಗತ್ಯ ಇದು.

5. ಶುಕ್ರವಾರ ಬೇಗ ಕೆಲ್ಸದಿಂದ ಮನೇಗ್ ಹೋಗ್ಬೋದು

ಮೂಲ

ಜಪಾನ್ ಸತತವಾಗಿ ಹೊಡೆತಗಳ್ನ ತಿಂತಿದ್ರೂ ಇಷ್ಟರ್ ಮಟ್ಟಿಗೆ ಅಭಿವೃದ್ಧಿ ಹೊಂದ್ತಾಯಿದೆ ಅಂದ್ರೆ ಅದಕ್ಕೆ ಕಾರಣ ಹಗಲೂ ರಾತ್ರಿ ಕಷ್ಟ ಪಟ್ಟು ಕೆಲ್ಸ ಮಾಡ್ತಿರೋ ಅಲ್ಲಿನ ಜನ. ಹಾಗಾಗಿ ಅವ್ರಲ್ಲಿ ಆಯಾಸ, ದಣಿವು ಸರ್ವೇ ಸಾಮಾನ್ಯ ಅನ್ಬೋದು. ಇದನ್ನ ತಪ್ಸಕ್ಕೆ ಅಲ್ಲಿನ ಸರ್ಕಾರ ಒಂದೊಳ್ಳೆ ಕಾರ್ಯಕ್ರಮ ಪ್ಲಾನ್ ಮಾಡಿದೆ. ಇದರ ಹೆಸರು 'ಪ್ರೀಮಿಯಮ್ ಫ್ರೈಡೇ' ಅಂತ. ಏನಪ್ಪಾ ಇದ್ರಿಂದ ಸಿಗೋ ಲಾಭ ಅಂದ್ರೆ, ಪ್ರತೀ ತಿಂಗಳಿನ ಕಡೇ ಶುಕ್ರವಾರ ನೌಕರರು ಎಷ್ಟು ಬೇಗ ಬೇಕಾದ್ರೂ ಆಫೀಸಿಂದ ಎದ್ದು ಹೋಗ್ಬೋದು. ಇದರ ಪ್ರಯೋಜ್ನನ ಪಡ್ಕೊಂಡಿರೋ ಮೊದಲ್ನೇ ವ್ಯಕ್ತಿ ಯಾರು ಗೊತ್ತಾ? ಜಪಾನಿನ ಹಣಕಾಸು ಸಚಿವ ಹಿರೋಶಿಗೆ ಸೆಕೋ. ಶುಕ್ರವಾರ ಬೇಗ ಕೆಲ್ಸ ಮುಗುಸ್ಕೊಂಡು ನೇರವಾಗಿ ಅವರು ಹೋಗಿದ್ದು ಕರ್ಲಿಂಗ್ ಆಟ ಆಡಕ್ಕೆ.

6. ಸಾವಿರಾರು ವರ್ಷಗಳಷ್ಟು ಹಳೇ ಇತಿಹಾಸ ಇರೋ ಕಂಪನಿಗಳು ಇಲ್ಲಿವೆ

ಮೂಲ

ಜಪಾನಲ್ಲಿ ಆಸ್ತಿ ಮತ್ತೆ ಹಕ್ಕಿನ ವಿಚಾರ ಅಂದ್ರೆ ಸಖತ್ ಸ್ಟ್ರಿಕ್ಟ್… ಅದಕ್ಕೆ ಅಲ್ಲಿ ತುಂಬ ಹಳೇ ಕಾಲದ ಕಂಪನಿಗಳು ಇನ್ನೂ ಇವೆ. ಹೋಷಿ ರಯೊಕನ್ ಅಂಥ ಹಳೇ ಹೋಟೆಲ್ಲಿದೆ. ಈ ಹೋಟೆಲ್ 718ನೇ ಇಸವಿಯಿಂದನೂ ಇದ್ಯಂತೆ… ಅಷ್ಟೇ ಅಲ್ಲ, 46 ತಲೆಮಾರುಗಳಿಂದ ಒಂದೇ ಕುಟುಂಬದವರು ಈ ಹೋಟೆಲ್ನ ನಡುಸ್ಕೊಂಡು ಬರ್ತಿದಾರೆ.

7. ಅದ್ಭುತವಾದ ವನ್ಯಜೀವಿ ಅಭಯಾರಣ್ಯಗಳಿವೆ

ಮೂಲ

ಜಪಾನಲ್ಲಿ ವನ್ಯಜೀವಿಗಳ್ ಸಂರಕ್ಷಣೆಗೆ ಸಾಕಷ್ಟು ಒತ್ತು ಕೊಟ್ಟಿದಾರೆ. ತುಂಬ ಚೆನ್ನಾಗಿರೋ ಅಭಯಾರಣ್ಯಗಳಿವೆ. ಅವುಗಳ್ ಪೈಕಿ, ಹೊಂಶು ದ್ವೀಪದಲ್ಲಿರೋ ಮಿಯಾಗಿ ಪ್ರೆಫೆಕ್ ಚ್ಯೂರ್ ಅನ್ನೋ ಜಾಗದಲ್ಲಿರೋ 'ಝಾವೋ ಫಾಕ್ಸ್ ವಿಲೇಜ್' ತುಂಬಾನೇ ಫೇಮಸ್ಸು. ಇಲ್ಲಿ ಗುಳ್ಳೆನರಿ ಅಂತಿವಲ್ಲಾ ಆ ವರ್ಗದ್ ನರಿಗಳು ತುಂಬಾನೇ ಇದೆ. ಯಾರಾದ್ರೂ ಹೋಗಿ ಇಲ್ಲಿ ಅವುಗಳ್ ಜೊತೆ ಆಟ ಆಡ್ಬೋದು.

8. ಮಿಂಚಿನ ವೇಗದಲ್ಲಿ ರಸ್ತೆ ರಿಪೇರಿಯಾಗತ್ತೆ

ಮೂಲ

2014ನೇ ಇಸವಿನಲ್ಲಿ ಜಪಾನಿನ ಫುಕುಒಕ ಅನ್ನೋ ಊರಿನ ರಸ್ತೆ ಒಂದ್ರಲ್ಲಿ, ಇದ್ದಕ್ಕಿದ್ದಂಗೇ ಆಳವಾದ ಗುಂಡಿ ಆಗೋಗುತ್ತೆ. ಅದು ಸುಮಾರು 45 ಅಡಿ ಆಳ ಇರತ್ತೆ. ಆ ರಸ್ತೆ ಕೆಳಗೆ ಸುರಂಗ ಮಾರ್ಗ ಮಾಡ್ತಿದಿದ್ರಿಂದ ಹೀಗಾಗಿದ್ದು ಅಂತ ತಿಳಿಯುತ್ತೆ. ಸಧ್ಯ ಯಾರ್ಗೂ ಯಾವ್ ತೊಂದ್ರೆನೂ ಆಗ್ಲಿಲ್ಲ. ನಂಬಕ್ಕೆ ಚೂರ್ ಕಷ್ಟ ಆಗತ್ತೆ ನಿಜ ಆದ್ರೆ ಅಂಥಾ ಆಳವಾಗಿ ಗುಂಡಿ ಬಿದ್ದ ರಸ್ತೆನ ಕೇವಲ 48 ಗಂಟೆಗಳಲ್ಲೇ ರಿಪೇರಿ ಮಾಡಿ ಮುಗುಸ್ತಾರೆ. ಹಾಗಂತ ಕಾಟಾಚಾರಕ್ಕೆ ತೇಪೆ ಹಾಕಲ್ಲ. ಚಿತ್ರದಲ್ಲಿದೆ ನೀವೇ ನೋಡಿ. ಎಲ್ಲಿ ಗುಂಡಿ ಬಿದ್ದಿತ್ತು ಅಂತ ಹುಡುಕ್ಬೇಕು ಹಾಗಿದೆ. ಪ್ರಪಂಚದಾದ್ಯಂತ ಜನ ಈ ಸುದ್ದಿ ಕೇಳಿ ದಂಗಾಗೋಗಿದ್ರು. ಆದ್ರೆ ಜಪಾನೋರ್ಗೆ ಇದು ತುಂಬಾ ಮಾಮೂಲಿ ವಿಷ್ಯ ಬಿಡಿ.

9. ಎಂಥಾ ಕಾಮಗಾರಿಯಾದ್ರೂ ತುಂಬ ಕಾಳಜಿಯಿಂದ ಮಾಡ್ತಾರೆ

ಮೂಲ

ಜಪಾನವ್ರು ತುಂಬ ಕಾಳಜಿಯಿಂದ ಕೆಲ್ಸ ಮಾಡ್ತಾರೆ ಅನ್ನೋದಕ್ಕೆ ಒಂದೊಳ್ಳೆ ಉದಾಹರಣೆ ಅಂದ್ರೆ ಚಿತ್ರದಲ್ಲಿ ಕಾಣ್ತಿರೋದು. ಸ್ವಲ್ಪ ಸರೀಗೆ ನೋಡಿ, ರಸ್ತೆ ಕಾಮಗಾರಿ ನಡೀತಿದೆ, ಆದ್ರೆ ರಸ್ತೆ ಬದಿನಲ್ಲಿ ನಿಂತಿರೋ ಯಾರ್ದೊ ಕಾರಿಗೆ, ಕೆಲ್ಸದೋರು ಪ್ಲಾಸ್ಟಿಕ್ ಕವರ್ ಹೊದ್ಸಿ, ತಮ್ ಕೆಲ್ಸ ಮಾಡ್ತಿದಾರೆ. ಕಾರಿಗೆ ಧೂಳು ಬೀಳ್ಬಾರ್ದು ಅಂತ ಈ ವ್ಯವಸ್ಥೆ. ಎಂಥಾ ಕಾಳಜಿ ಮತ್ತೆ ಮುಂಜಾಗ್ರತೆ ಅಲ್ವ.

10. ಇರೋವಷ್ಟೇ ಜಾಗನ ಸಮರ್ಥವಾಗಿ ಬಳಸ್ಕೊತಾರೆ

ಮೂಲ

ಜಾಪಾನೀಯರು ದೊಡ್ಡ ದೊಡ್ಡ ಮನೆ, ಬಂಗಲೆ ಎಲ್ಲಾ ಕಟ್ಕೊಳಲ್ಲ. ಚಿಕ್ಕ ಅಪಾರ್ಟ್ಮೆಂಟು, ಫ್ಲಾಟಲ್ಲೇ ವಾಸ ಮಾಡ್ತಾರೆ. ಹಾಗಂತ ಅವರ ಹತ್ರ ದುಡ್ಡಿಲ್ಲ ಅಂತಲ್ಲ, ಆಡಂಬರದ ಅವಶ್ಯಕತೆ ಇಲ್ಲ ಅನ್ನೋದನ್ನ ಅಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡಿದಾರೆ. ಹಾಗಾಗಿ, ಇರೋ ಜಾಗದಲ್ಲೇ ತಮಗ್ ಬೇಕಾಗಿರೊ ಎಲ್ಲಾ ವ್ಯವಸ್ಥೆನೂ ಮಾಡ್ಕೊತಾರೆ. ಉದಾಹರಣೆಗೆ ಸಿಂಕನ್ನ ಬಾಲ್ಕನಿನಲ್ಲಿಟ್ಕೋತಾರೆ, ಯಾಕಂದ್ರೆ ಅದ್ರಿಂದ ಬರೋ ನೀರು ಹೂವಿನ ಗಿಡಗಳಿಗೆ ಹೋಗ್ಲಿ ಅಂತ… ಸುಮ್ನೆ ನೀರು ಮೋರಿಗೆ ಹೋಗೋ ಬದ್ಲು ಇದು ಒಳ್ಳೆ ಐಡಿಯ ಅಲ್ವಾ?

11. ಸಣ್ಣ ಪುಟ್ಟದಕ್ಕೂ ಪ್ರಾಮುಖ್ಯತೆ ಕೊಡ್ತಾರೆ

ಮೂಲ

ಯಾವ್ ವಿಷ್ಯನೂ ಜಪಾನಿನ ಜನ ಹಗುರ್ವಾಗಿ ತೊಗೊಳಲ್ಲ. ಎಲ್ಲಾದ್ರಲ್ಲೂ ವಿಭಿನ್ನವಾಗಿರ್ಬೇಕು, ಗಮನ ಸೆಳಿಬೇಕು ಅನ್ನೋ ಮನೋಭಾವದೋರು ಅವರು. ಹಾಗಾಗಿ ಮ್ಯಾನ್ ಹೋಲ್ಗಳಿಗೆ ಮುಚ್ಚೋ ಮುಚ್ಚಳಗಳಮೇಲೂ ಕಲಾತ್ಮಕವಾಗಿ ಚಿತ್ರ ಬಿಡಿಸಿರ್ತಾರೆ, ಇವು ಮ್ಯೂಸಿಯಂನಲ್ಲಿರೋ ಕಲಾಕೃತಿಗೇ ಚಾಲೆಂಜ್ ಮಾಡ್ದಂಗಿರುತ್ತೆ.

12. ಸಮಯ ಉಳಿಸೋ ಬುಲೆಟ್ ರೈಲು ಇದೆ

ಮೂಲ

ಸಖತ್ ಸ್ಪೀಡಾಗಿ ಹೋಗೋ 'ಶಿಂಕನ್ಸೆನ್' ರೈಲುಗಳ್ಗೆ ಬುಲ್ಲೆಟ್ ರೈಲು ಅಂತ ಕರೀತಾರೆ. ಇವು ಗಂಟೆಗೆ 200 ಮೈಲಿ ಸ್ಪೀಡಲ್ಲಿ ಓಡ್ತಾವೆ ಹಾಗಾಗಿ ಪ್ರಯಾಣಿಕರು ಸರಿಯಾದ್ ಸಮಯಕ್ಕೆ ಸ್ಕೂಲು, ಕಾಲೇಜು, ಆಫೀಸು ತಲುಪ್ತಾರೆ. ಇದ್ರಿಂದಾಗಿ ಟ್ರಾಫಿಕ್ಕು, ಬಸ್ ಲೇಟು ಅನ್ನೋ ಕಾರಣ ಎಲ್ಲಾ ನಡಿಯಲ್ಲ ಇಲ್ಲಿ.

13. ಎಲ್ಲರ ಮೊಬೈಲ್ ಫೋನಲ್ಲೂ ಎಚ್ಚರಿಕೆ ಗಂಟೆ ವ್ಯವಸ್ಥೆ ಇದೆ

ಮೂಲ

ಜಪಾನಲ್ಲಿ ಸಾರ್ವಜನಿಕರಿಗೆ ಏನಾದ್ರು ತುರ್ತು ಮಾಹಿತಿ ಕೊಡ್ಬೇಕು ಅಂದ್ರೆ ಜೆ-ಅಲರ್ಟ್ ನ್ಯಾಷನಲ್ ಸಿಸ್ಟಂ ವ್ಯವಸ್ಥೆ ಇದೆ. ಇದ್ರಿಂದ ಮೀಡಿಯಾ ಮೂಲಕ ಮತ್ತೆ ಧ್ವನಿವರ್ಧಕಗಳ್ ಮೂಲಕ ಜನರನ್ನ ತುರ್ತು ಸಂದರ್ಭದಲ್ಲಿ ಎಚ್ಚರಿಸ್ತಾರೆ. ಇದರ ಜೊತೆಗೇ ಎಸ್ ಎಂ ಎಸ್ ಅಲರ್ಟ್ ವ್ಯವಸ್ಥೆ ಕೂಡ ಇದೆ. ಇದನ್ನ ಇತ್ತೀಚೆಗೆ ತಯಾರಾಗ್ತಿರೋ ಎಲ್ಲಾ ಫೋನಲ್ಲೂ ಅಳವಡಿಸ್ತಿದಾರೆ. ಏನಾದ್ರೂ ಎಮರ್ಜನ್ಸಿ ಸಂದರ್ಭ ಬಂದ್ರೆ, ಅಲ್ಲಿನ ಸ್ಥಳೀಯ ಅಧಿಕಾರಿಗಳು ಸುತ್ತಾಮುತ್ತಾ ಇರೋ ಜನರಿಗೆ ಕೇವಲ 4 ರಿಂದ 20 ಸೆಕೆಂಡ್ ಒಳಗೆ ಸಂದೇಶದ್ ಮೂಲಕ ಎಚ್ಚರಿಸೋ ವ್ಯವಸ್ಥೆ ಇದು. ಆಗಾಗ ಭೂಕಂಪಕ್ಕೆ ಗುರಿಯಾಗೋ ಜಪಾನಂಥ ದೇಶಕ್ಕೆ ಇದರ ಅವಶ್ಯಕತೆ ತುಂಬಾ ಇದೆ.

14. ಊಟ ತಿಂಡಿನಲ್ಲೂ ಸಾಕಷ್ಟು ವೈವಿಧ್ಯತೆ ಇದೆ

ಮೂಲ

ಜಪಾನೀಯರು ಬರೀ ದೇಶ ಕಟ್ಟೊ ಕೆಲ್ಸ ಮಾಡ್ತಿದಾರೆ ಅಂದ್ಕೊಂಡ್ರೆ ತಪ್ಪು ಕಣ್ರಿ. ಇಲ್ಲಿ ಎಷ್ಟೊಂದ್ ವೆರೈಟಿ ಊಟ ತಿಂಡಿ ಕೂಡ ಸಿಗತ್ತೆ ಗೊತ್ತಾ? ಓಕೊನೋಮಿಯೋಕಿ ಅನ್ನೋ ಸಾಂಪ್ರದಾಯಿಕ ಪ್ಯಾನ್ ಕೇಕಿಂದ ಹಿಡಿದು, ಸಕುರ ಅನ್ನೋ ಫ್ಲೇವರ್ಡ್ ಚಾಕೋಲೇಟ್ ವರ್ಗೆ ಎಲ್ಲಾ ಸಿಗತ್ತೆ. ಅದಕ್ಕಿಂತ ಹೆಚ್ಚಾಗಿ, ಲೇಗೊ ಆಟದ ಅಭಿಮಾನಿಗಳ್ಗೇ ಅಂತಾನೆ ಅದೇ ಹೆಸರಿನ ಒಂದು ಕ್ಯಾಫಟೇರಿಯಾ ಓಪನ್ ಮಾಡೋ ಪ್ಲ್ಯಾನ್ ಇದ್ಯಂತೆ. ಇಲ್ಲಿ ಸಿಗೋ ತಿಂಡಿಗಳೆಲ್ಲಾ ನೋಡಕ್ಕೆ ಲೆಗೋ ಬ್ಲಾಕ್ ಥರನೇ ಕಾಣತ್ತಂತೆ. ಯೋಚನೆ ಮಾಡ್ಬೇಡಿ, ತಿನ್ನಕ್ಕೆ ರುಚಿಯಾಗೇ ಇರತ್ತೆ. ಹಾಗಂತ ಅದನ್ನ ಕಟ್ಟಡ, ವಾಹನ ಎಲ್ಲಾ ಕಟ್ಟೋ ಆಟಕ್ಕೆ ತೊಗೊಂಡ್ ಹೋಗ್ಬಿಟ್ಟೀರ ಮತ್ತೆ.

15. ಕಲಾಕೃತಿಗಳ ಥರ ಕಾಣೋ ತರಕಾರಿ ಹಣ್ಣುಗಳು ಸಿಗತ್ತೆ

ಮೂಲ

ಜಪಾನಿಯರು ಮುಕಿಮೊನೊ ಅನ್ನೋ ಕಲೆನ ಕಂಡುಹಿಡ್ದಿದಾರೆ. ಅದೇನಪ್ಪಾ ಅರ್ಥ ಆಗ್ತಿಲ್ಲ ಅಂತಿದೀರಾ? ಇದು ತರಕಾರಿ ಮತ್ತೆ ಹಣ್ಣುಗಳ್ನ ತುಂಬಾ ಕ್ರಿಯೇಟಿವಾಗಿ ಕತ್ತರಿಸಿ ಪ್ರದರ್ಶನಕ್ಕೆ ಇಡೋ ಒಂದು ಕಲೆ. ಇಡೀ ದೇಶದಲ್ಲಿ ಪ್ರತಿಯೊಂದು ಭಾಗದಲ್ಲೂ ಈ ಮುಕಿಮೊನೊ ಕಲೆನ ಒಂದೊಂದು ರೀತಿ ಕಾನ್ಸೆಪ್ಟ್ ಇಟ್ಕೊಂಡು ಮಾಡ್ತಾರೆ. ಇದು ಮಾಡಕ್ಕೇ ಅಂತಾನೇ ನಾವು ಸಕ್ರೆ ಅಚ್ಚು ಮಾಡಕ್ಕೆ ಬಳಸ್ತೀವಲ್ಲ ಆ ಥರ ಅಚ್ಚೆಲ್ಲಾ ಇಟ್ಕೊಂಡಿದಾರೆ.

16. ಹುಳುಕಾಗಿರೋ ಹಲ್ಲನ್ನ ರಿಪೇರಿ ಮಾಡೋ ಟೂತ್ ಪೇಸ್ಟೂ ಸಿಗತ್ತೆ

ಮೂಲ

ಜಪಾನ್ ವಿಜ್ಞಾನಿ ಒಂದು ವಿಶೇಷವಾಗಿರೋ ಟೂತ್ ಪೇಸ್ಟ್ ಕಂಡು ಹಿಡ್ದಿದಾರೆ ಕಣ್ರಿ. ಇದ್ರಿಂದ ಹಲ್ಲುಜ್ಜಿದ್ರೆ, ಯಾವ್ದೇ ನೋವಿಲ್ದೇ ಹಲ್ಲಲ್ಲಿರೋ ಕುಳಿ, ಬಿರುಕು ಕಣ್ಮುಚ್ಚಿ ಬಿಡೋದ್ರಲ್ಲಿ ಸರಿಹೋಗುತ್ತೆ. ಇದು ಹೇಗ್ ಕೆಲ್ಸ ಮಾಡತ್ತಪ್ಪ ಅಂತ ನೋಡೋದಾದ್ರೆ, ಮೊದ್ಲು ಈ ಪೇಸ್ಟಲ್ಲಿರೋ ಒಂದು ವಸ್ತು, ಬಿರುಕನ್ನ ಚೂರೇ ಚೂರು ಕರಗೋಹಾಗ್ ಮಾಡತ್ತಂತೆ. ಸುಮಾರು 3 ನಿಮಿಷ ಆದ್ಮೇಲೆ ಆ ಪೇಸ್ಟ್ ಹರಳಿನ್ ಥರ ಗಟ್ಟಿಯಾಗಿ, ಅಂಟಿನ್ ಥರ ಆ ಬಿರುಕು ಅಥವ ಕುಳಿ ಮೇಲೆ ಗಟ್ಟಿಯಾಗಿ ಕೂರತ್ತೆ. ಹಲ್ಲಿನ್ ಡಾಕ್ಟ್ರಿಗೆ ಕೆಲ್ಸ ಕಮ್ಮಿಯಾಯ್ತಲ್ವ.

ಜಪಾನಿಯರು ಕಷ್ಟಜೀವಿಗಳು ಮಾತ್ರ ಅಲ್ಲ ಬುದ್ಧಿವಂತ್ರೂ ಹೌದು ಅಲ್ವಾ?