http://2.bp.blogspot.com/-Dw30pbUtI_s/TXEbjoPo1NI/AAAAAAAABNw/gl8RKibkojk/w1200-h630-p-nu/DSC00079.jpg

ಕಾವೇರಿ ನದಿ ಕರ್ನಾಟಕಕ್ಕೆ ಹೇಗೆ ಬಂತು? ಇದ್ರಲ್ಲಿ ಗಣಪತಿ ಪಾತ್ರ ಏನು? ಈ ಕಥೆ ಓದಿ ಗೊತ್ತಾಗತ್ತೆ…

ತುಂಬಾ ಹಿಂದೆ ಕವೇರ ಅನ್ನೋ ರಾಜ ಕರ್ನಾಟಕಾನ ಆಳ್ತಾ ಇದ್ನಂತೆ; ಅವನ ಮಗಳು ಕಾವೇರಿ

ಅವನು ತುಂಬಾ ಒಳ್ಳೇ ರಾಜ ಅಗಿದ್ನಂತೆ; ಆದ್ರೆ ಅವನಿಗೆ ಮಕ್ಕಳೇ ಇರಲಿಲ್ಲ್ವಂತೆ;ಅವನು ಅವನ ಹೆಂಡ್ತಿ ಬ್ರಹ್ಮದೇವರನ್ನ ಪೂಜೆ ಮಾಡಿದ್ದಿಕ್ಕೆ, ಅವರಿಗೆ ಕಾವೇರಿ ಅನ್ನೋ ಮಗಳು ಹುಟ್ಟಿದ್ಲಂತೆ

ಅವಳು ದೊಡ್ಡೋಳಾದ್ಮೇಲೆ ಯಾರಾದ್ರೂ ದೊಡ್ಡ ಸಾಧನೆ ಮಾಡಿರೋರನ್ನೆ ಮಾಡ್ಕೋತೀನಿ ಅಂತ ತಪಸ್ಸು ಮಾಡಕ್ಕೆ ಹೋದ್ಲಂತೆ

ಕವೇರ ತೋರಿಸಿದ ಯಾವ ರಾಜನ್ನೂ ಮದ್ವೆ ಮಾಡ್ಕೊಳಕ್ಕೆ ಒಪ್ಕೊಳ್ಲಿಲ್ವಂತೆ. ಬ್ರಹ್ಮನ ತರ ದೊಡ್ಡ ಸಾಧನೆ ಮಾಡಿರೋರು, ತಪಸ್ವಿಗಳನ್ನೇ ಮಾಡ್ಕೊಳ್ಳೋದು ಅಂತ ಹಠ ಹಿಡಿದ್ಲಂತೆ

ಅದೇ ಸಮಯದಲ್ಲಿ ಶಿವ ಪಾರ್ವತಿಗೆ ಮದ್ವೆ ಆಗ್ತಾ ಇತ್ತಂತೆ; ಈ ಮದ್ವೆ ನೋಡಕ್ಕೆ ಎಲ್ಲಾರೂ ಒಂದ್ಕಡೆ ಸೇರಿದ್ದಿಕ್ಕೆ, ಭೂಮೀನೇ ಒಂದೇ ಕಡೆಗೆ ವಾಲ್ಕೋತಂತೆ.

ಆದ್ರೆ ಶಿವ ಬಂದೋರ್ಗೆಲ್ಲಾ ಹೋಗಿ ಅಂತ ಹೇಗೆ ಹೇಳ್ತಾನೆ? ಮಹರ್ಷಿ ಅಗಸ್ತ್ಯನೋಬ್ಬನೇ ಭೂಮಿ ಭಾರ ಸಮ ಮಾಡಕ್ಕೆ ಲಾಯಕ್ ಆಗಿದ್ದು. ಅದಕ್ಕೆ ಶಿವ ಅಗಸ್ತ್ಯನ್ನ ದಕ್ಷಿಣಕ್ಕೆ ಹೋಗಕ್ಕೆ ಕೇಳ್ಕೊಂಡ್ನಂತೆ; ಅಗಸ್ತ್ಯ ಹೊರಡಕ್ಕೆ ರೆಡಿ ಆದ, ಆದ್ರೆ ತನಗೆ ಮದ್ವೆ ನೋಡಕ್ಕೆ ಆಗಲ್ವಲ್ಲ ಅಂತ ಅನ್ಕೊಂಡು ಶಿವನ್ಗೆ ಎರಡು ಶರತ್ತು ಹಾಕಿದ. ನಾನು ದಕ್ಷಿಣಕ್ಕೆ ಹೋದ್ರೂ ಕೂಡ ನಂಗೆ ಮದ್ವೆ ಕಾಣೋ ಹಂಗೆ ಮಾಡ್ಬೇಕು ಮತ್ತೆ ನನ್ನ ಹತ್ರ ಯಾವಾಗ್ಲೂ ನೀರಿರೋ ಹಂಗೆ ಮಾಡ್ಬೇಕು ಅಂತ;

ಅದಿಕ್ಕೆ ಶಿವ ಅಗಸ್ತ್ಯಂಗೆ ದಕ್ಷಿಣಕ್ಕೆ, ಸಹ್ಯಾದ್ರಿ ಬೆಟ್ಟಕ್ಕೆ ಹೋಗು ಅಂತ ಹೇಳಿದ್ನಂತೆ; ಸಹ್ಯಾದ್ರಿ ಬೆಟ್ಟದಲ್ಲಿ ಅಗಸ್ತ್ಯ ಕಾವೇರಿನ ನೋಡಿದ್ನಂತೆ

ವಾಲಿಕೊಂಡಿದ್ ಭೂಮಿ ಏನೋ ಸರಿ ಹೋಯ್ತು; ಆದ್ರೆ ಅಲ್ಲಿ ತಪಸ್ಸು ಮಾಡ್ತಾ ಇದ್ದ ಕಾವೇರಿನ ನೋಡಿ ಅಗಸ್ತ್ಯ ‘ಇಷ್ಟು ಚೆನ್ನಾಗಿರೋ ಹುಡುಗಿ, ತಪಸ್ಸು ಯಾಕೆ ಮಾಡ್ತಿದಾಳೆ’ ಅಂತ ಅಂದ್ಕೊಂಡು ‘ಯಾರಮ್ಮ ನೀನು? ಯಾಕೆ ತಪಸ್ಸು ಮಾಡ್ತಾ ಇದ್ಯಾ?” ಅಂತ ಕೇಳಿದ್ನಂತೆ

‘ನಂಗೆ ಬ್ರಹ್ಮನ ತರ ದೊಡ್ಡ ಸಾಧನೆ ಮಾಡಿರೋ ಗಂಡ ಬೇಕು, ಅದಿಕ್ಕೆ ತಪಸ್ಸು ಮಾಡ್ತಾ ಇದೀನಿ ಅಂತ ಕಾವೇರಿ ಅಂದ್ಲಂತೆ; ಇಬ್ರಿಗೂ ವಾದ ಆಯ್ತಂತೆ; ಮಾತು ಮುಗ್ಯೋ ಹೊತ್ಗೆ ಮದ್ವೆ ಮಾತು ಬಂತಂತೆ

 ಅಂತವ್ನು ಇನ್ನೊಬ್ಬ ಇರಕ್ಕೆ ಸಾಧ್ಯಾನಾ ಅಂತ ಅವಳ ಜೊತೆ ವಾದ ಮಾಡಿದ್ನಂತೆ ಅಗಸ್ತ್ಯ. ಅವ್ಳೂ ಏನೂ ಕಮ್ಮಿ ಇರಲಿಲ್ಲ ವಾದ ಮಾಡೋದ್ರಲ್ಲಿ; ಸರಿ ಇಬ್ಬರಿಗೂ ಜಟಾಪಟಿ ವಾದ ಆಯ್ತಂತೆ; ಕಡೆಕಡೇಗೆ ಅಗಸ್ತ್ಯಂಗೆ ಅವಳನ್ನ ಮದ್ವೆ ಮಾಡ್ಕೋಬೇಕು ಅನ್ನಿಸ್ತಂತೆ; ‘ನನ್ನನ್ನ ಮದ್ವೆ ಮಾಡ್ಕೊತ್ಯಾ’ ಅಂತ ಕೇಳೇ ಬಿಟ್ನಂತೆ. ಅದಿಕ್ಕೆ ಅವಳೂ ಯೋಚ್ನೆ ಮಾಡಿ, ‘ಸರಿ ಇವನೂ ನಾನು ಹುಡುಕ್ತಾ ಇರೋಂತೋನೇ’ ಅಂದ್ಕೊಂಡು ಒಪ್ಕೊಂಡ್ಲಂತೆ.

ಆದ್ರೆ ಅವಳು ಒಂದ್ ಕಂಡೀಷನ್ ಹಾಕಿದ್ಲಂತೆ ‘ನನ್ನನ್ನ ಎರಡುಭಾಗ ಮಾಡು; ಒಂದು ಭಾಗ ನಾನು ನದೀ ಹಾಗೆ ಹರೀಬೇಕು; ಇನ್ನೊಂದ್ ಭಾಗ ನಿನ್ನ ಹೆಂಡ್ತಿ ಆಗಿರ್ತೀನಿ’ ಅಂದ್ಲಂತೆ.

'ಸರಿ' ಅಂತ ಒಪ್ಕೊಂಡು ಅಗಸ್ತ್ಯ ಅವಳನ್ನ ನದೀ ಮಾಡಿದ್ನಂತೆ; ಆದ್ರೆ ಶಿವ ಅವನಿಗೆ ಮಾತು ಕೊಟ್ಟಿದ್ನಲ್ಲ, ಎಲ್ಲಿ ಹೋದ್ರೂ ನೀರಿನ ವ್ಯವಸ್ಥೆ ಮಾಡ್ತೀನಿ ಅಂತ ಅದಿಕ್ಕೆ ಕಾವೇರಿನ ಕಮಂಡಲದಲ್ಲಿ ಭದ್ರವಾಗಿ ಇಟ್ಕೊಂಡಿದ್ನಂತೆ

ಹಂಗೇ ಸುಮಾರ್ ದಿನ ಕಳೀತಂತೆ; ಶಿವನ ಮದ್ವೆ ಮುಗಿಸಿ ಎಲ್ರೂ ಬರೋ ಹೊತ್ಗೆ ದಕ್ಷಿಣ ಭಾರತದಲ್ಲಿ ಬರ ಬಂದಿತ್ತಂತೆ

ಆಗ ಯಾರೋ ಕಾವೇರಿ ಅಗಸ್ತ್ಯನ ಕಮಂಡಲದಲ್ಲಿ ಇದಾಳೇಂತ ಹೇಳಿದ್ರಂತೆ; ಅಲ್ದೆ ಅವಳು ಬ್ರಹ್ಮನ ಮಗಳು – ಯಾವಾಗ್ಲೂ ಬತ್ತೋದಿಲ್ಲ ಅಂದ್ರಂತೆ

ಆದ್ರೆ ಅಗಸ್ತ್ಯನ ಕಮಂಡಲದಿಂದ ಅವಳು ಆಚೆ ಬರೋ ಹಾಗೆ ಮಾಡೋದು ಹ್ಯಾಗೆ? ಎಲ್ಲಾ ದೇವ್ರೂ ಯೋಚ್ನೆ ಮಾಡಿ ಗಣೇಶನ್ನ ‘ಇದಿಕ್ಕೆ ನೀನೇ ಸರಿ ಮಾರಾಯ’ ಅಂತ ಕಳಿಸಿದ್ರಂತೆ

ಗಣೇಶ ಸಹ್ಯಾದ್ರಿಗೆ ಬಂದಾಗ ಅಗಸ್ತ್ಯ ಪಕ್ಕದಲ್ಲಿ ಕಮಂಡಲು ಇಟ್ಕೊಂಡು ಧ್ಯಾನ ಮಾಡ್ತಾ ಇದ್ನಂತೆ

ಗಣಪತಿ ಕಾಗೆ ವೇಷದಲ್ಲಿ ಬಂದು ಕಮಂಡಲಾನ ಕುಕ್ಕಿದ್ನಂತೆ; ಅಗಸ್ತ್ಯ ಕೈ ಬೀಸಿದ್ನಂತೆ

ಕಾಗೆ ಓಡ್ಸಕ್ಕೆ ಅಗಸ್ತ್ಯ ಷೂ ಅಂತ ಕೈ ಬೀಸಿದ್ನಂತೆ; ಗಣಪತಿ ಏನೋ ಹಾರೋದ; ಆದ್ರೆ ಹಿಂದೇನೇ ಕಾವೇರಿನೂ ಬಂದ್ಲಂತೆ

ಆದ್ರೆ ಕಾವೇರಿ ನನಗೆ ಹರಿಯಕ್ಕೆ ಕೈ ಮಾಡ್ತಿದಾರೆ ಅಂದ್ಕೊಂಡು ಕಮಂಡಲದಿಂದ ಆಚೆ ಬಂದು ಹರಿಯಕ್ಕೆ ಶುರು ಮಾಡಿದ್ಲಂತೆ

ಅಲ್ಲಿಂದ ಕಾವೇರಿ ದಕ್ಷಿಣ ಭಾರತದಲ್ಲಿ ಹರೀತಾ ಎಲ್ಲಾ ಕಡೆ ಬರ ಹೋಗಿ ಹಸಿರು ಹುಟ್ಟೋ ಹಾಗೆ ಮಾಡಿದ್ಲಂತೆ

ಇಲ್ಲಿ ಇನ್ನೊಂದ್ ಪುಟ್ಟ ಕಥೇನೂ ಇದೆ; ನೀರು ಆಚೆ ಬಂದ ತಕ್ಷಣ ಗಣೇಶ ಪುಟ್ಟ ಹುಡುಗನ ವೇಷದಲ್ಲಿ ಓಡಕ್ಕೆ ಶುರು ಮಾಡಿದ್ನಂತೆ; ಅಗಸ್ತ್ಯ ಅಟ್ಟಿಸಿಕೊಂಡು ಬಂದು ಒಂದ್ಕಡೆ ಹಿಡಿದು, ತಲೆ ಮೇಲೆ ಮೊಟಕಿದ್ನಂತೆ. ಆಗ ಗಣಪತಿ ಅವನಿಗೆ ತನ್ನ ನಿಜವಾದ ರೂಪ ತೋರಿಸಿದ್ನಂತೆ. ಅಗಸ್ತ್ಯ ತಪ್ಪಾಯ್ತಪ್ಪ ಅಂತ ಕಾಲಿಗ್ ಬಿದ್ನಂತೆ. ಇದು ತಿರುಚ್ಚೀಲಿ ನಡೀತು ಅಂತ ಹೇಳ್ತಾರೆ. ಅಲ್ಲಿ ಉಚ್ಚೈ ಪಿಳ್ಳೈಯಾರ್ ದೇವಸ್ಥಾನ ಇದ್ಯಲ್ಲ? ಅಲ್ಲಿ.

ರಾವಣ ಮತ್ತೆ ಗಣೇಶನ ಕಥೆ ಗೊತ್ತಲ್ಲ, ಇದು ಕೂಡ ಅದೇ ಜಾಗದಲ್ಲೇ ನಡೆದಿದ್ದೂ ಅಂತ ಕಥೆ ಇದೆ. 

ಏನೇ ಪುರಾಣ ಆದ್ರೂ ಕಾವೇರಿ ನಮ್ಮ ಕರ್ನಾಟಕದಲ್ಲಿ ಅತಿ ಮುಖ್ಯವಾದ ನದಿ. ತನ್ನ ಸುತ್ತಮುತ್ತ ಇರೋ ಎಲ್ಲಾ ಜೀವ ರಾಶಿಗಳ್ನ ಪೋಶಿಸುತ್ತಿರೋ ಆ ತಾಯಿಗೆ ನಮ್ಮ ನಮನ.