http://www.thebetterindia.com/wp-content/uploads/2017/06/BiharInnovativeKids.jpg

ಯಾವಾಗ ಯಾರ ತಲೇಗೆ ಹೊಸ ಐಡಿಯಾ ಬರುತ್ತೆ ಅಂತ ಹೇಳಕ್ಕೇ ಆಗಲ್ಲ. ಒಂದು ಹೊಸ ಐಡಿಯಾದಿಂದ ಎಷ್ಟೋ ಸಮಸ್ಯೆ ಬಗೆಹರಿಯುತ್ವೆ. ಹಳ್ಳೀಲಿ ಕರೆಂಟ್ ತೊಂದರೆ ಎಲ್ಲಿ ಇಲ್ಲ ಹೇಳಿ? ಅದಲ್ಲದೇ ರೈತರು ಬೆಳೆನಾಶ ಅಂತ ಪಾಡು ಪಡ್ತಾರೆ. ಇಲ್ಲಿ ಒಬ್ಬ ಸಾಧಾರಣ 12ನೇ ತರಗತಿ ಹುಡ್ಗ ಈ ಎರಡೂ ತೊಂದರೆಗೆ ಒಂದೊಳ್ಳೆ ಸಿಂಪಲ್ ಪರಿಹಾರ ಮಾಡಿದ್ದಾನೆ ನೋಡಿ.

ಗೋಪಾಲ್.ಜೇ 12ನೇ ತರಗತಿ, ಮಾಡೆಲ್ ಹೈಸ್ಕೂಲಲ್ಲಿ ಓದ್ತಿದಾನೆ. ಬಿಹಾರದಲ್ಲಿರೋ ಬಗಲ್ ಪುರ್ ಜಿಲ್ಲೆಯ ನೌಗಾಚಿಯ ಅನ್ನೋ ಊರಿನ ಈ ಹುಡ್ಗ ಬಾಳೆದಿಂಡಿಂದ ವಿದ್ಯುತ್ ತಯಾರಿಸಿದ್ದಾನೆ. ಇದನ್ನ ಸೈನ್ಸ್ ಅಂಡ್ ಟೆಕ್ನಾಲಜಿ ಸ್ಪರ್ಧೇಲಿ ಪ್ರದರ್ಸಶಿಸಿದ್ದಾನೆ.

 

ಬಾಳೇದಿಂಡಿಂದ ಬಟ್ಟೆ ಕರೆ ಆದಾಗ ಈ ಐಡಿಯಾ ಬಂದಿದ್ದಂತೆ

9ನೇ ತರಗತಿಲಿದ್ದಾಗ ಬಾಳೇದಿಂಡಿಂದ ಬಟ್ಟೆ ಕರೆ ಆಗಿತ್ತಂತೆ. ಇದಕ್ಕೆ ಕಾರಣ ಅದ್ರಲ್ಲಿರೋ ಆಸಿಡ್ ಕಾರಣ ಅಂತ ಶಿಕ್ಷಕರಿಂದ ತಿಳ್ಕೊಂಡ್ನಂತೆ. ಆಗಲೇ ಬ್ಯಾಟರಿಲೆಲ್ಲಾ ಉಪಯೋಗಿಸೋ ಆಸಿಡ್ ಬದ್ಲು ಬಾಳೆದಿಂಡಲ್ಲಿರೋ ಆಸಿಡ್ ಬಳಸಿ ವಿದ್ಯುತ್ ತಯಾರಿಸ್ಬೋದಾ ಅಂತ ಐಡಿಯಾ ಬಂದಿದ್ದು.

ಬಾಳೆ ಬೆಳೆ ನಾಶ ಆದಾಗ ಅದ್ರಿಂದ ವಿದ್ಯುತ್ ತಯಾರಿಸ್ತಾನೆ

ಗೋಪಾಲ್ ತಂದೆ ಪ್ರೇಮ್ ರಂಜನ್ ಅವರ ಬಾಳೇತೋಟ ಇತ್ತು. 2008ರಲ್ಲಿ ತುಂಬಾ ಮಳೆ ಆಗಿ ಬೆಳೆಯಲ್ಲಾ ನಾಶ ಆಗೋಗಿತ್ತು. ಆಗ ಒಂದು ಝಿಂಕ್ ಮತ್ತೆ ಕಾಪರ್(ತಾಮ್ರ) ಇಂದ ಇಲೆಕ್ಟೋಡ್ ಮಾಡಿ ಬಾಳೇದಿಂಡಿಗೆ ಕನೆಕ್ಟ್ ಮಾಡಿ ವಿದ್ಯುತ್ ತಯಾರಿಸ್ತಾನೆ. ಒಂದ್ ಅಡಿ ಬಾಳೇದಿಂಡಿಂದ 3 ವೋಲ್ಟ್ ವಿದ್ಯುತ್ ತಯಾರಾಗುತ್ತೆ. ಇದ್ರಿಂದ ಒಂದು LED ಬಲ್ಬ್ 3 ಗಂಟೆ ಉರಿಯುತ್ತೆ. ಇದನ್ನ ಹೆಚ್ಸಕ್ಕೆ ಅಂತ ಇನ್ನೊಂದ್ ಬಾಳೇದಿಂಡ್ ಉಪಯೋಗಿಸಿ 12 ವೋಲ್ಟ್ ತಂಕ ವಿದ್ಯುತ್ ತಾನೇ ತಯಾರಿಸ್ತಾನೆ. ಇದ್ರಿಂದ ಅವನಿಗೆ ಮತ್ತೆ ಅವನ ತಂಗಿಗೆ ಕರೆಂಟ್ ಇಲ್ದೇದ್ದಾಗ್ಲೂ ಓದಕ್ಕೆ ಸಹಾಯ ಆಗುತ್ತೆ.