ಕುಂತಿದೇವಿ ಹೆಸರು ಎಷ್ಟು ಪರಿಚಿತ, ಆದರೆ ಆಕೆ ನಿಜವಾದ ಹೆಸರು ಪೃಥಾ!! ಈಕೆ ಸುರಸೇನೆಯ ಯಾದವ ರಾಜ ಸೂರನ ಮಗಳು, ವಾಸುದೇವನ ಸಹೋದರಿ ಹಾಗೆ ಹಸ್ತಿನಾಪುರದ ಪಾಂಡುರಾಜನ ಪತ್ನಿ. ಕರ್ಣ ಕುಂತಿ ಪುತ್ರ ಅಂತ ಹೆಸರು ಪಡೆದರೂ ಭೀಮ, ಅರ್ಜುನ ಮತ್ತು ಯುಧಿಷ್ಟಿರನಿಗೂ ಇವಳೇ ತಾಯಿ.

ಕರ್ಣ ಹುಟ್ಟಿದ ಕತೆ

ಕುಂತಿ ರಾಜ್ಯದ ರಾಜ ಕುಂತಿಭೋಜನಿಗೆ ಮಕ್ಕಳಿಲ್ಲದ ಕಾರಣ, ಪೃಥಾಳ(ಕುಂತಿ)ತಂದೆ ಅವಳನ್ನ ಭೋಜ ರಾಜನ ಬಳಿ ಬಿಡುತ್ತಾನೆ. ಭೋಜ ಪೃಥಾಳಿಗೆ ಕುಂತಿ ಅಂತೆ ನಾಮಕರಣ ಮಾಡಿ ತನ್ನ ಮಗಳಂತೆ ನೋಡಿಕೊಳ್ಳುತ್ತಾನೆ.

ಕುಂತಿ-ಭೋಜನ ಆಸ್ಥಾನಕ್ಕೆ ದೂರ್ವಾಸ ಮುನಿ ಬಂದಾಗ ಕುಂತಿ ಅವರಿಗೆ ಮಾಡಿದ ಉಪಚಾರನ ಮೆಚ್ಚಿ ಕುಂತಿದೇವಿಗೆ ಯಾರಿಂದ ಬೇಕಾದರೂ ಮಗುವನ್ನು ಪಡೆಯೋ ವರ ನೀಡಿ ಮಂತ್ರ ಹೇಳಿಕೊಡುತ್ತಾರೆ.

ಮಂತ್ರದ ಮಹಿಮೆ ತಿಳಿಯದೆ ಕುಂತಿ ಸೂರ್ಯದೇವನನ್ನ ನೋಡಿ ಈ ಮಂತ್ರ ಪಟಿಸಿದಾಗ ಕರ್ಣ ಹುಟ್ಟುತ್ತಾನೆ. ಮದುವೆಯಾಗದೇ ಮಗನನ್ನ ಹಡೆದ ಕುಂತಿ ಹೆದರಿ ಮಗುವನ್ನ ನೀರಿನಲ್ಲಿ ತೇಲಿಬಿಡುತ್ತಾಳೆ. ನಂತರ ಕರ್ಣ ಹಸ್ತಿನಾಪುರದ ರಾಜ ದುರ್ಯೋಧನನಿಗೆ ಸಲಹೆಗಾರನಾಗಿ ಬೆಳೀತಾನೆ.

ಕುಂತಿಯ ಸ್ವಯಂವರ

ಕುಂತಿಗಾಗಿ ಭೋಜ ಸ್ವಯಂವರ ಮಾಡಿದಾಗ ಕುಂತಿ ಹಸ್ತಿನಾಪುರದ ಪಾಂಡುರಾಜನನ್ನ ಮದುವೆ ಆಗುತ್ತಾಳೆ. ರಾಜ್ಯ ವಿಸ್ತಾರ ಮಾಡುತ್ತಾ ಮಾಡುತ್ತಾ ಪಾಂಡು ಮಾದ್ರಾ ಮತ್ತೆ ಮಾದ್ರಿಯನ್ನ ಮದುವೆಯಾಗುತ್ತಾನೆ.

ಒಂದಿನ ಬೇಟೆಗೆ ಹೋದ ಕುಂತಿ ರಾಜ ಜಿಂಕೆ ರೂಪದಲ್ಲಿದ್ದ ಕಿಂದಮನನ್ನ ಕೊಲ್ಲುತ್ತಾನೆ. ಈ ತಪ್ಪಿಗೆ ಕಿಂದಮ ಪಾಂಡುರಾಜನಿಗೆ ತನ್ನ ಹೆಂಡತಿಯರ ಜೊತೆ ಸೇರಿದರೆ ಸಾವನ್ನಪ್ಪೋ ಶಾಪ ಕೊಡುತ್ತಾನೆ. ಇದರಿಂದ ನೊಂದ ಪಾಂಡು ಕುಂತಿ ಮತ್ತು ಮಾದ್ರಿಯ ಜೊತೆ ರಾಜ್ಯ ಬಿಟ್ಟು ಹೋಗುತ್ತಾನೆ.

ಪಾಂಡು ತನ್ನ ಪತ್ನಿಯರ ಜೊತೆ ತನಗೆ ಸಿಕ್ಕ ಶಾಪದ ಬಗ್ಗೆ ವಿವರಿಸಿದಾಗ, ಕುಂತಿ ತನಗಿದ್ದ ವರದ ಬಗ್ಗೆ ವಿವರಿಸಿ ಮೂರು ಬಾರಿ ಜಪಿಸಿ ಭೀಮ, ಅರ್ಜುನ ಹಾಗೆ ಯುಧಿಷ್ಠಿರನಿಗೆ ಜನ್ಮ ನೀಡುತ್ತಾಳೆ. ಮಾದ್ರಿಗೂ ಈ ಮತ್ರವನ್ನ ಹೇಳಿಕೊಟ್ಟು ಒಮ್ಮೆ ಮಾತ್ರ ಜಪಿಸೋ ಹಾಗೆ ಹೇಳೂತ್ತಾಳೆ. ಆದರೆ ಬುದ್ಧಿವಂತೆ ಮಾದ್ರಿ ಮಂತ್ರ ಜಪಿಸುತ್ತಾ ಅಶ್ವಿನೀ ಕುಮಾರರರನ್ನ ನೆನೆಸಿಕೊಂಡು ನಕುಲ -ಸಹದೇವರಿಗೆ ಜನ್ಮ ಮೀಡುತ್ತಾಳೆ.

ಇದೇ ಖುಷಿಯಲ್ಲಿ ತನ್ನ ಶಾಪ ಮರೆತ ಪಾಂಡು ಮಾರ್ದಿ ಜೊತೆ ಸಂಭೋಗ ನಡೆಸಿ ಸಾವನ್ನಪ್ಪುತ್ತಾನೆ, ಇದರಿಂದ ನೊಂದ ಮಾರ್ದಿ ಕೂಡ ಸಹಗಮನ ಮಾಡುತ್ತಾಳೆ.

ಇದಾದ ನಂತರ ಕುಂತಿ ಹಸ್ತಿನಾಪುರಕ್ಕೆ ಹೋಗಿ ಪಾಂಡವರನ್ನ ಬೆಳೆಸುತ್ತಾಳೆ.

ಹಸ್ತಿನಾಪುರದಿಂದ ಏಕಚಕ್ರನಗರ ಮತ್ತೆ ಏಕಚಕ್ರನಗರದಿಂದ ಹಸ್ತಿನಾಪುರಕ್ಕೆ

ಕುಂತಿ ಪಾಂಡವರ ಜೊತೆ ಹಸ್ತಿನಾಪುರಕ್ಕೆ ತೆರಳಿದ ನಂತರ ಅಲ್ಲಿ ರಾಜ್ಯಭಾರದ ವಿಷಯಕೆ ದುರ್ಯೋಧನ ಮತ್ತು ಯುಧಿಷ್ಠಿರನ ಮಧ್ಯೆ ಮಾತುಕತೆಯಾಗುತ್ತೆ. ಕೊನೆಗೆ ಧೃತರಾಷ್ಟ್ರ ಯುಧಿಷ್ಠಿರನಿಗೆ ರಾಜ್ಯ ಕೊಟ್ಟ ಸಿಟ್ಟಿಗೆ ಪಾಂಡವರನ್ನೆಲ್ಲಾ ಶಕುನಿಯ ಜೊತೆ ಸೇರಿ ಸುಟ್ಟು ಕೊಲ್ಲೋ ಯೋಚನೆ ಮಾಡುತ್ತಾನೆ. ವಿಧುರನ ಸಹಾಯದಿಂದ ಪಾಂಡವರು ಇದರಿಂದ ತಪ್ಪಿಸಿಕೊಳ್ಳುತ್ತಾರೆ.

ಈ ಘಟನೆ ನಂತರ ಕುಂತಿ ಪಾಂಡವರ ಜೊತೆ ಏಕಚಕ್ರ ನಗರಕ್ಕೆ ಹೊಗುತ್ತಾಳೆ. ಅಲ್ಲಿ ಬಕಾಸುರ ಅನ್ನೋ ರಾಕ್ಷಸ ಇರ್ತಾನೆ. ಕುಂತಿ ಬಕಾಸುರನ ಕೊಲ್ಲೋಕೆ ಭೀಮನನ್ನ ಕಳಿಸುತ್ತಾಳೆ. ನಂತರ ಪಾಡವರನ್ನ ಕೊಲ್ಲೋಕೆ ಹಿಡಿಂಬ ತನ್ನ ತಂಗಿ ಹಿಡಿಂಬೆಯನ್ನ ಕಳಿಸುತ್ತಾನೆ. ರಾತ್ರೀಲಿ ಪಾಂಡವರನ್ನ ಕೊಲ್ಲೋಕೆ ಹೋದಾಗ ಮಿಕ್ಕವರನ್ನ ಕಾಯುತ್ತಿದ್ದ ಭೀಮನನ್ನ ಕಂಡು ಕೊಲ್ಲೋಕೆ ಹೋದದ್ದೂ ಮರೆತು ಭೀಮನನ್ನ ಪ್ರೀತಿಸಿ ಅದುವೆ ಆಗೋ ಆಸೆನೆ ಹೇಳಿಕೊಳ್ಳುತ್ತಾಳೆ.

ಎಷ್ಟು ಹೊತ್ತಾದರೂ ಹಿಡಿಂಬ ಬರದಿದ್ದರಿಂದ ತಂಗಿಯನ್ನ ಹುಡುಕಿ ಬರೋ ಹಿಡಿಂಬ, ಅವಳನ್ನ ಭೀಮನ ಜೊತೆ ನೋಡಿ ಕೋಪದಿಂದ ತಾನೇ ಭೀಮನನ್ನ ಕೊಳ್ಳೊಕೆ ಹೊಗುತ್ತಾನೆ. ಹಿಡಿಂಬೆ ಅಡ್ಡ ಬಂದರೂ ಬಿಡದೆ ಹಿಡಿಂಬ- ಭೀಮ ಯುದ್ಧ ಮಾಡುತ್ತಾರೆ. ಯುದ್ಧದ ಕೊನೇಲಿ ಹಿಡಿಂಬ ಸಾಯುತ್ತಾನೆ.

ಹಿಡಿಂಬನನ್ನ ಕೊಂದ ನಂತರ ಭೀಮ ಹಿಡಿಂಬೆಯನ್ನೂ ಕೊಲ್ಲೋಕೆ ಹೋಗುತ್ತಾನೆ, ಆದರೆ ಕುಂತಿದೇವಿ ಇಬ್ಬರ ಮದುವೆಯನ್ನ ಒಂದು ಶರತ್ತಿನ ಮೇಲೆ ಮಾಡೋಕೆ ಒಪ್ಪುತ್ತಾಳೆ. ಅದು ಹಿಡಿಂಬೆಗೆ ಒಂದು ಮಗುವಾದ ನಂತರ ಆಕೆ ಭೀಮನ ಜೊತೆ ಕುರುಕ್ಷೇತ್ರದಲ್ಲಿ ಯುದ್ಧ ಮಾಡಬೇಕು ಅನ್ನೋದು.

ಹಸ್ತಿನಾಪುರನ ಎರಡು ಭಾಗ ಮಾಡೋ ಸಮಯದಲ್ಲಿ ಕುಂತಿ ಹಾಗು ಪಾಂಡವರು ಮತ್ತೆ ಹಸ್ತಿನಾಪುರಕ್ಕೆ ಬರುತ್ತಾರೆ. ದುರ್ಯೋಧನನಿಗೆ ಹಸ್ತಿನಾಪುರ ಹಾಗೆ ಯುಧಿಷ್ಟಿರನಿಗೆ ಖಾಂಡವಪ್ರಸ್ತ ಸಿಗುತ್ತೆ. ಮತ್ತೆ ಪಂಡವರು ಕೌರವರ ಮುಂದೆ ಪಗಡೆಯಲ್ಲಿ ಸೋತಾಗ ಕಾಡಿಗೆ ಹೋಗೋ ಸಮಯದಲ್ಲಿ ದೃತರಾಷ್ಟ್ರ ಕುಂತಿಯನ್ನ ಅಲ್ಲೇ ಉಳಿಯೋ ಹಾಗೆ ಬಲವಂತ ಮಾಡಿದಾಗ ಕುಂತಿ ಅರಮನೆಯಲ್ಲುಳಿಯದೆ ವಿಧುರನ ಮನೆಯಲ್ಲಿ ಉಳಿಯುತ್ತಾಳೆ.

ಕುರುಕ್ಷೇತ್ರದಲ್ಲಿ ಕರ್ಣನನ್ನ ಭೇಟಿಯಾಗುತ್ತಾಳೆ ಕುಂತಿ

ಕರ್ಣ ತನ್ನ ಮಗ ಅನ್ನೋ ಸತ್ಯ ಕುಂತಿಗೆ ತಿಳಿಯೋದು ಕುರುಕ್ಷೇತ್ರದಲ್ಲಿ. ಆಗ ಕರ್ಣ ಕೌರವರ ಪರ ಯುದ್ಧ ಮಾಡುತ್ತಿರುತ್ತಾನೆ. ಕುಂತಿ ಕರ್ಣನನ್ನ ಪಾಂಡವರ ಜೊತೆ ಬರೋ ಹಾಗೆ ಕೇಳಿದಾಗ ಕರ್ಣ ತನಗೆ ಕುಂತಿ ಮಾಡಿದ ಹಾಗೆ ತಾನೆ ತನ್ನನ್ನ ಸಾಕಿದವರಿಗೆ ದ್ರೋಹ ಮಾಡಲ್ಲ ಅಂತ ಹೇಳಿ ತಾಯಿಗಾಗಿ ಒಂದು ಮಾತು ಕೋಡುತ್ತಾನೆ. ಅದರಂತೆ ಅವನು ಕೇವಲ ಅರ್ಜುನನ ಜೊತೆ ಯುದ್ಧ ಮಾಡುತ್ತಾನೆ. ಯುದ್ಧದ ಕೊನೇಲಿ ಕುಂತಿಯ ಎಲ್ಲ ಮಕ್ಕಳು ಉಳಿಯುತ್ತಾರೆ ಆದರೆ ಕರ್ಣ- ಅರ್ಜುನರಲಿ ಒಬ್ಬರು ಸಾಯುತ್ತಾರೆ ಅಂತ. ಅದರಂತೇ ಯುದ್ಧದ ಮಧ್ಯದಲ್ಲಿ ಕರ್ಣ ಸಾವನ್ನಪ್ಪುತ್ತಾನೆ. ಅರ್ಜುನ ತನಗೇ ತಿಳಿಯದೇ ತನ್ನ ಅಣ್ಣನನ್ನ ಕೊಲ್ಲುತ್ತಾನೆ.

ಯುದ್ಧದ ನಂತರ ಕುಂತಿ – ವಿಧುರ, ದೃತರಾಷ್ಟ್ರ ಹಾಗೆ ಗಾಂಧಾರಿ ಜೊತೆ ಹಿಮಲಯಕ್ಕೆ ಹೋಗುತ್ತಾರೆ ಅಲ್ಲಿ ಕಾಡ್ಗಿಚ್ಚಿನಿಂದ ಸಾವನ್ನಪ್ಪಿ ಸ್ವರ್ಗಕ್ಕೆ ಸೇರುತ್ತಾರೆ.

ಆದರೂ ಕುಂತಿಯ ಬುದ್ಧಿವಂತಿಕೆಯನ್ನ ನಾವು ಅವಳು ಹಿಡಿಂಬೆಯನ್ನ ಭೀಮನಿಗೆ ಮದುವೆ ಮಾಡಿಸಿ ಕುರುಕ್ಷೇತ್ರದಲ್ಲಿ ಅವಳು ಯುದ್ಧ ಮಾಡೋ ಹಾಗೆ ಮಾಡಿದ್ದಕ್ಕೆ ಮೆಚ್ಚಬೇಕು.