https://www.khabronmein.com/wp-content/uploads/2017/02/enhanced-buzz-10509-1387672561-14.jpg

ರಸ್ತೇಲಿ ನಾವು ಯಾವ್ದೋ ಯೋಚನೇಲಿ ಗಾಡಿ ಓಡಿಸೋವಾಗ ಯಾರಾದರೂ ದುರುಗುಟ್ಕೊಂಡು ನೋಡಿದ್ರೆ ಒಮ್ಮೆಲೆ ಏನೆಲ್ಲಾ ಪ್ರೆಶ್ನೆಗಳು ಮೂಡಬಹುದಲ್ವಾ? ಆದರೆ ಯಾಕ್ರೀ ಅಂತ ಕೇಳಕ್ಕಾಗುತ್ತಾ? ಆ ಕ್ಷಣದ ಪ್ರಶ್ನೆಗಳಿಗೆ ಉತ್ತರ ಕೊಡೋ ಪ್ರಯತ್ನ ನಾವು ಮಾಡಿದ್ದೀವಿ ನೋಡಿ.

1. ಸಿಗ್ನಲ್ ಕೊಡದೇನೇ ಎಡಕ್ಕೋ ಬಲಕ್ಕೋ ಗಾಡಿ ತಿರುಗಿಸ್ದಾಗ

ಆಮೇಲೆ ಗುದ್-ಗಿದ್ಬಿಟ್ರೆ ಏನ್ ಗತಿ ಆಲ್ವಾ?

ಮೂಲ

2. ಇಂಡಿಕೇಟರ್ ಹಾಕಿ ಸೀದಾ ಹೋದಾಗ 

ಬೆಂಗಳೂರಲ್ಲಿ ಗಾಡಿ ಓಡಿಸೋವಾಗ ಇದು ಸಹಜ ಬಿಡಿ.

ಮೂಲ

3. ಟ್ರಾಫಿಕ್ ಮಧ್ಯೆ ನಿಮ್ಮ ಗಾಡಿ ನಿಂತಾಗ ಅಥವಾ ನೀವು ಸ್ಲೋ ಮಾಡ್ದಾಗ 

ನಿಮ್ಮ ಗಾಡಿ ಸರಿಯಾಗಿದೆಯಾ ಮುಂಚೆನೇ ನೋಡಿಕೊಂಡ್ ಹೊರಡಿ, ರಸ್ತೆ ಮಧ್ಯೆ ನಿಂತ್ರೆ ಬೈಗುಳ ತಿನ್ಬೇಕಾಗುತ್ತೆ!

ಮೂಲ

4. ಬೆಳಿಗ್ಗೆ ಹೊತ್ತು ಲೈಟ್ ಆನ್ ಇದ್ದಾಗ 

ಇದ್ಯಾರಪ್ಪಾ ಬೆಳ್ಳಂಬೆಳಿಗ್ಗೆ ಲೈಟ್ ಹಾಕೊಂಡ್ ಗಾಡಿ ಓಡಿಸ್ತಿರೋ ಪುಣ್ಯಾತ್ಮ ಅನ್ನೋ ಯೋಚ್ನೆ ಬಂದೇ ಬರತ್ತೆ !

ಮೂಲ

5. ಫೋನಲ್ ಮಾತಾಡಿಕೊಂಡ್ ಗಾಡಿ ಓಡಿಸ್ತಿದ್ದಾಗ 

ದುರುಗುಟ್ಟೋರಿಗೆ ನೀವು ರಸ್ತೆ ಮೇಲೆ ಗಮನ ಹರಿಸ್ತಾ ಇಲ್ಲ ಅನ್ಸಿರಬೇಕು.  

ಮೂಲ

6. ರಾಂಗ್ ಸೈಡಲ್ಲಿ ಗಾಡಿ ಓಡಿಸ್ತಿರೋವಾಗ 

ಇಲ್ಲಾ… ರಸ್ತೇಲಿ ನೀವೊಬ್ಬರೇ ಇದ್ದ ಹಾಗೆ ಗಾಡಿ ಓಡ್ಸೋ ಅಭ್ಯಾಸದವರಿರಬೇಕು.

ಮೂಲ

7. ಎರ್ರಾ ಬಿರ್ರಿ ಗಾಡಿ ಓಡಿಸ್ತಿದ್ದಾಗ 

ಓಡಿಸೋ ಭರಾಟೇಲಿ ಗಾಡೀಲಿ ಮ್ಯೂಸಿಕ್ ಜೋರಾಗಿ ಹಾಕಿದ್ದರೂ ಜನ ದುರುಗುಟ್ಟುತ್ತಾರೆ. 

ಮೂಲ

8. ಹುಡುಗಿ ಗಾಡಿ ಓಡಿಸ್ತಿದ್ರೆ ಅಥವಾ ನಿಮ್ಮ ಪಕ್ಕ ಹುಡುಗಿ ಕೂತಿದ್ದಾಗ 

ಚಂದದ ಹುಡುಗಿಯರನ್ನ ನೋಡದೇ ಇರೋಕ್ಕಾಗತ್ತಾ ಹೇಳಿ… 

ಮೂಲ

9. ನೀವೋ ಅಥವಾ ನಿಮ್ಮ ಕಾರೋ ನೋಡೋರಿಗೆ ಚನ್ನಾಗಿ ಕಂಡಾಗ 

ಅಥವಾ ತುಂಬಾ ಖರಾಬಾಗಿದ್ದರೂ ದುರುಗುಟ್ಟುತ್ತಾರೆ!

ಮೂಲ

10. ನೀವು ಪರಿಚಯದವರ ಹಾಗೆ ಕಂಡಾಗ 

ಅವರ ಪರಿಚಯಸ್ತರೋ ಅಲ್ವೋ ಅಂತ ಖಚಿತ ಪಡಿಸಿಕೊಳ್ಳೋಕೆ ನೋಡಿರಬಹುದು ಬಿಡಿ

ಮೂಲ

ಇದ್ಯಾವ್ದೂ ಅಲ್ದೇ ಹೋದ್ರೆ, ಅವರ ಗ್ರಹಚಾರ ಕೆಟ್ಟಿರ್ಬೇಕು ಬಿಡಿ! ಆಮೇಲೆ ಬೈಯ್ಯೋಕೆ ಹೋಗಬೇಡಿ ಪಾಪ!