ಮೈಯಲ್ಲಿ ನೀರು ತುಂಬಿದರೆ ನಮಗೆ ಗೊತ್ತೇ ಇಲ್ಲದೇನೇ ನಾವು ದಪ್ಪ ಕಾಣ್ತೀವಿ. ಏನೂ ತಿನ್ನಲ್ಲ ಆದರೂ ದಪ್ಪ ಕಾಣ್ತೀವಿ ಅನ್ನೋರು ಯೋಚಿಸಿ. ಒಂದೇ ದಿನದಲ್ಲಿ ಬೇಕಾದರೂ ಕಡಿಮೆ ಮಾಡಬಹುದು, ಅಥವಾ ಕೆಲವು ದಿನಗಳಲ್ಲಿ ಕಡಿಮೆ ಮಾಡಬಹುದು. ಊಟ ಬದಲಾಯಿಸ್ತೀರೋ ದಿನಚರಿ ಬದಲಾಯಿಸ್ತೀರೋ ನಿಮಗೆ ಬಿಟ್ಟಿದ್ದು.

ದೇಹದಲ್ಲಿ ನೀರಿನ ಅಂಶ ಹೆಚ್ಚು ಉಳಿಯೋದ್ರಿಂದ –

* ಊತ ಬಂದ ಹಾಗೆ ಕಾಣಬಹುದು

* ಕೈ-ಕಾಲುಗಳು ನಿಮಗೆ ಭಾರ ಅನ್ನಿಸಬಹುದು

* ಚರ್ಮದಲ್ಲಿ ಕಾಂತಿಹೀನವಾಗಿ ಯಾವಾಗಲೂ ಊತದ ಕಾರಣ ಬೆಚ್ಚಗಿರುತ್ತೆ

* ಇನ್ನು ಮೂಳೆಗಳಲ್ಲಿ ಚಲನ ವಲನ ಕಷ್ಟ ಕೂಡ ಆಗಬಹುದು

* ಲಿವರ್ ಮತ್ತೆ ಹೃದಯಕ್ಕೂ ತೊಂದರೆಯಾಗಬಹುದು

ನೀರಿನ ಅಂಶ ಯಾವಾಗ ಉಳಿಯುತ್ತೆ ಗೊತ್ತಾ?

* ಹೆಂಗಸರಲ್ಲಿ ಮುಟ್ಟಾಗೋ ಹಿಂದು ಮುಂದು

* ನೀವು ಇಡೀ ದಿನ ಕೂತು ಅಥವಾ ಒಂದೇ ಕಡೆ ನಿಂತು ಕೆಲಸ ಮಾಡಿದಾಗ

* ಸಾಮಾನ್ಯವಾಗಿ ಗಂಟೆಗಟ್ಟಲೆ ಬಸ್ಸಲ್ಲಿ ಅಥವಾ ವಿಮಾನದಲ್ಲಿ ಪ್ರಯಾಣ ಮಾಡಿದಾಗಲೂ ಹೀಗಾಗೋದುಂಟು

ಈ 12 ಉಪಾಯ ಮಾಡ್ತ ಬನ್ನಿ ತಕ್ಕಮಟ್ಟಿಗೆ ಸಣ್ಣ ಆಗ್ತೀರಿ. ಮೈಯಲ್ಲಿ ನೀರು ತುಂಬಿ ದಪ್ಪ ಕಾಣೋದು ತಪ್ಪತ್ತೆ 🙂

1. ಫಾಸ್ಟ್ ಫುಡ್ ತಿನ್ನೋದು ಕಮ್ಮಿ ಮಾಡಿ ಮೈಯಲ್ಲಿರೋ ಸೋಡಿಯಂ ಅಂಶ ಕಮ್ಮಿ ಮಾಡ್ಕೊಳಿ

ಇತ್ತೀಚಿಗೆ ಸಿಗೋ ಎಲ್ಲಾ ಆಹಾರಗಳು ಅದರೆ ಕರಿದ ಪದಾರ್ಥಗಳು, ಪ್ಯಾಕ್ ನಲ್ಲಿ ಸಿಗೋ ಚಿಪ್ಸ್ ಹೀಗೆ ಎಲ್ಲದರಲ್ಲೂ ಅಗತ್ಯಕ್ಕಿಂತ ಹೆಚ್ಚು ಸೋದಿಯಂ ಅಂಶ ಇರೋ ಕಾರಣ ಇವುಗಳನ್ನ ತಿಂದಾಗ ದೇಹ ಸಮತೋಲನ ಉಳಿಸಿಕೊಳ್ಳೋದಕ್ಕಾಗಿ ಹೆಚ್ಚೆಚ್ಚು ನೀರು ಉಳಿಸಿಕೊಳ್ಳುತ್ತೆ ಇದರಿಂದ ರಕ್ತದೊತ್ತಡ ಕೂಡ ಹೆಚ್ಚಾಗಿ ಮುಂದೊಂದು ದಿನ ಹೃದಯಾಘಾತ ಅಥಾವಾ ಪಾರ್ಶ್ವವಾಯು ಕೂಡ ಆಗಬಹುದು.

2. ಸೊಪ್ಪು ಚೆನ್ನಾಗಿ ತಿಂದು ಮೈಯಲ್ಲಿ ಮಗ್ನೀಷಿಯಂ ಸರಿ ಪ್ರಮಾಣದಲ್ಲಿರೋ ಹಾಗೆ ಮಾಡ್ಕೊಳಿ

ಮುಟ್ಟಿನ ಸಮಯದಲ್ಲಿ ಮಗ್ನೀಷಿಯಂ ಸಮತೋಲನದಲ್ಲಿಲ್ಲದಾಗ ಮಹಿಳೆಯರಲ್ಲಿ ನಾನಾ ರೀತಿ ತೊಂದರೆಗಳು ಕಾಣಸಿಗುತ್ತೆ. ಅದರಲೂ ಮನಸಿನ ಭಾವನೆಗಳ ಮೇಲೂ ಇದು ಪ್ರಭಾವ ಬೀರುತ್ತೆ. ಇದನ್ನ ತಡೆಯೋಕೆ ನಾವು ಮಗ್ನೀಷಿಯಂ ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು. ಇನ್ನು ಪುರುಷರಲ್ಲೂ ಹೆಚ್ಚು ಕಡಿಮೆ ಇದೇ ರೀತಿಯ ಪರಿಣಾಮ ಕಾಣುತ್ತೆ.

3. ಬಾಳೆಹಣ್ಣು ತಿಂದು ಮೈಗೆ ಬೇಕಾದಷ್ಟು ಪೊಟ್ಯಾಷಿಯಂ ಅಂಶ ಸೇರ್ಸ್ಕೊಳಿ, ಸೋಡಿಯಂ ತಾನಾಗೆ ಕಡಿಮೆಯಾಗತ್ತೆ

ದೇಹದಲ್ಲಿ ಪೊಟ್ಯಾಷಿಯಂ ಅಂಶ ಕಡಿಮೆಯಾದಷ್ಟೂ ಅದರ ಬದಲಿಗೆ ದೇಹ ಸೋಡಿಯಂ ಅಂಶವನ್ನ ಉಳಿಸಿಕೊಳ್ಳುತ್ತೆ. ಇದರಿಂದ ತೊಂದರೆ ಹೆಚ್ಚು. ಅದೇ ಪೊಟ್ಯಾಷಿಯಂ ಸಮಪ್ರಮಾಣದಲ್ಲಿದ್ದರೆ ದೇಹದಲ್ಲಿ ಮೂತ್ರ ಹೆಚ್ಚು ಉತ್ಪತ್ತಿ ಆಗಿ ದೇಹದಲ್ಲಿ ನೀರಿನ ಅಂಶ ಉಳಿಯದ ಹಾಗೆ ನೋಡಿಕೊಳ್ಳುತ್ತೆ.

4. ಕಾರ್ಬೋಹೈಡ್ರೇಟ್ ತಿನ್ನೋದನ್ನ ಕಡಿಮೆ ಮಾಡಿ

ಹೆಚ್ಚು ಕಾರ್ಬೋಹೈಡ್ರೇಟ್ ಇದ್ದರೆ ಅದು ಲಿವರ್ ಹಾಗು ಮಾಂಸಖಂಡದಲ್ಲಿ ಗ್ಲೈಕೋಜನ್ ಆಗಿ ಇರುತ್ತೆ. ಇದು ದೇಹದಲ್ಲಿ ಹೆಚ್ಚಾದಷ್ಟೂ ನೀರಿನ ಅಂಶ ಕೂಡ ದೇಹದಲ್ಲಿ ಉಳಿಯುತ್ತೆ.

ಇನ್ನೊಂದು ವಿಷಯ ಅಂದರೆ ಹೆಚ್ಚು ಗ್ಲೈಕೋಜನ್ ಇದ್ದರೆ ಹೆಚ್ಚೆಚ್ಚು ಇನ್ಸುಲಿನ್ ದೇಹದಲ್ಲಿರುತ್ತೆ ಅದು ದೇಹದಲ್ಲಿ ಸೋಡಿಯಂ ಉಳಿಯೋ ಹಾಗೆ ಮಾಡಿ ದೇಹದಲ್ಲಿ ಹೆಚ್ಚೆಚ್ಚು ನೀರು ಉಳಿಯೋ ಹಾಗೆ ಮಾಡುತ್ತೆ.

5. ಮೈಯಲ್ಲಿ ಪ್ರೋಟೀನ್ ಅಂಶ ಸಾಕಷ್ಟಿದೆಯೇ ನೋಡಿಕೊಳ್ಳಿ

ದೇಹದಲ್ಲಿ ಸೀರಮ್ ಆಲ್ಬ್ಯುಮಿನ್ ಅನ್ನೋ ಪ್ರೋಟೀನ್ ಬೇರೆ ಬೇರೆ ಕಣಗಳಲ್ಲಿರೊ ನೀರನ್ನ ರಕ್ತಕ್ಕೆ ತಂದು ದೇಹದಿಂದ ಹೊರಹಾಕೋದರ ಮೂಲಕ ದೇಹದಲ್ಲಿ ನೀರಿನ ಸಮತೋಲನವನ್ನ ಕಾಪಾಡೋದ್ರಲ್ಲಿ ಸಮರ್ಥವಾಗಿರುತ್ತೆ. ಇನ್ನು ಪ್ರೋಟೀನ್ ಕಡಿಮೆ ಆದರೆ ಈ ಕೆಲಸ ಸರಿಯಾಗಿ ಆಗದೇ ದೇಹದ ಎಲ್ಲ ಕಣಗಳಲ್ಲಿ ನೀರು ಉಳಿಯೋ ಸಾಧ್ಯತೆ ಹೆಚ್ಚು.

ನಿಮಗೆ ಮುಂಚೆ ಮಾಡುತ್ತಿದ್ದ ಕೆಲಸ ಈಗ ಸರಾಗವಾಗಿ ಮಾಡೋಕಾಗ್ತಿಲ್ಲ ಅಂದರೆ ಅಥವಾ ಏಕಾಗ್ರತೆ ಕಡಿಮೆ ಆಗ್ತಾ ಇದೆ ಅಂದರೆ ಪ್ರೋಟೀನ್ ಕಡಿಮೆ ಆಗುತ್ತಿದೆ ಅನ್ನೋದರ ಮುನ್ಸೂಚನೆ ಇರಬಹುದು.

6. ಬೆವರು ಬರೋ ತನಕ ಸಾಕಷ್ಟು ಕೆಲಸ ಅಥ್ವಾ ವ್ಯಾಯಾಮ ಮಾಡಿ

ಬೆಳಗಿಂದ ಸಂಜೆ ವರೆಗೂ ಕೂತೇ ಕೆಲಸ ಮಾಡೋರಲ್ಲಿ ನೀರಿನ ಅಂಶ ಕೈಕಾಲುಗಳಲ್ಲಿ ಉಳಿದು ದೇಹದ ತೂಕ ಹೆಚ್ಚಾಗುತ್ತೆ. ಅದೇ ಆಗಾಗ ಸಣ್ಣ ಪುಟ್ಟ ವ್ಯಾಯಮ ಅಥವಾ ಸೈಕಲ್ ಹೊಡೆಯೋದು, ಈಜೋದು ಮಾಡೋದ್ರಿಂದ ದೇಹದಲ್ಲಿ ರಕ್ತಸಂಚಾರ ಹೆಚ್ಚಾಗಿ ಹೆಚ್ಚೆಚ್ಚು ಬೆವರಿ ನೀರಿನ ಅಂಶ ಹೊರ ಹೋಗೋಕೆ ಸಹಾಯ ಮಾಡುತ್ತೆ.

ಕಡೇ ಪಕ್ಷ ಇಡೀ ದಿನ ಕೂತಿರೋದು ಎರಡು ಗಂಟೆಗೊಮ್ಮೆಯಾದರೂ ಓಡಾಡೋದ್ರಿಂದ ರಕ್ತಸಂಚಾರ ಚೆನ್ನಾಗಿರುತ್ತೆ.

7. ಅಕ್ಯುಪಂಚರ್ ಟ್ರೀಟ್ಮೆಂಟ್ ಮಾಡಿಸಿಕೊಳ್ಳಿ

ಇದರ ಪ್ರಕಾರ ಹೆಚ್ಚೆಚ್ಚು ನೀರಿನ ಅಂಶ ದೇಹದಲ್ಲಿ ಉಳಿಯೋದ್ರಿಂದ ಸ್ಪ್ಲೀನ್ ಸರಿಯಾಗಿ ಕೆಲಸ ಮಾಡದೇ ದೇಹದ ಮಧ್ಯ ಭಾಗದಲ್ಲಿ ನೀರು ಉಳಿಯೋಹಾಗೆ ಆಗುತ್ತೆ, ಆದ್ದರಿಂದ ಅಕ್ಯುಪಂಚರ್ ಥೆರಪಿಸ್ಟ್ ಹತ್ತಿರ ನಿಮ್ಮ ಸ್ಪ್ಲೀನ್ ಚೆನ್ನಾಗಿ ಕೆಲಸ ಮಾಡೋ ಹಾಗೆ ಟ್ರೀಟ್ಮೆಂಟ್ ತಗೊಳ್ಳೋದು ಉತ್ತ,ಮ.

8.  ಧನಿಯಾ ನೀರು ಕುಡೀರಿ

ಗೋಕ್ಷುರ, ಅಶ್ವಗಂಧ, ಪುನರ್ನವಾಸವ ಅಷ್ಟೇ ಅಲ್ಲದೇ ನಿಮ್ಮ ಮನೆಯಲ್ಲಿರೋ ಧನಿಯಾ ಕಾಳುಗಳನ್ನ ಸೇವಿಸೋದ್ರಿಂದಲೂ ದೇಹದಲ್ಲಿ ಹೆಚ್ಚಿನ ನೀರು ಶೇಖರಣೆ ಆಗದಂತೆ ನೋಡಿಕೊಳ್ಳಬಹುದು. ಇನ್ನು ಜೋಳ, ಹೆಚ್ಚು ಉಪ್ಪಿನ ಅಂಶ ಅಥವಾ ಸಕ್ಕರೆ ಅಂಶ ಇರೋ ಪದಾರ್ಥಗಳನ್ನ ತಿನ್ನದೇ ಇರೋದೇ ಉತ್ತಮ.

9. ಯೋಗ ಮಾಡಿ

ದೇಹ ಹಾಗೆ ಮನಸ್ಸನ್ನ ದೃಢವಾಗಿಸೋದಷ್ಟೇ ಅಲ್ಲದೇ ದೇಹದಲ್ಲಿರೋ ಅನಗತ್ಯ ಹೆಚ್ಚಿನ ನೀರಿನಾಂಶವನ್ನ ದೇಹದಿಂದ ಹೊರ ಹಾಕೋಕೂ ಯೋಗ ಸಹಾಯ ಮಾಡುತ್ತಂತೆ. ಶೀರ್ಶಾಸನ, ಸೂರ್ಯನಮಸ್ಕಾರ, ಸುಪ್ತ ವೀರಾಸನ, ವಿಪರೀತ ಕರಣಿಯಂತಹ ಆಸನಗಳು ದೇಹದಲ್ಲಿನ ಅಧಿಕ ನೀರಿನ ಅಂಶವನ್ನ ಹೊರ ಹಾಕೋಕೆ ಸಹಾಯ ಮಾಡುತ್ತಂತೆ.

10. ಹೇಗಾದ್ರೂ ನಿಮ್ಮ ಊಟ-ತಿಂಡಿ ಜೊತೆ ಏಲಕ್ಕಿ ಸೇರ್ಸ್ಕೊಳಿ

ಆಯುರ್ವೇದದಲ್ಲಿ ಹೇಳೋ ಹಾಗೆ ಏಲಕ್ಕಿ ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡೋದರ ಜೊತೆಜೊತೆಗೆ ದೇಹದಲ್ಲಿನ ಹೆಚ್ಚು ನೀರಿನ ಅಂಶವನ್ನ ಹೊರತೆಗೆಯೋಕೂ ಸಹಾಯಕಾರಿ ಅನ್ನೋದನ್ನ ಸಂಶೋಧನೆಗಳೂ ನಿರೂಪಿಸಿವೆಯಂತೆ.

11. ಆಹಾರದಲ್ಲಿ ಹೆಚ್ಚೆಚ್ಚು ಮೆಂತ್ಯಕಾಳು ಬಳಸಿ

ಒಂದು ಚಮಚ ಮೆಂತ್ಯಕಾಳನ್ನ ನೀರಲ್ಲಿ ನೆನೆಸಿಟ್ಟು ಒಂದು ಗಂಟೆ ನಂತರ ತಿನ್ನೋ ಅಭ್ಯಾಸ್ ಮಾಡಿಕೊಳ್ಳಿ, ಹೀಗೆ ದಿನಕ್ಕೆರಡು ಬಾರಿ ತಿನ್ನೋದ್ರಿಂದ ದೇಹದಲ್ಲಿ ಹೆಚ್ಚು ನೀರು ಉಳಿಯಲ್ಲ, ನೀವು ಮೆಂತ್ಯಾನ ಅಡಿಗೆ ಪದಾರ್ಥಗಳಲ್ಲಿ ಕೂಡ ಬಳಸಿ ಪರಿಣಾಮ ನೋಡಬಹುದು.

12. ಅಗಾಗ ಕಬ್ಬಿನ ರಸ ಸೇವಿಸಿ

ಇದು ಹೆಚ್ಚು ಮೂತ್ರದ ಮೂಲಕ ದೇಹದಲ್ಲಿನ ಅಧಿಕ ನೀರನ್ನ ಹೊರತೆರೆಯೋದಲ್ಲದೇ ದೇಹದಲ್ಲಿನ ಟಾಕ್ಸಿನ್ಸ್ ಅನ್ನೂ ಹೊರತೆಗೆದು ಆರೋಗ್ಯಕ್ಕೆ ದಾರಿ ಮಾಡಿಕೊಡುತ್ತೆ.

ಕಷ್ಟ ಏನಿಲ್ಲ. ಇಷ್ಟು ಮಾಡಿದ್ರೆ ಸಾಕು. ನೀವೇ ವ್ಯಾತ್ಯಾಸ ಕಾಣ್ತೀರಿ.