https://s3.scoopwhoop.com/anj/ajit/f6855637-76ad-4a69-b539-4c7197b087ad.jpg

ನಮ್ಮಲ್ಲಿ ಈಗ್ಲೂ ಬಹಳ ಜನಕ್ಕೆ ಸಚಿನ್ ಅಂದ್ರೆ ಕ್ರಿಕೆಟ್… ಕ್ರಿಕೆಟ್ ಅಂದ್ರೆ ಸಚಿನ್. ಅವರು 2013ರಲ್ಲಿ ರಿಟೈರ್ಮೆಂಟ್ ಘೋಷಿಸ್ದಾಗ, ಕ್ರಿಕೆಟ್ಟಲ್ಲಿ ಒಂದು ಯುಗಾನೇ ಕೊನೆಯಾದಂಗೆ ಅನ್ನಿಸ್ತು. ಆ 24 ವರ್ಷಗಳ ಕಾಲ ಅವರು ರನ್ಗಳು, ಶತಕಗಳಿಂದ ಮಾಡಿದ ದಾಖಲೆಗಳು ನಮ್ಮೆಲ್ಲರ ಮನಸ್ಸಲ್ಲಿ ಈಗ್ಲೂ ಹಾಗೇ ಉಳ್ಕೊಂಡಿದೆ.

ಇಷ್ಟೆಲ್ಲಾ ಹೆಸರು, ಸನ್ಮಾನ, ದಾಖಲೆ, ಪ್ರೀತಿ ಹಿಂದೆ ನಮ್ಮಲ್ಲಿ ತುಂಬ ಕಡಿಮೆ ಜನರಿಗೆ ಗೊತ್ತಿರೋ ಅಂತ ಒಂದು ದೊಡ್ಡ ಶಕ್ತಿ ಇದೆ. ಅದು ಬೇರೆ ಯಾರೂ ಅಲ್ಲ… ಸಚಿನ್ ಅಣ್ಣ ಅಜಿತ್ ತೆಂಡೂಲ್ಕರ್.

ಸಚಿನ್ನೇ ಅವರ ಫೇರ್ವೆಲ್ ಸಮಯದಲ್ಲಿ ಹೇಳ್ದಾಗೆ, ಕ್ರಿಕೆಟ್ ಅಣ್ಣ- ತಮ್ಮ ಇಬ್ರೂ ಸೇರಿ ಕಂಡ ಕನಸು. ಆದ್ರೆ, ಸ್ವತಃ ಅವ್ರೇ ಒಳ್ಳೆ ಆಟಗಾರ ಅಗಿದ್ರೂ, ಸಚಿನ್ನಲ್ಲಿದ್ದ ಪ್ರತಿಭೇನ ಚನ್ನಾಗಿ ಎಣೆಹಾಕಿದ್ದ ಅಜಿತ್ ಅವರ ಭವಿಷ್ಯಾನ ಸಚಿನ್ಗೋಸ್ಕರ ತ್ಯಾಗ ಮಾಡಿದ್ರು.

ಮೂಲ

ನಮ್ಮೆಲ್ಲರ ಥರ ಸಚಿನ್ಗೆ ಅವರ ಅಣ್ಣಾನೇ ಸ್ಪೂರ್ತಿ ಆಗಿದ್ರೂ ಸಹ, ಸಚಿನ್ ಶಕ್ತೀನೇ ಬೇರೆ ಅನ್ನೋದು ಅವರಣ್ಣಂಗೆ ಗೊತ್ತಿತ್ತು. ಅದಕ್ಕೆ ಸಚಿನ್ಗೆ 11 ವರ್ಷ ಆದಾಗ ಅವರನ್ನ ರಮಾಕಾಂತ್ ಆಚ್ರೇಕರ್ ಹತ್ತಿರ ಕರ್ಕೊಂಡು ಹೋದ್ರು. ಸಚಿನ್ ಅನ್ನೋ ವಜ್ರಾನ ಅಜಿತ್ ಕಂಡುಹಿಡಿದ್ರು. ಆಮೇಲೆ ಅದನ್ನ ಹೊಳಿಯೋ ಹಾಗೆ ಮಾಡಿದ್ದು ಆಚ್ರೇಕರ್, ಸಚಿನ್ ಕೋಚ್.

ಮಿಕ್ಕಿದ್ದೆಲ್ಲ ಈಗ ಹಳೆ ಕಥೆ. ಸಚಿನ್ನ ಜನ ಹೊಗಳ್ದಾಗ ಅಜಿತ್ ಹಿಗ್ಲಿಲ್ಲ..ತೆಗಳಿದಾಗ ಕುಗ್ಲಿಲ್ಲ. ಯಾಕಂದ್ರೆ, ಸಚಿನ್ನ ಯಾರೂ ನೋಡ್ದೇ ಇರೋ ರೀತೀಲಿ ಅಜಿತ್ ನೋಡಿದ್ರು. ತಮ್ಮನ ಆಟದ ಮೇಲೆ, ಅವನ ಪ್ರತಿಭೆ ಮೇಲೆ ಅವ್ರಿಗೆ ತುಂಬಾ ನಂಬಿಕೆ.

ಸಚಿನ್…ಸಚಿನ್ ತೆಂಡೂಲ್ಕರ್ ಆದ್ಮೇಲೆ ಅವ್ರ ವಯಕ್ತಿಕ ಬದುಕು, ಯಶಸ್ಸು, ಆಟ…ಹೀಗೆ ಪ್ರತಿಯೊಂದು ಹೆಜ್ಜೇನೂ ಮೀಡಿಯಾ ಹಿಂಬಾಲಿಸ್ತಿತ್ತು.ಆದ್ರೆ ಅಜಿತ್ ತಮ್ಮ ಸ್ವಂತ ಇಚ್ಚೆಯಿಂದ್ಲೇ ಈ ಹಾವಳಿಯಿಂದ ದೂರ ಉಳಿದ್ರು. ಅವ್ರಿಗೆ ಇದ್ದೆಲ್ಲಾ ಬೇಕಾಗಿರ್ಲಿಲ್ಲ. ಅವ್ರಿಗೆ ನಿಜವಾಗ್ಲೂ ಬೇಕಾಗಿದ್ದಿದ್ದು ಸಚಿನ್ ಚನ್ನಾಗಿ ಆಡಿ ನಮ್ಮೆಲ್ಲರನ್ನ, ದೇಶಾನ ಹೆಮ್ಮೆ ಪಡಿಸೋದು. ಅವರ ಈ ಶ್ರಮದಿಂದ್ಲೇ, ಸಚಿನ್ ಆಡಿದ ಕೊನೇ ದಿನ ಕೂಡ ಕ್ರಿಕೆಟ್ ಅಭಿಮಾನಿಗಳು ಅವ್ರ ರಿಟೈರ್ಮೆಂಟ್ಗಿಂತ ಅವ್ರ ಇನ್ನಿಂಗ್ಸ್ ಬಗ್ಗೆ ಚರ್ಚೆ ಮಾಡ್ತಾ ಇದ್ದಿದ್ದು!

ಇಷ್ಟೆಲ್ಲಾ ಆದ್ರೂ, ಅಜಿತ್ ಸಚಿನ್ ಆಟ ನೋಡಕ್ಕೆ ಯಾವತ್ತೂ ಸ್ಟೇಡಿಯಂಗೆ ಬಂದೋರಲ್ಲ. ತಾನು ಬಂದ್ರೆ ತಮ್ಮ ಕಾನ್ಶಿಯಸ್ ಆಗ್ತಾನೆ ಅನ್ನೋದು ಅವ್ರಿಗೆ ಗೊತ್ತಿತ್ತು. ಜೊತೆಗೆ, ತಾನು ಮುಂದೆ ಕೂತ್ರೆ ಸಚಿನ್ ಸರೀಗೆ ಆಡಲ್ಲ ಅನ್ನೋ ಭಯ… ಮೂಢನಂಬಿಕೆ. ಆದ್ರೆ, ಸಚಿನ್ ಮನೇಗ್ ಬಂದ್ಮೇಲೆ ಪ್ರತೀ ಶಾಟ್ ಬಗ್ಗೆ ಚರ್ಚೆ ನಡೀತಿತ್ತು. ಅವ್ರಿಬ್ರ ಮಧ್ಯ ವಾದಾನೂ ನಡೀತಿತ್ತು. ಕೊನೇದಾಗಿ ಸಚಿನ್ ಅಣ್ಣನ ಮುಂದೆ ಸೋಲ್ತಿದ್ರು. ತಮ್ಮಣನ ಜಡ್ಜ್ಮೆಂಟ್ ಯಾವಾಗ್ಲೂ ಸರಿ ಅನ್ನೋ ನಂಬಿಕೆ ಅವ್ರಿಗಿತ್ತು. ಅಲ್ದೇ, ಅವ್ರಣ್ಣ ಇಲ್ದೆ ತಾನೀ ಈ ಸ್ಥಾನ ತಲುಪ್ತಾ ಇರ್ಲಿಲ್ಲ ಅನ್ನೋದೂ ಅವ್ರಿಗೆ ಚನ್ನಾಗಿ ಗೊತ್ತಿತ್ತು.

ಮೂಲ

ಅವ್ರೇ ಹೇಳೋ ಥರ ಸಚಿನ್ ಇವತ್ತೇನೇ ಸಾಧನೆ ಮಾಡಿದ್ರೂ ಅದ್ರ ಕೀರ್ತಿ ಅಜಿತ್ದೇ. ನಮ್ಗೆಲ್ಲಾ ಸಚಿನ್ ಮೇಲೆ ಎಷ್ಟೇ ಅಭಿಮಾನ, ಹೆಮ್ಮೆ ಇದ್ರೂ, ಸಚಿನ್ ಕ್ರಿಕೆಟ್ ಆಡೋಕ್ಕೆ ಶುರು ಮಾಡಿದ 11 ವರ್ಷದಿಂದ ರಿಟೈರ್ ಆಗಿದ್ 40 ವರ್ಷದವರೆಗೂ ಅಜಿತ್ ಸಚಿನ್ಗೆ ಅಭಿಮಾನಿ, ಗೈಡ್, ಕೋಚ್, ಸ್ನೇಹಿತ…ಇದೆಲ್ಲಕ್ಕಿಂತ ಹೆಚ್ಚಾಗಿ ಸದಾ ಪ್ರೀತ್ಸೊ ತಂದೆ ಸಮಾನದ ದೊಡ್ಡಣ್ಣನಾಗಿ, ಅವರ ಹಿಂದಿರೊ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ.

ಮೂಲ

ಅಣ್ಣ-ತಮ್ಮಂದಿರ ಸಂಬಂಧ ಹೇಗಿದೆ? ನಮಗಂತೂ ನಿಜವಾದ ತೆಂಡುಲ್ಕರ್ ಯಾರು ಅನ್ನೋ ಪ್ರಶ್ನೆ ಎದ್ದಿದೆ. ಪ್ರಪಂಚ ಯಾರನ್ನ ಹೆಚ್ಚು ನೆನಪಿಟ್ಕೋಬೇಕು?