https://antekante.com/sites/default/files/images/exammmm.png

ಫ್ರೆಬ್ರವರಿ, ಮಾರ್ಚ್ ಬಂತು ಅಂದ್ರೆ ಪರೀಕ್ಷೆ ಭಯ ಎಲ್ರಿಗೂ ಶುರು ಆಗತ್ತೆ. ಮಕ್ಕಳಿಗೆ ತಂದೆ ತಾಯಿ ಭಯ. ತಂದೆ ತಾಯಿಗೆ ಮಕ್ಕಳ ಭವಿಷ್ಯದ ಭಯ. ಕಾಲೇಜು ಹುಡುಗರಿಗೆ ಭವಿಷ್ಯದ ಭಯ. ಆದರೆ ಪರೀಕ್ಷೆ ಇರೋದು ಭಯ ಹುಟ್ಟಿಸೋಕಲ್ಲ. ನೀವು ತಿಳಕೊಂಡಿರೋದನ್ನ ಪರೀಕ್ಷಿಸೋಕೆ. ಹಾಗಿರುವಾಗ, ಪರೀಕ್ಷೆಗೆ ಓದೋಕೆ ಸಹಾಯ ಆಗೋ ಮಾಹಿತಿ ಕೊಡಬೇಕನ್ನಿಸ್ತು. ತಿಳ್ಕೊಂಡಿರಿ. ನಿಮಗೇ ಒಳ್ಳೇದು.

1. ಪುದೀನಾ ಅಂಶ ಇರೋ ಸೋಪಿಂದ ಮುಖ ತೊಳದ್ರೆ ನಿದ್ದೆ ಮಂಪರು ಹೋಗುತ್ತೆ.


2. ಜೋರಾಗಿ ಬಾಯಿ ಬಿಟ್ಟು ಓದೋದ್ರಿಂದ, ಓದಿದ್ದು ನೆನಪಲ್ಲಿರತ್ತೆ.


3. ಚೆನ್ನಾಗಿ ನೀರು ಕುಡಿಯೋದ್ರಿಂದ, ಮೆದುಳು ಚೆನ್ನಾಗಿ ಕೆಲಸ ಮಾಡತ್ತೆ. ಬುದ್ಧಿ ಓಡತ್ತೆ.


4. ಆಗಾಗ ಕೂತಿರೋ ಭಂಗಿ ಬದಲಾಯಿಸಿದ್ರೆ, ಕತ್ತು ನೋವು ಬೆನ್ನು ನೋವು ಬರಲ್ಲ.

5. ಓದಿ ಸುಸ್ತಾದಾಗ, ಹಿತವಾದ ಸಂಗೀತ ಕೇಳಿದ್ರೆ ಮನಸು ಹಾಯಾಗತ್ತೆ.

6. ಹಾಸಿಗೆ ಮೇಲೆ ಕೂತು ಓದಬೇಡಿ. ಅದರಿಂದಾನೇ ತೂಕಡಿಕೆ ಬರೋದು.


7. ಕಣ್ರೆಪ್ಪೆಗೆ ಸ್ವಲ್ಪ ವಾಸೆಲೈನ್ ಹಚ್ಚಿದ್ರೆ, ಕಣ್ಣೆಳಕೊಂಡು ಹೋಗಿ ನಿದ್ದೆ ಮಾಡೋದು ತಪ್ಪತ್ತೆ.

8. ಸ್ವಲ್ಪ ಬೆಚ್ಚಗಿರೋ ಜಾಗದಲ್ಲಿ ಕೂತು ಓದಿದ್ರೆ ಜಾಸ್ತಿ ಓದೋದಲ್ಲದೆ, ಖುಷಿಯಾಗಿರ್ತೀರ.

9. ಆಗಾಗ ಚಾಕೊಲೇಟ್ ತಿನ್ನಿ. ಬಾಯಿಗೂ ಒಳ್ಳೇದು. ಬುದ್ಧಿಗೂ ಒಳ್ಳೇದು.

10. ಲ್ಯಾಪ್ ಟಾಪ್, ಟ್ಯಾಬ್ಲೆಟ್ ಅಲ್ಲಿ ಓದೋಕಿಂತ, ಪುಸ್ತಕದಿಂದ ಓದಿದ್ರೆ ಜಾಸ್ತಿ ನೆನಪಲ್ಲಿ ಉಳಿಯುತ್ತೆ.

imt.edu

11. ನಿಮ್ಮ ಸ್ನೇಹಿತರ ಜೊತೆ ಕೂತು ಓದಿದ್ರೆ, ಆತ್ಮವಿಶ್ವಾಸ ಜಾಸ್ತಿ ಆಗತ್ತೆ.

12. ಬಣ್ಣಬಣ್ಣದ ಪೆನ್ ಗಳಿಂದ, ಮುಖ್ಯವಾದ ವಿಚಾರ ಗುರುತು ಹಾಕಿ. ನೆನಪಿಟ್ಕೊಳ್ಳೋಕೆ ಸಹಾಯ ಮಾಡತ್ತೆ.

13. ಫ್ಲೋ ಚಾರ್ಟ ಹಾಕಿ ಓದಿ. ಇದು ಸುಲಭವಾಗಿ ಕಲಿಯೋ ವಿಧಾನ.

14. ಬಬ್ಬಲ್ ಗಮ್ ತಿನ್ನೋದ್ರಿಂದ ಮೆದುಳು ಚುರುಕಾಗಿ, ಓದಿದ್ದೂ ಬೇಗ ಅರ್ಥ ಆಗತ್ತಂತೆ.


15. ನೂರು ಸಲ ಓದೋಕಿಂತ, ಒಂದು ಸಲ ಬರೆಯೋದು ಸರಿಯಾದ ಅಭ್ಯಾಸ. ಬೇಗ ಕಲೀಬೋದು.

16. ಟೈಮ್ಸ ನ್ಯೂ ರೋಮನ್ ಫಾಂಟ್ ಅಲ್ಲಿರೋದನ್ನ ಓದೋದು ಸುಲಭ ಅಂತೆ.


ಇವಿಷ್ಟು ವಿಚಾರ ನೀವು ತಿಳ್ಕೊಳ್ಳಿ. ನಿಮ್ಮ ಪರಿಚಯದ ಮಕ್ಕಳಿಗೂ ತಿಳಿಸಿ. ಎಲ್ರೂ ಓದಿ ಉದ್ಧಾರ ಅಗಲಿ ಅಂತಷ್ಟೇ.

ಚಿತ್ರ: s3.scoopwhoop.com