http://www.indianyouth.net/tag/positive-thinking/

ಯಶಸ್ಸು ಸಿಕ್ತಿದೆ ಅಂದರೆ ಜೀವನದಲ್ಲಿ ಏಳಿಗೆ ಆಗ್ತಿದೆ ಅಂತ. ಆದ್ರೆ ನಿಮ್ಮಲ್ಲಿ ತಪ್ಪು ಹುಡುಕಿ ನಿಮಗೆ ಕಲ್ಲು ಎಸೆಯೋಕೆ ಕೆಲವ್ರಿಗೆ ಇದು ಸರಿಯಾದ ಸಮಯ. ವಿಚಿತ್ರ ಅನ್ಸಿದ್ರೂ ಯಾಕೆ ಹೀಗೆ ಅಂತ ತಿಳ್ಕೊಳೋದು ಅಗತ್ಯ.

ಆಶ್ಚರ್ಯ ಏನಂದ್ರೆ ನಿಮ್ಮನ್ನ ದ್ವೇಷಿಸೋರು ಇದಾರೆ ಅಂದ್ರೆ ನಿಮ್ಮ ಜೀವನದ ಹೊಸ ಹಾದಿ ನಿಮ್ಮನ್ನ ಮೇಲಕ್ಕೆ ಕರ್ಕೊಂಡು ಹೋಗ್ತಿದೆ ಅಂತ. ನಿಮ್ಮನ್ನ ದ್ವೇಷಿಸೋರು ಇದ್ರೆ ಅದು ನಿಮ್ಮ ತಪ್ಪಲ್ಲ. ಆದ್ರೆ ಅವರ ದ್ವೇಷಕ್ಕೆ ಕಾರಣ ತಿಳ್ಕೊಳೋದು ನಿಮ್ಮ ಕರ್ತವ್ಯ.

1. ನೀವು ವಿಭಿನ್ನವಾಗಿ ಯೋಚಿಸ್ತೀರಿ

1.bp.blogspot.com
ಸಾಂಪ್ರದಾಯಿಕವಾಗಿ ಬಂದಿರೋ ಮಾರ್ಗಗಳ ಮೊರೆ ಹೋಗದೇ ವಿಭಿನ್ನವಾಗಿ, ಕ್ರಿಯಾತ್ಮಕವಾಗಿ ನೀವು ಸಮಸ್ಯೆಗಳನ್ನ ಪರಿಹರಿಸ್ತೀರಿ. ಇರೋ ಪದ್ಧತಿಗಳಾಚೆ ಏನೇ ಮಾಡಿದ್ರೂ ಕೆಲವ್ರಿಗೆ ಸಹಿಸೋಕ್ಕೆ ಆಗಲ್ಲ. ಎಲ್ಲರ ಥರ ಇದ್ರೆ ಎಲ್ಲರ ಮೆಚ್ಚುಗೆ ಸಿಗತ್ತೆ. ಹೊಸತೇನೋ ಮಾಡಿದ್ರೆ ಅದರ ಬಗ್ಗೆ ಟೀಕೆ ಸಹಜ. ಅದರಲ್ಲಿ ನಿಮ್ಮ ಕ್ರಿಯಾಶೀಲತೆ ನೋಡದೆ ನೀವು ಸಂಪ್ರದಾಯಕ್ಕೆ ಹೊರಗೆ ಅಂತ ಹಣೆಪಟ್ಟಿ ಹಾಕ್ತಾರೆ.

2. ನಿಮ್ಮ ಜೀವನ ಸ್ವಾರಸ್ಯಮಯವಾಗಿದೆ

cdn-images-1.medium.com
“ನಿಮ್ಮನ್ನ ದ್ವೇಷಿಸೋರು ನಿಜದಲ್ಲಿ ತಮ್ಮನ್ನ ತಾವೇ ದ್ವೇಷಿಸ್ತಾರೆ. ಯಾಕಂದ್ರೆ ನೀವು, ನಿಮ್ಮ ಜೀವನ ಎಲ್ಲವೂ ಅವರು ತಮಗಾಗಿ ಕಂಡ ಕನಸಿನ ಪ್ರತಿಬಿಂಬದಂತಿದೆ.” ಇವರು ಭಾಗವಹಿಸೋಕ್ಕಿಂತ ಹಿಂದೆ ಕೂತು ನೋಡೋರು. ಇವರು ಯಶಸ್ಸನ್ನ ಕಾಣದೇ ಇರಬಹುದು ಅಥವಾ ಇವರು ಪಡೀಬೇಕಾದ ಯಶಸ್ಸಿಗೆ ತಕ್ಕ ಶ್ರಮ ಹಾಕದೇ, ನೀವು ಅದೇ ಯಶಸ್ಸನ್ನ ಜೀವಿಸ್ತಿರೋದು ಅವರಿಗೆ ಕಸಿವಿಸಿ ಉಂಟು ಮಾಡ್ತಿರಬಹುದು. ಹಾಗಾಗಿ ಅವರ ಕೊರತೆಗಳನ್ನ ಮರೆಮಾಚೋದಕ್ಕೆ ನಿಮ್ಮನ್ನ ದೂಷಿಸ್ತಾರೆ ಅಷ್ಟೆ.

3. ನೀವು ಸಾಹಸಿ

s-i.huffpost.com
ನಿಮಗೆ ಭಯ ಇಲ್ಲ, ರಿಸ್ಕ್ ತೊಗೋತೀರಿ. ಏನಾದ್ರು ಆಗಕ್ಕೆ ಕಾಯ್ತಾ ಕೂರೋ ಬದಲು, ಏನಾದ್ರು ಮಾಡಿ ಪರಿಣಾಮ ಎದುರಿಸ್ತೀರಿ. ಹೇಗೋ ಒಂದು ಅಂತ ಜೀವನ ಸಾಗಿಸದೆ, ನಿಮಗೆ ಬೇಕಾದಂತ ಜೀವನ ರೂಪಿಸಿಕೊಳ್ಳೋ ಪ್ರಯತ್ನ ಮಾಡ್ತೀರಿ.

4. ಜನರ ಕಣ್ಣು ನಿಮ್ಮ ಮೇಲಿರತ್ತೆ

pbs.twimg.com
ನೀವು ಮಾಡೋ ಕೆಲಸಗಳಿಂದ ಜನ ನಿಮ್ಮನ್ನ ಪ್ರೀತಿಸ್ತಾರೆ, ಗೌರವ ಕೊಡ್ತಾರೆ. ಅದೇ ಜನರ ಗಮನ ತಮ್ಮತ್ತ ಸೆಳೆಯೋಕ್ಕೆ ಇವರು ನಿಮ್ಮನ್ನ ದೂಷಿಸ್ತಾರೆ, ದ್ವೇಷಿಸ್ತಾರೆ. ಎಲ್ಲಾ ಸರಿಯಾಗೇ ಮಾಡ್ತಿರೋರ ಬಗ್ಗೇನೂ ವಿಮರ್ಶಕರು ಮಾತಾಡ್ತಾರೆ ಅಂದ್ರೆ ಅದು ಗಮನ ಸೆಳೆಯೋ ತಂತ್ರ ಅಷ್ಟೆ.

5. ನಿಮ್ಮ ಪಾಲಿನ ಕಷ್ಟ ನೀವು ಪಟ್ಟಿದ್ದೀರಿ

rabbisacks.org
ಯಶಸ್ಸು ಸಂಪಾದಿಸೋಕ್ಕೆ ಮೊದಲು ಪಡಬೇಕಾದ ಎಲ್ಲಾ ಕಷ್ಟವನ್ನೂ ನೀವು ಪಟ್ಟಿದ್ದೀರಿ. ಬಹಳ ತಾಳ್ಮೆ, ಶ್ರಮ, ಬದ್ಧತೆ, ಕೆಲಸ ಇದರ ಹಿಂದೆ ಇದೆ. ನಿಮ್ಮಿಂದ ಇದು ಸಾಧ್ಯ ಇಲ್ಲ ಅಂತ ಅನ್ಕೊಂಡೋರ ಬಾಯಿ ಮುಚ್ಚಿಸಿದ್ದೀರಿ. ಸಾಧ್ಯವಿಲ್ಲದರಿಂದಲೇ ಸಾಧ್ಯ ಮಾಡ್ಕೊಂಡಿದೀರಿ. ಹಾಗಾಗಿ ಇವರ ದ್ವೇಷದ ಹಿಂದೆ ’ಇದು ಹೇಗೆ ಮಾಡ್ಬಿಟ್ರಿ?’ ಅನ್ನೋ ಆಶ್ಚರ್ಯ ಇದೆ.

6. ನೀವು ಬಹಳ ಗಟ್ಟಿ

inspiredintent.com
ಸಿಂಹಕ್ಕೆ ಕುರಿಯ ಒಪ್ಪಿಗೆ ಬೇಡ. ಹಾಗೆ ಮನಸ್ಸಿನಲ್ಲಿ ಗಟ್ಟಿಗರಾದೋರಿಗೆ ಯಾರ ಒಪ್ಪಿಗೆಯೂ ಬೇಡ. ಅಷ್ಟು ಗಟ್ಟಿ ಇರೋರನ್ನ ಮುರಿಯೋದು ಹೇಗೆ ಅಂತ ದ್ವೇಷಿಗಳು ನಿಮ್ಮ ಬಲಹೀನತೆ ಹುಡುಕ್ತಾ ಇರ್ತಾರೆ. ನೀವು ಇದನ್ನೆಲ್ಲಾ ಮೀರಿ ಮೇಲಕ್ಕೆ ಹಾರೋದ್ರಲ್ಲಿ ಮಗ್ನರಾಗಿರ್ತೀರಿ.

7. ನಿಮಗೆ ಸರಿ ಅನ್ಸೋದರ ಬಗ್ಗೆ ಬೆಂಬಲ ಸೂಚಿಸ್ತೀರಿ

speechworkshop.com
ನಿಮ್ಮನ್ನ ಯಾರಾದ್ರೂ ದ್ವೇಷಿಸ್ತಾರಾ? ಹಾಗಾದ್ರೆ ಜೀವನದಲ್ಲಿ ಯಾವುದೋ ಒಳ್ಳೆ ವಿಷಯಕ್ಕೆ ನೀವು ಬೆಂಬಲಿಸಿದ್ದೀರಿ ಅಂತ ಅರ್ಥ. ನೀವು ಬೆಳೆದು, ಸರಿ ತಪ್ಪುಗಳನ್ನ ಅಳೆದು ಮಾತಾಡೋ ಪ್ರಾಜ್ಞತೆ ಸಂಪಾದಿಸಿದ್ದೀರಿ. ಸಂತೋಷವಾಗಿರೋರಿಗೆ ದ್ವೇಷಿಸೋ ಅಗತ್ಯ ಇರಲ್ಲ. ದ್ವೇಷಿಸೋರು, ಅದು ಎಷ್ಟೇ ಹೊಲಸಾದ್ರೂ ಸರಿ ಅಂತ ಮುನ್ನುಗ್ಗಿ ತಮ್ಮ ಸಂತೋಷ ಕಳ್ಕೊಳೋರು.

ದ್ವೇಷ ತಪ್ಪೇ! ಆದರೆ ದ್ವೇಷಿಸೋರು ಇದ್ರೆ ನೀವು ಸರಿಯಾದ ಮಾರ್ಗದಲ್ಲಿ ಸಾಗಬೇಕು ಅನ್ನೋ ಜವಾಬ್ದಾರಿ ನಿಮ್ಮ ಮೇಲಿರತ್ತೆ. ಹಾಗಾಗಿ ಇದು ನಿಮ್ಮನ್ನ ಹಿಂದೆ ಹಾಕಬಾರದು. ನಿಮಗೆ ಬೇಕಾದ್ದನ್ನ ಪಡಿಯೋ ಹಠ ಇದರಿಂದ ಇನ್ನೂ ಹೆಚ್ಚಾಗಬೇಕು.