https://udemy-images.udemy.com

ಹತ್ತಾರು ವರ್ಷ ಕಷ್ಟಪಟ್ಟು ಓದಿ, ಒಂದು ಡಿಗ್ರಿ ಅಂತ ಮುಗಿಸಿದಮೇಲೆ ಒಂದು ಕೆಲಸ ಮಾಡೋ ಹಂತಕ್ಕೆ ಬೆಳೆದಿರ್ತೀವಿ. ಇಲ್ಲಿಂದ ಮುಂದೆ ನಮ್ಮ ಓದಿಗೆ ತಕ್ಕ ಕೆಲಸ ಹುಡುಕೋದು, ಕೆಲಸ ಮಾಡೋದು, ನಾವು ಮಾಡೋ ಕೆಲಸದಿಂದಾನೆ ನಮ್ಮ  ಆಸೆ ಆಕಾಂಕ್ಷೆ ಎಲ್ಲ ಪೂರೈಸಿಕೊಳ್ಳೋದು, ಎಲ್ಲ ಶುರು ಆಗುತ್ತೆ. ಜೊತೆಗೆ ನಮ್ಮ ಕೆಲಸ ನಾವು ಯಾರು ಅನ್ನೋದನ್ನ ತೋರ್ಸುತ್ತೆ, ಅದೇ ನಮ್ಮನ್ನ ಬೇರೆಯವರು ಗುರುತಿಸೋಹಾಗೆ ಮಾಡುತ್ತೆ.

ದಿನ ಕಳೆದಂತೆ ನಿಮಗೆ ಬೇಗ ಏಳೋದು, ಕೆಲಸಕ್ಕೆ ಹೋಗೋದು ಎಲ್ಲ ಬೇಜಾರು ಅನ್ನಿಸಿದ್ರೆ? ಅಯ್ಯೋ ಹೋಗ್ಬೇಕಲ್ಲಪ್ಪ ಅನಂತ ಅನ್ನಿಸ್ತಿದ್ರೆ? ಪರಿಸ್ಥಿತಿ ಈ ಪದಗಳಲ್ಲಿ ಹೇಳೋದಕ್ಕಿಂತ ಕೆಟ್ಟದಾಗಿರುತ್ತೆ. ಅದಕ್ಕಿಂತ ನೋವಿನ ವಿಷಯ ಅಂದ್ರೆ ನಾವು ಸರಿಯಾದ ಜಗದಲ್ಲಿ ಇಲ್ಲ ಅಂತ ನಮಗೆ ಗೊತ್ತಾಗೋದೇ ಇಲ್ಲ.

ಈ 10 ವಿಷಯಗಳು ನೀವು ಇಷ್ಟ ಇಲ್ಲದೆ ಇರೋ ಕೆಲಸ ಮಾಡ್ತಿದ್ರೆ ನಿಮ್ಮ ಗಮನಕ್ಕೆ ಖಂಡಿತ ಬಂದಿರುತ್ತೆ.

1. ಮಾಡೋ ಕೆಲಸದಲ್ಲಿ ಪ್ರೇರಣೆ, ಒಳ್ಳೆ ಪರಿಣಾಮ ಕಂಡುಕೊಳ್ಳೋದಕ್ಕೆ ಕಷ್ಟ ಪಡ್ತಾ ಇರೋದು.

ಬರೀ ಸೋಮವಾರ ಅಥವಾ ರಾಜ ಕಳೆದು ಕೆಲಸಕ್ಕೆ ವಾಪಸ್ಸಾದಾಗ ಅಂತ ಅಲ್ಲ, ಯಾವುದೇ ದಿನದಲ್ಲೇ ಆದ್ರೂ  ನಿರಾಸಕ್ತಿ, ಪ್ರೇರಣೆ ಇಲ್ಲ, ಅಯ್ಯೋ ಬೆಳಗಾದ್ರೆ ಕೆಲಸ ಮಾಡ್ಬೇಕಲ್ಲ ಅನ್ನೋ ಭಾವನೆ, ಎಷ್ಟೇ ಮಾಡಿದ್ರೂ ಇಷ್ಟೇ ಅನ್ನೋ ಮನಸ್ಥಿತಿ ಇವೆಲ್ಲ ನಿಮಗೆ ಕಷ್ಟ ಅನ್ನೋ ಹಾಗೆ ಮಾಡುತ್ತೆ.

ಯಾಕೆ ಹೀಗೆ ಅನ್ನಿಸ್ತಿದೆ? ತುಂಬಾನೇ ಸಿಂಪಲ್ ವಿಷ್ಯ ಅಂದ್ರೆ ನಿಮಗೆ ಈ ಕೆಲಸ ಇಷ್ಟ ಇಲ್ಲ. ಈ ಕೆಲಸ ಅಂದ್ರೆ ಏನೋ ಒಂತರ ದ್ವೇಷ.  ಈ ಕೆಲಸ ಇಷ್ಟಪಟ್ಟು ಅಲ್ಲ, ಅನಿವಾರ್ಯ ಅಂತ ಮಾಡ್ತಿರ್ತೀರಿ ಅದಕ್ಕೆ.

https://www.dcgoodwill.org

2. ನಿಮ್ಮ ಸುತ್ತಮುತ್ತ ಇರೋವ್ರು ತಮ್ಮ ಕೆಲಸ ಎಷ್ಟು ಚೆನ್ನಾಗಿದೆ, ಎಷ್ಟು ಇಷ್ಟ ಪಡ್ತಿದ್ದೀವಿ ಅಂತ ಹೇಳ್ತ ಇದ್ರೆ, ನೀವು ಅಂತ ಮಾತುಕತೆಗೆ ಸೇರದೆ ದೂರ ಇರೋದು.

ನಿಮ್ಮ ಕೆಲಸದಿಂದಾಗಿ ನಿಮ್ಮ ಖಾಸಗಿ ಜೀವನ ಬೇಜಾರು ಅನ್ನಿಸ್ತಿದ್ಯಾ? ಕೆಲಸದಿಂದಾಗಿ ನಿಮ್ಮ ಜೀವನದಲ್ಲಿ ಸುಖ ಸಂತೋಷ ಹಾಳಾಗ್ತಿದೆ ಅನ್ನೋದನ್ನ ಗಮನಿಸಿರೋದು. ಹೀಗೆ ಗಮನಿಸಿದ್ರೆ ಖಂಡಿತ ಎಲ್ಲ ತಮ್ಮ ಕೆಲಸದ ಬಗ್ಗೆ ಹೊಗಳಿಕೊಳ್ತಾ ಇರೋ ಚರ್ಚೆಗೆ ನೀವು ಭಾಗವಹಿಸದೇ ದೂರ ಇರ್ತೀರಿ.

https://media.gettyimages.com

3. "ನನ್ನ ಹತ್ತಿರ ಅದು ಇದ್ದಿದ್ರೆ", " ನನ್ನ ಕೈಯಲ್ಲಿ ಅದನ್ನ ಮಾಡಕ್ಕೆ ಆಗಿದಿದ್ರೆ", "ನಾನೂ ಒಂದಲ್ಲ ಒಂದು ದಿನ ಅದನ್ನ ಮಾಡಬೇಕು” ಈ ರೀತಿಯ ಮಾತು ನಿಮ್ಮ ಬಾಯಿಂದ ಆಗಾಗ ಬರ್ತಾ ಇರೋದು.

ಆದ್ರೆ, ಹೋದ್ರೆ, ಇದ್ದಿದ್ರೆ, ಮಾಡಿದ್ರೆ ಈ ತರ ಅನ್ಕೊಂಡು ಸುಮ್ನೆ ಕೂತಿದ್ರೆ, ನೀವು ಅಂದುಕೊಂಡಿದ್ದೆಲ್ಲ ಏನೋ ಮ್ಯಾಜಿಕ್ ತರ ಆಗ್ಬಿಡಲ್ಲ. ನೀವು ಪ್ರಯತ್ನ ಪಟ್ರೆ ಮಾತ್ರ ನೀವು ಅಂದುಕೊಂಡಿದ್ದು ಆಗೋದು.

ಕೈಕಟ್ಟಿ ಕೂತ್ಕೊಂಡು ಮಂತ್ರಕ್ಕೆ ಮಾವಿನಕಾಯಿ ಉದುರುತ್ತೆ ಅಂತ ಇದ್ರೆ, ಏನೂ ನಡೆಯಲ್ಲ.

http://17026-presscdn-0-98.pagely.netdna-cdn.com

4. ಒಂದು ನೋವನ್ನ ಮರೆಯೋದಕ್ಕೆ ಬೇರೆ ಬೇರೆ ಮೂಲಗಳಿಂದ ಸಂತೋಷ ಹುಡುಕೋ ಪ್ರಯತ್ನ ಮಾಡೋದು.

ಸಂತೋಷ, ಖುಷಿ ಇಲ್ಲ ಅಂತ ತಲೆ ಕೆರೀತಾ ಇದ್ರೆ ಏನು ಉಪಯೋಗ. ಯಾವಾಗ ನೀವು ಇಷ್ಟ ಪಡದೆ ಇರೋ ಕೆಲಸನೇ ದಿನ ಪೂರ್ತಿ ಮಾಡ್ತಾ ಕೂತಿರೋವಾಗ ಹೇಗೆ ತಾನೇ ನಿಮಗೆ ಖುಷಿ ಆಗುತ್ತೆ ಹೇಳಿ. 

https://news.continuingstudies.wisc.edu

5. ನಿಮಗಿಷ್ಟವಿಲ್ಲದ ಕೆಲಸ ಮಾಡ್ತಾ ಮಾಡ್ತಾ ನಿಮ್ಮ ಆತ್ಮವಿಶ್ವಾಸ ಕಮ್ಮಿ ಆಗ್ತಾ ಇರೋದು.

ಕೆಲಸದಲ್ಲಿ ಮೆಚ್ಚುಗೆ, ಗೌರವ ಪಡ್ಕೊಳ್ಳೋದು, ನೀವು ಮಡಿದ ಕೆಲಸ ಬೇರೆಯವರು ಗುರಿತಿಸೋದು ಎಲ್ಲ ನೀವು 100 ಮನಸ್ಸಿಟ್ಟು ಮಾಡಿದ್ರೆ ಮಾತ್ರ ಸಿಗೋದು, ಆದ್ರೆ ನೀವು ಅರೆಮನಸ್ಸಿನಿಂದ ಮಾಡ್ತಾ ಇದ್ದಾಗ ಇದೆಲ್ಲ ಏನೂ ಸಿಗಲ್ಲ.

ಯಾವಾಗ ನಮಗೆ ಸಿಗಬೇಕಾದ್ದು ಸಿಗಲ್ವೋ, ನಮ್ಮ ಆತ್ಮ ವಿಶ್ವಾಸ ಕಮ್ಮಿ ಆಗ್ತಾ ಹೋಗುತ್ತೆ. ನಿಮ್ಮಲ್ಲಿ ಆಗ್ತಿರೋ ಬದಲಾವಣೆ ನಿಮ್ಮ ಗಮನಕ್ಕೆ ಬಂದಿರುತ್ತೆ.

http://www.builttowin.co.za

6. ಜವಾಬ್ದಾರಿಯಿಂದ ನುಣುಚಿಕೊಳ್ತಾ ಇರೋದು.

ಯಾವುದೇ ರೀತಿಯ ಜವಾಬ್ದಾರಿ ತೊಗೊಳೋದಕ್ಕೆ ನೀವು ಹಿಂಜರೀತೀರಿ. ನಿಮ್ಮ ಕಾರ್ಯಕ್ಷಮತೆ ಹೆಚ್ಚಾಗೋದಕ್ಕೆ, ನೀವು ಮಾಡೋ ಕೆಲಸದಲ್ಲಿ ತೃಪ್ತಿ ಪಡ್ಕೋಳೋದಕ್ಕೆ ಏನು ಮಾಡ್ತೀರಿ? ಜವಾಬ್ದಾರಿಯಿಂದ ತಪ್ಪಿಸಿಕೊಳ್ಳೋದು ನಿಮಗೆ ತಾತ್ಕಾಲಿಕ ಪರಿಣಾಮ ಅಷ್ಟೇ, ಆದ್ರೆ ಇದ್ರಿಂದ ನಿಮ್ಮ ವೈಯಕ್ತಿಕ ಅಥವಾ ಕೆಲಸದ ಜೀವನ ಯಾವುದರಲ್ಲೂ ಮುಂದುವರಿಯೋದಕ್ಕೆ ಸಹಾಯ ಮಾಡಲ್ಲ.

https://www.dreamdictionarynow.com

7. ಹಿಂದೆಂದಿಗಿಂತಲೂ ಈಗ ಸೋಮಾರಿತನ ಹೆಚ್ಚಾಗ್ತಿರೋದು.

ನಿಮ್ಮ ಕೆಲಸ ನಿಧಾನವಾಗಿ ಮಾಡ್ತಿರೋದು, ಯಾವಾಗ್ಲೋ ಒಂದ್ಸಲ ಅಲ್ಲ ಪ್ರತಿದಿನ ನಿಧಾನವಾಗ್ತಿದ್ರೆ ನಿಮಗೆ ನಿರಾಶೆ ಆಗೋದು, ಕೆರಳೋಹಾಗೆ ಮಾಡೋದು, ಈ ಎಲ್ಲ ಅನುಭವ ಆಗ್ತಿರುತ್ತೆ, ಜೊತೆಗೆ ಹಿಂದೆಂದಿಗಿಂತಲೂ ನಿಮ್ಮಲ್ಲಿ ಸೋಮಾರಿತನ ಹೆಚ್ಚಾಗ್ತಿರೋದನ್ನ ಗಮನಿಸಿರ್ತೀರಿ.

https://tilo.stb.ua/wp-content/uploads/sites/23/2016/08/05/iStock-516320442.jpg

8. ನೀವು ನಿಮ್ಮ ಜೀವನದಲ್ಲಿ ತೊಗೊಂಡಿರೋ ಪ್ರತಿಯೊಂದು ನಿರ್ಧಾರದ ಬಗ್ಗೆನೂ ಪ್ರಶ್ನೆ ಮಾಡೋದು.

ನೀವು ಎಷ್ಟೇ ಸಂಪಾದನೆ ಮಾಡ್ತಿದ್ರೂ ನಿಮಗೆ ಇಷ್ಟೇ ಇಲ್ಲದ ಕಾರಣಕ್ಕೆ ನಿಮ್ಮ ಮನಸ್ಸಿಗೆ ಸಮಾಧಾನ ಇರೋದಿಲ್ಲ. ಒಲ್ಲದ ಗಂಡ ಮಜ್ಜಿಗೆಲೋ ಕಲ್ಲು ಹುಡುಕಿದ ಅಂತಾರಲ್ಲ ಹಾಗೆ, ಏನೂ ಇಲ್ಲದೆ ಸುಮ್ಮನೆ ಕೂತಾಗ ನೀವು ತೊಗೊಂಡಿರೋ ನಿರ್ಧಾರ ಸರೀನಾ ತಪ್ಪಾ ಅನ್ನೋ ಯೋಚನಿಗೆ ಬರೋದಕ್ಕೆ ಶುರುವಾಗಿರುತ್ತೆ.

ಬರೀ ಕೆಲಸಕ್ಕೆ ಸೇರಿರೋ ವಿಷಯದ ಬಗ್ಗೆ ಅಷ್ಟೇ ಅಲ್ಲ, ನಿಮ್ಮ ಜೀವನದಲ್ಲಿ ತೊಗೊಂಡಿರೋ ಎಲ್ಲ ನಿರ್ಧಾರದಬಗ್ಗೆ ನಿಮ್ಮ ಮನಸ್ಸಲ್ಲಿ ಪ್ರಶ್ನೆ ಕಾಡ್ತಾ ಇರುತ್ತೆ.

http://1luotgosacjwpqv83me0kulq.wpengine.netdna-cdn.com/

9. ನಿಮ್ಮ ಸ್ವಾಭಿಮಾನದ ಮೇಲೆ ಪರಿಣಾಮ ಬೀರ್ತಿರೋದು.

ಒಂದು ಹಂತದಲ್ಲಿ ನಮ್ಮ ಕೆಲಸದಿಂದಾನೆ ನಮ್ಮನ್ನ ಎಲ್ಲರೂ ಗುರ್ತಿಸೋದು, ನೀವು ಮಾಡ್ತಿರೋ ಕೆಲಸ ನಿಮಗೆ ಖುಷಿ ಕೊಡ್ತಿಲ್ಲ ಅಂದ್ರೆ ನೀವು ಸರಿಯಾಗಿ ಕೆಲಸ ಮಾಡಲ್ಲ, ಇದ್ರಿಂದ ನಿಮಗಾಗಲಿ ನಿಮ್ಮ ಕೆಲಸಕ್ಕಾಗಲಿ ನೀವು ನ್ಯಾಯ ಒದಗಿಸ್ತಾ ಇರಲ್ಲ. ಇದು ನಿಮ್ಮ ಸ್ವಾಭಿಮಾನದ ಮೇಲೆ ಪರಿಣಾಮ ಬೀರೋದನ್ನ ಗಮನಿಸಿರ್ತೀರಿ.

https://media.indiatimes.in

10. ಅದೆಲ್ಲ ಏನೇ ಆಗ್ತಿರ್ಲಿ, ನಿಮಗಿಷ್ಟವಾದ ಹವ್ಯಾಸದ ಬಗ್ಗೆ ಗಮನ ಕೊಡ್ತಿರೋದು.

ಇಷ್ಟೊತ್ತು ಎಲ್ಲ ನಕಾರಾತ್ಮಕ ವಿಷಯಗಳ ಬಗ್ಗೆನೇ ಮಾತಾಡಿದ್ದಾಯ್ತು, ನಿಮಗಿಷ್ಟವಾಗೋ ಯಾವುದಾದ್ರೂ ಹವ್ಯಾಸ ಬೆಳೆಸ್ಕೊಳಿ. ನಮ್ಮ ಈ ಬ್ಯುಸಿಯಾದ ಜೀವನ ಶೈಲಿಯಲ್ಲಿ ಅದು ಕಷ್ಟಾನೇ, ಆದ್ರೆ ನಿಮಗೆ ಸಂತೋಷಕೊಡು ಯಾವುದಾದ್ರೂ ಒಂದು ಹವ್ಯಾಸದಬಗ್ಗೆ ಗಮನ ಕೊಡೋದು ಒಳ್ಳೇದು.

http://www.barbatulalfa.ro/

ಈಗ ಹೇಳಿ ನೀವು ಇವುಗಳನ್ನ ಗಮನಿಸಿದ್ರಾ?