http://s2.dmcdn.net/HrshT/1280x720-4j4.jpg

ಗಂಡಸ್ರೆಲ್ಲ ಹೆಂಗಸರೇ ಹೆಚ್ಚು ಸುಳ್ಳು ಹೇಳ್ತಾರೆ ಅಂತ ದೂರಿದ್ರೆ ಹೆಂಗಸ್ರೆಲ್ಲ ಗಂಡಸ್ರಂತೂ ಮಾತು ಮಾತಿಗೆ ಸುಳ್ಳೇ ಹೇಳ್ತಿರ್ತಾರೆ ಅಂತಾರೆ. ಅದೇನೇ ಇರಲಿ, ಬಿಡಿ. 2010ರಲ್ಲಿ ಲಂಡನ್ ಸೈನ್ಸ್ ಮ್ಯೂಸಿಯಂ ನಡೆಸಿದ ಸಮೀಕ್ಷೆಯ ಪ್ರಕಾರ ಗಂಡಸರೇ ಅತಿ ಹೆಚ್ಚು ಸುಳ್ಳು ಹೇಳ್ತಾರಂತೆ! ಹಾಗೇ ಎಂಥಾ ಸಂದರ್ಭಗಳಲ್ಲಿ ಹೆಚ್ಚಾಗಿ ಸುಳ್ಳು ಹೇಳ್ತಾರೆ ಅನ್ನೋದು ಇಂಟರೆಸ್ಟಿಂಗ್ ಆಗಿದೆ…

ಗಂಡಸ್ರು ತಮ್ಮ ಹೆಂಡತಿಯರೀಗೇ ಹೆಚ್ಚು ಸುಳ್ಳು ಹೇಳ್ತಾರೆ. ಪ್ರತಿ ದಿನ ‘ಡಾರ್ಲಿಂಗ್, ಸಿಗ್ನಲ್ ಇರ್ಲಿಲ್ಲ ಕಣೇ’, ‘ಟ್ರಾಫಿಕ್ಕಲ್ಲಿದ್ದೇನೆ’, ‘ಸಾರಿ, ನನಗೆ ನೀನು ಕಾಲ್ ಮಾಡಿದ್ದು ಗೊತ್ತೇ ಆಗ್ಲಿಲ್ಲ ಮೀಟಿಂಗಲ್ಲಿದ್ದೆ’, ‘ನೀನೀಗ ತೆಳ್ಳಗಾಗಿದ್ದಿ’, ‘ಯಾವಾಗಲೂ ನನಗೇನು ಬೇಕೆನಿಸುತ್ತೋ ಅದನ್ನೇ ಮಾಡಿದ್ದಿ’… ಅನ್ನೋ ಸುಳ್ಳುಗಳನ್ನೇ ಹೇಳ್ತಿರ್ತಾರಂತೆ!

ಇದೆಲ್ಲಾ ಪುರಾಣ ಸರಿ. ಅದ್ಯಾಕೆ ಗಂಡಸ್ರು ಹೆಂಗಸ್ರಿಗೆ ಸುಲ್ಲೂ ಹೇಳ್ತಾರೆ ಅಂತ ಒಂದಿಷ್ಟು ಕಾರಣ ಕೊಟ್ಟಿದ್ದೀವಿ. ಓದಿ.

1. ಯಾವುದೇ ಜಗಳ, ಬೀದಿರಂಪ, ಗಲಾಟೆ ಇಲ್ದೆ ನೆಮ್ಮದಿಯಿಂದ ಇರ್ಬೇಕು ಅಂತ ಅನ್ಸಿರುತ್ತೆ ಅದಕ್ಕೆ…

ಗಂಡಸ್ರು ಎಷ್ಟೇ ನಿಜಾನೆ ಹೇಳ್ತಿದ್ರು ಹೆಂಗಸ್ರು ಅದನ್ನ ಸಮಾಧಾನದಿಂದ ಕೇಳಿಸ್ಕೊಳಕ್ಕೆ ತಯಾರಾರಿರಲ್ಲ, ಇನ್ನು ಪೂರ್ತಿ ಹೇಳಿ ಮುಗ್ಸಿರಲ್ಲ ಅಷ್ಟರಲ್ಲೇ ಕಣ್ಣೇರು, ಕೋಪ, ಜಗಳ ಎಲ್ಲ ಒಟ್ಟೊಟ್ಟಿಗೆ ಶುರು ಆಗುತ್ತೆ. ಸುಮಾರು ಮನೇಲಿ ಇದೇ ಕಥೆ.

ಗಂಡಸ್ರಿಗೆ ತಮ್ಮ ಭಾವನೆಗಳನ್ನ ಸುಲಭವಾಗಿ ತೋರಿಸ್ಕೊಳಕ್ಕೆ ಬರಲ್ಲ, ಅವ್ರು ಹೆಂಡತಿಯಿಂದ ಏನು ಬಯಸ್ತಿದಾರೆ ಅಂತ ನೇರವಾಗಿ ಹೇಳಿದ್ಮೇಲೂ ಯಾವಾಗ ಈತರ ಆಡೋದನ್ನ ಬಿಡಲ್ವೋ, ಆಗ ಇರೋದಕ್ಕೆ ಸ್ವಲ್ಪ ರಕ್ಕೆ ಪುಕ್ಕ ಸೇರಿಸಿ ಹೆಂಡತಿಗೆ ಇಷ್ಟ ಆಗೊ ತರಾನೇ ಹೇಳಕ್ಕೆ ಶುರು ಮಾಡ್ತಾರೆ. ಈ ರಂಪಾಟನೆಲ್ಲ ಬಿಟ್ಟು ನೆಮ್ಮದಿಯಿಂದ ಇರ್ಬೇಕು ಅಂತ ತಾನೇ ಬದಲಾಗಿ ಹೆಂಡತಿಗೆ ಹೇಗೆ ಬೇಕು ಹಾಗೆ ಇರಕ್ಕೆ ಶುರು ಮಾಡ್ತಾರೆ.

ಸುಳ್ಳು ಹೇಳ್ಬೇಕು ಅನ್ನ್ನೋ ಯಾವುದೇ ಉದ್ದೇಶ ಇಲ್ದ್ರೆ ಇದ್ರೂ ಈ ವಾದ, ಜಗಳ, ಕೂಗಾಡದು ಇದನ್ನೆಲ್ಲಾ ತಪ್ಪಿಸ್ಬೇಕು ಅನ್ಸುತ್ತೆ ಅದಕ್ಕೆ  ಈ ತರ ಸುಳ್ಳು ಹೇಳ್ತಾರೆ.

ಮೂಲ

2. ಎಲ್ಲಿ ಮನಸ್ಸಿಗೆ ನೋವಾಗುತ್ತೋ ಅನ್ನೋ ಅಂಜಿಕೆ ಇರುತ್ತೆ ಅದಕ್ಕೆ …

ನಿಜ ಹೇಳಿದ್ರೆ ಎಲ್ಲಿ ಮನಸ್ಸಿಗೆ ಬೇಜಾರಾಗಿ ಅಳ್ತಾರೋ ಅಂತ ಸತ್ಯ ಮುಚ್ಚ್ಚಿಟ್ಟು, ಮಸ್ಸಿಗೆ ಬೇಜಾರಾಗದೆ ಇರೋ ಹಾಗೆ ಸುಳ್ಳು ಹೇಳ್ತಾರೆ.

ಹೆಂಡತಿ ಹಾಕ್ಕೊಂಡಿರೋ ಬಟ್ಟೇಲಿ ಅವರು ಅಷ್ಟು ಚೆನ್ನಾಗಿ ಕಾಣಿಸ್ತಿಲ್ಲ ಅನ್ಸಿದ್ರೆ ನೇರವಾಗಿ ನಿಂಗೆ ಇದು ಚೆನ್ನಾಗಿ ಕಾಣಿಸ್ತಿಲ್ಲ ಅಂತ ಹೇಳ್ದಾಗ, ನೀನು ಯಾಕೋ ಸ್ವಲ್ಪ ದಪ್ಪ ಆಗಿದ್ದೀಯಾ ಅಂತ ಹೇಳ್ದಾಗ ಕೋಪ, ಬೇಜಾರು ಮಾಡ್ಕೊಂಡಿರ್ತಾರೆ, ಜಗಳ ಇಲ್ದೆ ಇದ್ರೂ ಕಣ್ಣೀರಾದ್ರು ಹಾಕಿರ್ತಾರೆ.

ಯಾವಾಗ್ಲಾದ್ರೂ ಗಂಡಸ್ರು ಮೊದಲೇ ಮನೇಲಿ ಹೇಳಿಲ್ದೆ, ಆಫೀಸಿಂದ ಬರೋವಾಗ ಅವರ ಜೊತೆ  ಓದುತ್ತಿದ್ದ ಹುಡಿಗಿನೋ, ಅಥವಾ ಮೊದಲಿನ ಕಂಪೆನಿಲಿ ಜೋತೇಲಿ ಕೆಲಸ ಮಾಡ್ತ್ತಿದ್ದವ ಸಿಕ್ಕಿ ಊಟ ಹೊರಗಡೆ ಮಾಡ್ಕೊಂಡು ಲೇಟಾಗಿ ಮನೆಗೆ ಹೋದಾಗ ನಿಜಾನೆ ಹೇಳಿದ್ರೂ ಹೆಂಗಸ್ರು ಸುಲಭವಾಗಿ ಇದನ್ನ ಒಪ್ಪಿಕೊಂಡಿರಲ್ಲ. ಮಾಮೂಲಾಗಿ ಬೇಜಾರು ಮಾಡ್ಕೊಂಡು ಮಾತು ಬಿಟ್ಟು ಕೂತ್ಕೊಂಡಿರ್ತಾರೆ. ಒಬ್ಬೊಬ್ಬರಂತೂ ಇನ್ನು ಒಂದೆರಡು ದಿನ ಅವರಿಗೆ ಊಟ ತಿಂಡಿನೂ ಸರಿಯಾಗಿ ಮಾಡ್ಕೊಟ್ಟಿರಲ್ಲ.

ಈ ತರ ಒಂದೆರಡು ಸಲ ಆಗಿದ್ರಂತೂ, ನಿಜ ಹೇಳ್ಬೇಕು ಅನ್ಸಿದ್ರೂ ಎಲ್ಲಿ ಬೇಜಾರು ಮಾಡ್ಕೊಂಡು ಅಳ್ತಾರೋ, ಮನಸ್ಸಿಗೆ ಎಲ್ಲಿ ನೋವಾಗುತ್ತೋ  ಅಂತ ಸುಳ್ಳು ಹೇಳೋ ಅಭ್ಯಾಸ ಮಾಡ್ಕೋತಾರೆ.

3. ಎಲ್ಲಿ ದೂರ ಆಗ್ತಿವೋ, ಕಳ್ಕೊಂಡುಬಿಡ್ತೀವೋ ಅನ್ನೋ ಭಯ, ಆತಂಕ ತುಂಬಿರುತ್ತೆ ಅದಕ್ಕೆ

ಇದು ಮದ್ವೆ ಆಗಿರವ್ರು, ಆಗ್ದೇ ಇರವ್ರು ಎರಡೂ ತರದ ಗಂಡಸ್ರಿಗೆ ಸಾಮಾನ್ಯವಾಗಿ ಇರೋ ಭಾವನೆ. ಸಾವಿರ ಸುಳ್ಳು ಹೇಳಿ ಮದುವೆ ಮಾಡು ಅನ್ನೋತರ. ಮದುವೆ ಆದವ್ರು ಮದುವೆಗೆ ಮುಂಚೆ ಅವರಿಗೆ ಬರೋ ಸಂಬಳದ ವಿಷಯದಲ್ಲಿ, ಹತ್ತಾರು ದೇಶ ಸುತ್ತಾಡಿದಿನಿ, ನಿನ್ನನ್ನು ಕರ್ಕೊಂಡು ಹೋಗ್ಬಹುದು, ನೀನು ಕೆಲ್ಸಮಾಡದು ಬೇಕಾಗಿಲ್ಲ ಹೀಗೆಲ್ಲ ಹೇಳಿ ಮದುವೆ ಆಗಿ, ಮುಂದೆ ಒಂದು ದಿನ ಹೆಂಡತಿ ಕೇಳಿದ್ದೆಲ್ಲ ಕೊಡಸಕ್ಕಾಗ್ದೇ, ಬೇರೆ ದೇಶಕ್ಕೆ ಹೋಗೋ ಅವಕಾಶ ಇಲ್ದೆ ಇದ್ದಾಗ, ಎಲ್ಲಿ ದೂರ ಆಗ್ತಾರೋ ಅನ್ನೋ ಕಾರಣಕ್ಕೆ ಸುಳ್ಳು ಹೇಳ್ತಾರೆ.

ಇನ್ನು ಮದ್ವೆ ಆಗ್ದೇ ಇರೋ ಹುಡುಗ್ರು ತಾವು ಇಷ್ಟಪಟ್ಟವರನ್ನ ಇಂಪ್ರೆಸ್ ಮಾಡಕ್ಕೆ ಏನೇನು ಹೇಳಿ ಒಪ್ಸಿ ಪ್ರೀತಿ ಮಾಡ್ತಿರ್ತಾರೆ. ನಿಜ ಗೊತ್ತಾದ್ರೆ ಎಲ್ಲಿ ಬಿಟ್ಟು ಹೋಗ್ತಾಳೋ ಅನ್ನೋ ಭಯ ಯಾವಾಗ್ಲೂ ಕಾಡ್ತಾ ಇರುತ್ತೆ. ತಾವು ಇಷ್ಟ ಪಡೋವು ಯಾವಾಗ್ಲೂ ತಮ್ಮ ಜೊತೆಲಿರಲಿ, ದೂರ ಆಗೋದು ಬೇಡ ಅಂತ ಸುಳ್ಳು ಹೇಳ್ತಾರೆ.

ಮೂಲ

4. ಅವರಲ್ಲಿರೋ ಅಹಂ, ಸ್ವಾಭಿಮಾನ ಸ್ವಲ್ಪ ಹೆಚ್ಚಾಗೇ ತೋರಿಸ್ಕೊಬೇಕಾಗಿರುತ್ತೆ ಅದಕ್ಕೆ …

ಗಂಡಸ್ರಿಗೆ ಸ್ವಾಭಿಮಾನ, ಅಹಂ ಸ್ವಲ್ಪ ಜಾಸ್ತಿನೇ ಇರುತ್ತೆ. ತಮ್ಮನ್ನ ತಾವು ಹೆಂಡತಿ ಅಥವಾ ತಾವು ಪ್ರೀತಿಸ್ತಿರೋ ಹುಡುಗಿಗಿಂತ ಯಾವುದೇ ವಿಷಯದಲ್ಲಿ ಹಿಂದೆ ಇದ್ರೂ ಅದನ್ನ ಒಪ್ಪಿಕೊಳ್ಳೋ ಸ್ವಭಾವ ಸ್ವಲ್ಪ ಕಮ್ಮಿನೇ. ಅಂಥಾ ಟೈಮಲ್ಲಿ ಸಣ್ಣ ಪುಟ್ಟ ಸುಳ್ಳು ಹೇಳೋದ್ರಿಂದ ಆ ವಿಷಯದಲ್ಲೂ ತಾವೇ ಮುಂದು ಅಂತ ತೋರಿಸ್ಕೊಳಕ್ಕೆ ಸುಲಭ ಆಗುತ್ತೆ ಅನ್ಸಿದ್ರೆ ಆ ಅವಕಾಶ ಚೆನ್ನಾಗೇ ಉಪಯೋಗಿಸ್ಕೊತಾರೆ.

ಹೇಗಪ್ಪಾ ಅಂದ್ರೆ… ಹೆಂಡತಿ ಗಂಡಂಗೆ ಮದುವೆಗೆ ಮುಂಚೆ ನನಗೆ ಎಷ್ಟೊಂದು ಹುಡುಗ್ರು ಪ್ರೊಪೋಸ್ ಮಾಡಿದ್ರು, ಇದು ಅವನು ಕೊಟ್ಟಿದ್ ಗಿಫ್ಟ್ ಅಂತ ಹೇಳ್ತಾಳೆ ಅಂದ್ಕೊಳಿ, ಇದು ಅವರ ತಲೇಲಿ ಕೊತಿರುತ್ತೆ. ಅವರ ತುಂಬಾನೇ ಕ್ಲೋಸ್ ಆಗಿರೋ ಸ್ನೇಹಿತನ ಹುಟ್ಟು ಹಬ್ಬಕ್ಕೆ ಅಂತ ಏನಾದ್ರು ಗಿಫ್ಟ್ ತೊಗೊಂಡು ಹೆಸರು ಬರೀಸದೆ ಮನೆಗೆ ತಂದು ಹೆಂಡತಿ “ಇದು ಯಾರಿಗೆ?” ಅಂತ ಕೇಳ್ದಾಗ… “ಕಾಲೇಜಲ್ಲಿ ನನ್ನ ಜೊತೆ ಓದ್ತಾ ಇದ್ಲಲ್ಲ, ನನ್ನ ಕ್ಲೋಸ್ ಫ್ರೆಂಡ್, ಅವಳದು ಹುಟ್ಟಿದ ಹಬ್ಬ. ಅವಳ ಮದುವೆಗೂ ಹೋಗಕ್ಕಾಗಿರ್ಲಿಲ್ಲ ಅದಕ್ಕೆ ಕೊಡೋಣ ಅಂತ ತಂದಿದ್ದೀನಿ” ಅಂತ ಸುಳ್ಳು ಹೇಳ್ಬಹುದು.

ಗಂಡಸ್ರು ಫೋನಲ್ಲಿ ಯಾವದಾದ್ರು ಹುಡುಗಿ ಜೊತೆ ನಗ್ನಗ್ತಾ ಮಾತಾಡ್ತಿದ್ರೆ, ಅವರು ಏನಾದ್ರು ಯಾರ ಜೊತೆ ಮಾತಾಡ್ತಿದ್ದೆ ಅಂತ ಕೇಳಿದ್ರೆ ಸಾಕು, ಅದು ಅವರ ತಾಯಿ, ಅಕ್ಕ, ತಂಗಿ ಯಾರೇ ಆಗಿದ್ರೂ ಗರ್ಲ್ ಫ್ರೆಂಡ್ ಅಂತ ಹೇಳ್ತಾರೆ.

ಅವರಿಗೆ ಇಲ್ಲಿ ಸುಳ್ಳು ಹೇಳೋ ಅವಶ್ಯಕತೆ ಇರಲ್ಲ ಆದ್ರೆ ತನ್ನ ಹೆಂಡ್ತಿಗೆ ಹೇಗೆ ಬಾಯ್ ಫ್ರೆಂಡ್ ಇದ್ರೋ ಹಾಗೆ ತನಗೂ ಗರ್ಲ್ ಫ್ರೆಂಡ್ ಇದ್ದಾರೆ, ತಾನೇನು ಕಮ್ಮಿ ಇಲ್ಲ ಅಂತ ತೋರಿಸ್ಕೊಳಕ್ಕೆ ಹೀಗೆ ಸುಳ್ಳು ಹೇಳ್ತಾರೆ.

5. ಹೊಡೆದಾಟ ಬಡಿದಾಟ ಬೇಡ ಅನ್ಸಿರುತ್ತೆ ಅದಕ್ಕೆ

ಸಾಮಾನ್ಯವಾಗಿ ಹೆಚ್ಚಾನುಹೆಚ್ಚು ಗಂಡಸ್ರಿಗೆ ಹೊಡೆದಾಟ ಬಡಿದಾಟ ಮಾಡೋದು ಅದ್ರಲ್ಲೂ ಹೆಂಗಸ್ರ ಜೊತೆ ಜಗಳ ಮಾಡಕ್ಕೆ, ಅತ್ತೆ – ಸೊಸೆ ಜಗಳ ಆಡ್ತಿದ್ರೆ ಮಧ್ಯ ಹೋಗಿ ನಿಲ್ಲಿಸೋ ಪ್ರಯತ್ನ ಮಾಡೋದು ಇಷ್ಟ ಆಗಲ್ಲ. ಈ ಮುಖಾಮುಖಿ ತಪ್ಪಿಸಕ್ಕೆ ಸುಳ್ಳು ಹೇಳಕ್ಕೆ ಮುಂದಾಗ್ತಾರೆ.

ಮದುವೆ ಆಗಿರೋ ಗಂಡಸ್ರು ಅದ್ರಲ್ಲೂ ಅತ್ತೆ ಸೊಸೆ ಜೋತೆಲಿ ಒಂದೇ ಮನೇಲಿದ್ದಾಗ ಏನೆಲ್ಲಾ ಭಿನ್ನಾಭಿಪ್ರಾಯಗಳು ಬರುತ್ತೆ ಅಂತ ಚೆನ್ನಾಗೆ ಗೊತ್ತಿರುತ್ತೆ. ತಾಯಿನಾ ಅಥವಾ ಹೆಂಡತೀನಾ? ಯಾರ ಪರವಾಗಿದ್ರೂ ಇನ್ನೊಬ್ರಿಗೆ ಬೇಜಾರಾಗೋದು, ಕಣ್ಣೀರಿಡೋದು ಗ್ಯಾರಂಟಿ. ಒಂದು ಅಥವಾ ಹತ್ತಾರು ಸುಳ್ಳು ಹೇಳೋದ್ರಿಂದ ಈ ಜಗಳ, ಕಣ್ಣೀರು ಎಲ್ಲ ಇರಲ್ಲ ಅನ್ಸಿದ್ರೆ, ಸಾಮಾನ್ಯಾಗಿ ಇಂಥ ವಿಷಯದಲ್ಲಿ ಸುಳ್ಳು ಹೇಳ್ತಾರೆ.

ಮೂಲ

6. ಸಂಬಂಧಗಳಲ್ಲಿ ನಂಬಿಕೆ ಕಡಿಮೆ ಆಗಿರುತ್ತೆ ಅದಕ್ಕೆ…

ಹೆಂಗಸ್ರ ಬಾಯಲ್ಲಿ ಯಾವ ಗುಟ್ಟು ಉಳಿಯಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಗಂಡ್ಸರೂ ಈ ಕಾರಣದಿಂದನೇ ಸ್ವಲ್ಪ ವಿಷಯಗಳನ್ನ ಹೆಂಗಸ್ರ ಹತ್ರ ಹೇಳಲ್ಲ. ತಮ್ಮ ಸಂಸಾರದ ಗುಟ್ಟು ಅದ್ರಲ್ಲೂ ತಮ್ಮ ವೈಯಕ್ತಿಕ ವಿಚಾರಗಳು ಎಲ್ಲಿ ಊರಿಗೆಲ್ಲ ಗೊತ್ತಾಗುತ್ತೋ, ತನ್ನ ಮಾನ ಎಲ್ಲಿ ಹರಾಜಾಗುತ್ತೋ ಅಂತ ಸುಳ್ಳು ಹೇಳೋದು, ವಿಷಯಗಳನ್ನ ಮುಚ್ಚಿಡೋದು ಮಾಡ್ತಾರೆ.

ಯಾವಾಗ ಸಂಬಂಧಗಳಲ್ಲಿ ನಂಬಿಕೆ ಇರಲ್ವೊ ಆಗ ಸುಳ್ಳು ಸಹಜವಾಗೇ ಬರತ್ತೆ.

7. ತನಗೆ ಅಂತ ಸ್ವಲ್ಪ ಸಮಯ ಬೇಕು ಅನ್ನಿಸ್ತಿರುತ್ತೆ ಅದಕ್ಕೆ…

ಹುಡ್ಗಿರ್ಗೆ ಮೇಕಪ್ ಹೇಗೋ ಹುಡುಗರಿಗೆ ಅವರ ಸ್ನೇಹಿತರು ಅಂದ್ರೆ ಪಂಚಪ್ರಾಣ.  ಮದುವೆಗೆ ಮುಂಚೆ ಹೇಗೆ ಬೇಕೋ ಹಾಗೆ, ಎಷ್ಟು ಬೇಕು ಅಷ್ಟು ಹೊತ್ತು, ಯಾರಿಗೂ ಹೇಳ್ದೆ ಕೇಳ್ದೆ ರಾತ್ರಿಯೆಲ್ಲ ಹೊರಗಿದ್ದು ಕಾಲ ಕಳ್ದಿರೋವ್ರಿಗೆ, ಮದ್ವೆ ಆದ್ಮೇಲೆ ಹೆಂಡತಿ ಪ್ರತಿಯೊಂದನ್ನು ಪ್ರಶ್ನೆ ಮಾಡೋದು, ಅವರನ್ನ ಬಿಟ್ಟು ಫ್ರೆಂಡ್ಸ್ ಜೊತೆ ಹೋಗಿ ಸುತ್ತಾಡಿಕೊಂಡು ಬರಕ್ಕೆ ಬಿಡದಿರೋದು ಅವರನ್ನ ಕಟ್ಟಿಹಾಕಿದ ಹಾಗೆ ಮಾಡುತ್ತೆ. ಇದು ಅವರಿಗೆ ತಮಗೆ ಹೇಗೆ ಬೇಕೋ ಹಾಗೆ ಇರಕ್ಕೆ ಸ್ವಲ್ಪನೂ ಅವಕಾಶ ಸಿಕ್ತಿಲ್ವಲ್ಲ ಅಂತ ಅನ್ನಿಸಿ ತಮಗೆ ತಮ್ಮ ಸ್ನೇಹಿತರ ಜೊತೆ ಹೋಗ್ಲೇ ಬೇಕು ಅನ್ನಿಸಿದಾಗ ಏನೋ ಒಂದು ಕುಂಟು ನೆಪ ಹೇಳಿ ಹೋಗ್ತಾರೆ.

ಇವತ್ತು ಕೆಲಸ ಜಾಸ್ತಿ, ಓವರ್ ಟೈಮ್ ಮಾಡಬೇಕು, ಮೀಟಿಂಗಲ್ಲಿ ಇದ್ದೆ ಅದಕ್ಕೆ ನಿನ್ನ ಫೋನ್ ರಿಸೀವ್ ಮಾಡ್ಲಿಲ್ಲ, ರಿಂಗ್ ಆಗಿದ್ದೆ ಗೊತ್ತಾಗ್ಲಿಲ್ಲ, ತುಂಬಾ ಟ್ರಾಫಿಕ್ ಜಾಮ್, ಬರೋದು ಲೇಟಾಗುತ್ತೆ, ಹೀಗೆ ಹತ್ತಾರು ಸುಳ್ಳು ಆಗ್ಲೇ ಕೇಳಿರಬಹುದು. ಮದ್ವೆ ಆದ್ಮೇಲೂ ಹೆಂಡತೀರು ತಮ್ಮ ಗಂಡಂದಿರಿಗೆ ಅವರ ಸ್ನೇಹಿತರ ಜೊತೆ ಹೊರಗೆ ಹೋಗಕ್ಕೆ ಸ್ವಲ್ಪ ಅವಕಾಶ ಮಾಡಿ ಕೊಟ್ಟು, ಅವರ ಮೇಲೆ ನಂಬಿಕೆ ಇಟ್ರೆ ಖಂಡಿತವಾಗಿ ಅವರು ಈ ತರ ಸುಳ್ಳು ಹೇಳ್ಬೇಕಾಗಲ್ಲ.

ಆದ್ರೆ ಸಾಮಾನ್ಯವಾಗಿ ಎಲ್ಲರ ಮನೇಲೂ ಹೆಂಗಸ್ರು ಗಂಡಸಿನ ಮೇಲೆ ಹಿಡಿತ ಇಟ್ಕೋಬೇಕು ಅಂತ ಕಟ್ಟಿ ಹಾಕಕ್ಕೆ ನೋಡ್ತಾರೆ… ಆವಾಗ ಗಂಡಸ್ರಿಗೆ ಸುಳ್ಳು ಹೇಳೋದಲ್ದೆ ಬೇರೆ ದಾರಿ ಇರಲ್ಲ.

ಮೂಲ

ಹೆಂಗಸ್ರು ಯಾವಾಗ ಗಂಡಸ್ರ ಮನಸ್ಥಿತಿ, ಪರಿಸ್ಥಿತಿನ ಅರ್ಥ ಮಾಡ್ಕೊಳಲ್ವೋ ಆಗ ಗಂಡಸ್ರು ಸುಳ್ಳು ಹೇಳಲೇ ಬೇಕು ಅನ್ನೋ ಸ್ಥಿತಿಗೆ ಬರ್ತಾರೆ.