https://image.slidesharecdn.com/kannadakali-copy2-150928172231-lva1-app6892/95/kannada-kali-1-638.jpg?cb=1443545816

ನಾನು ಕನ್ನಡಾಭಿಮಾನಿ, ನಾನು ಅದು, ನಾನು ಇದು, ಕನ್ನಡ ನನ್ನ ಜೀವ ಅಂತೆಲ್ಲಾ ಸುಮಾರ್ ಜನ ಹೇಳ್ಕೊತಾರೆ… ತಪ್ಪು ಅಂತ ನಾವ್ ಹೇಳ್ತಿಲ್ಲ. ಆದ್ರೆ ನಮ್ಮ ಭಾಷೆ ಬಗ್ಗೆ ಕೆಲವೊಂದು ವಿಚಾರ ಎಲ್ರಿಗೂ ಗೊತ್ತಿರಲ್ಲ. ಗೊತ್ತಿರ್ಲೇಬೇಕು ಅಂತ ಏನಿಲ್ಲ. ಆದ್ರೂ ನಮ್ ಭಾಷೆ ಅಂದಾಗ ನಮ್ಗೆ ಅದರ ಬಗ್ಗೆ ಸ್ವಲ್ಪ ಚನ್ನಾಗೇ ಗೊತ್ತಿರ್ಬೇಕಲ್ವಾ? ಅದಕ್ಕೇ ಇವತ್ತು ನಮ್ಮ ಅಂತೆಕಂತೆ ತಂಡದಿಂದ ಕನ್ನಡದ ಮಹತ್ತತೆ ಎತ್ತಿ ಹಿಡಿಯೋ ಕೆಲವು ವಿಷಯಗಳನ್ನ ಹಂಚ್ಕೊಂಡಿದೀವಿ… ಓದ್ನೋಡಿ. ಇದನ್ನ ಓದಾದ್ಮೇಲೆ, ನಮ್ ಭಾಷೆ ಬಗ್ಗೆ ಇನ್ನೂ ಹೆಮ್ಮೆಯಾಗೋದ್ರಲ್ಲಿ ಡೌಟೇ ಇಲ್ಲ!

1. ಕನ್ನಡದಲ್ಲಿ ಅಕ್ಷರ ಹುಟ್ಟಿದ್ದು 1.9 ಸಾವಿರ ವರ್ಷ ಹಿಂದೆ!

ಮೂಲ

2. ನಮ್ಮ ಭಾಷೆಯ ಮೊದಲ ಶಾಸನ, ಹಲ್ಮಿಡಿ 

ಮೂಲ

3. ಜರ್ಮನ್ ಬರಹಗಾರ ಫರ್ಡಿನಾಂಡ್ ಕಿಟೆಲ್ ಡಿಕ್ಷನರಿ (ಶಬ್ದಕೋಶ) ಬರೆದ ಭಾರತದ ಏಕೈಕ ಭಾಷೆ, ಕನ್ನಡ!

ಮೂಲ

4. ಅಮೋಘವರ್ಷ ಕನ್ನಡದಲ್ಲಿ 'ಕವಿರಾಜಮಾರ್ಗ' ಬರೆದಾಗ, ಇಂಗ್ಲಿಷ್ ಇನ್ನೂ ತೊಟ್ಟಿಲಲ್ಲಿತ್ತು, ಹಿಂದಿ ಹುಟ್ಟೇ ಇರ್ಲಿಲ್ಲ!

ಮೂಲ

5. " ಪ್ರಪಂಚದ ಎಲ್ಲಾ ಸಾಹಿತ್ಯದ ಮಧ್ಯೆ, ಕನ್ನಡ ಸಾಹಿತ್ಯ ಮಹಾರಾಣಿ ಇದ್ದಂತೆ "-  ಶ್ರೀ ವಿನೋಭಾ ಭಾವೆ ಹೇಳಿರೋ ಮಾತು 

ಮೂಲ

6. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಅತೀ ಹೆಚ್ಚು ಪ್ರಶಸ್ತಿ ತಗೊಂಡಿರೋ ಏಕೈಕ ಭಾರತೀಯ, ನಮ್ಮ ಕುವೆಂಪು

ಮೂಲ

7. ಭಾರತದಲ್ಲಿ ಹಿಂದಿ ನಂತರ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಬಂದಿರೋದು ನಮ್ಮ ಕನ್ನಡಕ್ಕೇ!

ಮೂಲ

8. ವಿಕಿಪೀಡಿಯ ತನ್ನ ಲೋಗೋದಲ್ಲಿ ನಮ್ಮ ಭಾಷೆಗೆ ಸ್ಥಾನ ಕೊಟ್ಟಿದೆ

ಮೂಲ

9. ' ಚಾರಿಟನ್ ಮೈಮ್ ' ಅನ್ನೋ ಎರಡನೇ ಶತಮಾನದ ಗ್ರೀಕ್ ನಾಟಕದಲ್ಲಿ ಹಲವಾರು ಕನ್ನಡದ ಪದಗಳು ಬಳಕೆಯಾಗಿವೆ

ಮೂಲ

10. "ರಗಳೆ ಸಾಹಿತ್ಯ" ಕನ್ನಡ ಭಾಷೆ ಬಿಟ್ಟು ಬೇರೆ ಭಾಷೇಲಿ ಇರೋದು ತುಂಬಾ ಕಮ್ಮಿ 

ಮೂಲ

ನಮ್ಮ ಭಾಷೆ ಬಗ್ಗೆ ಅಪರೂಪ ಅನ್ಸೋ ಇನ್ನೂ ಹೆಚ್ಚಿನ ವಿಷಯಗಳು ನಿಮಗೆ ಗೊತ್ತಿದ್ರೆ ಕಾಮೆಂಟ್ ಮಾಡಿ. ಭಾಷೆ ಬೆಳೀಬೇಕು ಅಂದ್ರೆ, ಅದನ್ನ ಬಳಸಬೇಕು ಆಮೇಲೆ ಬೆಳಸಬೇಕು. ಏನಂತೀರಾ?