http://www.smitecentral.com/content/articles/page/features/the-underrated-episode-5-kumbhakarna

ಕುಂಭಕರ್ಣ ರಾವಣನ ತಮ್ಮ, ಅಂವಾ ಲೊಟ್ಟಾ ದೇಹದಂವಾ, ಅಂವಗ ಭಾಳಾ ಹಸುವು, ಎಸ್ಟ ಮುನಿಗಳನ ಸಾಯಿಸಿದ್ದರೂ ಸೈತ ಕುಂಭಕರ್ಣ ಛೊಲೋವನ ಅಂತ. ಇಂವನ ಬಗ್ಗೆ ನಿಮಗ ಗೊತ್ತ ಇಲ್ಲದಿರ 13 ವಿಷಯ ಹೇಳತವಿ, ಓದಿಕೆರ್ರಿ.

1. ಇಂದ್ರಗ ಕುಂಭಕರ್ಣನ ಮ್ಯಾಲ ಹೊಟ್ಟಿಕಿಚ್ಚ

ರಾಕ್ಷಿಸ ಆಗಿದ್ದರೂ ಕುಂಭಕರ್ಣಗ ಧರ್ಮದ ಮ್ಯಾಲ ನಿಷ್ಠಾ ಇತ್ತು. ಅಂವಾ ಭಾಳ ಶಾಣ್ಯಾ ಮತ್ತ ಶೂರಾ ಆಗಿದ್ದ. ಅದಕ್ಕ ಇಂದ್ರಗ ಕುಂಭಕರ್ಣನ ಮ್ಯಾಲ ಹೊಟ್ಟಿಕಿಚ್ಚ.

2. ಬ್ರಹ್ಮನ ಹಂತೇಲೆ ವರಾ ಕೇಳ ಮುಂದ ಎಡವಟ್ಟ ಮಾಡಿಕೆಂಡ ನಿದ್ರಾಸನ ಕೇಳಿಬಿಡತಾನ

ರಾವಣ ಮತ್ತ ವಿಭೀಷಣರ ಜತಿ ಸೇರಿಕೆಂಡ ಕುಂಭಕರ್ಣ ಒಂದ ಯಜ್ಞಾ ಮಾಡಿದಾಗ ಬ್ರಹ್ಮ ಪ್ರತ್ಯಕ್ಷ ಆಕ್ಕಾನ. ಆದರ ಸರಸ್ವತಿ ದೇವಿ ಕುಂಭಕರ್ಣನ ನಾಲಿಗೆ ಹೊಳ್ಳದ ಹಂಗ ಮಾಡತಾಳ. ಇದ ಇಂದ್ರನ ಕಿತಬಿ. ಲಾಸ್ಟಿಗೆ ಕುಂಭಕರ್ಣ ‘ಇಂದ್ರಾಸನ’ ಕೇಳಬೇಕಾದಂವ ‘ನಿದ್ರಾಸನ’ ಕೇಳ ಹಂಗ ಸರಸ್ವತಿ ಮಾಡಿ ಬಿಡತಾಳ.

 

3. ವರಾ ಕೇಳೋ ಮುಂದ ಇನ್ನೊಂದ ಘಾತಾಗಿ ಆರ ತಿಂಗಳ ನಿದ್ದಿ ಮಾಡಂಗ ಆತು.

ಈ ಸರಸ್ವತಿ ಮಾಡಿದ ಕೆಲಸಕ್ಕ ಇನ್ನೊಂದ ವರಾನೂ ಸೈತ ಕುಂಭಕರ್ಣಗ ಶಾಪ ಆಗಿಬಿಡತತಿ. ದೇವತೆಗುಳನೆಲ್ಲಾ ನಾಶಾ ಮಾಡಬೇಕ ಅಂತ ಸಂಸ್ಕೃತದಾಗ ‘ನಿರ್ದೇವತ್ವಮ್’ ಅಂತ ಕೇಳಬೇಕಾಗಿದ್ದಂವನ್ನ ‘ನಿದ್ರಾವತ್ವಮ್’ (ಅಂದರ ನಿದ್ದಿ) ಅಂತ ಕೇಳ ಹಂಗ ಮಾಡತಾಳ. ಕುಂಭಕರ್ಣ ಆರ ತಿಂಗಳ ನಿದ್ದಿ ಮಾಡತಿದ್ದ, ಎದ್ದಾಗ ಅಂವಗ ಹಸುವು ಎಸ್ಟ್  ಇರತಿತ್ತ ಅಂದರ ಅಂವಾ ಕೈಗೆ ಯಾರ ಸಿಗತಾರಾ ಅವರನೆಲ್ಲಾ ತಿಂತದ್ದ!

4. ರಾಮ – ರಾವಣರ ಯುದ್ಧಕ್ಕ ಸಾವರ ಆನಿಗೂಳನ ಅಂವನ ಮ್ಯಾಲ ನಡಿಸಿ ಕುಂಭಕರ್ಣನ್ನ ನಿದ್ದಿ ಇಂದಾ ಎಬಸತಾರ

ರಾವಣಗ ರಾಮನ್ನ ಯುದ್ಧದಾಗ ಸೋಲಸಾಕ ಆಗಲ್ಲ ಆಂತ ಗೊತ್ತಾಕ್ಕತಿ. ಅದಕ್ಕ ಅಂವಾ ಕುಂಭಕರ್ಣನ್ನ ನಿದ್ದಿ  ಇಂದಾ ಎಬಸಾಕ ಟ್ರಾಯ್ ಮಾಡತಾನ. ಲಾಸ್ಟಿಗೆ ಸಾವರ ಆನಿಗೂಳನ ಅಂವನ ಮ್ಯಾಲ ನಡಿಸಿದಾಗ ಕುಂಭಕರ್ಣಗ ಎಚ್ಚರ ಆಕ್ಕತಿ.

 

5. ಕುಂಭಕರ್ಣಗ ಯುದ್ಧಾ ಮಾಡಾಕ ಇಸ್ಟಾ ಇರಲ್ಲ

ನಿದ್ದಿ ಇಂದಾ ಎದ್ದ ಮ್ಯಾಲ ಕುಂಭಕರ್ಣಗ ಯುದ್ಧದ ಕಾರಣಾ ಹೇಳಿದಾಗ ಅಂವಗ ರಾವಣ ಮಾಡಿದ್ದ ತಪ್ಪ ಅಂತ ಅನಸತತಿ. ರಾವಣಗ ಹೇಳಿ ನೋಡತಾನ, ಆದರ ನಿರ್ವಾಹ ಇಲ್ಲದ ಯುದ್ದ ಮಾಡತಾನ.

6. ಯುದ್ಧದಾಗ ಕುಂಭಕರ್ಣ ಸತ್ತಾಗನ ರಾವಣ ಗೆಲ್ಲ ಆಸೆ ಬಿಟ್ಟ ಬಿಡತಾನ

ಕುಂಭಕರ್ಣ ಯುದ್ಧಕ್ಕ ಹೋದಂವಾ ರಾಮನ ಸೈನ್ಯಾನ ನಾಶಾ ಮಾಡತಾನ, ಸುಗ್ರೀವ ಅರವ ತಪ್ಪಿ ಬೀಳ ಹಂಗ ಮಾಡತಾನ, ಹನುಮಂತಗ ಗಾಯ ಮಾಡತಾನ, ಆದರ ಲಾಸ್ಟಿಗೆ ರಾಮನಿಂದಾ ಸಾಯತಾನ. ಅವಾಗನ ರಾವಣಗ ತಾನ ಸೋತೆ ಅಂತ ಅನಿಸಿ ಬಿಡತತಿ

 

7. ಕುಂಬ, ನಿಕುಂಭ ಅಂತ ಅಂವಗ ಇಬ್ಬರ ಮಕ್ಕಳ ಇದ್ದರು

ಅವರೂ ಯುದ್ಧ ಮಾಡತಾರ, ಯುದ್ಧದಾಗ ಸಾಯತಾರ.

8. ಕುಂಭಕರ್ಣ ಸತ್ತ ಮ್ಯಾಲ ರಾಮನಿಂದ ಮೋಕ್ಷ ಸಿಗತತಿ

ಕುಂಭಕರ್ಣನ್ನ ಕೊಂದ ಮ್ಯಾಲ ಅಂವಗ ರಾಮ ಮೋಕ್ಷ ಕೊಡತಾನ.

 

9. ರಾಮ – ಕುಂಭಕರ್ಣ ಯುದ್ಧ ಇಂಡೋನೇಷಿಯಾದೊಳಗ ಟ್ರೆಡೀಶನಲ್ ಡ್ಯಾನ್ಸಿನ್ಯಾಗ ಮುಖ್ಯ ಪಾರ್ಟ್

ಕುಂಭಕರ್ಣ ಯುದ್ಧ ಮಾಡಾಕ ಹತ್ತಿದ್ದ ತಪ್ಪ ಅಂತ ಗೊತ್ತ ಇದ್ದರೂ ಸೈತ ತನ್ನ ಕರ್ತವ್ಯ ಪಾಲನಾ ಮಾಡತಾನ. ಮಹಾಭಾರತದಾಗ ಧುರ್ಯೋಧನಗ ಒಬ್ಬ ವಿಕರ್ಣ ಅಂತ ತಮ್ಮ ಇರತಾನ, ಅಂವನೂ ಹಿಂಗನ. ಇವರಿಬ್ಬರನೂ  ಈ ವಿಷಯಕ್ಕ ಕಂಪೇರ್ ಮಾಡತಾರ. ಕುಂಭಕರ್ಣನ ಯುದ್ಧ ಎಸ್ಟ ಇಂಪಾರ್ಟೆಂಟ್ ಅಂದರ ಕೇಚ ಅನ್ನ ಇಂಡೋನೇಶಿಯಾದ ಒಂದ ಟ್ರೆಡೀಶನಲ್ ಡ್ಯಾನ್ಸಿನ ಮುಖ್ಯ ಭಾಗ ಅದು.

10. ಕುಂಭಕರ್ಣಗ ಭೀಮ ಅಂತ ಇನ್ನೊಬ್ಬ ಮಗ ಇರತಾನ

ಇಂವಾ ಯುದ್ಧದ ಟಾಯಮನ್ಯಾಗ ಇಂವನ ಅವ್ವನ ಜತಿ ತಪ್ಪಿಸಿಗೆಂತಾನ.

 

11. ಭೀಮ ವಿಷ್ಣುನ ಕೊಲ್ಲೋ ಪ್ರತಿಜ್ಞಾ ಮಾಡತಾನ

ಕುಂಭಕರ್ಣನ ಮಗ ಭೀಮ, ಬ್ರಹ್ಮ ಕೊಟ್ಟ ವರದ್ದ ಶಕ್ತಿ ಇಟಗಂಡ ವಿಷ್ಣುನ ಕೊಲ್ಲ ಪ್ರತಿಜ್ಞಾ ಮಾಡತಾನಮ.

12. ಭೀಮನ್ನ ಶಿವ ಕೊಲ್ಲತಾನ

ಲಾಸ್ಟಿಗೆ ಭೀಮನ್ನ ಶಿವ ಭೀಮಾಶಂಕರ ಜೋತಿರ್ಲಿಂಗದ ರೂಪದಾಗ ಕೊಲ್ಲತಾನ.

13. ಸಂಪಾಗಿ ನಿದ್ದಿ ಹೊಡೇರನ ಕುಂಭಕರ್ಣ ಅಂತ ಕರೀತೇವಿ

ನಮ್ಮ ಕಡೆ ಅಸ್ಟ ಅಲ್ಲ, ಬಂಗಾಳಿ ಭಾಷಾದೊಳಗೂ ಸಂಪ ನಿದ್ದಿ ಹೊಡೇರನ ಕುಂಭಕರ್ಣ ಅಂತ ಕರೀತಾರಂತ.