http://a5.images.thrillophilia.com/image/upload/s--t4JzPdOh--/c_fill,f_auto,fl_strip_profile,h_446,q_jpegmini,w_750/v1/images/photos/000/045/179/original/Trekking2.jpg.jpg?1453315870

ಕರ್ನಾಟಕ, ನಮ್ಮ ರಾಜ್ಯ ನಾಡು, ನುಡಿ, ಕಲೆ ಎಲ್ಲದಕ್ಕೂ ಫೇಮಸ್ಸು. ಊರಿಂದ ಊರಿಗೆ, ಹಸಿರಾಗಿರೋ ಬೆಟ್ಟ ಗುಡ್ಡಕ್ಕೆ ನಾಡಿಂದ ಇರೋ ಸಂಬಂಧದ ದಾರಿನ ಘಾಟ್ ಅಂತ ಕರೀಬೋದು. ಸುಮ್ನೆ ಯಾವ್ದೋ ಮಾಮೂಲಿ ದಾರಿ ಆಗಿದಿದ್ರೆ ನಾವೇನ್ ಹೇಳ್ತ ಇರ್ಲಿಲ್ಲ, ಆದ್ರೆ ನಾವಿಲ್ಲಿ ಹೇಳ್ತಿರೋ ಘಾಟನ್ನ ನೀವು ನೋಡಿಲ್ಲ ಅಂದ್ರೆ ಏನೋ ಕಳ್ಕೊಂಡಿದೀರಾ ಅಂತ, ಮಿಸ್ ಮಾಡ್ಕೋಬೇಡಿ ಆದಾಗ ನೋಡ್ಕೊಂಡ್ ಬನ್ನಿ. ಎಷ್ಟ್ ಚೆನ್ನಾಗಿದೆ ಅಂತ ನೋಡಿ.

1. ಆಗುಂಬೆ ಘಾಟ್ 

ಕಣ್ಣಿಗೆ ಹಬ್ಬ ಅಂದ್ರೆ ಇಲ್ಲಿ ಗಾಡಿ ಓಡ್ಸೋದು. ಸುತ್ತ ಮುತ್ತ ತಂಪಾದ ಮರ ಗಿಡ. ರಸ್ತೆಮೇಲೆ ಗಾಡಿ. ನಮಗೆ ಬೇಕಾದ ಹಾಡನ್ನ ಹಾಕೊಂಡು ಹೋಗ್ತಿದ್ರೆ ಇನ್ನೆನ್ರೀ ಬೇಕು. 

4.bp.blogspot.com

2. ಶಿರಾಡಿ ಘಾಟ್ 

ಗರಡಿ ಚಾಮುಂಡೇಶ್ವರಿ ತಾಯಿ ದೇವಸ್ಥಾನದಿಂದ ಶುರು ಆಗಿ ರಾಷ್ಟ್ರೀಯ ಹೆದ್ದಾರಿ ಸೇರುತ್ತೆ ಇದು. ಇದೆಲ್ಲದಕ್ಕಿಂತ ಮಜಾ ಅಂದ್ರೆ ಇಲ್ಲಿ ವಾತಾವರಣ.

4.bp.blogspot.com

3. ಹುಲಿಕಲ್ ಘಾಟ್ 

ಶಿವಮೊಗ್ಗ ಜಿಲ್ಲೆಲಿ ಇರೋ ಈ ಘಾಟು ಜೋರಾಗಿ ಸುರಿಯೋ ಮಳೆಗೆ ಫೇಮಸ್ಸು. ಜಡಿ ಮಳೆ ಎಷ್ಟ್ ಜೋರಾಗತ್ತೆ ಜನ ಓಡಾಡಕ್ಕೆ ಕೆಲವೊಂದ್ಸತಿ ಭಯ ಪಡ್ತಾರೆ. ಆದ್ರೆ ಆ ಮಳೇಲಿ, ಚಳೀಲಿ ಆ ಜಾಗಾನಾ ನೋಡೋದು ಸ್ವರ್ಗಾನೆ.

4.bp.blogspot.com

4. ಬಾಳೆಬರೆ ಘಾಟ್ 

ಕುಂದಾಪುರ ತಾಲೂಕಿನ ಬಾಳೆಬರೆ ಘಾಟ್ ರಸ್ತೆ (ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52). ಇಲ್ಲಿ ಹತ್ರದಲ್ಲಿ ಜಲಪಾತ ಇದೆ. ಫೋಟೋದಲ್ಲಿ ತೋರ್ಸಿದೀವಿ. ಎಷ್ಟ್ ಚೆನ್ನಾಗಿದೆ ಅಂತ ನಿಮಗೆ ಗೊತ್ತಾಗಿರ್ಬೇಕು ಅಲ್ವಾ 

4.bp.blogspot.com

5. ಚಾರ್ಮಾಡಿ ಘಾಟ್ 

ಏನಂತ ಹೇಳ್ಲಿ ಗೊತ್ತಾಗ್ತಿಲ್ಲ. ಅದ್ಭುತ ಅಂತ ಕರೀಲಾ, ಸ್ವರ್ಗ ? ಏನೋ ಮಾತೆ ಬರ್ತಿಲ್ಲ. ಚಾರಣಕ್ಕೆ, ಪ್ರಕೃತಿ ಸೌಂದರ್ಯಕ್ಕೆ ಹೇಳುಮಾಡಿಸಿದಂತ ಜಾಗ ಇದು.

4.bp.blogspot.com

6. ಬಿಸಿಲೆ ಘಾಟ್ 

ಈ ಘಾಟಿನ ಹೆಸರಲ್ಲಿ ಸಿನಿಮಾನೇ ತೆಗ್ದಿದಾರೆ, ಇನ್ನು ಬರ್ಯಕ್ಕೆ ಜಾಗ ಸಾಕಾಗತ್ತಾ ಇಲ್ಲಿ. ಹಸಿರು ತುಂಬಿದ ಜಾಗ, ಮೈ ಕೊರೆಯುವ ಚಳಿ. ಬೈಕಲ್ಲಿ ಟ್ರಿಪ್ ಹೋಗಕ್ಕೆ ಈ ಜಾಗ ಫೇಮಸ್ಸು.

4.bp.blogspot.com

7. ದಾಂಡೇಲಿ ಘಾಟ್ 

ಉತ್ತರ ಕನ್ನಡ ಅಂದ್ರೆ ಒಂಥರಾ ಸಿಕಾಪಟ್ಟೆ ಫೇಮಸ್ಸು ದಾಂಡೇಲಿ. ಫೋಟೋ ನೋಡಿ ಹೆಂಗೆ ಯಾವದಕ್ಕೆ ಅಂತ ಗೊತ್ತಾಗಿರ್ಬೇಕಲ್ಲ? ಇನ್ನೇನು ಬೈಕ್ ಹತ್ತಿ ಸುಮ್ಮನೆ ಹೋಗಿ ಬನ್ನಿ.

4.bp.blogspot.com

8. ದೇವಿಮನೆ ಘಾಟ್ 

ಸಿರಸಿ ಕುಮ್ಮಟ ರಸ್ತೇಲಿ ಅತೀ ದೊಡ್ಡ ತಿರುವು ಅಂದ್ರೆ ದೇವಿಮನೆ ಘಾಟ್. ಅದ್ಭುತವಾದ ಜಾಗ. ಪರಿಸರ ಪ್ರೇಮಿಗಳಿಗೆ ತುಂಬಾ ಮುದ ನೀಡತ್ತೆ ಈ ಜಾಗ.

4.bp.blogspot.com