ಬೇಸಿಗೆ ಅಂದ್ರೆ ಕಲ್ಲಂಗಡಿ ಕಾಲ. ಮ್ಮ್…. ಆ ಕೆಂಪು ಕಲರು, ಬಾಯಲ್ಲಿಟ್ರೆ ತಣ್ಣಗಾಗೋ ಗುಣ, ಸಿಹಿ ರುಚಿ ಎಲ್ಲಾ ಬೇಸಿಗೇಗೆ ಹೇಳಿ ಮಾಡಿಸ್ದಂಗ್ ಇರುತ್ತೆ. ಒಂಥರ ಇದು ಕಲ್ಲಂಗಡಿ ಮಾತ್ರ ಅಲ್ಲ ಕೂಲಂಗಡೀನೂ ಹೌದು! ಬರೀ ಕೂಲಿಂಗ್ ಒಂದೇ ಅಲ್ಲ, ಕಲ್ಲಂಗಡಿ ಮೈಗೆ ಹೇಗೆ ಹೇಗೆ ಒಳ್ಳೇದು ಅಂತ ಇಲ್ಲಿ ಓದಿ… 

1. ಕಲ್ಲಂಗಡಿಯಲ್ಲಿ ಸಿಗೋ ‘ಲೈಕೋಪೀನ್’ ಅನ್ನೋ ರಾಸಯನಿಕ ಪದಾರ್ಥ ಹೃದಯಕ್ಕೆ ಬಹಳ ಒಳ್ಳೇದು

ಹೃದಯದ ಆರೋಗ್ಯ ಕಾಪಾಡಕ್ಕೆ "ಲೈಕೋಪೀನ್" ಅನ್ನೋ ಅಂಶ ತುಂಬಾ ಸಹಾಯ ಮಾಡುತ್ತಂತೆ. ಇದ್ರಿಂದ ರಕ್ತ ಹ್ರುದಯದಲ್ಲಿ ಸಲೀಸಾಗಿ ಹರಿದು ಕೆಟ್ಟ ಕೊಲೆಸ್ಟ್ರಾಲನ್ನ್ ಕಮ್ಮಿ ಮಾಡುತ್ತಂತೆ. ಈ "ಲೈಕೋಪೀನ್" ಹೇರಳವಾಗಿ ತುಂಬಿರೋದ್ರಿಂದಾನೇ ಕಲ್ಲಂಗಡಿ ಕೆಂಪಗಿರೋದು.

ಮೂಲ

2. ಅದು ಮೂಳೆಗಳಿಗೂ ಒಳ್ಳೇದು – ವಿಶೇಷವಾಗಿ ಮುಟ್ಟು ನಿಂತಮೇಲಿನ ಹೆಂಗಸರಿಗೆ

ಕಲ್ಲಂಗಡಿಯಲ್ಲಿರೋ "ಲೈಕೋಪೀನ್" ದೇಹದಲ್ಲಿ ಆಕ್ಸಿಡೇಟಿವ್ ಸ್ಟ್ರೆಸ್ ಕಮ್ಮಿ ಮಾಡುತ್ತದೆ. ಇದರಿಂದ ಮೂಳೆಗಳ ಸಮಸ್ಯೆ ಬರುವಿಕೆಯನ್ನು ತಡೀಬೋದು. ಅದ್ರಲ್ಲೂ ವಿಶೇಷವಾಗಿ ಮುಟ್ಟು ನಿಂತ ಮೇಲೆ ಹೆಂಗಸರನ್ನು ಕಾಡೋ ಆಸ್ಟಿಯೋಪೋರೋಸಿಸ್ ಸಮಸ್ಯೆಗೆ ಇದು ನೈಸರ್ಗಿಕ ಪರಿಹಾರವಾಗಬಲ್ಲದು.

ಮೂಲ

3. ಕಲ್ಲಂಗಡೀಲಿರೋ ‘ಸಿಟ್ರುಲೀನ್’ ಅಮೀನೋ ಆಸಿಡ್ಗಳನ್ನ ಬಳಸಿ ರಕ್ತ ಚನ್ನಾಗಿ ಹರಿಯೋಹಾಗೆ ಮಾಡುತ್ತೆ

ಜಿಮ್ಮಲ್ಲಿ ಕಸರತ್ ಮಾಡೋರಿಗೆ ಮೈಯ್ಯಲ್ಲಿರೋ ಅಮೀನೋ ಆಸಿಡ್ ಹೆಚ್ಚಿನ ಮಟ್ಟದಲ್ಲಿ ಬಳಕೆ ಆದ್ರೆ ಒಳ್ಳೇದು. ಜಿಮ್ಮಿಗೆ ಹೋಗಕ್ ಮುಂಚೆ ಮತ್ತೆ ಜಿಮ್ಮಿಂದ ಬಂದ್ ಮೇಲೆ ಕಲ್ಲಂಗಡಿ ಜೂಸ್ ಕುಡುದ್ರೆ ಬೇಗ ಸುಸ್ತು ಹೋಗುತ್ತೆ, ನಿಮ್ಮ ರೋಗ ನಿರೋಧಕ ಶಕ್ತೀನೂ ಹೆಚ್ಚುತ್ತೆ.

ಮೂಲ

4. ಸಿಟ್ರುಲೀನು ಮೈಯ್ಯಲ್ಲಿ ಕೊಬ್ಬು ಸೇರ್ಕೊಳೋದು ಕಡಿಮೆ ಮಾಡುತ್ತೆ

ನಮ್ ಮೈಯ್ಯಲ್ಲಿ ಸೇರೋ ಸಿಟ್ರುಲೀನನ್ನ ನಮ್ಮ ಮೈಯಿ ಆರ್ಗಿನೈನ್ ಆಗಿಸುತ್ತೆ. ಈ ಥರ ಆಗಿಸೋದರಿಂದ ಮೈಯ್ಯಲ್ಲಿ ಹೆಚ್ಚಾಗಿ ಕೊಬ್ಬು ಬೆಳೆಯಕ್ಕೆ ಬಿಡಲ್ಲ.

ಮೂಲ

5. ಕಲ್ಲಂಗಡಿ ಮೈಯ್ಯಲ್ಲಿ ನೀರಿನ ಅಂಶ ಸರಿಯಾಗಿ ಇರೋಹಾಗೆ ಮಾಡುತ್ತೆ

ಇದ್ರಲ್ಲಿರೋ ಎಲೆಕ್ಟೋಲೈಟ್ಸ್ ನಿಮ್ಮ ಮೈಯ್ಯಲಿರೋ ನೀರಿನ ಅಂಶಾನ ಕಾಪಾಡುತ್ತೆ. ಅಲ್ದೇ ಎಷ್ಟೇ ಬೆವೆರು ಬಂದ್ರೂ ಅದ್ರಿಂದ ಕಳಕೊಳ್ಳೋ ಮಿನ್ರಲುಗಳನ್ನ ಮತ್ತೆ ತುಂಬಿಸುತ್ತೆ.

ಮೂಲ

6. ಕಿಡ್ನೀಗೆ ಜಾಸ್ತಿ ಒತ್ತಡ ಹಾಕದೆ ಹಾಯಾಗಿ ಉಚ್ಚೆಗೆ ಹೋಗೋಹಾಗೆ ಮಾಡುತ್ತೆ

ಮೈಯಿಂದ ತುಂಬಾ ನೀರು ಕಳಕೋಬೇಕಾದಾಗ ಕಿಡ್ನಿಗೆ ಕೆಲ್ಸಾ ಜಾಸ್ತಿ. ಆ ಟೈಮಲ್ಲಿ ಕಲ್ಲಂಗಡಿ ಹಣ್ಣು ತಿಂದಿದ್ದೇ ಆದ್ರೆ, ಕೆಲ್ಸಾ ಆರಾಮಾಗ್ ಆಗುತ್ತೆ. 

ಮೂಲ

7. ಉರಿ-ಊತ ಕಡಿಮೆ ಮಾಡುವ ಶಕ್ತೀನೂ ಕಲ್ಲಂಗಡೀಗೆ ಇದೆ

ಇದ್ರಲ್ಲಿರೋ ಫಿನಾಲಿಕ್ ಕಾಂಪೌಂಡುಗಳು ಉರಿ ಊತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನ ಕಡಿಮೆ ಮಾಡಬಲ್ಲವು.

ಮೂಲ

8. ಕಲ್ಲಂಗಡಿಯಲ್ಲಿರೋ ಪೊಟಾಶಿಯಂ ಮನಸ್ಸಿನ ಗೊಂದಲ ಹೋಗಲಾಡಿಸುತ್ತೆ

ಮೆದುಳಿಗೆ ಚುರುಕಾಗಿ ಕೆಲ್ಸ ಮಾಡಕ್ಕೆ ಪೊಟಾಶಿಯಂ ತುಂಬಾ ಬೇಕು. ಇದರಿಂದ ಮೆದುಳಿನ ಸಿಗ್ನಲ್ಲುಗಳು ಚನ್ನಾಗಿ ಹರಿದಾಡುತ್ತವೆಯಂತೆ. ಕಲ್ಲಂಗಡೀಲಿ ಪೊಟಾಶಿಯಂ ಬೇಜಾನ್ ಇದೆ.

ಮೂಲ

9. ಇದರಲ್ಲಿರೋ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ

ಬರೀ ನಿಂಬೆ, ಕಿತ್ತಳೆ, ಮೂಸಂಬಿಯಲ್ಲಿ ಮಾತ್ರ ವಿಟಮಿನ್ ಸಿ ಇದೆ ಅನ್ಕೊಂಡಿದ್ರಾ?

ಮೂಲ

ಅಂದಹಾಗೆ ನೆನಪಿಡಿ – ಕಲ್ಲಂಗಡಿ ಚನ್ನಾಗಿ ಹಣ್ಣಾದ ಮೇಲೆ ತಿನ್ನಿ!

ತುಂಬಾ ಕಾಯ್ ಕಾಯಾಗಿದ್ದಾಗ ತಿಂದ್ರೆ ಒಳಗೆ ಬೆಳ್ ಬೆಳ್ಳಿಗ್ ಇರುತ್ತೆ. ತುಂಬಾ ಹಣ್ಣಾದ್ ಮೇಲಾದ್ರೆ ಹೊರಗಿನ್ ಸಿಪ್ಪೆ ಮೆತ್ತಗಾಗಿರುತ್ತೆ, ಒಳಗೆ ಹಣ್ಣು ಕೆಂಪಗಾಗಿರುತ್ತೆ. ಆಗ್ ತಿನ್ನಿ, ರುಚಿ ಇನ್ನೂ ಸೂಪರ್…. 

ಮೂಲ

ಮಾಹಿತಿ ಮೂಲ: lifehack