https://s4.scoopwhoop.com/anj/s/6b70d686-b31f-4bd2-ae1d-c0b332ceb370.jpg

ಯಾವ್ದಾದ್ರೂ ದೇಶಕ್ಕೆ ಪ್ರವಾಸಕ್ಕಂತ ಹೋದಾಗ ಅಲ್ಲಿರೋ ಕೆಲ್ವೊಂದು ಪ್ರಸಿದ್ಧ ಸ್ಥಳಗಳನ್ನ ನೋಡ್ಕಂಡ್ ಬರ್ತೇವೇ ಹೊರ್ತು ಗಲ್ಲಿ ಗಲ್ಲಿ ತಿರುಗಿ ಯಾರ್ಗೂ ಅಷ್ಟಾಗಿ ಗೊತ್ತಿಲ್ದೇ ಒರೋ ಗ್ರಾಮೀಣ ಪ್ರದೇಶದ ಸ್ಥಳಗಳನ್ನ ನೋಡೋಕೆ ಹೋಗೋದು ಸ್ವಲ್ಪ ವಿರಳಾನೇ. ಗ್ರಾಮೀಣ ಪ್ರದೇಶದ ಸ್ಥಳಗಳು ಅಷ್ಟೊಂದು ಐಷಾರಾಮದಿಂದ ಕೂಡಿರದೇ ಹೋದ್ರೂ ಅದ್ರಿಂದ ಕಣ್ಣು, ಮನಸ್ಸಿಗಂತೂ ಖುಷಿ ಸಿಗತ್ತೆ . ಭಾರತ ಹೇಳಿ ಕೇಳಿ ಹಳ್ಳಿಗಳ ದೇಶ. ಇಲ್ಲಿನ ರಸ್ತೆ , ಗೋಡೆ , ಗದ್ದೆ , ಮರ, ಗಿಡ, ಜನ… ಎಲ್ಲಾ ಯಾವ ಪ್ರೇಕ್ಷಣೀಯ ಸ್ಥಳಗಳಿಗಿಂತ ಕಮ್ಮಿಯಿಲ್ಲ. ಇನ್ ಸ್ಟಾಗ್ರಾಂ ನಲ್ಲಿ " ಸ್ಟ್ರೀಟ್ಸ್  ಆಫ್ ಇಂಡಿಯಾ " ಅನ್ನೋ ಅಕೌಂಟಲ್ಲಿ ಇಂತಹದ್ದೇ ಹಲವು ಚಿತ್ರಗಳನ್ನ ನೀವ್ ನೋಡ್ಬೋದು. ಒಂದಿಷ್ಟು ಆಯ್ದ ಚಿತ್ರಗಳನ್ನ ಅಂತೆಕಂತೇಲಿ ನಿಮಗಾಗಿ ಕೊಟ್ಟಿದ್ದೀವಿ ನೋಡಿ, ಖುಷಿಪಡಿ. 

1. ಗೋಡೆ ಕಲರ್ರೂ, ಪರ್ದೆ ಕಲರ್ರೂ ಚೆನ್ನಾಗ್ ಮ್ಯಾಚಾಗಿದೆ. ಈ ಚಿತ್ರದ ಅಂದ ಹೆಚ್ಸೋಕೆ ಈ ಗುಜರಾತಿನ ಹುಡ್ಗ ಒಳ್ಳೆ ಹೀರೋ ತರ  ಜಂಪ್ ಬೇರೆ ಮಾಡಿದ್ದಾನೆ.

 

2. ಮುಳುಗೋ ಸೂರ್ಯ , ಬೋಳು ಮರ , ಸುತ್ತಲೂ ಗದ್ದೆ… ಈ ಅಂದ ನೋಡ್ಬೇಕಾದ್ರೆ ನೀವ್ ಪಂಜಾಬಿಗೇ ಹೋಗ್ಬೇಕು. 

3. ಕೊಲ್ಕತ್ತಾಲಿ ತೆಗ್ದಿರೋ ಈ ಫೋಟೋ ನೋಡಿದ್ರೆ ' ಹಿರಿಯರೇ ಇರಲಿ ಕಿರಿಯರೇ ಇರಲಿ ಭೇದವೇ ತೋರದು ' ಅನ್ನೋ ಸಾಲು ನೆನಪಾಗ್ತಾ ಇದೆ.

4. ಗೋಡೆ ಹಳೆಯದಾದಷ್ಟೂ ಅದರ ಅಂದ ಹೆಚ್ಚತ್ತೇ ಹೊರತು ಮಾಸಲ್ಲಾರಿ. ಲಕ್ನೋಲಿ ತೆಗ್ದಿರೋ ಈ ಫೋಟೋನೇ ಅದಕ್ಕೆ ಸಾಕ್ಷಿ.

5. ಕಲಾವಿದನಿಗೆ ಕ್ಯಾನ್ವಾಸ್ ಆದ್ರೇನೂ, ಗೋಡೆ ಆದ್ರೇನೂ? ಯಾವ್ದಕ್ಕೆ ಬೇಕಾದ್ರೂ ಜೀವ ಕೊಡೋ ಶಕ್ತಿ ಅವ್ನಲ್ಲಿದೆ. ಡೆಲ್ಲೀಲಿ ತೆಗ್ದಿರೋ ಫೋಟೋ.

6. ಮಹಾರಾಷ್ಟ್ರದ ನೇರಲ್ ಯಾವ್ ಫಾರಿನ್ಗೂ ಕಮ್ಮಿ ಇಲ್ಲ!

7. ಯಮುನಾ ಘಾಟ್ ತರದ ಒಂದು ಸ್ಥಳಕ್ಕೆ ಹೋದ್ರೆ ಮನಸ್ಸಿಗೆ ಶಾಂತಿ ಸಿಗೋದು ಖಂಡಿತ!

8. ಹೆಣ್ಣನ್ನ ಪೂಜೆ ಮಾಡೋ ದೇಶದಲ್ಲಿ ಯಾಕಿಷ್ಟು ಅತ್ಯಾಚಾರ ಆಗ್ತಿದೆ ಅಂತ ಈ ಅಸ್ಸಾಂ ಹುಡ್ಗಿ ಕೇಳ್ತ ಇರ್ಬಹುದಾ? 

9. ಯಾವ ಚಿಂತೇನೂ ಈ ವಾರಣಾಸಿ ಸಾಧುಗಳ ಹತ್ರ ಸುಳಿಯಲ್ಲ ಬಿಡಿ… ಏನಾದ್ರೂ ಬಂದ್ರೆ ಅದು ನೆಮ್ಮದಿ ಮಾತ್ರ!

10. ಆಲಪ್ಪಿಯ ಈ ಪೋರನ್ನ ನೋಡಿದ್ರೆ ' ದೋಣಿ ಸಾಗಲಿ ಮುಂದೆ ಹೋಗಲಿ ' ಅನ್ನೋ ಪದ್ಯದ ಜೊತೆ ಯಾಕೋ ವಿಶ್ವೇಶ್ವರಯ್ಯನೋರ್ ನೆನಪೂ ಆಗ್ತಿದೆ!

11. ಸೂರ್ಯ ರಶ್ಮಿ ಈ ತರ ದಾಟ್ದೇ ಹೋಗ್ದಿದ್ರೆ ಬಿಕಾನೇರಲ್ಲಿರೋ ಈ ಮಹಲಿನ ಸೌಂದರ್ಯನಾ ನಾವ್ ಬಣ್ಣದಲ್ಲೇ ಅಳಿಬೇಕಾಗ್ತಿತ್ತು!

12. ಸ್ಕ್ರೀನ್ ಸೇವರನ್ನ ನಾವು ಅಂತರ್ಜಾಲದಲ್ಲಿ ನೋಡಿದ್ದೇವೆ. ಆದನ್ನ ನಿಜವಾಗ್ಲೂ ನೋಡ್ಬೇಕಾದ್ರೆ ಮಹಾರಾಷ್ಟ್ರದ ಈ ನದಿ ತಟಕ್ಕೇ ಬರ್ಬೇಕು!

13. ' ತುಂತುರು ಅಲ್ಲಿ ನೀರ ಹಾಡು ' ಅಂತ ಕೊಲ್ಕತ್ತಾದ ಡ್ರೈವರ್  ಹಾಡ್ಕೊಂಡ್ ಬರ್ತಾ ಇದ್ದಾನೆ ಅನ್ಸತ್ತೆ!

14. ಡೆಲ್ಲಿಯ ಸಪ್ದರ್ ಜಂಗ್ ಟಾಂಬ್ ರಸ್ತೇಲಿರೋ ಗೋಡೇನೇ ಇಷ್ಟ್ ಸುಂದರವಾಗಿದ್ರೆ, ಈ ಸ್ಥಳದಲ್ಲಿರೋ ಅರಮನೆ ಹೇಗಿದ್ದಿರ್ಬೋದು ಅಂತ ಒಂದ್ಸತಿ ಯೋಚ್ನೆ ಮಾಡಿ!

15. ಯಾರೋ ಆಕಾಶದ ತುಂಬಾ ಕಪ್ಪು ಚುಕ್ಕಿ ಇಟ್ಟಿದ್ದಾರೆ ಅನ್ಕೊಬೇಡಿ. ಚೆನ್ನೈ ಮರೀನಾ ಬೀಚಿನ್ ಹಕ್ಕಿಗಳೆಲ್ಲಾ ಮನೆ ಸೇರ್ತಾ ಇದ್ದಾವೆ.

16. ಚಳಿಗಾಲದ ಸಮಯದಲ್ಲಿ ಈ ತರ ಬಿಸಿಲು ಬಂದ್ರೆ ಅಲ್ಲೇ ನಿಂತ್ಕೊಳ್ಬೇಕು ಅನ್ಸತ್ತೆ ಅಲ್ವಾ? ನೀವೇನೇ ಹೇಳಿ… ಪಾಂಡಿಚೆರಿ ರಸ್ತೆಗಳ ಅಂದಾನೇ ಅಂದ!

17. ಲಡಾಕಿನ ಈ ಮಕ್ಕಳ ಮುಗ್ಧ ನಗು ನಮ್ಮಲ್ಲಿರೋ ಎಲ್ಲಾ ನೋವನ್ನೂ ಮರೆಸ್ಬಿಡತ್ತೆ ಅಲ್ವಾ?  

18. ಯಾರೂ ಕೂಡಾ ನವಿಲು ಮತ್ತು ಸೂರ್ಯನ್ನ ಇಷ್ಟ್ ಚೆನ್ನಾಗಿ ಜೊತೇಲಿ ಸೆರೆಹಿಡ್ದಿಲ್ಲಾ ಬಿಡಿ. ತೆಲಂಗಾಣಾಲಿ ಸಿಕ್ಕಿರೋ ಅಪರೂಪದ ಫೋಟೊ ಇದು.

19. ಈ ಚಿತ್ರ ನೋಡಿ ಕಾಶ್ಮೀರದ ಈ ರಸ್ತೇಲಿ ಒಂದ್ ಲಾಂಗ್ ರೈಡ್ ಹೋದ್ರೆ ಅದ್ರ ಮಜಾನೇ ಬೇರೆ ಅನ್ಸತ್ತೆ. ಅಲ್ಲಿಗ್ ಖುದ್ದಾಗಿ ಹೋದಾಗ್ಲೇ ಗೊತ್ತಾಗೋದು ಅದರ ಸಂಕಟ!

20. ಕಾಶೀಲಿರೋ ಈ ನಾಯಿಗ್ ಕೂಡಾ ತಲೆದಿಂಬು ಬೇಕು!

ಈ ಚಿತ್ರಗಳು ಅಷ್ಟ್ ಬೇಗ ಮನಸ್ಸಿಂದ ಅಳಿಸಿ ಹೋಗಲ್ಲ ಬಿಡಿ. ಒಂದೊಂದೂ ಅಷ್ಟ್ ಚನ್ನ!

 ಮೂಲ