ಕಿಟಕಿ ತೆಗೆದರೆ ಆಯ್ತು

ಒಬ್ಬ ಕನ್ನಡಿಗ, ಒಬ್ಬ ತಮಿಳ ಮತ್ತೆ ಒಬ್ಬ ಮಲೆಯಾಳಿ ಮರುಭೂಮಿ ನೋಡಕ್ಕೆ ರಾಜಾಸ್ತಾನ್ಗೆ ಹೋಗೋ ಪ್ಲಾನ್ ಮಾಡ್ತಿದ್ರಂತೆ.

ಕನ್ನಡಿಗ ‘ಅಲ್ಲಿ ಸೆಕೆ ತಡಿಯಕ್ಕೆ ಒಂದು ಕೊಡೆ ತರ್ತೀನಿ’ ಅಂದನಂತೆ. ಮಲೆಯಾಳಿ ‘ಒಂದಿಷ್ಟು ಕೂಲಿಂಗ್ ಗ್ಲಾಸ್ ತರ್ತೀನಿ. ಅಲ್ಲಿ ಸೂರ್ಯನ ಬೆಳಕು ಎಷ್ಟಿರುತ್ತೆ ಅಂದ್ರೆ ಕಣ್ಣು ಹಾಳಾಗಿ ಹೋಗಬಹುದು’ ಅಂದನಂತೆ.

ತಮಿಳ ಸುಮ್ನೆ ಇದ್ನಂತೆ.

ಮುಂದಿನ ದಿನ ಕನ್ನಡಿಗ ಮತ್ತೆ ಮಲೆಯಾಳಿ ತಮಿಳನ್ನ ನೋಡಿ ಸುಸ್ತಾಗಿ ಇಬ್ಬರೂ ಒಟ್ಟಗೆ ‘ಏನೋ ಇದು?’ ಅಂತ ಕೇಳಿದರಂತೆ.

ಅದಕ್ಕೆ ತಮಿಳ ಹೆಮ್ಮೆಯಿಂದ ಹೇಳಿದನಂತೆ: ‘ಇದು ಕಾರ್ ಬಾಗಿಲು. ಸೆಕೆ ಆದಾಗ ಕಿಟಕಿ ತೆಗೆದರೆ ಆಯ್ತು...’

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: