http://bebaknews.in/wp-content/uploads/avatar_images/kuber.jpg

ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಹಣದ ದೇವತೆ. ಇದು ಎಲ್ರಿಗೂ ಗೊತ್ತಿರೋದು. ಆದರೆ…

ಶಿವಪುರಾಣದಲ್ಲಿ ಬರೋ ಕಥೆ ಪ್ರಕಾರ ತುಂಬಾ ಹಿಂದೆ ಗುನ್ನಿಧಿ ಅಂತ ಒಬ್ಬ ಬಡವ ಇದ್ದ. ಅವ್ನಿಗೆ ಊಟಕ್ಕೂ ದುಡ್ಡಿಲ್ಲದ ಕಾರಣ ಕಳ್ಳತನ ಮಾಡಕ್ಕೆ ಶುರುಮಾಡ್ತಾನೆ.

ಅದೂ ಅಂಥಿಂಥ ಕಳ್ಳ ಅಲ್ಲ, ದೇವಸ್ಥಾನ ಕೂಡ ಕದಿಯೋ ಕಳ್ಳ! ಈ ಕಥೆ ಇಂಟರೆಸ್ಟಿಂಗ್ ಆಗಿದೆ, ಕೇಳಿ.

ಮೂಲ

ಈ ಕಳ್ಳ ಒಮ್ಮೆ ಒಂದು ಶಿವಮಂದಿರಕ್ಕೆ ನುಗ್ತಾನೆ…

ಅಲ್ಲಿ ತುಂಬ ಬೆಲೆ ಬಾಳೋ ಒಡವೆ, ಬಂಗಾರ ಎಲ್ಲ ಇರುತ್ತೆ. ಆದರೆ ಶಿವಮಂದಿರದ ಒಳಗಿದ್ದ ದೀಪ ಗಾಳಿಯಿಂದಾಗಿ ಕೆಟ್ಟು ಹೋಗಿರುತ್ತೆ. ಗುನ್ನಿಧಿ ತುಂಬ ಸಲ ಅದನ್ನ ಉರಿಸೋಕೆ ಪ್ರಯತ್ನಿಸಿದ್ರೂ, ಮತ್ತೆ ಮತ್ತೆ ಗಾಳೀಗೆ ಅದು ಆರಿ ಹೋಗುತ್ತೆ. ಇದು ತುಂಬ ಸಲ ಆದ ಮೇಲೆ, ಕೊನೆಗೆ ಗುನ್ನಿಧಿ ಅವ್ನ ಅಂಗಿ ತೆಗ್ದು ಅದಕ್ಕೇ ಬೆಂಕಿ ಹಚ್ತಾನೆ. ಗುನ್ನಿಧಿಯ ಹಠ ಮತ್ತು ಪರಿಶ್ರಮ ನೋಡಿ ಶಿವನಿಗೆ ಮೆಚ್ಚಿಗೆಯಾಗುತ್ತೆ. ಅಲ್ಲದೆ ಗುನ್ನಿಧಿಯಿಂದಾಗಿ ಮಂದಿರದಲ್ಲಿ ಬೆಳಕು ಬಂದಿರುತ್ತಲ್ವ, ಅದಕ್ಕೆ …

ಶಿವ ಪ್ರಸನ್ನನಾಗಿ ಗುನ್ನಿಧಿ ಅವ್ನ ಮುಂದಿನ ಜನ್ಮದಲ್ಲಿ ಐಶ್ವರ್ಯದ ದೇವತೆಯಾಗೋ ವರ ಕೊಡ್ತಾನೆ.

ಈ ಕಳ್ಳಾನೆ ಮುಂದಿನ ಜನ್ಮದಲ್ಲಿ ಕುಬೇರ ಆಗ್ತಾನೆ. ಶಿವ ಯಾವ ರೀತಿಯಲ್ಲೆಲ್ಲ ಭಕ್ತರನ್ನ ಮೆಚ್ತಾನೆ ಅನ್ನೋದಕ್ಕೆ ಈ ಕಥೆ ಒಂದು ಉದಾಹರಣೆ. ಈ ಕಥೆಯಿಂದ್ಲೇ ಶಿವಮಂದಿರದಲ್ಲಿ ದೀಪ ಹಚ್ಚೋಕೆ ಹಿರಿಯರು ಹೇಳೋದು. ದೀಪ ಹಚ್ವಾಗ 'ಓಂ ನಮಃ ಶಿವಾಯ' ಅಂತ ಹೇಳೋದು ಇನ್ನೂ ಒಳ್ಳೇದು.

ಮೂಲ

ಕುಬೇರ ಸಂಪತ್ತಿನ ರಕ್ಷಕ, ಅದರ ಒಡೆಯನಲ್ಲ

ಅದಕ್ಕೇ ದೇವಸ್ಥಾನದಲ್ಲಿ ಕುಬೇರನ ವಿಗ್ರಹ ಗರ್ಭಗುಡಿಯ ಹೊರಗಿರುತ್ತೆ. ಪುರಾಣಗಳಲ್ಲಿ ಕುಬೇರನನ್ನ ಶಿವಗಣದಲ್ಲಿ ಒಬ್ಬ ಕುರೂಪಿಯಾಗಿ ಚಿತ್ರಿಸಲಾಗಿದೆ.

ಮೂಲ

ನೋಡಿದ್ರಾ ಹೇಗಿದ್ದೋನು ಶಿವನ ಕೃಪೆಯಿಂದ ಹೇಗಾಗ್ಬಿಟ್ಟ?