https://cdn2.curejoy.com/content/wp-content/uploads/2017/11/End-The-Fuss-About-Split-Ends-With-Natural-Beauty-Remedies-770x402.jpg

ಕೂದಲು ತುದಿ ಯಾಕೆ ಕವಲೊಡೆಯತ್ತೆ ಗೊತ್ತಾ? ನೀವು ಸರಿಯಾಗಿ ಆರೈಕೆ ಮಾಡದಿದ್ದರೆ, ಆಗಾಗ ಹೆಚ್ಚೆಚ್ಚು ತಲೆ ಸ್ನಾನ ಮಾಡಿದರೆ, ಸರಿಯಾಗಿ ಎಣ್ಣೆ ಹಚ್ಚದಿದ್ದರೆ, ಧೂಳಿಗೆ ಹೆಚ್ಚು ಕೂದಲನ ಒಡ್ಡಿದರೆ, ಆಗಾಗ ಕತ್ತರಿಸದಿದ್ದರೆ, ಹೆಚ್ಚೆಚ್ಚು ಹೇರ್ ಸ್ಟೈಲ್ ಮಾಡೋ ಕೆಮಿಕಲ್ಗಳನ್ನ ಬಳಸುತ್ತಿದ್ದರೆ ಅಥವಾ ಹೆಚ್ಚೆಚ್ಚು ಈಜುಕೊಳದಲ್ಲಿ ಕ್ಲೋರಿನ್ ನೀರಲ್ಲಿ ಕೂದಲನ್ನ ಅದ್ದಿದರೆ ಹೀಗಾಗುತ್ತೆ.

ಎಷ್ಟೋ ಸಾರಿ ಏನು ಮಾಡಬೇಕು ಅಂತ ತಿಳೀದೆ ಏನೇನೋ ಮಾಡೋಕೆ ಹೋಗ್ತೀವಿ. ಆದರೆ ಮನೇಲೆ ನಾವಿಲ್ಲಿ ಹೇಳೊದನ್ನ ಟ್ರೈ ಮಾಡಿ ನೋಡಿ ನಿಮ್ಮ ಕೂದಲು ಹೇಗಿರುತ್ತೆ ಅಂತ ನೋಡಿ ನಿಮ್ಮ ಗೆಳೆಯರಿಗೂ ತಿಳಿಸಿ.

1. ಮೊಟ್ಟೆ + ಬಾದಾಮಿ ಎಣ್ಣೆ + ಜೇನು ಹಚ್ಚಿ

ಕೂದಲಿಗೆ ಬೇಕಾಗೋ ಪ್ರೋಟೀನ್ ಅಂಶ ಇರೋ ಕಾರಣ ಮೊಟ್ಟೆನ ಹಲವಾರು ವರ್ಷಗಳಿಂದ ಕೂದಲಿಗೆ ಬಳಸುತ್ತಲೇ ಬಂದಿದ್ದೀವಿ. ಇನ್ನು ಮೊಟ್ಟೆ ಕೂದಲಿಗೆ ಕೊಡೋ ಹೊಳಪನ್ನ ಮತ್ಯಾವ ವಸ್ತೂನೂ ಕೊಡೋಲ್ಲ ಅನ್ನೋದು ಅಂತೆಕಂತೆಯಲ್ಲ ಬಿಡಿ.

ಬರೀ ಮೊಟ್ಟೆ ಹಚ್ಚೀ ಬದಲು ಒಂದು ಚಮಚ ಆಲಿವ್ ಎಣ್ಣೆ, ಒಂದು ಚಮಚ ಬಾದಾಮಿ ಎಣ್ಣೆ ಜೊತೇಲಿ ಜೇನನ್ನ ಹಾಕಿ ಮಿಶ್ರಣ ಮಾಡಿ ಹಚ್ಚಿ ಅರ್ಧ ಗಂಟೆ ನಂತರ ತೊಳೆಯಿರಿ.

s.doctoroz.com

2. ಕೊಬ್ಬರಿ ಎಣ್ಣೇಲಿ ಮಸಾಜ್ ಮಾಡಿ

ಕೂದಲಿನ ಯಾವುದೇ ಸಮಸ್ಯೆಗೂ ಕಾಲಾನು ಕಾಲದಿಂದ ಬಳಕೆಯಲ್ಲಿರೋ ಒಂದು ಪರಿಹಾರ ಅಂದರೆ ಅದು ಕೊಬ್ಬರಿ ಎಣ್ಣೆ. ಕೊಬ್ಬರಿ ಎಣ್ಣೆನ ಸ್ವಲ್ಪ ಬಿಸಿ ಮಾಡಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ ಸ್ವಲ್ಪ ಸಮಯದ ನಂತರ ತೊಳೆಯಿರಿ.

well-beingsecrets.com

3. ಮೊಸರಿನಿಂದ ಪ್ಯಾಕ್ ಹಾಕಿ

ಮೊಟ್ಟೆ ಬಳಸೋಕೆ ಇಷ್ಟ ಪಡದೇ ಇರೋರು ಗಟ್ಟಿ ಮೊಸರನ್ನ ಕೂದಲಿಗೆ ಹಚ್ಚೋ ಅಭ್ಯಾಸ ಮಾಡಿಕೊಂಡರೆ ತಲೆ ಹೊಟ್ಟು ಸಮಸ್ಯೆ ನಿವಾರಣೆಯಾಗಿ ಕೂದಲು ದಟ್ಟವಾಗಿ ಸೊಂಪಾಗಿ ಬೆಳೆಯುತ್ತೆ.

img.werecipes.com

4. ಕಪ್ಪು ಧಾನ್ಯವನ್ನ/ ಉದ್ದಿನ ಕಾಳನ್ನ ಬಳಸಿ

ಕೆಲವು ಜಾಗಗಳಲ್ಲಿ ಕೂದಲನ್ನ ತೊಳೆಯೋಕೆ ಕಪ್ಪು ಧಾನ್ಯ ತೊಳೆದ ನೀರನ್ನ ಬಳಸುತ್ತಾರಂತೆ. ಐರನ್,ಫಾಲಿಕ್ ಆಸಿಡ್, ಫಾಸ್ಫರಸ್, ಫೈಬರ್ ಹಾಗು ಪ್ರೋಟೀನ್ ಇರೋ ಕಾರಣ ನಮಗೆ ಕೂದಲು ಸೊಂಪಾಗಿ ಬೆಳೆಯೋಕೆ ಸಹಾಯ ಮಾಡುತ್ತೆ. ಪ್ರೋಟೀನ್ ಕೂದಲು ಬೆಳೆಯೋಕೆ ಸಹಾಯ ಮಾಡಿದರೆ ಫಾಲಿಕ್ ಆಸಿಡ್ ಕೂದಲಿನ ಬುಡಕ್ಕೆ ಆಮ್ಲಜನಕ ಸಿಗೋ ಹಾಗೆ ಮಾಡುತ್ತೆ. ಒಂದು ಬಟ್ಟಲು ಧಾನ್ಯಕ್ಕೆ ಒಂದು ಚಮಚ ಮೆಂತ್ಯ ಕಾಳನ್ನ ಬೆರೆಸಿ ಪುಡಿ ಮಾಡಿಟ್ಟುಕೊಂಡು ಈ ಪುಡಿಗೆ ಮೊಸರನ್ನ ಹಾಕಿ ಕೂದಲಿಗೆ ಹಚ್ಚಿ.

images.food52.com

5. ಪರಂಗಿ ಹಣ್ಣು + ಮೊಸರು ಹಚ್ಚಿ

ಕೂದಲಿಗೆ ರಕ್ತ ಸಂಚಾರ ಹೆಚ್ಚಿಸೋ ಫಾಲಿಕ್ ಆಸಿಡ್, ಕೂದಲಲ್ಲಿ ದ್ರವಂಶ ಹೆಚ್ಚಿಸೋ ವಿಟಮಿನ್ ಏ, ಮೃದುತ್ವ ತರೋ ಅಂಶ ಹೆಚ್ಚಿರೋ ಕಾರಣ ಕೂದಲನ್ನ ಸೊಂಪಾಗಿಡೋಕೆ ಪರಂಗಿ ಹಣ್ಣು ಸಹಾಯ ಮಾಡುತ್ತೆ.

ಹಣ್ಣಾಗಿರೋ ಪರಂಗಿಯನ್ನ ಪೇಸ್ಟ್ ಮಾಡಿ ಮೊಸರಿನೊಂದಿಗೆ ತಲೆಗೆ ಹಚ್ಚಿ ಅರ್ಧ ಗಂಟೆ ನಂತರ ಕೂದಲನ್ನ ತೊಳೆಯಿರಿ.

i.ndtvimg.com

ಇದ್ರಲ್ಲಿ ಯಾವುದನ್ನೇ ಮಾಡಿದರೂ ನಿಮ್ಮ ಕೂದಲು ಸೊಂಪಾಗಿ ಬೆಳೆಯುತ್ತೆ.