18 ವರ್ಷದ ಏಡ್ರಿಯಾನ್ ಲೂಯಿಸ್ ನಾಲಿಗೆ ಉದ್ದ.

ಅಂತಿಂತ ಉದ್ದ ಅಲ್ಲ, ಬಾಯಿಗೆ ಬಂದಂಗೆ ಉದ್ದ. ನಾಲಿಗೆಯಿಂದ ಮೂಗು, ಗಲ್ಲ, ಮೊಣಕೈ, ಅಷ್ಟೇ ಯಾಕೆ, ಕಣ್ಣೂ ಮುಟ್ಟಿಬಿಡ್ತಾಳೆ ಈಕೆ. ಇವಳ ತಂದೆ ತಾಯಿ ಎಂದಿಗೂ ಹೀಗೆಲ್ಲ ಮಾಡಬೇಡ ಅಂತ ಕಟ್ಟುನಿಟ್ಟಾಗಿ ಇವಳ್ನ ಬೈದಿಲ್ಲ, ಹೆದರಿಸಿಲ್ಲ. ಅಷ್ಟೇ ಅಲ್ಲ, ಇವಳ ರಕ್ತದಲ್ಲೇ ಈ ಉದ್ದದ ನಾಲಿಗೆ ಹರೀತಿದೆಯಂತೆ.

longtonguevid.gif

ಪೂರ್ತಿ ಹೊರಗೆ ಹಾಕಿದ್ದಾಗ 4 ಇಂಚು. ಇದು ಈಗಿನ ಗಿನ್ನೆಸ್ ದಾಖಲೆ ಇಟ್ಕೊಂಡಿರೋ ನಿಕ್ ಸ್ಟೂಬರ್ಲ್ ಅನ್ನೋನ ನಾಲಿಗೆಗಿಂತ 0.1 ಇಂಚ್ ಉದ್ದ.

ಇವರಮ್ಮ ಹೇಳೋ ಪ್ರಕಾರ ಇವಳು ಚಿಕ್ಕೋಳಾಗಿದ್ದಾಗ ನಾಲಿಗೇನ ಮೂಗಿಗೆ ತಾಕಿಸೋದು ಗೀಕಿಸೋದು ಎಲ್ಲ ಮಾಡ್ತಿದ್ದಳಂತೆ. ಆದರೆ ಎಲ್ಲರೂ ಇವಳ ಥರ ಪಡ್ಕೊಂಡ್ ಬಂದಿರಬೇಕಲ್ಲ? ಈ ಕೆಳಗಿನ ವೀಡಿಯೋನಲ್ಲಿ ಈಕೆಯ ನಾಲಿಗೆ ಎಲ್ಲೆಲ್ಲಿ ಹರಿದಾಡುತ್ತೆ, ನೋಡಿ:

ಇದನ್ನ ನೋಡಿದ ಮೇಲೆ ‘ನಾಲಿಗೆ ಉದ್ದ ಹರಿಬಿಡಬೇಡ’, ‘ನಾಲಿಗೆ ಉದ್ದ ಆಯಿತು’, ‘ನಾಲಿಗೆ ಜಾಸ್ತ’ ಅಂತೆಲ್ಲ ಯಾರಿಗೂ ಬೈಬಾರದು ಅನ್ನಿಸುತ್ತೆ. ಅಲ್ವಾ?!