ಭಾರತದಲ್ಲಿ ದಕ್ಷಿಣದಲ್ಲಿ ಮಾತ್ರ ಕಾಫಿ ಬೆಳೆಯೋದು. ಅದೂ ಕೆಲವೇ ಕಡೆ.

coffee-si-josuma_com.PNGjosuma

ಅದರಲ್ಲೂ ಕೊಡಗಿನ ಕಾಫಿ ಪ್ರಪಂಚದಲ್ಲೆಲ್ಲ ಫೇಮಸ್ಸು.

‘ಮಾನ್ಸೂನ್ ಮಲಬಾರ್’, ‘ಮೈಸೂರ್ ನಗೆಟ್ಸ್’ ಮುಂತಾದ ಹೆಸರಲ್ಲಿ ಕೊಡಗಿನ ಕಾಫಿ ಪ್ರಪಂಚದಲ್ಲೆಲ್ಲ ಬಹಳ ಮಾರಾಟವಾಗುತ್ತೆ.

coffee-flickr-charles-haynes.jpgCharles Haynes

ಇನ್ನು ಭಾರತದಲ್ಲಂತೂ ಕೇಳಲೇ ಬೇಕಾಗಿಲ್ಲ. ಆದರೆ ಕೊಡಗಿನವರು ಇಷ್ಟ ಪಡೋ ಡ್ರಿಂಕ್ ಯಾವುದು ಗೊತ್ತಾ? ಟೀ!

chai_masala_tea-manjulaskitchen.jpgmanjulaskitchen

coorgrecipes.com ಅನ್ನೋ ತಾಣದ ಪ್ರಕಾರ ಕೊಡಗಿಗೂ ಕಾಫಿಗೂ ನಂಟು ಕೊಂಚ ಹೀಗಿದೆ:

ಆಶ್ಚರ್ಯವೇನಂದರೆ ಕೊಡಗಿನಲ್ಲಿ ಹೆಸರುವಾಸಿಯಾದ ಬೆವರೇಜಂದರೆ ಟೀ! ಬ್ರಿಟಿಷರು ಎಕ್ಕರೆಗಟ್ಟಲೆ ಕಾಫಿ ಬೆಳೆಸಿದರೇನೋ ನಿಜ, ಆದರೆ ಅವರು ನಮಗೆ ಹತ್ತಿಸಿದ ರುಚಿ ಟೀದು!

ಕಾಫಿ ಎಸ್ಟೇಟುಗಳಿಗೆ ಹೆಸರುವಾಸಿಯಾದ ಕೊಡಗಿನಲ್ಲಿ ಒಂದು ಒಳ್ಳೇ ಕಾಫಿ ಸಿಗೋದು ಕಷ್ಟ.

ಕಾಫಿ ಬೋರ್ಡ್ನೋರು ಇಲ್ಲೀವರೆಗೆ ಯಾಕೆ ಒಂದು ಕಾಫಿ ಹೌಸ್ ಶುರು ಮಾಡಿಲ್ಲ ಇಲ್ಲಿ ಅಂತ ಒಮ್ಮೊಮ್ಮೆ ಅನ್ನಿಸುತ್ತೆ. ಬಿಸಿನೆಸ್ನೋರಾದರೂ ಕಾಫಿ ಎಸ್ಟೇಟುಗಳು, ಇಲ್ಲಿಯ ಹಕ್ಕಿಗಳು ಮತ್ತು ಇತರೆ ವನಸಂಪತ್ತು ತೋರ್ಸೋದರ ಜೊತೆಗೆ ಪ್ರವಾಸಿಗಳಿಗೆ ಒಳ್ಳೆ ಕಾಫಿ ಕುಡಿಯುವ ಅನುಭವಾನೂ ಕೊಡಬಹುದಲ್ಲ?

ಹಾಗೆ ಯೋಚನೆ ಮಾಡಿದರೆ ಕಾಫಿಯ ಬಫೆ, ಕಾಫಿಯಿಂದ ಸೌಂದರ್ಯದ ಪ್ರಾಡಕ್ಟುಗಳು, ಕಾಫಿ-ಪ್ರೇರಿತ ಬಟ್ಟೆ-ಬರೆ… ಹೀಗೆ ಏನು ಬೇಕಾದರೂ ಮಾಡಬಹುದು.

ಜಪಾನಿನ ‘ಟೀ ಮನೆ’ಗಳ ತರಹ ಕೊಡಗಿನಲ್ಲಿ ‘ಕಾಫಿ ಮನೆ’ಗಳ್ನ ಮಾಡಬಹುದು. ಪ್ರವಾಸಿಗಳು ಬರೀ ಕಾಫಿ ಕೊಂಡುಕೊಂಡು ಹೋಗೋದಷ್ಟೇ ಅಲ್ಲ, ಕೊಡಗಿನಲ್ಲಿ ಕೊಡಗಿನ ಕಾಫಿನ ತಾವೇ ಮಾಡಿಕೊಂಡು ಮಜಾ ಮಾಡುವ ಅನುಭವಾನೂ ಕೊಡಬಹುದು…

ಏನಾಶ್ಚರ್ಯ! ನಿಜಕ್ಕೂ ಈ ತಾಣದೋರು ಹೇಳ್ತಿರೋದು ಆಗಲೇಬೇಕು! ಕೊಡಗಿಗೆ ಹೋಗಿ ಟೀ ಕುಡಿಯೋದು ಅಂದ್ರೆ ಏನರ್ಥ!