http://i.dailymail.co.uk/i/pix/2017/05/31/21/40F759C500000578-0-image-a-50_1496260892509.jpg

ಸಾವಿರಾರು ಜನ ಪಾಲ್ಗೊಂಡ ಸಂಶೋಧನೆ ಒಂದ್ರಲ್ಲಿ, ಅವರು ಗುಟ್ಟು ಇಟ್ಕೊಳೋ ಅಭ್ಯಾಸ ಮತ್ತು ಅವರ ನಡುವೆ ಇರೋ ಗುಟ್ಟುಗಳ ಸಂಖ್ಯೆ ಸುಮಾರು 13000 ಅಂತ ಗೊತ್ತಾಗಿದೆ. ಇದರಲ್ಲಿ ಜನ ಪರೀಕ್ಷೇಲಿ ಕಾಪಿ ಮಾಡಿದ್ದು, ಲೈಂಗಿಕ ಆಸಕ್ತಿ, ಅಫೇರ್ಸ್ ಹೀಗೆ ಸಾಮಾನ್ಯವಾಗಿ ಮುಚ್ಚಿಡೋ 38 ವಿಷಯಗಳ ಗುಂಪು ಕೂಡ ಲಭ್ಯ ಆಯ್ತು. ಸಂಶೋಧನೆ ಕೊನೇಲಿ ಗೊತ್ತಾಗಿದ್ದೇನಂದ್ರೆ ಈ 38 ವಿಷಯಗಳಲ್ಲಿ ಕನಿಷ್ಠ 13 ಗುಟ್ಟುಗಳನ್ನಾದ್ರೂ ಒಬ್ಬ ವ್ಯಕ್ತಿ ಏಕಕಾಲಕ್ಕೆ ಇಟ್ಕೊಂಡಿರ್ತಾನೆ ಅನ್ನೋದು!

ಈ 13 ಗುಟ್ಟುಗಳಂತೂ ಯಾರ್ ಜೊತೇನೂ ಹಂಚ್ಕೊಳ್ದೇರೋ ಗೌಪ್ಯ ವಿಷಯಗಳಂತೆ! 

ಅತಿ ಸಾಮಾನ್ಯ ಗುಟ್ಟುಗಳು ಒಂದಕ್ಕಿಂತ ಜಾಸ್ತಿ ಸಂಬಂಧ ಇರೋದು, ಲೈಂಗಿಕ ಆಸಕ್ತಿ , ಗಂಡ ಹೆಂಡತೀರ ನಡುವಿನ ಸುಳ್ಳುಗಳು ಇತ್ಯಾದಿ. ನಾವೆಲ್ರೂ ಏನೋ ಒಂದು ಗುಟ್ಟು ಬಚ್ಚಿಟ್ಕೊಂಡಿರೋದು ನಿಜ. ಇದರ ಪರಿಣಾಮ ನಮ್ಮ ಆರೋಗ್ಯದ್ಮೇಲೆ ಹೇಗಾಗ್ತಿದೆ ಅಂತ ಈ ತಜ್ಞರು ಹೇಳ್ತಾರೆ.

ಗುಟ್ಟಿಗೂ ಆರೋಗ್ಯಕ್ಕೂ ಇರೋ ಸಂಬಂಧ

ಸಾಮಾನ್ಯವಾಗಿ, ಯಾರ್ ಜೊತೇನಾದ್ರೂ ಮಾತಾಡುವಾಗ ಎಲ್ಲಿ ನಮ್ಮ ಗುಟ್ಟು ಬಯಲಾಗತ್ತೋ ಅಂತ ತುಂಬಾ ಎಚ್ಚರಿಕೆ ವಹಿಸಿ ಅದನ್ನ ಮುಚ್ಚಿಡೋ ಪ್ರಯತ್ನ ಮಾಡ್ತೀವಿ. ಆದ್ರೆ ಇದಕ್ಕಿಂತ ಜಾಸ್ತಿ ಆತಂಕ, ಉದ್ವೇಗ ಎಲ್ಲಾ ಅನುಭವಿಸೋದು ನಾವೊಬ್ರೇ ಈ ಗುಟ್ಟಿನ ಬಗ್ಗೆ ಯೋಚ್ನೆ ಮಾಡುವಾಗ. ನಮ್ಮ ಗುಟ್ಟು ರಟ್ಟಾಗೋ ಸಂದರ್ಭಗಳ್ಗಿಂತ ಈ ಗುಟ್ಟು ನಮ್ಮ ಯೋಚ್ನೇಲಿ ಹರಿದಾಡೋ ಸಂದರ್ಭಗಳೇ ಹೆಚ್ಚು. ಯಾರೇ ಆಗ್ಲಿ, ತಮ್ಮ ಗುಟ್ಟುಗಳ ಬಗ್ಗೆ ಯೋಚಿಸ್ತಿರುವಾಗ ಏನೋ ಭಾರ ಹೊತ್ತಿರೋ ಹಾಗೆ ಒತ್ತಡ ಅನುಭವಿಸ್ತಾರಂತೆ. ಈ ಗುಟ್ಟು ನಾವು ಎಂದೂ ಸಾಧಿಸೋಕ್ಕೆ ಆಗ್ದಿರೋ ವಿಷಯವಾಗಿದ್ರೆ ಅದು ಈ ರೀತಿ ಒತ್ತಡ ಉಂಟು ಮಾಡತ್ತೆ.

ಮೂಲ

ಸದ್ಯಕ್ಕೆ ಗುಟ್ಟು ರಟ್ಟಾಗೋದ್ರಿಂದ ತಪ್ಪಿಸ್ಕೊಂಡ್ವಿ ಅಂತ ಯಾವತ್ತೂ ನಿರಾಳ ಆಗಲ್ಲ. ಯಾಕ್ ಹೇಳಿ? ಮತ್ತೆ ಮುಂದೆ ಇದೇ ಥರ ಸಂದರ್ಭ ಬರ್ಬೋದು, ನಾವು ಮತ್ತೆ ಗುಟ್ಟನ್ನ ಹೇಗೆ ಮುಚ್ಚಿಡೋದು ಅಂತ ತಲೆ ಕೆಡಿಸ್ಕೋಬೋದು. ಹಾಗಾಗಿ ಯಾವತ್ತೇ ಆದ್ರೂ ಗುಟ್ಟಿಂದ ನಮ್ಮ ಮಾನಸಿಕ ಆರೋಗ್ಯಕ್ಕೆ ತೊಂದ್ರೇನೇ!

ಈ ಸಮಸ್ಯೆ ಇಂದ ದೂರ ಆಗಕ್ಕೆ ಒಂದ್ ಉಪಾಯ ಏನಂದ್ರೆ, ಗುಟ್ಟಿನ ಬಗ್ಗೆ ಆದಷ್ಟು ಕಡಿಮೆ ಯೋಚ್ನೆ ಮಾಡೋದು. ಗುಟ್ಟು ಮಾಡೋದ್ರಿಂದ ಅಷ್ಟೇನ್ ಸಮಸ್ಯೆ ಇಲ್ಲ, ಅದರ ಬಗ್ಗೆ ಯೋಚ್ನೆ ಮಾಡೋದೇ ದೊಡ್ಡ ಸಮಸ್ಯೆ! ಏನಂತೀರಾ?