ಜೀವ್ನ ಅಂದ್ ಮೇಲೆ ಕಷ್ಟ ಸುಖ ಇದ್ದೇ ಇರುತ್ತೆ. ಸುಖ ಬಂದಾಗ ಕೆಲುವ್ರು ಕುಣ್ದಾಡ್ತಾರೆ. ಅದೇ ಬೇಸರ ಆದಾಗ ಪ್ರಾಣಾನೇ ಕಳ್ಕೊಳಕ್ ಹೋಗ್ತಾರೆ. ಜೀವ್ನಾನ ಗಟ್ಟಿಯಾಗ್ ನಿಂತು ಎದುರ್ಸೋ ಎದೆಗಾರಿಕೆ ಇಲ್ದೇ ಇರೋರೇ ಹೀಗ್ ಸಾಯೋದು. ಆತ್ಮಹತ್ಯೆ ತಪ್ಪು ಅಂತ ಗೊತ್ತಿದ್ದೂ ಆ ಹೊತ್ತಲ್ಲಿ ಆವೇಶಕ್ ಒಳಗಾಗಿ ಏನೇನೊ ಮಾಡ್ಕೊಂಬಿಡ್ತಾರೆ. ಇತ್ತೀಚೆಗೆ ಒಬ್ಬ ವ್ಯಕ್ತಿ ಪ್ರಾಣ ಕಳ್ಕೊಳಕ್ಕೆ ಅಂತ ಜ಼ೂಗೆ ಹೋಗಿ ಸಿಂಹದ್ ಬೋನಿಗೆ ನುಗ್ಗಿದಾನೆ. ಸಿಂಹಗಳು ಬಿಡ್ತವಾ? ಅವನನ್ನ ತಿನ್ನಕ್ಕೆ ಬಂದಿವೆ… ಆದರೆ ಅಲ್ಲಿ ಏನು ನಡೀತು ಅನ್ನೋದೇ ಒಂದು ವಿಚಿತ್ರ… ಕಡೆಗೆ ಅವನು ಸಾಯಲಿಲ್ಲ. ಬದುಕಿದ್ದು ನಮ್ಮ ಮುಂದೆ ಒಂದು ದೊಡ್ಡ ಧರ್ಮಸಂಕಟ ತಂದುಬಿಟ್ಟಿದ್ದಾನೆ: ಯಾರು ಮಾಡಿದ್ದು ಸರಿ? ಇವನೋ? ಸಿಂಹಾನೋ? ಆ ಗಾರ್ಡುಗಳೋ? ಓದಿ ನಿಮ್ಮ ಅಭಿಪ್ರಾಯ ತಿಳಿಸಿ…

ಹುಡ್ಗ ಲೈಫಲ್ಲಿ ಬೇಸತ್ತು ಆತ್ಮಹತ್ಯೆ ಮಾಡ್ಕೊಳಕ್ಕೆ ಕಾಸ್‍ಬಂಗ್ಲೇಗ್ ಹೋಗಿ ಸಿಂಹದ್ ಬೋನಿಗೇ ನುಗ್ಗಿದಾನೆ

ಸಿಂಹ ಮೊದ್ಲು ಔನ್ ಜೊತೆ ಆಟ ಆಡಕ್ ಶುರು ಮಾಡ್ತು ಅಂತ ಕೆಲುವ್ರು ನೋಡ್ದೋರು ಹೇಳಿದಾರೆ… ಆಮೇಲೆ ಔನ್ನ ತಿನ್ನಕ್ ಹೋದ್ವಂತೆ…

ಇವ್ನು ಕಿರ್ಚಾಡಿದಾನೆ… ನೋಡ್ತಿದ್ ಜನ್ರೆಲ್ಲಾ ಗಾಬ್ರಿ ಆಗೋದ್ರಂತೆ… ಜ಼ೂ ಸಿಬ್ಬಂದಿ ಸುಮ್ನಿರ್ತಾರಾ?

ತಕ್ಷಣಾನೆ ತುಪಾಕಿ ತಂದು ಢಂ ಢಂ ಅಂತ ಗಾಳೀಲಿ ಒಂದೆರಡ್ ಗುಂಡ್ ಹಾರ್ಸಿದ್ದಾರೆ… ಆದ್ರೂ ಯಾವಾಗ್ ಹುಡ್ಗನ್ನ ಸಿಂಹ ಬಿಡ್ಲಿಲ್ವೋ ಅಲ್ಲಿದ್ ಎರಡೂ ಸಿಂಹಗಳ್ನ ಗುಂಡಿಟ್ ಸಾಯ್ಸಿದ್ದಾರೆ!!! ಸಿಂಹದ್ ಬಾಯಿಂದ ಉಳ್ಕೊಂಡೋನು ಈಗ ಆಸ್ಪತ್ರೇಲಿ ಈಗ್ಲೋ ಆಗ್ಲೋ ಅನ್ನೋಹಾಗಿದಾನಂತೆ.

ಆ ಹುಡ್ಗ ಆತ್ಮಹತ್ಯೆ ಮಾಡ್ಕೊಳಕ್ಕೆ ಅಂತಾನೇ ಸಿಂಹದ್ ಹತ್ರ ಹೋಗಿದ್ದಾನೆ ಅನ್ನೋದು ಗೊತ್ತಾಗಿದ್ದು ಔನ್ ಡೆತ್ ನೋಟನ್ನ ಕೈಲೇ ಹಿಡ್ಕೊಂಡಿರೋದ್ ನೋಡ್ದಾಗ್ಲೇನೇ…

ಜ಼ೂಗೆ ಬರೋರನ್ನ ಕಾಪಾಡೋದು ನಮ್ ಕೆಲ್ಸ ಅದಕ್ಕೇ ನಾವ್ ಸಿಂಹಾನ ಸಾಯ್ಸಿ ಹುಡ್ಗನ್ನ ಕಾಪಾಡಿದ್ವಿ ಅಂತ ಅಲ್ಲಿ ಸಿಬ್ಬಂದಿ ಸಮರ್ಥಿಸಿಕೊಂಡಿದಾರಂತೆ. ಔರ್ಗೇನ್ ಗೊತ್ತು ಇವ್ನು ಸಾಯಕ್ಕೆ ಅಂತಾನೇ ಬಿದ್ದಿದಾನೆ ಅಂತ… ಪಾಪ ಮೂಕ ಪ್ರಾಣಿ ಏನೂ ತಪ್ ಮಾಡ್ದೇ ಹೋದ್ರೂ ಪ್ರಾಣ ಕಳ್ಕೋತಲ್ಲ ಅನ್ಸುತ್ತೆ. ಆ ಜ಼ೂ ಸಿಬ್ಬಂದಿ ನಾವೇ ಆಗಿದ್ರೂ ಆ ಟೈಮಲ್ ಏನ್ ಮಾಡ್ತಿದ್ವೋ?

ಇದರ್ ಬಗ್ಗೆ ಇಂಟರ್ನೆಟ್ಟಲ್ಲಿ ಹರಿದಾಡ್ತಿರೋ ಈ ವೀಡಿಯೋ ನೋಡಿ

ಈಗ ಹೇಳಿ: ಈ ವ್ಯಕ್ತಿ ಮಾಡಿದ್ದು ತಪ್ಪು ಅಂತ ಖಂಡಿತವಾಗಿ ಹೇಳಬಹುದು… ಯಾಕಂದ್ರೆ ಬದುಕಿದ್ದು ಪರಿಹರಿಸಕ್ಕೆ ಆಗದೆ ಇರೋ ಸಮಸ್ಯೆನ ಸತ್ತು ಪರಿಹರಿಸಕ್ಕಾಗಲ್ಲ.. ಆದರೆ ಈ ಘಟನೆಯಲ್ಲಿ ಸಿಂಹಗಳೇನಾದರೂ ತಪ್ಪು ಮಾಡಿದವಾ? ಹಾಗಾದ್ರೆ ಯಾಕೆ ಸತ್ತವು? ಅದು ನ್ಯಾಯ ನಾ? ಗಾರ್ಡುಗಳು ತಪ್ಪು ಮಾಡಿದಾರಾ? ಇಲ್ಲಾಂದರೆ ಏನೂ ತಪ್ಪು ಮಾಡದೆ ಇರೋ ಪ್ರಾಣಿಗಳ್ನ ಕೊಂದರಲ್ಲ, ಅದು ಹೇಗೆ ಸರಿ?

ಅಂದಹಾಗೆ ಇದು ನಡೆದಿದ್ದು ಚಿಲಿ ದೇಶದಲ್ಲಿ. ದಕ್ಷಿಣ ಅಮೇರಿಕಾದಲ್ಲಿದೆ. ಸುದ್ದಿ ಮೂಲ: ದಿ ಗಾರ್ಡಿಯನ್.