https://sargentmuaythai.files.wordpress.com/2015/02/overtraining.png

ನಮ್ ಮೈಯಲ್ಲಿ ಏನಾದ್ರೂ ವ್ಯತ್ಯಾಸ ಆದ್ರೆ ತಕ್ಷಣ ಎಚ್ಚರಿಕೆ ಘಂಟೆ ಬಾರ್ಸತ್ತೆ. ಹೀಗೆ ಒಂದೊಂದು ತೊಂದ್ರೆ ಕಾಣ್ಸ್ಕೊಳ್ಳೊ ಮುಂಚೆ ನಮ್ ಮೈ ಏನೇನ್ ಸಿಗ್ನಲ್ ಕೊಡತ್ತೆ ಅಂತ ನಾವು ತಿಳ್ಕೊಳಕ್ಕೆ ರೆಡಿಯಾಗಿರ್ಬೇಕು. ಇಲ್ಲಿ ಕೆಳಗೆ ಹೃದಾಯಾಘಾತ (ಹಾರ್ಟ್ ಅಟ್ಯಾಕ್) ಆಗೋ ಒಂದು ತಿಂಗಳು ಮುಂಚೆ ನಮ್ ಮೈ ಯಾವ ಯಾವ ತರ ಎಚ್ಚರಿಕೆ ಕೊಡತ್ತೆ ಅನ್ನೋದು ಕೊಟ್ಟಿದೆ, ಓದಿ ತಿಳ್ಕೊಂಡಿರಿ, ನಿಮ್ಗಲ್ದೇದ್ರೂ ಬೇರೇಯೋರ್ಗೆ ಸಹಾಯ ಆಗ್ಬೋದು.

1. ಎದೆ ಒತ್ತೋದು ಜಾಸ್ತಿ ಆಗತ್ತೆ

ಇದನ್ನ ಕಡೆಗಣಿಸೋದು ಒಳ್ಳೇದಲ್ಲ. ಇದು ಅತಿ ಮುಖ್ಯವಾದ ಸೂಚನೆ. ಹಾಗಂತ ಸುಮ್ ಸುಮ್ನೆ ಎದೆ ಒತ್ತುತ್ತಾ ಇದೆ ಅಂದ್ರೆ ಹಾರ್ಟ್ ಅಟ್ಯಾಕ್ ಆಗೋ ಲಕ್ಷಣ್ ಅನ್ಕೊಬೇಡಿ. ಹೊಟ್ಟೆ ಗ್ಯಾಸ್ ಪ್ರಾಬ್ಲಂಗೂ ಆಗೋ ಸಾಧ್ಯತೆ ಇರತ್ತೆ!

iuhealth.org

2. ಜ್ವರ, ಕೆಮ್ಮು, ನೆಗಡಿ ಬಂದರೆ ತೀರಾ ಜಾಸ್ತಿ ದಿನ ಹೋಗದೇನೇ ಇರೋದು

ಇದು ಸಾಮಾನ್ಯವಾದ್ದು ಅಂತ ಕಡೆಗಣಿಸದೆ ಡಾಕ್ಟರ್ ಹತ್ರ ಹೋದ್ರೆ ಬಹುಶಃ ಮುಂದಾಗೋ ತೊಂದ್ರೆ ಅಡಿಮೆ ಆದ್ರೂ ಆಗಬಹುದು.

st1.thehealthsite.com

3. ಸುಮ್-ಸುಮ್ನೆ ಸುಸ್ತಾಗೋದು

ಸುಮ್ ಸುಮ್ನೆ ಏನೂ ಕೆಲ್ಸ ಮಾಡದೇ ಹೋದ್ರೂ ಸುಸ್ತಾಗ್ತಿದೆ ಅಂದ್ರೆ ಸ್ವಲ್ಪ ಎಚ್ಚರಿಕೆ ವಹಿಸ್ಬೇಕು. ಬಿ.ಪಿ ಚೆಕ್ ಮಾಡ್ಸ್ಕೊಬೇಕು. ಡಾಕ್ಟರ್ ಹತ್ರ್ ಹೋಗ್ಬೇಕು. 

ರಕ್ತನಾಳಗಳು ಸಣ್ಣ ಆಗೋದ್ರಿಂದ ಹೃದಯಕ್ಕೆ ರಕ್ತ ಸಂಚಾರ ಕಡಿಮೆ ಆಗಿ ದೇಹದ ಎಲ್ಲಾ ಭಾಗಗಳಿಗೆ ರಕ್ತದ ಜೊತೆ ಆಮ್ಲಜನಕ ಕೂಡ ಕಡಿಮೆ ಅಗೋದ್ರಿಂದ ಸುಸ್ತಾಗುತ್ತೆ.

i.dailymail.co.uk

4. ತಲೆ ತಿರುಗೋದು

ರಕ್ತ ಸಂಚಾರ ಕಡಿಮೆ ಆಗೋದ್ರಿಂದ ತಲೆ ತಿರುಗೋದು ಜೊತೇಲಿ ಬಿಸಿಲೇ ಇಲ್ಲದೇ ಬೆವರು ಬರಬಹುದು.

my.chiromatrixbase.com

5. ಉಸಿರು ತೊಗೊಳ್ಳೊಕ್ಕೆ ಬಿಡಕ್ಕೆ ಸ್ವಲ್ಪ ಕಷ್ಟ ಆಗೋದು

ಶ್ವಾಸಕೋಶಕ್ಕೆ ಆಮ್ಲಜನಕ ಕಡಿಮೆ ಆದ್ರೆ ಹೀಗಾಗುತ್ತೆ. ಇದರಿಂದ ಹೃದಯಕ್ಕೂ ತೊಂದ್ರೆ.

somatics.org

6. ನರಗಳು ಊದ್ಕೊಳೋದು

ಹಾರ್ಟು ರಕ್ತ ಪಂಪ್ ಮಾಡಕ್ಕೆ ಕಷ್ಟ ಪಡ್ತಾ ಇದ್ರೆ ನರಗಳು ಊದಿಕೊಳ್ತವೆ. ಅದರಲ್ಲೂ ಕಾಲಲ್ಲಿ ಜಾಸ್ತಿ ಊದ್ಕೊಳೋ ಸಾಧ್ಯತೆ ಇರುತ್ತೆ… ಯಾಕಂದ್ರೆ ಅದು ಹಾರ್ಟಿಂದ ತುಂಬ ದೂರ ಇರುತ್ತೆ.

veinmedic.com

7. ತುಟಿ ನೀಲಿಗಟ್ಟೋದು

ಇದಕ್ಕೂ ಕಾರಣ ಹಾರ್ಟಿಗೆ ಅಲ್ಲಿಗೆ ಸರಿಯಾಗಿ ರಕ್ತ ತಲುಪಿಸಕ್ಕೆ ಆಗದೆ ಇರೋದು.

img.webmd.boots.com

ನಿಮ್ಮ ಮತ್ತೆ ನಿಮ್ಮ ಹತ್ತಿರದವರ ದೇಹ ಅರ್ಥ ಮಾಡ್ಕೊಳ್ಳಿ, ಮೇಲೆ ಕೊಟ್ಟಿರೋ ಸೂಚನೆಗಳಲ್ಲಿ ಯಾವುದು ಕಂಡರೂ ಡಾಕ್ಟರ್ ಹತ್ತಿರ ಹೋಗಿ. ಹೆದರ್ಕೋಬೇಡಿ. ಇನ್ನೂ ಕಾಲ ಮಿಂಚಿಲ್ಲ. ನಿಮ್ಮ ಆರೋಗ್ಯ, ನಿಮ್ಮ ಮನೆಮಂದಿಯ ಆರೋಗ್ಯ ನಿಮ್ಮ ಕೈಯಲ್ಲೇ ಇದೆ…

s-media-cache-ak0.pinimg.com

ಆರೋಗ್ಯವೇ ಭಾಗ್ಯ! ಸರಿ ತಾನೇ?