http://dailyasianage.com/library/1494789366_3.jpg

ಸಂಬಂಧ ಅನ್ನೋದು ತುಂಬಾನೇ ಸೂಕ್ಷ್ಮ. ಎಷ್ಟು ಎಚ್ಚರಿಕೆ ವಹಿಸಿದ್ರೂ, ಎಷ್ಟೋ ಸಲ ಮುಗ್ಗರಿಸುತ್ತೀವಿ. ಆದ್ರೆ ಅದರ ಸತ್ಯಾಸತ್ಯತೆಗಳನ್ನ ತಿಳ್ಕೊಂಡ್ರೆ ನಮಗೇ ಒಳ್ಳೇದು. ತಪ್ಪು ದಾರಿ ಹಿಡಿಯಲ್ಲ. ಅದೇನು ಅಂತ ನೋಡಣ.

1. ನೀವು ಯಾವುದೇ ತಪ್ಪು ಮಾಡ್ತಿಲ್ಲ ಅಂದ್ರೆ ನೀವು ರಿಸ್ಕ್ ತೊಗೊಳ್ತಿಲ್ಲ ಅಂತ

ಏನಪ್ಪಾ ಇವ್ರು ತಪ್ಪು ಮಾಡಬೇಕು ಅಂತಿದ್ದಾರೆ, ಅಡ್ಡ ದಾರಿ ಹಿಡಿದ್ರೆ ಸಂಬಂಧ ಏನಾಗ್ಬೇಡ ಅಂತ ಯೋಚ್ನೆ ಬಂತಾ? ನಾವು ಹೇಳ್ತಿರೋದು ನೀವು ಅಡ್ಡ ದಾಟಿ ಹಿಡಿಬೇಕು ಅಂತ ಅಲ್ಲ,  ಸಂಬಂಧಗಳ ಚೌಕಟ್ಟಲ್ಲಿ ನಿಮ್ಮ ಸಂಬಂಧ ಚೆನ್ನಾಗಿರಕ್ಕೆ ಏನು ಮಾಡ್ಬೇಕೊ ಅದರ ಬಗ್ಗೆ. ಅಷ್ಟೇ ಅಲ್ಲ ನಿಮ್ಮ ತಪ್ಪಿಂದ ಆಗೋ ಯಾವುದೇ ಪರಿಣಾಮದ ಜವಾಬ್ದಾರಿ ನೀವು ತೊಗೊಳಕ್ಕೆ ರೆಡಿ ಇರ್ಬೇಕು. ತಪ್ಪಿಂದ ಕಲಿತ್ಕೋಬೇಕು, ಮುಂದುವರಿಬೇಕು. ತಪ್ಪೇ ಮಾಡಿಲ್ಲ ಅಂದ್ರೆ ಮುಂದುವರಿಯೋದು ಹೇಗೆ? ಈ ತಪ್ಪು ನಿಮಗೆ ಬದಲಾವಣೆ, ಬೆಳವಣಿಗೆ ಬಗ್ಗೆ ಹೇಳ್ಕೊಡುತ್ತೆ. ತಪ್ಪು ಮಾಡಿದಾಗ ಒಬ್ಬರೊನ್ನೊಬ್ಬರು ಅರ್ಥ ಮಾಡ್ಕೊಂಡು ಜೊತೆಲಿದ್ದಾಗ್ಲೇ ನಿಮ್ಮ ಸಂಬಂಧ ಗಟ್ಟಿಯಾಗೋದು.

ಮೂಲ

2. ಜೀವನದಲ್ಲಿ ಕೊನೆ ತನಕ ಬರೋ ಸಂಬಂಧಗಳು ಬೆಳಿಯಕ್ಕೆ ಸಮಯ ಹಿಡಿಯತ್ತೆ ಅಂತ ನೆನಪಿಟ್ಕೊಳಿ

ಕೆಲವೊಬ್ರು ಸಂಬಂಧಗಳು ತಾನಾಗೇ ಬೆಳೀಬೇಕು ಅಂತಾರೆ. ಯಾವಾಗ ಒಬ್ಬರ ಜೊತೇನೆ ಇದ್ದು , ಯಾವಾಗ್ಲೂ ನೀವೇ ರಾಜಿಯಾಗ್ಬೇಕೋ, ಆಗ ಈ ಸಂಬಂಧ ಸ್ವಾಭಾವಿಕ ಅಲ್ಲ ಅನ್ಸುತ್ತೆ. ಇದು ಮನುಷ್ಯನ ಸಹಜ ಸ್ವಭಾವಕ್ಕೆ ವಿರುದ್ಧ ಅನ್ಸುತ್ತೆ. ಇಂತ ವಿಷಯಗಳು ಸರಿ ಹೋಗಿ ನಿಮ್ಮೆ ನಿರೀಕ್ಷೆಗೆ ತಕ್ಕ ಪ್ರತಿಫಲ ಸಿಗ್ಬೇಕು ಅಂದ್ರೆ ಸ್ವಲ್ಪ ಟೈಮ್ ಬೇಕಾಗುತ್ತೆ, ನೀವು ತಾಳ್ಮೆಯಿಂದ ಇರ್ಬೇಕು ಅಷ್ಟೇ.

3. ಸಂಬಂಧಗಳು ಗಟ್ಟಿಯಾಗೋದಕ್ಕೆ ಕಷ್ಟಪಡಿ

ಯಾವುದು ತಾನೇ ಬೆಲೆ ಇಲ್ದೆ ಸಿಗುತ್ತೆ? ಒಂದು ಸಂಬಂಧ ಸರಿಯಾಗಿರಕ್ಕೆ ಯಾರು ಇಷ್ಟೆಲ್ಲಾ ಕಷ್ಟ ಪಡ್ತಾರೆ ಅಂತ ಕೆಲವರು ಸುಮ್ನಿರ್ತಾರೆ. ಕೆಲವರಂತೂ ಮೊದಲನೇ ಪ್ರಯತ್ನದಲ್ಲೇ ಕೈ ಬಿಟ್ಟು ಸುಮ್ನಾಗ್ತಾರೆ. ಹಾಗಿದ್ರೆ ಕಷ್ಟ ಪಡ್ಬೇಕು ಅಂದ್ರೆ ಏನು? ಇದು ಎಲ್ಲರಿಗೂ ಒಂದೇ ತರ ಇರಲ್ಲ. ಬೇರೆ ಬೇರೆ ಜೋಡಿಗೆ ಬೇರೆ ಬೇರೆ ತರ ಇರುತ್ತೆ. ಉದಾಹರಣೆಗೆ ನಿಮ್ಮ ಎದುರಿಗೆ ಸರಿಯಾದ ದಾರಿನೂ ಇಲ್ದೆ ಯಾವ್ದೋ ದೊಡ್ಡ ಬೆಟ್ಟ ಇದ್ರೆ ಒಂದು ಇದನ್ನ ಯಾರು ಹತ್ತುತ್ತಾರೆ ಅಂತ ಸುಮ್ನಾಗ್ತೀರಿ, ಹತ್ತಲೇ ಬೇಕು ನಮ್ಮ ಗುರಿ ಸೇರ್ಬೇಕು ಅನ್ನೋ ಮನಸಿದ್ರೆ ಎಷ್ಟೇ ಕಷ್ಟ ಪಟ್ಟಾದ್ರೂ ಹೋಗೋದಕ್ಕೆ ಬೇಕಾಗಿರೋ ದಾರಿ ಮಾಡ್ಕೊಂಡು ಹೋಗೆ ಹೋಗ್ತೀರಿ. ಸಂಬಂಧದಲ್ಲೂ ಹಾಗೆ… ನಿಮ್ಮ ಮುಂದೆ ಇರೋ ಮನುಷ್ಯರನ್ನ ನೋಡ್ಕೊಂಡು ಎಷ್ಟು ಕಷ್ಟ ಪಡ್ಬೇಕು ಅನ್ನೋದನ್ನ ನೋಡಿ ಹೆಜ್ಜೆ ಇಡಿ.

ಮೂಲ

4. ನಿಮ್ಮ ಸಂಗಾತಿ ಜೊತೆ ಸಾಧ್ಯವಾದಷ್ಟೂ ಜಾಸ್ತಿ ಮಾತಾಡಿ

ನಮ್ಮ ಸಂಗಾತಿ ಪರಿಚಯ ಆದ ತಕ್ಷಣ ನಮಗೆ ಅವರ ಬಗ್ಗೆ ಎಲ್ಲ ಗೊತ್ತು ಅಂತ ಸುಮ್ನಾಗೋದೇ ಹೆಚ್ಚು. ಅವರಿಗೆ ಇದು ಇಷ್ಟ, ಅದು ಇಷ್ಟ, ಅದು ಇಷ್ಟ ಆಗಲ್ಲ ಇದು ಇಷ್ಟ ಆಗಲ್ಲ ಅಂತ ನಾವೇ ನಿರ್ಧಾರ ಮಾಡ್ತೀವಿ. ನಿಜ ಏನಪ್ಪಾ ಅಂದ್ರೆ ಒಬ್ಬ ಮನುಷ್ಯನ ಬೇಕು ಬೇಡಗಳು ಆಗಾಗ ಬದಲಾಗ್ತಾ ಇರುತ್ತೆ. ನೆನ್ನೆ ಇಷ್ಟ ಆಗಿದ್ದು ಇವತ್ತು ಇಷ್ಟ ಆಗ್ದೇ ಇರ್ಬಹುದು. ಹಾಗಾಗಿ ಅವಕಾಶ ಸಿಕ್ಕಿದಾಗಲೆಲ್ಲ ಮಾತಾಡಿ, ಅವರ ಬಗ್ಗೆ ತಿಳ್ಕೊಳಿ. ಅದೇ ನೀವು ಕೇಳೋದಕ್ಕೆ ಹಿಂದೆ ಮುಂದೆ ನೋಡಿದ್ರೆ ನಿಮಗೆ ಗೊತ್ತಾಗೋದು ಇಲ್ಲ, ಸಿಗೋದೂ ಇಲ್ಲ. ಹೀಗೆ ಮಾತಾಡೋದು, ಜೊತೆಯಲ್ಲಿ ಸಮಯ ಕಳೆಯೋದ್ರಿಂದ ನಿಮಗೆ ಒಬ್ಬರೊನ್ನಬ್ಬರು ಚೆನ್ನಾಗಿ ಅರ್ಥ ಮಾಡ್ಕೊಳದಕ್ಕೆ, ಚೆನ್ನಾಗಿ ತಿಳ್ಕೊಳೋದಕ್ಕೆ ಅವಕಾಶ ಸಿಗುತ್ತೆ. ಸಂಬಂಧ ಗಟ್ಟಿ ಆಗಕ್ಕೆ ಇದು ಬೇಕೇ ಬೇಕು.

5. ಯಾವ್ದೇ ಮಾತು ಶುರು ಮಾಡಿದ್ರೂ ಅರ್ಧಕ್ಕೆ ನಿಲ್ಲಿಸ್ದೆ ಪೂರ್ತಿ ಮಾಡಿ

ಕೆಲವೊಬ್ರು ವಾದ ಶುರು ಮಾಡ್ತಾರೆ, ಆದ್ರೆ ಅದು ಅತಿಯಾಗ್ತಿದೆ ಅಂದಾಗ ಪೂರ್ತಿ ಮಾಡದೇ ಅರ್ಧಕ್ಕೆ ನಿಲ್ಲಿಸ್ತಾರೆ. ಆದ್ರೆ ಹೀಗೆ ಅರ್ಧಕ್ಕೆ ಬಿಟ್ರೆ ಮತ್ತೆ ಆ ಕಡೆ ನೋಡೋದು ಇಲ್ಲ, ಆ ಸಮಸ್ಯೆ ಯಾವತ್ತೂ ಹಾಗೇ ಉಳಿಯುತ್ತೆ. ಪರಿಹಾರ ಅನ್ನೋದೇ ಸಿಗಲ್ಲ. ಬದಲಿಗೆ ಸಿಟ್ಟು, ದ್ವೇಷ, ಕೋಪ, ಬೇಜಾರು ಎಲ್ಲ ಹೆಚ್ಚಾಗುತ್ತೆ. ಈ ವಾದ ವಿವಾದದಿಂದ ಅರ್ಧಕ್ಕೆ ದೂರ ಹೋದ್ರೆ, ಮುಂದೆ ಯಾವಾಗ್ಲಾದ್ರೂ ವಾಪಾಸ್ ಬಂದ್ರೂ ಯಾರು ಇರೋದಿಲ್ಲ.

ಮೂಲ

6. ಸಾಧ್ಯವಾದಷ್ಟೂ ಎಲ್ಲಾದ್ಕೂ ಒಪ್ಕೊಳಿ

ಇದರ ಹಿಂದಿನ ಉದ್ದೇಶ ಒಳ್ಳೇದೇ ಅನ್ಕೊಂಡು ಸಾಧ್ಯವಾದಷ್ಟೂ ಎಲ್ಲಾದ್ಕೂ. ಅಬ್ಬಬಾ ಅಂದ್ರೆ ಏನಾಗುತ್ತೆ? ನಿಮಗೆ ಇಷ್ಟ ಇಲ್ದೆ ಇದ್ರೂ ಒಪ್ಪಿಕೋಬೇಕಾಯ್ತು ಅಂತ ಸ್ವಲ್ಪ ಬೇಜಾರಾಗಬಹುದು. ಆದ್ರೆ ಇದು ನಿಮ್ಮ ಮುಂದಿನ ಬೆಳವಣಿಗೆಗೆ ಅಡಿಪಾಯ. ಎಷ್ಟು ಹೆಚ್ಚು ಒಪ್ಕೋತಿರೋ ಅಷ್ಟು ನಿಮ್ಮ ಸಂಬಂಧ ಗಟ್ಟಿ ಆಗಕ್ಕೆ ಅವಕಾಶ ಸಿಗುತ್ತೆ.

7. ಬೇರೆಯೋರ್ನ ಪ್ರೀತಿ ಮಾಡ್ತಿರೋ ಮಾತ್ರಕ್ಕೆ ನಿಮ್ಮತನ ಬಿಡ್ಬೇಡಿ

ನೀವು ಪ್ರೀತೀಲಿ ಬಿದ್ದಮಾತ್ರಕ್ಕೆ, ನಿಮ್ಮ ಪರ್ಸನಲ್ , ಸ್ವಂತ ಜೀವನದ ಕಡೆ ಗಮನ ಕೊಡಬಾರ್ದು ಅಂತ ಏನಿಲ್ಲ. ನಿಮ್ಮಿಬ್ರಿಗೂ ನಿಮ್ಮದೇ ಆದ ಜೀವನ ಇರುತ್ತೆ. ನಿಮ್ಮ ಕೆಲಸ, ಸ್ವಂತ ಸಮಯದ ಬಗ್ಗೆನೂ ಗಮನ ಕೊಡ್ಬೇಕು. ನಿಮ್ಮ ಸ್ವಂತಕ್ಕಾಗಿ ನೀವು ಬ್ಯುಸಿಯಾಗಿರೋದ್ರಲ್ಲಿ ತಪ್ಪೇನಿಲ್ಲ.

ಮೂಲ

8. ಕನಸು ಕಾಣಕ್ಕೆ ಮುಂಚೆನೇ ಚಿವುಟಿ ಹಾಕ್ಬೇಡಿ

ನೀವು ಈಗ ಸಂಗಾತಿ ಹುಡುಕ್ಕೊಂಡಿದ್ದೀರಿ ಅಂದಮಾತ್ರಕ್ಕೆ ನೀವು ಒಬ್ರೇ ಇದ್ದಾಗ ನೋಡಿರೋ ಕನಸುಗಳನ್ನ ಮರೀಬೇಕಾಗಿಲ್ಲ. ತುಂಬಾ ಜನ ಅವರ ಸಂಬಂಧಗಳು ಆ ಕನಸು ನನಸಾಗೋದಕ್ಕೆ ಬಿಡಲ್ಲ ಅನ್ಕೊಂಡು ಅದನ್ನ ಅಲ್ಲೇ ಚಿವುಟಿ ಹಾಕ್ತಾರೆ. ಒಂದು ನೆನಪಿರ್ಲಿ… ಬೇರೆಯವರಿಗಾಗಿ ನಿಮ್ಮ ಕನಸುಗಳಿಗೆ ಕತ್ತರಿ ಹಾಕಬೇಕಾಗಿಲ್ಲ!

9. ಒಳ್ಳೆ ಜೀವನ ಬೇಕಾದ್ರೆ ನಿಮ್ಗೇನ್ ಬೇಕು, ಏನ್ಬೇಡ ಅಂತ ಸರ್ಯಾಗಿ ನಿರ್ಧಾರ ಮಾಡಿ

ಇದು ನೀವೊಬ್ಬರೇ ಅಲ್ಲ, ನಿಮ್ಮಿಬ್ರಿಗೂ ಅನ್ವಯಿಸುತ್ತೆ. ಕೆಲವರು ಸಂಬಂಧಗಳಲ್ಲಿ ಎಷ್ಟು ಮುಳುಗಿ ಹೋಗ್ತಾರೆ ಅಂದ್ರೆ ಅವರು ತಮ್ಮ ಬೇಕು ಬೇಡ, ಇಷ್ಟ-ಕಷ್ಟ, ಎಲ್ಲಾ ಮರೀತಾರೆ. ನೀವು ಒಂದು ರಿಲೇಶನ್ಶಿಪ್ಪಲ್ಲಿ ಇದ್ರೂ ನಿಮಗೆ ಬೇಕಾದ್ದು ಬೇಡವಾದದ್ದು ಏನು ಅನ್ನೋ ನಿರ್ಧಾರ ಸರಿಯಾಗಿ ಮಾಡಿ. ಯಾವ ವಿಷ್ಯಗಳಲ್ಲಿ ರಾಜಿ ಮಾಡ್ಕೋಬೇಕು, ಯಾವುದಕ್ಕೆ ರಾಜಿ ಮಾಡ್ಕೊಬಾರ್ದು ಅಂತ ಸರಿಯಾಗಿ ತಿಳ್ಕೊಂಡು, ಯೋಚ್ನೆ ಮಾಡಿ ನಿರ್ಧಾರ ಮಾಡಿ.

ಮೂಲ

10. ನಿಮ್ಮಲ್ಲಿರೋ ವೈಫಲ್ಯಾನ ಸೋಲು ಅನ್ಕೋಬೇಡಿ

ನೀವು ಯಾವಾಗ್ಲೇ ಜಗಳ ಆಡಿದ್ರೂ ಅಲ್ಲಿರೋದು ನೀವು, ನಿಮ್ಮ ಸಂಗಾತಿ ಮತ್ತು ನಿಮ್ಮ ಸಂಬಂಧ ಅನ್ನೋದನ್ನ ಮರೀಬೇಡಿ.ನೀವು ವಿಫಲರಾಗಿದ್ರೂ  ಅದು ನಿಮ್ಮ ಸೋಲಲ್ಲ, ಆದ್ರೆ ನಿಮ್ಮಿಂದ ಆದ ತಪ್ಪನ್ನ ಒಪ್ಕೋತಿದ್ದೀರಿ ಅಷ್ಟೇ. ಇದು ನಿಮ್ಮ ಸಂಬಂಧಾನೇ ಸೋತಂಗಲ್ಲ ನೆನಪಿರ್ಲಿ. ಇದನ್ನ ಪರಸ್ಪರ ಅರ್ಥ ಮಾಡ್ಕೊಂಡ್ರೆ ಒಳ್ಳೇದು… ಸಂಬಂಧ ಗಟ್ಟಿಯಾಗಿರತ್ತೆ.

ಇದ್ನೆಲ್ಲಾ ಯಾವಾಗ್ಲೂ ನೆನಪಿಟ್ಕೊಳಿ… ನಿಮ್ಗೂ ಒಳ್ಳೇದು, ನಿಮ್ಮೋರ್ಗೂ ಒಳ್ಳೇದು, ನಿಮ್ಮ ಸಂಬಂಧಕ್ಕೂ ಒಳ್ಳೇದು!