http://i2.wp.com/www.hiptrip.in/blog/wp-content/uploads/2016/09/Solo-Travel-India_HipTrip_Blog.jpg?resize=850%2C565

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಅಂತ ಗಾದೆನೇ ಇಲ್ವೆ? ಒಂದು ಸಲ ಪ್ರವಾಸದ ಹುಚ್ಚು ಹಿಡಿದ್ರೆ ಅದನ್ನ ಬಿಡೋದು ಕಷ್ಟ. ಅದು ಕೊಡೋ ಅಷ್ಟು ಮನ:ಶಾಂತಿ ಬೇರೆಲ್ಲೂ ಸಿಗಲ್ಲ. ನಿಮ್ಮ ಪ್ರವಾಸ ಮಾಡೋ ಚಟ ಈಗಿಂದೋ ಅಥವಾ ಹಳೇದೋ, ನಿಮ್ಮ ಚಟ ಹೆಚ್ಚಿದಷ್ಟೂ ನೋಡೋಕ್ಕೆ ನಮ್ಮ ದೇಶದಲ್ಲಿ ಅಷ್ಟೇ ಜಾಗಗಳಿವೆ. ದೊಡ್ಡ ಪ್ರವಾಸಕ್ಕೆ ಉಳಿತಾಯ ಮಾಡೋ ಸಮಯದಲ್ಲಿ ನೀವು ಕಡಿಮೆ ಖರ್ಚಿನಲ್ಲಿ ನೋಡೋಕ್ಕೆ ಸಾಧ್ಯವಿರೋ ಒಂದಿಷ್ಟು ಜಾಗಗಳ ಬಗ್ಗೆ ನಾವು ನಿಮಗೆ ಹೇಳ್ತೀವಿ.

1. ಡೈಬ್ರು ಸೈಖೊವಾ ರಾಷ್ಟ್ರೀಯ ಉದ್ಯಾನವನ, ಅಸ್ಸಾಂ

upload.wikimedia.org
ಫೆರೆಲ್ ಕುದುರೆಗಳು ಆರಾಮಾಗಿ ಓಡಾಡಿಕೊಂಡಿರೋ ಜಾಗ ನಮ್ಮ ದೇಶದಲ್ಲೇ ಇದ್ದು ನಮಗೆ ಗೊತ್ತಿಲ್ಲ. ಹುಲ್ಲು ಹಾಸಿನ ಮೇಲೆ ಈ ಕುದುರೆಗಳ ಓಟ ನೋಡೋಕ್ಕೆ ಚೆಂದ. ಬ್ರಿಟಿಷರು ಈ ಕುದುರೆಗಳ ತಳಿಯನ್ನ ಎರಡನೇ ಮಹಾಯುದ್ಧದ ನಂತರ ಸ್ವತಂತ್ರವಾಗಿ ಬಿಟ್ಟರು. ಇವು ಕಾಡಿನತ್ತ ಹೋಗ್ತಾ ಕಾಡು ಪ್ರಾಣಿಗಳಾಗಿಹೋದ್ವು. ಹಾಗಾಗಿ ನೋಡೊಕ್ಕೆ ಸಿಗೋದು ಅಪರೂಪ.

2. ಧನ್ಕುಶ್ಕೋಡಿ, ತಮಿಳುನಾಡು

ದೆವ್ವ ಭೂತಗಳ ಬಗ್ಗೆ ಆಸಕ್ತಿ ಇದ್ದೋರು ಇಲ್ಲಿ ಒಂದು ಸಲ ಹೋಗಬೇಕು. 1964ರಲ್ಲಿ ಬಂದಂತಹ ಸೈಕ್ಲೋನ್ ಇಡೀ ಪಟ್ಟಣ, ರೈಲ್ವೆ ದಾರಿ, ರೈಲು ತುಂಬಾ ಇದ್ದ 115 ಜನ ಎಲ್ಲವನ್ನೂ ಬಲಿ ತೊಗೊಂಡು, ಎರಡು ದಿನಗಳ ವರೆಗೆ ರಕ್ಷಣೆಗೂ ಯಾರೂ ಇರಲಿಲ್ಲ. ಹೀಗಾಗಿ ಈ ಪಟ್ಟಣದ ನೋಟವೇ ವಿಚಿತ್ರವಾಗಿದೆ. ಅದಕ್ಕೆ ಸರಿಯಾಗಿ ಪಾಳು ಬಿದ್ದ ಚರ್ಚ್ ಮತ್ತು ರೈಲ್ವೆ ನಿಲ್ದಾಣ ಇದೆ.

3. ಮುರುದ್, ಮಹಾರಾಷ್ಟ್ರ

static2.tripoto.com
ಮುರುದ್ ಜಂಜೀರ ಕೋಟೆ ಆರೇಬಿಯನ್ ಸಮುದ್ರ ತಟದ ಬಂಡೆಗಳಾಚೆ ಇದೆ. ಇದನ್ನ ನೋಡೋಕ್ಕೆ ದೋಣಿ ಮೂಲಕ ಹೋಗಬೇಕು. ಇಲ್ಲಿ ಯೂರೋಪಿಯನ್ನರು ಮಾಡಿರೋ ಫಿರಂಗಿಗಳಿರೋ 21 ಕೋಟೆಗಳಿವೆ. ಒಳಗೆ ಒಂದು ಕೆರೆ ಸಹ ಇದೆ.

4. ತರಂಗಂಬಡಿ, ತಮಿಳುನಾಡು

ಡೆನ್ಮಾರ್ಕ್ ಸಂಪ್ರದಾಯದ ಊರೊಂದು ಭಾರತದಲ್ಲಿ ಕಂಡರೆ ಹೇಗಿರತ್ತೆ? ತರಂಗಂಬಡಿಯ ಹಾಗೆ. ಎರಡು ದಶಕಗಳ ಡೇನಿಶ್ ಜೀವನ ಶೈಲಿ ಇಲ್ಲಿನ ಪಂಚಾಯತ್ ಪೇಟೆಯ ಸಂಪ್ರದಾಯ ಮತ್ತು ಶಿಲ್ಪಶಾಸ್ತ್ರದ ಮೇಲೆ ಪರಿಣಾಮ ಬೀರಿದೆ. ಟ್ರಾನ್ಕ್ವೆಬಾರ್ ಅಂತ ಕೂಡ ಹೆಸರಿರೋ ಈ ಪಟ್ಟಣ ಬಹಳ ಸುಂದರವಾಗಿದೆ.

5. ತೌಫೇಮಾ, ನಾಗಾಲಾಂಡ್

2.bp.blogspot.com
ನಾಗಾ ಹಳ್ಳಿಯ ನಿಜವಾದ ಸೊಗಡನ್ನ ಇಲ್ಲಿ ಕಾಣಬಹುದು. ಅಂಗಾಮಿ ನಾಗಾ ರೀತಿಯ ಗುಡಿಸಿಲು ಇರೋ ಈ ಹಳ್ಳೀಲಿ ಟ್ರೆಕಿಂಗ್ ಅಥವಾ ನಡಿಗೆ ಮೂಲಕ ಪೂರ್ತಿ ಹಳ್ಳಿಯನ್ನ ನೋಡಬಹುದು. ಅಲ್ಲಿಯ ಸಮುದಾಯದವರು ನಡೆಸೋ ಅಡಿಗೆಮನೆಯಲ್ಲಿ ಒಳ್ಳೇ ಊಟ ಮತ್ತು ಬೀರ್ ಕೂಡ ಸಿಗತ್ತೆ.

6. ಮಂಡು, ಮಹಾರಾಷ್ಟ್ರ

‍6ನೇ ಶತಮಾನದಿಂದಲೂ ಇಲ್ಲಿ ಕೋಟೆ ಇದೆ. ರಕ್ಷಣಾ ವ್ಯವಸ್ಥೆಗಾಗಿ ಈ ಕೋಟೆ ಕಲ್ಲುಬಂಡೆಗಳ ಮೇಲಿದೆ. ಒಳಗೆ ಮಸೀದಿಗಳು, ಅರಮನೆಗಳು, ಗುಡಾಣಗಳು, ದೇವಸ್ಥಾನಗಳು, ಸ್ಮಾರಕಗಳಿವೆ. ಇಲ್ಲಿ ಹೋದರೆ ಬಾಜ಼್ ಬಹದ್ದೂರ್ ಮತ್ತು ರೂಪಮತಿಯ ಪ್ರೇಮಕಥೆಯನ್ನ ಕೇಳದೇ ಬರಬೇಡಿ.

7. ಲುಂಗ್ನಕ್ ಕಣಿವೆ, ಜಮ್ಮು ಕಶ್ಮೀರ

globalvisiontours.com
12ನೇ ಶತಮಾನದಲ್ಲಿ ಕಟ್ಟಿರುವ ಗುಹೆ ರೀತಿಯ ಬೌದ್ಧ ಮಠವಾದ ಫುಗ್ತಾಲ್ ಗೊಂಪಾ ಸುಮಾರು 70 ಬೌದ್ಧ ಸನ್ಯಾಸಿಗಳಿಗೆ ಆಶ್ರಯ ತಾಣವಾಗಿದೆ. ಜ಼ನ್ಸ್ಕಾರ್ ನ ದಕ್ಷಿಣ ಪೂರ್ವದಲ್ಲಿದ್ದು ಈ ಮಠವನ್ನ ಇಟ್ಟಿಗೆ ಮತ್ತು ಕಲ್ಲುಗಳಿಂದ ಕಟ್ಟಲಾಗಿದೆ. ಗುಹೆಯ ಬಾಯ ಬಳಿ ಇದು ನೇತಾಡುವಂತಿದೆ. ಇಲ್ಲಿ ನಡೆದೇ ಹೋಗಬೇಕು. ಅಷ್ಟೇ ಅಲ್ಲ, ಚಿಕಿತ್ಸಾತ್ಮಕ ನೀರಿನ ಬುಗ್ಗೆಗಳನ್ನ ಇಲ್ಲಿ ಕಾಣೋದು ಮರೀಬೇಡಿ.

8. ಮೌಲಿನಂಗ್, ಮೇಘಾಲಯ

ಕಥೆಗಳಲ್ಲಿ ಕೇಳೋ ಅಂಥ ಹಳ್ಳಿಯನ್ನ ನಿಜದಲ್ಲಿ ನೋಡೋ ಆಸೆ ಇದ್ರೆ ಇಲ್ಲಿಗೆ ಹೋಗಿ. ಇದು ಅತ್ಯಂತ ಸ್ವಚ್ಛ ಹಳ್ಳಿ. ಬಾಂಗ್ಲಾದೇಶದ ಗಡಿ ಬಳಿ ಇರೋದ್ರಿಂದ ಪಕ್ಕದ ದೇಶವನ್ನ ಈ ಹಳ್ಳಿಯ ಕೆಲವು ಜಾಗಗಳಲ್ಲಿ ನಿಂತು ನೋಡಬಹುದು. ಜೀವಂತ ಬೇರುಗಳ ಸೇತುವೆ ಹಾಗು ಮರದ ಮೇಲಿನ ಮನೆಗಳು ಇಲ್ಲಿ ನೋಡಲೇಬೇಕಾದವು.

9. ಚಂಪನೇರ್-ಪಾವಘಡ್, ಗುಜರಾತ್

nativeplanet.com
ಏನು ನೋಡಬೇಕು, ಏನು ಬಿಡಬೇಕು ಅಂತ ಗೊತ್ತಗದಿರೋ ಅಷ್ಟು ಜಾಗಗಳು ಇಲ್ಲಿವೆ. ಕಂಚಿನ ಯುಗದ ಬೆಟ್ಟಗಳ ಹಿಂದು ಕೋಟೆ, 16ನೇ ಶತಮಾನದ ಅವಶೇಷಗಳು, ಪುರಾತನ ಮಸೀದಿ, ದೇವಾಲಯ, ಸ್ಮಾರಕ, ಮೆಟ್ಟಿಲ ಬಾವಿ, ಕಟ್ಟೆ ಎಲ್ಲವೂ ಇಲ್ಲಿ ಸಿಗತ್ತೆ. ಇತಿಹಾಸದಲ್ಲಿ ಆಸಕ್ತಿ ಇರೋರಿಗೆ ಇದು ಹಬ್ಬ.

10. ಗಂಡಿಕೋಟ, ಆಂಧ್ರ ಪ್ರದೇಶ

ಇಲ್ಲಿ ಪುರಾತನ ದೇವಾಲಯ, ಮಸೀದಿ, ಜಮಿಯಾ ಮಸ್ಜಿದ್ ಎಲ್ಲಾ ಇವೆ. ಆದರೆ ಅದಕ್ಕಿಂತ ಮುಖ್ಯವಾಗಿ ಈ ಜಾಗ ಭಾರತದ ಮಹಾ ಕಣಿವೆ ಎಂದೇ ಪ್ರಸಿದ್ಧ. ಕೆಂಪು ಗ್ರಾನೈಟ್ ಬೆಟ್ಟಗಳ ನಡುವೆ 300 ಅಡಿ ಆಳದಲ್ಲಿ ಪೆನ್ನಾರ್ ನದಿ ಕಣಿವೆಯಾಗಿ ಸಾಗುವ ಸ್ಥಳ ಇದು. ಇದು ಅಷ್ಟು ಪ್ರಸಿದ್ಧ ಆಗಿಲ್ಲ. ಹಾಗಾಗಿ ಪ್ರಶಾಂತವಾಗಿದೆ.

11. ಶೆಕಾವಟಿ, ರಾಜಸ್ಥಾನ

rajasthanvisit.com
ಇಲ್ಲಿರೋ ಮಹಲುಗಳು ಕಣ್ಣು ಕೋರೈಸುವಂತಿವೆ. ಅಲ್ಲಿ ಚಿತ್ರಕಲೆ ಬಿಡಿಸಿದ ಕಲಾವಿದರಿಗೆ ತಮ್ಮಲ್ಲಿ ಅಷ್ಟು ಪ್ರತಿಭೆ ಇದೆ ಅನ್ನೋ ಅರಿವಿತ್ತೋ ಇಲ್ವೋ! ಕುಟುಂಬದ ದೃಶ್ಯ, ಪುರಾಣದ ಪಾತ್ರಗಳು, ಹೊಸ ಆವಿಷ್ಕಾರಗಳು, ಇಂದಿನ ಲೋಗೋಗಳು, ಏನಿಲ್ಲ ಇಲ್ಲಿ?

12. ರಾಖಿಘರಿ, ಹರಿಯಾಣ

ರಿಗ್ವೇದದಲ್ಲಿ ಹೇಳಿರೋ ಸರಸ್ವತಿ ನದಿಯ ದಡದಲ್ಲಿರೋ ಇದು, ಸಿಂಧು ನದಿ ನಾಗರೀಕತೆಯ ಕಾಲದ ಅತಿ ದೊಡ್ಡ ಮತ್ತು ಮೊದಲ ನಗರ. ಇಲ್ಲಿ ಸಿಕ್ಕಿರೋ ಕರಕುಶಲ ವಸ್ತುಗಳು 5000 ಬಿ.ಸಿ. ಯದು. ಇನ್ನೂ ಇಲ್ಲಿ ಶೋಧನೆ ಆಗಬೇಕಿರೋದು ಬಹಳಷ್ಟಿದೆ. ಈಗಿನವರೆಗೆ ಚಿನ್ನ, ಆಭರಣಗಳು, ಆಟಿಕೆಗಳು, ಚರಂಡಿ ವ್ಯವಸ್ಥೆ, ರಸ್ತೆಗಳು ಮತ್ತು ಮಣ್ಣಿನ ಇಟ್ಟಿಗೆಗಳು ಸಿಕ್ಕಿವೆ.

13. ಶೆಟ್ಟಿಹಳ್ಳಿ, ಕರ್ನಾಟಕ

upload.wikimedia.org
ಇಲ್ಲಿ ಹೋದರೆ ಮುಳುಗಿ ಉಳಿದಿರೋ ಊರಿನ ಅವಶೇಷಗಳನ್ನ ನೋಡಿ ಬನ್ನಿ. ಚರ್ಚ್ ಒಂದರ ಮುಖ್ಯ ಆಕಾರ ಬಿಟ್ಟು ಮಿಕ್ಕವೆಲ್ಲಾ ನಾಶವಾಗಿವೆ. ಫ್ರೆಂಚ್ ಜನ ಇದನ್ನ ಕಟ್ಟೋಕ್ಕೆ ಪ್ಲಾಸ್ಟರ್, ಬೆಲ್ಲ ಮತ್ತೆ ಮೊಟ್ಟೆ ಉಪಯೋಗಿಸಿದ್ದರು. ಇಂದಿಗೂ ಇವು ಗೋಡೆಗಳನ್ನ ಗಟ್ಟಿಯಾಗಿ ಹಿಡಿದಿವೆ. ಹೇಮಾವತಿ ನದಿ ಈ ಚರ್ಚನ್ನ ನುಂಗುವ ಕಾಲ ಕೂಡ ನಾವು ನೆನೆಸಿಕೊಳ್ಳಬಹುದು.

14. ಎಡಕಲ್ಲು, ಕೇರಳ

6000ಬಿ.ಸಿ.ಯ ಆಕರ್ಷಕ ಚಿತ್ರಕಲೆ ಇರೋ ಈ ಗುಹೆಗಳು ವ್ಯಾಪಾರಿ ರಸ್ತೆಯ ಪಕ್ಕದಲ್ಲಿವೆ. ಇಲ್ಲಿ ಮೂರು ರೀತಿಯ ಚಿತ್ರಕಲೆ ಇದ್ದು ಅತೀ ಪ್ರಾಚೀನವಾದದ್ದು ಸುಮಾರು 8000ಬಿ.ಸಿ. ಕಾಲದ್ದು. ಇತಿಹಾಸದ ಬೇರೆ ಬೇರೆ ಸಮಯಗಳಲ್ಲಿ ಇಲ್ಲಿ ಜನರು ವಾಸವಿದ್ದಿರೋ ಬಗ್ಗೆ ಸಾಕ್ಷಿಗಳಿದೆ.

15. ಲೋಕ್ಟಕ್ ಕೆರೆ, ಮಣಿಪುರ

thebetterindia.comಅಳಿದು ಹೋಗ್ತಿರೋ ಸಾಂಗಾಯ್ ಜಿಂಕೆಗಳಿರೋ ಕೇಬುಲ್ ಲಂಜಾವ್ ರಾಷ್ಟ್ರೀಯ ಉದ್ಯಾನವನ ಈ ಲೋಕ್ಟಕ್ ಕೆರೆ ಮೇಲಿದೆ. ಹಿಂದೆ ಇದ್ದ ಬೆಳೆ ಮತ್ತು ಮಣ್ಣಿನ ಕೊಳೆತದಿಂದ ಈ ತೇಲುವ ಉದ್ಯಾನವನ ರೂಪುಗೊಂಡಿದೆ ಅಂತ ಸ್ಥಳೀಯರು ಹೇಳ್ತಾರೆ. ಇದನ್ನ ನೋಡೊವರೆಗೂ ನಿಮಗೆ ನಂಬಿಕೆ ಬರಲ್ಲ. ಹಾಗಾಗಿ ಸ್ವತಃ ನೀವೇ ಹೋಗಿಬನ್ನಿ.