ಮಹಾಭಾರತದಲ್ಲಿರೋ ಅನೇಕ ವಿಷಯಗಳಬಗ್ಗೆ ನಮಗೆ ಗೊತ್ತೇ ಇಲ್ಲ. ವಿವರವಾಗಿ ಓದುತ್ತಾ ಹೋದಷ್ಟೂ ಅನೇಕ ಗೊತ್ತಿರದ ವಿಚಾರಗಳು ನಮಗೆ ಗೊತ್ತಾಗುತ್ತೆ. ಇಂತ ಒಂದು ವಿಷಯದ ಬಗ್ಗೆ ಇವತ್ತು ತಿಳ್ಕೊಳೋಣ.

ಕೃಷ್ಣ ಪಾಂಡವರ ಕಡೆ ಸೇರಿ, ಕೌರವರ ವಿರುದ್ಧ ಯಾವುದೇ ಅಸ್ತ್ರ ಬಳಸದೆ ಇದ್ರೂ ತನ್ನ ಯುಕ್ತಿಯಿಂದ ಕೌರವರನ್ನ ಸೋಲಿಸಿದ ಅನ್ನೋದು ಗೊತ್ತೇ ಇದೆ.

ನಾವೆಲ್ಲ ಕೃಷ್ಣ ಪಾಂಡವರ ಹಿತ ಚಿಂತಕ, ಗುರು, ಮಾರ್ಗದರ್ಶಕ ಅಂತೆಲ್ಲ ತಿಳ್ಕೊಂಡಿದ್ದೀವಿ, ಕೌರವರಿಗೂ ಕೃಷ್ಣನಿಗೂ ಯಾವುದೇ ಸಂಭಂದ ಇರ್ಲಿಲ್ವ? ಇದ್ದಿದ್ರೂ ಅದು ಯಾವ ರೀತಿಯ ಸಂಭಂದ?

ಮಹಾಭಾರತದಲ್ಲಿ ಕೃಷ್ಣನ ಪಾತ್ರ

ಮಹಾಭಾರತ ಗೊತ್ತಿರೋವರೆಲ್ಲ ತಿಳ್ಕೊಂಡಿರೋಹಾಗೆ ಕೃಷ್ಣ ದ್ರೌಪದಿಯ ರಕ್ಷಕ, ಒಳ್ಳೆ ಗೆಳೆಯ. ಇಂತಹ ಕೃಷ್ಣ ಕೌರವರು ಅವನ ಸಹಾಯ ಕೇಳಿದಾಗ ಯಾಕೆ ಆಗಲ್ಲ ಅಂದ?  ಯಾಕೆ ಅಂದ್ರೆ ದುರ್ಯೋಧನನಿಗೂ ಕೃಷ್ಣನಿಗೂ ಒಂದು ವಿಶೇಷ, ವೈಯಕ್ತಿಕ  ಸಂಭಂದ ಇತ್ತು, ಅದಕ್ಕೆ.

ಆ ಸಂಭಂದ ಏನು ಅಂದ್ರೆ, ಅವರಿಬ್ಬರೂ ಬೀಗರು/ ಸಂಭಂದಿಗಳು. ದುರ್ಯೋಧನ ಯವರರೂ ಇದನ್ನ ಒಪ್ಪಿಕೊಂಡಿರಲಿಲ್ಲ, ಆದರೆ ಕೃಷ್ಣ ಯಾವತ್ತೂ ಈ ಸಂಭಂದಗಳ ಮಿತಿ ಮೀರಿರಲಿಲ್ಲ.

ಕುರುಕ್ಷೇತ್ರ ಯುದ್ಧಕ್ಕೂ ತುಂಬಾ ಮೊದಲೇ, ಕೃಷ್ಣ ಹೇಗೆ ರುಕ್ಮಿಣಿಯನ್ನ ಮಾಡುವೆ ಆದನೋ, ಅದೇ ರೀತಿ ಕೃಷ್ಣನ ಮಗ ಸಾಂಬ ದುರ್ಯೋಧನನ ಮಗಳು ಲಕ್ಷ್ಮಣಾಳನ್ನ ಮದುವೆ ಆಗಿದ್ದ.

ಕೃಷ್ಣನಿಗೆ 8 ಜನ ಮುಖ್ಯವಾದ ಹೆಂಡತಿಯರು, ರುಕ್ಮಿಣಿ, ಸತ್ಯಭಾಮ, ಜಾಂಬವತಿ, ಮಿತ್ರವಿಂದಾ, ನಾಗ್ನಜಿತಿ, ಲಕ್ಷ್ಮಣಾ, ಭದ್ರಾ ಹಾಗೂ ಕಾಳಿಂದಿ. ಕೃಷ್ಣ ಹಾಗೂ ಜಾಂಬವತಿಯರ ಮಗ ಸಾಂಬ. ಇವನು ತನ್ನ ತಂದೆ ಕೃಷ್ಣನ ಹಾಗೇ ತುಂಬಾ ತುಂಟ.

ಕೃಷ್ಣ ಖಠಿಣವಾದ ತಪಸ್ಸು ಮಾಡಿದಮೇಲೆ ಸಾಂಬ ಹುಟ್ಟಿದ್ದು. ಕೃಷ್ಣನ ತಪ್ಪಸ್ಸಿನ ಉದ್ದೇಶ ತಿಳಿದು ಶಿವ ಕೃಷ್ಣನಿಗೆ ವರ ಕೊಡ್ತಾನೆ, ಆಗ ಕೃಷ್ಣ ಶಿವ ವಿನಾಶಕ್ಕೆ ಅಂತ ಇರೋ ದೇವರು ಅಂತ ಗೊತ್ತಿದ್ದರೂ,ಶಿವನಂತೆಯೇ ಇರೋ ಮಗ ಬೇಕು ಅಂತ ಕೇಳ್ಕೋತಾನೆ. ಶಿವನ ವರ ಪ್ರಸಾದಾನೆ ಈ ಸಾಂಬ.

ದುರ್ಯೋಧನನ ಮಗಳು ಲಕ್ಷ್ಮಣಾ

ರಾಜಧರ್ಮದ ಹಾಗೆ, ಎಲ್ಲರಂತೆಯೇ ದುರ್ಯೋಧನನ ಮಗಳು ಮದುವೆಯ ವಯಸ್ಸಿಗೆ ಬಂದಾಗ, ಧುರ್ಯೋಧನ  ತನ್ನ ಮಗಳಿಗೆ ಯೋಗ್ಯ ವರನನ್ನ ಹುಡುಕಲು ಸ್ವಯಂವರ ಏರ್ಪಾಡು ಮಾಡ್ತಾನೆ. ಈ ಸ್ವಯಂವರಕ್ಕೆ ಹಲವಾರು ದೇಶದ ರಾಜಕುಮಾರರು ಬಂದಿರ್ತಾರೆ.

ಕೃಷ್ಣ ಹಾಗೂ ದುರ್ಯೋಧನ ಬೀಗರಾಗಿದ್ದು

ಲಕ್ಷ್ಮಣಾಳಿಗೆ ಇಷ್ಟ ಇಲ್ಲದೆ ಇದ್ದರೂ, ಸಾಂಬ ಸ್ವಯಂವರ ಶುರು ಆಗೋದಕ್ಕಿಂತ ಮುಂಚೇನೆ ಅಲ್ಲಿಂದ ಅವಳನ್ನ ಅಪಹರಿಸಿಕೊಂಡು ಹೋಗ್ತಾನೆ. ಇದರಿಂದ ಕೋಪಗೊಂಡ ಕೌರವರು ಅವನನ್ನ ಹಿಡಿದುಕೊಂಡು ಬಂದು, ಬಂದಿಯಾಗಿ ಇಟ್ಟಿರ್ತಾರೆ.

ಕೆಲವು ಉಲ್ಲೇಖಗಳ ಪ್ರಕಾರ, ಸಾಂಬ ಹಾಗೂ ಲಕ್ಷ್ಮಣಾ ಒಬ್ಬರನ್ನೊಬ್ಬರು ಇಷ್ಟಪಟ್ಟಿರ್ತಾರೆ. ಸ್ವಯಂವರ ನಿಶ್ಚಯವಾದ ಸುದ್ದಿಯನ್ನ ಲಕ್ಷ್ಮಣಾ ಸಾಂಬನಿಗೆ ತಿಳಿಸಿ, ಅವಳನ್ನ ಅಲ್ಲಿಂದ ಕರೆದುಕೊಂಡು ಹೋಗೋದಕ್ಕೆ ಹೇಳಿರ್ತಾಳೆ. ಕೌರವರಿಗೆ ಕೃಷ್ಣನನ್ನ ಕಂಡರೆ ಇಷ್ಟ ಇಲ್ಲ ಅಂತ ಗೊತ್ತಿದ್ದ ಸಾಂಬ, ಸ್ವಯಂವರ ನಡೆಯೋ ಜಾಗಕ್ಕೆ ಬಂದು, ಅವಳನ್ನ ಅಪಹರಿಸಿಕೊಂಡು ಹೋಗ್ತಾನೆ. ಕೌರವರು ಅವರನ್ನ ಹುಡುಕಿ ಕರೆತಂದರೂ, ಅಲ್ಲಿ ಬಂದಿದ್ದ ಬೇರೆ ಯಾವ ರಾಜಕುಮಾರರೂ ಲಕ್ಷ್ಮಣಾಳನ್ನು ಮದುವೆಯಾಗಲು ಒಪ್ಪುವುದಿಲ್ಲ. ಯಾಕೆ ಅಂದ್ರೆ ಕಾನೂನಿಕ ಪ್ರಕಾರ ಯಾರು ಅಪಹರಣ ಮಾಡಿದ್ದರೋ ಅವರೇ ಮದುವೆ ಆಗುಬೇಕು ಅಂತ ಇರುತ್ತೆ.

ಈ ವಿಷಯ ಬಲರಾಮನಿಗೆ ಗೊತ್ತಾಗಿ, ಅವನು ಧುರ್ಯೋಧನನಿಗೆ ಸಾಂಬನನ್ನು ಬಿಡುಗಡೆ ಮಾಡಿ, ಸಾಂಬನಿಗೆ ಅವನ ಮಗಳನ್ನು ಕೊಟ್ಟು ಮದುವೆ ಮಾಡುವಂತೆ ಹೇಳ್ತಾನೆ, ಆದರೆ ದುರ್ಯೋಧನನ್ನ ಇದಕ್ಕೆ ಒಪ್ಪೋದಿಲ್ಲ.

ಬಲರಾಮ ಬಲವಂತದಿಂದ ಸಾಂಬನನ್ನ ಬಿಡಿಸೋದಕ್ಕೆ  ಹೋದಾಗ, ಕೌರವರು ಅವನಮೇಲೆ ಯುದ್ಧಕ್ಕೆ ಬರ್ತಾರೆ, ತನ್ನ ನೇಗಿಲಿನಿಂದ ಅವರಿಗೆ ಹೊಡೆದು, ಇಡೀ ಹಸ್ತಿನಾಪುರವನ್ನೇ ಗಂಗೆಯಲ್ಲಿ ಮುಳುಗಿಸ್ತೀನಿ ಅಂತ ಹೇಳ್ತಾನೆ. ಆಮೇಲೆ   ಕೌರವರೊಡನೆ ಯುದ್ಧಮಾಡಿ, ಗೆದ್ದು ಸಾಂಬನನ್ನು ಬಿಡಿಸ್ತಾನೆ.

ಕೊನೆಗೆ, ಕೃಷ್ಣ ಹಾಗೂ ಬಲರಾಮರಿಗೆ ಹೆದರಿ, ದುರ್ಯೋಧನ ತನಗೆ ಇಷ್ಟ ಇಲ್ಲದೆ ಇದ್ದರೂ ತನ್ನ ಮಗಳು ಲಕ್ಷ್ಮಣಾಳನ್ನು ಸಾಂಬನಿಗೆ ಕೊಟ್ಟು ಮದುವೆ ಮಾಡೋದಕ್ಕೆ ಒಪ್ಕೋತಾನೆ. ಸಾಂಬ ಹಾಗೂ ಲಕ್ಷ್ಮಣಾಳ ಮದುವೆ ಗಾಂಧರ್ವ ರೀತಿಯಲ್ಲಿ ನೆಡೆಯುತ್ತೆ.

ಕೃಷ್ಣ ರುಕ್ಮಿಣಿಯನ್ನ ಇದೆ ರೀತಿ ಅಪಹರಿಸಿ ಮದುವೆ ಆಗಿರ್ತಾನೆ, ಅವನ ಮಗ ಅಪ್ಪನ ದಾರಿಯನ್ನೇ ಅನುಸರಿಸ್ತಾನೆ. ಇದು ಕೃಷ್ಣ ಹಾಗೂ ದುರ್ಯೋಧನರಿಗೆ ಇದ್ದ ಸಂಭಂದದ ಬಗ್ಗೆನೂ ಹೇಳುತ್ತೆ.