http://s3.india.com/wp-content/uploads/2015/10/Main5.jpg

ಹಿಂದೂ ಧರ್ಮದಲ್ಲಿ ದೇವ್ರು ದಿಂಡ್ರು ಅಂತ ಗುಡಿ ಸುತ್ತೇ ಸುತ್ತಿವಿ. ಎಲ್ಲಾ ಗುಡಿಗಳಲ್ಲಿ ಪುರುಷ ದೇವ್ರು ಇರಲ್ಲ. ದೇವತೆಗಳಿಗೂ ನಾವು ಸ್ಥಾನ ಕೊಟ್ಟಿದ್ದೇವೆ. "ಶಕ್ತಿ" ಅನ್ನೋ ಪದ ದೇವತೆಗಳಿಗೆ ಮಾತ್ರ ಉಪಯೋಗ್ಸತೇವೆ. ಶಕ್ತಿ ಅನ್ನೋದು ದೇವತೆಗಳಿಗೆ ಇರೋ ಅಪರಿಮಿತವಾದ ಆಯುಧ ಅಂತೆ. ದೇವನಿಗಿಂತ ಜಾಸ್ತಿ ಕೋಪ ತಾಪ ಶಕ್ತಿ ಇರೋದು ದೇವತೆಗಳಿಗಂತೆ. ಕೆಲವೊಮ್ಮೆ ದೇವನಿಗಿಂತ ದೇವತೆಯನ್ನ ನಂಬೋ ಭಕ್ತಗಣ ಜಾಸ್ತಿನೇ ಇದೆ. ಕೆಲವೊಂದು ದೇವತೆಗಳು ಅವತಾರ ಸ್ವರೂಪವಂತೆ. ಇವತ್ತಿನ ದಿನ ಕರ್ನಾಟಕದಲ್ಲಿರೋ ಪ್ರಸಿದ್ದ ದೇವಿ ದೇವಸ್ಥಾನದ ಬಗ್ಗೆ ತಿಳಿಸಿಕೊಡ್ತಿವಿ ನೋಡಿ. 

1) ಶೃಂಗೇರಿ ಶಾರದಾಪೀಠ

ಶ್ರೀ ಶಾರದಾಂಬಾ ದೇವಸ್ಥಾನ ಅಥ್ವಾ ಶೃಂಗೇರಿ ಶಾರದಾಪೀಠವನ್ನ ಸ್ಥಾಪಿಸಿದ್ದು ಆದಿ ಶಂಕರಾಚಾರ್ಯರು. ಶಾರದಾದೇವಿ ಅಂದ್ರೆ ಸರಸ್ವತಿ ದೇವಿ  , ಈ ದೇವಸ್ಥಾನದ ಮುಖ್ಯ ದೇವತೆ. ಸರಸ್ವತಿ ದೇವಿಯನ್ನ  ಜ್ನಾನದ ದೇವತೆಯಂತಾಲೂ ಕರೀತಾರೆ . ಶೃಂಗೇರಿ  ಇವತ್ತಿನ ದಿನದಲ್ಲಿ ಪ್ರಸಿದ್ಧವಾಗಿರೋ ಒಂದು ಧಾರ್ಮಿಕ ಸ್ಥಳ ಅಂತ ಭಕ್ತರಿಂದ ಗುರುತಿಸಲ್ಪಟ್ಟಿದೆ. 

wandertrails.com

2)  ಕೊಲ್ಲುರು ಮೂಕಾಂಬಿಕಾ ದೇವಸ್ಥಾನ

ಪಶ್ಚಿಮ ಘಟ್ಟಗಳ ನಡುವೆ ಕಂಗೊಳಿಸ್ತ ಇರೋ ಒಂದು ದೇವಸ್ಥಾನ ಅಂದ್ರೆ ಅದೇ ಕೊಲ್ಲುರು ಮೂಕಾಂಬಿಕಾ ದೇವಸ್ಥಾನ. ಇದ್ನ ಕೂಡಾ ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದು. ಬೆಳಿಗ್ಗಿನ ಸಮಯದಲ್ಲಿ ಮೂಕಾಂಬಿಕಾ ದೇವತೆ ಚೊಟ್ಟಿನಕ್ರ ದೇವಸ್ಥಾನದಲ್ಲಿ ಭಕ್ತಗಣರಿಂದ ಪೂಜಿಸಲ್ಪಡ್ತಾಳೆ. ಮಧ್ಯಾಹ್ನದ ಸಮಯದಲ್ಲಿ ಕೊಲ್ಲುರಿಗೆ  ಬರೋದು ಅನ್ನೋ ಪ್ರತೀತಿ ಇದೆ. ಆದಿ ಶಂಕರಾಚಾರ್ಯರು ಮೂಕಾಂಬಿಯನ್ನ ಕೇರಳದಲ್ಲಿ ಪ್ರತಿಷ್ಟಾಪನೆ ಮಾಡೋ ಮಹಾದಾಸೆಯಿದ್ದಿತ್ತಂತೆ ಆದ್ರೆ ಮೂಕಾಂಬಿಕಾ ದೇವತೆ ಯಾಕೆ ಕೊಲ್ಲುರಿನಲ್ಲಿ ನೆಲೆನಿಂತಿದ್ದು ಅನ್ನೋ ಕಥೆ ನಿಮ್ಗೆ ಗೊತ್ತೇ ಇದೆ ಬಿಡಿ. 

gotirupati.com

3) ಮೈಸೂರು ಚಾಮುಂಡೇಶ್ವರಿ ದೇವಸ್ಥಾನ 

ಮೈಸೂರನ್ನ ರಕ್ಷಿಸ್ತಾ ಇರೋ ದೇವತೇ ಅಂದ್ರೆ ಚಾಮುಂಡೇಶ್ವರಿ ದೇವತೆ. ಕರ್ನಾಟಕದಲ್ಲಿ ಅತಿಹೆಚ್ಚು ಭಕ್ತರು ದರ್ಶನ ಮಾಡೋ ದೇವಸ್ಥಾನದಲ್ಲಿ ಇದು ಒಂದಂತೆ. 

nativeplanet.com

4) ಸವದತ್ತಿ ಎಲ್ಲಮ್ಮ ಅಥ್ವಾ ರೇಣುಕಾ ಎಲ್ಲಮ್ಮ ದೇವಸ್ಥಾನ

ಸವದತ್ತಿ ಎಲ್ಲಮ್ಮ ಅಥ್ವಾ ರೇಣುಕಾ ಎಲ್ಲಮ್ಮ ದೇವಸ್ಥಾನ ಉತ್ತರ ಕರ್ನಾಟಕದ ಪ್ರಸಿದ್ದ ದೇವಿಯ ದೇವಸ್ಥಾನ. ಈ ದೇವಿಯನ್ನ ಫಲವತ್ತತ್ತೆಯ ದೇವತೆಯಂತ ಕರೀತಾರೆ. ಸವದತ್ತಿಯನ್ನ ಬೆಳಗಾಂನಲ್ಲಿ ದೇವಾಲಯಗಳ ನಗರ ಅಂತಾನೂ ಕರೀತಾರೆ. ಸಾಧ್ಯ ಆದ್ರೆ ಒಂದ್ಸಲ ದೇವಿಯ ದರ್ಶನ ಮಾಡಿ ರೊಟ್ಟಿ ಚಟ್ನಿ ತಿಂದ್ಕೊಂಡ್ ಬನ್ನಿ. 

nativeplanet.com

5) ಸಿಗಂಧೂರು ಚೌಡೇಶ್ವರಿ ದೇವಸ್ಥಾನ 

ಸಿಗಂಧೂರು ಅನ್ನೋದು ಲಿಂಗನಮಕ್ಕಿ ಜಲಾಶಯದ ಪಕ್ಕದಲ್ಲಿರೋ ಒಂದು ಸಣ್ಣ ಹಳ್ಳಿ. ಸಿಗಂಧೂರು , ಚೌಡೇಶ್ವರಿ ದೇವತೆಗೆ ಪ್ರಸಿದ್ದ . ಸಿಗಂಧೂರು ಚೌಡೇಶ್ವರಿ ದೇವತೆ ಸ್ವಯಂ ಸ್ಪಷ್ಟವಾಗಿ ಉದ್ಬವಿಸಿರೋ ದೇವಸ್ಥಾನ ಅಂತೆ. ಇದು ಶಿವಮೊಗ್ಗದ ಸಾಗರ ತಾಲ್ಲೂಕಿನಲ್ಲಿದೆ. ಇಲ್ಲಿ ನೀವು ತಲುಪಬೇಕಂದ್ರೆ ದೋಣಿಯ ಮೂಲಕ ತಲುಪಬೇಕು ಹಾಗೇ ರಸ್ತೆಯ ಮೂಲಕ ಕೂಡಾ ಹೋಗಬಹುದು. 

epuja.co.in

6) ಹೊರನಾಡಲ್ಲಿರೋ ಅನ್ನಪೂರ್ಣೇಶ್ವರಿ ದೇವಸ್ಥಾನ

ಹೊರನಾಡಲ್ಲಿರೋ ಅನ್ನಪೂರ್ಣೇಶ್ವರಿ ದೇವಸ್ಥಾನ ಕರ್ನಾಟಕದ ಪ್ರಸಿದ್ದ ದೇವಿಯ ದೇವಸ್ಥಾನಗಳಲ್ಲೊಂದು. ಈ ದೇವಸ್ಥಾನಕ್ಕೆ ಬಂದೋರು ಬರೇ ಹೊಟ್ಟೆಯಲ್ಲಿ ಹೋಗೋ ಆಗಿಲ್ಲ. ಯಾಕಂದ್ರೆ ಹೆಸ್ರಲ್ಲೇ ಇದೆ ಅಲ್ವಾ ಅನ್ನಪೂರ್ಣೇಶ್ವರಿ ಅಂತ. ಹಸಿದವರಿಗೆ ಅನ್ನವನ್ನ ಕೊಡೋ ದೇವಸ್ಥಾನ ಇದು. 

3.bp.blogspot.com

7) ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ 

ದಕ್ಷಿಣ ಕನ್ನಡದಲ್ಲಿರೋ ಪ್ರಸಿದ್ದ ದೇವಿಯ ದೇವಸ್ಥಾನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ. ದುರ್ಗಾಪರಮೇಶ್ವರಿ ಇಲ್ಲಿನ ಮುಖ್ಯ ದೇವತೆ. ಒಂದ್ಸಲ ಹೋಗಿ ನೋಡ್ಕಂಡು ಬನ್ನಿ. 

epuja.co.in

8) ಮಂಗಳೂರಿನ ಮಂಗಳಾದೇವಿ ದೇವಸ್ಥಾನ

ಮಂಗಳೂರಿಗೆ ಮಂಗಳೂರು ಅಂತ ಹೆಸರು ಬಂದಿದ್ದೇ ಮಂಗಳಾದೇವಿ ದೇವಸ್ಥಾನದಿಂದ ಅಂತ ಎಲ್ರೂ ಹೇಳ್ತಾರೆ. ಇದ್ನ ಪರುಶುರಾಮ ಕಟ್ಸಿದ್ದು. ಇವತ್ತಿನ ದಿನದಲ್ಲಿ ನೀವು ಈ ದೇವಸ್ಥಾನವನ್ನ ನೋಡ್ಬೇಕಂದ್ರೆ ಮಂಗಳೂರಿನ ಬೋಲಾರ್ಗೆ ಹೋಗ್ಬೇಕಾಗತ್ತೆ. 

gaya3travels.com

9) ಬಾದಾಮಿಯ ಬನಶಂಕರಿ ದೇವಸ್ಥಾನ 

ಬನಶಂಕರಿ ದೇವಿ ಪಾರ್ವತಿಯ ಅವತಾರ ಅಂತ ನಂಬ್ತಾರೆ. ಬನಶಂಕರಿ ದೇವಸ್ಥಾನ ಬಾದಾಮಿಯಲ್ಲಿದೆ. ಚಾಲುಕ್ಯರ ಕಾಲದಲ್ಲೇ ಪ್ರಸಿದ್ದಿ ಹೊಂದಿತ್ತು. ಶಾಕಾಂಬಾರಿ ದೇವತೆ ಇಲ್ಲಿನ ಮುಖ್ಯ ದೇವತೆ. 

badamionline.com
ಈ ನವಶಕ್ತಿ ದೇವಿಗಳ ದೇವಸ್ಥಾನಕ್ಕೆ ಜೀವನದಲ್ಲಿ ಒಂದ್ಸಲ ಆದ್ರೂ ಭೇಟಿ ಕೊಟ್ಟು ಜೀವ್ನ ಸಾರ್ಥಕ ಮಾಡ್ಕೊಳ್ಳಿ.