ಕಸದಿಂದ ರಸ ಅನ್ನೋದ್ನ ನೀವೇಲ್ಲಾ ಕೇಳಿರ್ತಿರಿ. ಅದ್ನ ಮಾಡಿ ತೋರ್ಸಿರೋರು ಕೆಲ್ವೇ ಕೆಲ್ವು ಮಂದಿ . ಬಳಸಿ ಬಿಸಾಕಿದ ವಸ್ತುಗಳಿಂದ ಎಂತೆಂತದ್ದೋ ಅದ್ಬುತವಾದ ಕಲಾಕೃತಿಗಳನ್ನ ತಯಾರ್ಸಿದ್ದಾರೆ. ಇದಕೆಲ್ಲಾ ಬೇಕಾಗಿರೋದು ತುಂಬಾನೇ ತಾಳ್ಮೆ ಅದ್ರ ಎರಡು ಪಟ್ಟು ಕ್ರಿಯಾಶೀಲತೆ. ಇದೆರಡು ಇಲ್ಲಾಂದ್ರೆ ಕಸ ಕೊನೆಗೆ ಕಸವಾಗೇ ಉಳಿದಿರತ್ತೆ. ಅಂತಹದ್ದೇ ಒಂದಿಷ್ಟು ಕಸದಿಂದ ರಸ ಮಾಡಿರೋ ವಸ್ತುಗಳನ್ನ ನಿಮ್ಗೆ ಇಲ್ ತೋರ್ಸತೇವೇ ನೋಡಿ.

1. ಮೊಟ್ಟೆ ತಿಂದಾದ್ಮೇಲೆ ಚಿಪ್ಪನ್ನ ಬಿಸಾಡ್ದೇ ಇಲ್ಲೊಬ್ಬ ಕೋಳಿಯನ್ನ ತಯಾರ್ಸಿದ್ದಾನೆ ನೋಡಿ

2. ಪ್ಲಾಸ್ಟಿಕ್ ಬಳ್ಸಬೇಡಿ ಅಂತ ಬಡ್ಕೊಂಡ್ರು ಈಯಮ್ಮ ಬಳ್ಸಬಿಟ್ಟು ಅದ್ರಿಂದ ಇಂತಹದ್ದೊಂದು ಗೌನ್ ತಯಾರ್ಸಿದ್ದಾಳೆ ನೋಡಿ

ಅವಳ ಈ ಕೆಲ್ಸಕ್ಕೆ ಶಭಾಶ್ ಅನ್ನೋಣ ಆದ್ರೆ ಸ್ವಲ್ಪ ಪ್ಲಾಸ್ಟಿಕ್ ಬಳ್ಸೋದು ಕಮ್ಮಿ ಮಾಡಮ್ಮ ಅಂತಾನೂ ಹೇಳೋಣ

3. ಕಂಪ್ಯೂಟರ್ ಕೀಬೋರ್ಡ್ ಒಡೆದೋಯ್ತು ಅಂತ ಬೇಜಾರಾಗಬೇಡಿ ಅದ್ರಿಂದ ಒಂದ್ ಬ್ಯಾಗನ್ನ ಮಾಡೋಕ್ಕಾಗತ್ತಾ ಅಂತ ಪ್ರಯತ್ನಪಡಿ

4. ಪಿಕಲ ಪಿಕಲ ಪಿಂಗ್ ಪಿಂಗ್ ಅಂತ ನಾವ್ ಹಾಡೇಳ್ಕೊಂಡ್ ತಿಂದ್ರೆ ಇಲ್ನೋಡಿ ಇವ್ರ್ ಎನ್ ಮಾಡಿದ್ದಾರೆ ಅಂತ ನೋಡಿ

ಉಪೇಂದ್ರ ರಕ್ತ ಕಣ್ಣೀರಲ್ಲಿ ಕಾಂತನಿಗೆ ಹೊಡೆದ ಡಯ್ಲಾಗ್ ಪದೇ ಪದೇ ನೆನಪಿಗೆ ಬರ್ತಾ ಇದೆ ಥೋ……..

5. ಬಾಟಲ್ ಮುಚ್ಚಳವನ್ನ ಬಿಸಾಡ್ದೇ ಅಜ್ಜನ ಪೋಟೋ ಬಿಡಿಸಿರೋ ಕಲೆಗೆ ಭೇಷ್ ಅನ್ನೋಣ

6. ಹರ್ದೋಗಿರೋ ಜೀನ್ಸೂ ಕೂಡಾ ಗೌನಾಗಿ ಬದ್ಲಾಗತ್ತೆ ಇಲ್ಲಿ

7. ಓದಿ ಓದಿ ಬೇಜಾರಾದ್ರೆ ಇದಾದ್ರೂ ಮಾಡಿ

ನೀವೇನಾದ್ರೂ ಇದೇ ತರ ಮಾಡಿದ್ರೆ ನಮ್ ಆಪ್ನಲ್ಲಿ ಹಾಕಿ ಉಳಿದವ್ರು ನೋಡ್ಲಿ .