ಈಗೀನ ಕಾಲದಲ್ಲಿ ಬಾತ್ರೂಮ್ಗಳಿಗಿಂತ ಮೊಬೈಲ್ ಪೋನ್ಗಳೇ ಜಾಸ್ತಿಯಿದೆಯನ್ನೋದು ಸುಳ್ಳಲ್ಲ. ಎಲ್ಲರ ಕೈಯಲ್ಲೂ ಸ್ಮಾರ್ಟ್ಪೋನ್ಗಳು ಇದ್ದೆ ಇದೇ. ಈ ಸ್ಮಾರ್ಟ್ಪೋನ್ಗಳಿಗೆ ಬೆಲೆ ಬರೋದೇ ಅದ್ರಲ್ಲಿ ತರವಾರಿ ಆಪ್ಲಿಕೇಶನ್ಗಳನ್ನ ಹಾಕ್ದಾಗ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಸುಮಾರು ಹತ್ತುಲಕ್ಷ ಅಪ್ಲಿಕೇಶನಗಳಿವೆಯಂತೆ. ಈ ಹತ್ತು ಲಕ್ಷ ಅಪ್ಲಿಕೇಶನಗಳಲ್ಲಿ ಕೆಲ್ವೊಂದು ಅಪ್ಲಿಕೇಶನ್ಗಳನ್ನ ಗೂಗಲ್ಲೇ ಬ್ಯಾನ್ ಮಾಡಿ ಹಾಕಿದ್ದಾರೆ. ಇವ್ರ ಬಂಡವಾಳ ಗೊತ್ತಾಗತ್ತಂತ ಬ್ಯಾನ್ ಮಾಡಿದ್ದಾರೋ ಇಲ್ಲಾ ಇನ್ನೊಬ್ಬರ ಹೊಟ್ಟೆ ಮೇಲೆ ಹೊಡಿಬಾರ್ದಂತ ಗೂಗಲ್ ಈ ತರ ಮಾಡ್ತಾ ಇದೆಯಾ ಅನ್ನೋದು ಅಪ್ಲಿಕೇಶನ್ಗಳಲ್ಲೇ ಮುಳ್ಗೋಗಿರೋರ ಅಭಿಪ್ರಾಯ. ಹಾಗಾದ್ರೆ ಗೂಗಲ್ ಬ್ಯಾನ್ ಮಾಡಿರೋ ಕೆಲ್ವೊಂದು ಅಪ್ಲಿಕೇಶನ್ ಯಾವ್ದು ಅಂತ ಒಮ್ಮೆ ನೋಡೋಣ ಬನ್ನಿ. ಎಲ್ಲಾ ಅಪ್ಲಿಕೇಶನ್ ಬಗ್ಗೆ ನಾನ್ ಬರೀತಾ ಇಲ್ಲಾ ಕೆಲ್ವೊಂದನ್ನ ಮಾತ್ರ ಆಯ್ತಾ

1.ಎಮ್ ಐ ಯು ಐ ಮ್ಯೂಸಿಕ್ ಆಪ್

ಇದೊಂದು ಮ್ಯೂಸಿಕ್ ಆಪ್ಲಿಕೇಶನ್. ಕ್ಸಿಯೋಮಿ ಮೊಬೈಲ್ ಪೋನ್ ತಗೊಂಡಾಗ ಅದ್ರಲ್ಲಿ ಇರೋ ಆಪ್ಲಿಕೇಶನ್ ಇದು. ಈ ಆಪ್ಲಿಕೇಶನನ್ನ ಗೂಗಲ್ನವರು ತಮ್ಮದ್ರಲ್ಲಿ ಹಾಕೊಂಡ್ರೆ ಅವ್ರ ಹೊಟ್ಟೆ ಮೇಲೆ ಹೊಡ್ದಾಂಗೆ ಅಲ್ವಾ.

2.  ಅಮೇಜಾನ್ ಆಪ್ ಸ್ಟೋರ್

ಗೂಗಲ್ ಆಪ್ ಸ್ಟೋರ್ ಬರೋದ್ಕಿಂತ ಮುಂಚೆ ಚೈನಾದಲ್ಲಿ ಈ ಆಪ್ ಸ್ಟೋರನ್ನ ಬಿಡುಗಡೆ ಮಾಡಿದ್ರಂತೆ. ನಾವ್ ಎನ್ ಮಾರ್ತಾ ಇದ್ದಿವೋ ಇನ್ನೊಬ್ಬ ಕೂಡಾ ಅದ್ನೇ ಮಾರ್ತಾನೇ ಅಂದ್ರೆ ಅವ್ನಿಗೆ ನಮ್ ಮನೆಯಲ್ಲಿ ಜಾಗ ಕೊಡೋದು ಎಷ್ಟ್ ಸರಿ ನೀವೇ ಹೇಳಿ ?

3.  ಟ್ಯೂಬ್ ಮೇಟ್

ಕಷ್ಟ ಪಟ್ಟು ಜನ್ರು ಯೂಟ್ಯೂಬ್ನಲ್ಲಿ ತಾವ್ ಮಾಡಿರೋ ದ್ರಶ್ಯ ತುಣುಕಗಳನ್ನ ಹಾಕ್ತಾ ಇದ್ರು . ಅದ್ನ ಉಳಿದವ್ರು ನೆಟ್ ಉಪಯೋಗಿಸಿ ಪದೇ ಪದೇ ನೋಡಿ , ದೃಶ್ಯ ತುಣುಕನ್ನ ಹಾಕ್ದವನಿಗೆ ಖುಷಿ ಕೊಡ್ಸತಾ ಇದ್ರು , ಆದ್ರೆ ಈ ಅಪ್ಲಿಕೇಶನನ್ನ ನೀವ್ ಹಾಕ್ಕೊಂಡ್ರೆ ನಿಮ್ಮಲ್ಲೇ ಇಟ್ಕೊಂಡು ನೆಟ್ ಸಹಾಯ ಇಲ್ದೇ ನೋಡ್ಬಹುದು .

4. ಆಡ್ ಅವೇ

ಸಿನೆಮಾ ನೋಡುವಾಗ , ಮೊಬೈಲ್ನಲ್ಲಿ ಗೇಮ್ ಆಡೋವಾಗ ಜಾಹೀರಾತುಗಳನ್ನ ಕೊಡೋದು ಸಾಮಾನ್ಯ. ಈ ಜಾಹೀರಾತನ್ನ ಜನ್ರು ಪೂರ್ಣ ಪ್ರಮಾಣದಲ್ಲಿ ನೋಡ್ದೇ ಇದ್ರೂ ಈ ಜಾಹೀರಾತಿನಿಂದ್ಲೇ ಗೂಗಲ್ ತನ್ನ ಆದಾಯವನ್ನ ಹೆಚ್ಚಿಸಿಕೊಳ್ತಾ ಇರೋದು.  ಆದ್ರೆ ಈ ಆಡ್ ಅವೇ ಅಪ್ಲಿಕೇಶನ್ ಆನ್ನೋದು ಜಾಹೀರಾತನ್ನ ಸಂಪೂರ್ಣವಾಗಿ ಬರ್ದೇ ಇರೋ ಹಾಗೇ ಮಾಡತ್ತೆ. ಆದಾಯದ ಮೇಲೇನೇ ಹೊಡಿಯಾಕ್ ಬಂದ್ರೆ ಯಾರ್ ತಾನೇ ಸುಮ್ನೆ ಇರ್ತಾರೇ ?

5. ಸ್ನೇಸ್ 9 ಎಕ್ಸ್

ಇತ್ತೀಚಿಗಿನ ದಿನದಲ್ಲಿ ಕ್ಯಾಂಡಿ ಕ್ರಷ್ , ಬಬಲ್ ಶೂಟರ್ , ಸ್ನೈಪರ್ ಗೇಮ್ನಂತಹ ಅದೇಷ್ಟೋ ಆಟಗಳಿರಬಹುದು ಮೊಬೈಲ್ ಶುರುವಾದಾಗಿನಿಂದ ಇರೋ ಆ ಹಳೆಯ ಆಟಗಳು ಇವತ್ತಿಗೂ ಜನಪ್ರಿಯ . ಅಂತಹ ಆಟಗಳನ್ನ ಮತ್ತೆ ಪುನ: ನೀವ್ ಆಡ್ಬೇಕಂದ್ರೆ ಈ ಆಪ್ ತುಂಬಾನೇ ಸಹಾಯ ಆಗತ್ತೆ. ಈ ರೀತಿಯ ಆಪಲ್ಲಿ ಜನ ಪುನ: ಮುಳ್ಗೋದ್ರೆ ಬೇರೆ ಯಾವ್ದನ್ನ ಮೂಸ್ ನೋಡಲ್ಲ ಅಂತ ಗೂಗಲಗೂ ಗೊತ್ತು.

6 . ಗ್ರೂವ್ ಶಾರ್ಕ್

ಇದ್ರ ಬಗ್ಗೆ ಹೇಳ್ಬೇಕಂತಿಲ್ಲ. ಎಲ್ಲಾ ತರದ ಮ್ಯೂಸಿಕನ್ನ ನೀವ್ ಇದ್ರಲ್ಲಿ ಕೇಳಬಹುದು.

7 . ಟಿ ವಿ ಪೋರ್ಟಲ್

ಈ ಆಪ್ ಇವತ್ತಿಗೂ ಗೂಗಲ್ನಲ್ಲಿ ಇದ್ದಿದ್ದ್ರೆ ಅದೇಷ್ಟೋ ಟಿ ವಿಗಳು ಮೂಲೆ ಸೇರ್ತಾ ಇದ್ವು. ಯಾಕಂದ್ರೆ ಅಷ್ಟು ಸ್ವಚ್ಚವಾಗಿ ನೀವು ಕಾರ್ಯಕ್ರಮಗಳನ್ನ ನೋಡ್ಬಹುದಾಗಿತ್ತು. ಆದ್ರೆ ಗೂಗಲ್ ಇದ್ನ ತೆಗೆದ್ ಬಿಟ್ಟು ಟಿ ವಿ ಕಂಪನಿಯವರಿಗೆ ತುಂಬಾನೇ ಸಹಾಯ ಮಾಡಿದೆ.

ದಯವಿಟ್ಟು ಈ ಅಪ್ಲಿಕೇಶನಗಳನ್ನ ಗೂಗಲ್ನಲ್ಲಿ ಹುಡುಕಿ ಸುಮ್ನೇ ಟೈಮ್ ವೇಸ್ಟ್ ಮಾಡ್ಕೋಬೇಡಿ ಆಯ್ತಾ.