ಚಿಕ್ಕವರಿರೋವಾಗ ಈ ತರ ಮನೆ ಕಟ್ಬೇಕು ಆ ತರ ಡಿಸೈನ್ ಇರ್ಬೇಕು ಅಂತೆಲ್ಲಾ ಕನ್ಸಕಟ್ಕೊಂಡು ಸಿವಿಲ್ ಇಂಜಿನಿಯರ್ ಆದ್ಮೇಲೆ ಕೊನೆಗೆ ಕಟ್ಟೋದು ಮಾಮೂಲಿಯದ್ದೇ . ಆದ್ರೆ ಕೆಲ್ವೊಬ್ರು ಇಂಜಿನಿಯರ್ ಇರ್ತಾರೆ ಇವ್ರ ಕಟ್ಟೋ ಕಟ್ಟಡಗಳು ಸಾಮಾನ್ಯವಾಗಿರಲ್ಲ ಚಿತ್ರ ವಿಚಿತ್ರವಾಗಿರತ್ತೆ. ಅಂತಹದ್ದೇ ಒಂದಿಷ್ಟು ಕಟ್ಟಡಗಳನ್ನ ನಾವಿಲ್ಲಿ ಕೊಟ್ಟಿದ್ದೀವಿ ನೋಡಿ.

  1. ಬಾಸ್ಕೆಟ್ ಆಕಾರದ ಕಟ್ಟಡ ಇದಿರೋದು ಅಮೇರಿಕಾದ ಒಹಿಯೋನಲ್ಲಿ

2. ಗಿಟಾರ್ ಅಂತ ಬಾರ್ಸೋಕ್ ಹೋಗ್ಬೇಡಿ ಈ ಕಟ್ಟಡ ಇರೋದು ಅಮೇರಿಕಾದ ಟೆನ್ನೆಸೇಸಿಯಲ್ಲಿ

3. ನೋಡಿದ್ರೇನೆ ಭಯ ಆಗೋ ಈ ಕಟ್ಟಡದ ಹೆಸ್ರು ಹ್ಯಾಂಗ್ ನಾಗ್ ಇರೋದು ವಿಯೆಟ್ನಾಂಲ್ಲಿ

4. ಸುರಂಗ ಮಾರ್ಗದ ತರ ಇರೋ ಈ ಕಟ್ಟಡ ಇರೋದು ಅಮೇರಿಕಾದ ಟೆಕ್ಸಾಸ್ನಲ್ಲಿ

5. ತಲೆಕೆಳ್ಗಾಗಿರೋ ಈ ಮನೆಯಿರೋದು ಪೋಲಂಡ್ನಲ್ಲಿ

6. ಇದು ಬ್ಯಾಂಕ್ ಅಂದ್ರೆ ನೀವ್ ನಂಬ್ಲೇಬೇಕು ಈ ಬ್ಯಾಂಕ್ ಆಫ್ ಏಷ್ಯಾ ಕಟ್ಟಡ ಇರೋದು ಬ್ಯಾಂಕಾಕ್ನಲ್ಲಿ

7. ಬಣ್ಣ ಬಣ್ಣದ ತರ ತರದ ಕಟ್ಟಡ ಇರೋದು ನ್ಯೂಜಿಲ್ಯಾಂಡ್ನ ಒಟಾಗೋನಲ್ಲಿ

8. ಅನಾನಸ್ ಹಣ್ಣಿನಾಕಾರಾದ ಕಟ್ಟಡ ಇರೋದು ಕ್ವೀನ್ಸಲ್ಯಾಂಡ್ನ ನಂಬೋರ್ನಲ್ಲಿ

ನೋಡಿದ್ರಲ್ಲಾ ಸ್ನೇಹಿತರೇ ಮಾಮೂಲಿಯಾಗಿ ಕಟ್ಟೋದ್ಕಿಂತ ಎನೋ ಒಂದು ವಿಚಿತ್ರವಾಗಿ ಕಟ್ಟೋದಿದೆಯಲ್ಲಾ  ಅದು ಇಡೀ ಜಗತ್ತೇ ನಿಮ್ ಕಡೆ ತಿರ್ಗೋವಂತೆ ಮಾಡತ್ತೆ. ಯಾರ್ ಯಾರೆಲ್ಲ ಸಿವಿಲ್ ಎಂಜಿನಿಯರ್ ಇದ್ದೀರೋ ಅವ್ರಿಗೆಲ್ಲಾ ಈ ಲೇಖನವನ್ನ ಹಂಚ್ರಪ್ಪಾ .