https://metrouk2.files.wordpress.com/2015/06/beautiful-indian-woman-thumbs-up-happy-smiling.jpg

ಅವಳು ನನ್ನನ್ನ ಯಾಕೆ ಮಾತಾಡಿಸ್ತಾ ಇಲ್ಲ? ನಾನೇನಾದರೂ ತಪ್ಪು ಹೇಳಿಬಿಟ್ನಾ? ನಾನು ಸರಿಯಾಗಿ ಬಟ್ಟೆ ಹಾಕೊಂಡಿದೀನಾ?… ಈ ತರಹದ ಪ್ರಶ್ನೆಗಳು ಕೆಲವರಿಗೆ ಸ್ವಲ್ಪ ತಲೆ ತಿಂದರೆ ಇನ್ನೂ ಕೆಲವರಿಗೆ ತುಂಬಾ ತಿಂತವೆ. ಅಂಥವರು ಸಾಮಾನ್ಯವಾಗಿ ತಲೆ ಓಡ್ಸೋದು ಜಾಸ್ತಿ – ಎಲ್ಲಿ ಓಡಿಸಬೇಕಾಗಿಲ್ಲವೋ ಅಲ್ಲಿ. ಹಿಂಗಾದರೆ ಹೆಂಗೆ? ಹಂಗಾದರೆ ಹೆಂಗೆ?… ಅಂತ ಪ್ರಶ್ನೆಗಳು ಅವರ ತಲೇನಲ್ಲಿ ಓಡ್ತಾನೇ ಇರ್ತವೆ. ಆದರೆ ಹೀಗೆ ತುಂಬಾ ತಲೆ ಕೆಡುಸ್ಕೊಳೋದು ಒಳ್ಳೇದಲ್ಲ. ನಿಮಗೆ ಆ ತೊಂದರೆ ಎನಾದರೂ ಇದ್ದರೆ ಕೆಳಗೆ ನಿಮಗೋಸ್ಕರ 5 ಸಲಹೆಗಳ್ನ ಕೊಟ್ಟಿದೀವಿ. ಇವುಗಳ್ನ ಗಂಭೀರವಾಗಿ ತೊಗೊಂಡ್ರೆ ಬರ್ತಾ ಬರ್ತಾ ನೀವು ವಿನಾ ಕಾರಣ ತಲೆ ಕೆಡುಸ್ಕೊಳೋದು ಕಡಿಮೆ ಮಾಡ್ಕೋತೀರಿ. ಓಕೆ, ರೆಡಿ ನಾ?

1. ನಾನು ಜಾಸ್ತಿ ಯೋಚನೆ ಮಾಡ್ತಿದೀನಿ ಅಂತ ಗುರುತಿಸಿಕೊಳ್ಳೋದು ಕಲಿತುಕೊಳ್ಳಿ ಮೊದ್ಲು

ಬದಲಾವಣೆ ಆಗಬೇಕು ಅನ್ನೋದಾದ್ರೆ ತೊಂದರೆ ಎನು ಅಂತ ಮೊದಲು ಅರ್ಥ ಆಗಬೇಕು. ಕೆಲವರಿಗೆ ತೊಂದರೆ ಇರೋದೇ ಗೊತ್ತಾಗಲ್ಲ…. ಇನ್ನು ಅದನ್ನ ಬಗೆಹರಿಸಿಕೊಳ್ಳೋದು ಹೇಗೆ? ಆದ್ದರಿಂದ ನಿಮಗೆ ಮೊದಲು ಗೊತ್ತಾಗಬೇಕು… ಓಹೋ ಈಗ ನಾನು ತುಂಬಾ ಯೋಚ್ನೆ ಮಾಡ್ತಿದೀನಿ ಅಂತ. ಆಗಲೇ ನಿಮ್ಮ ಮೇಲೆ ನೀವು ಹಿಡಿತ ಸಾಧಿಸಿಕೊಳಕ್ಕೆ ಆಗೋದು.

ಮೂಲ

2. ಒಂದ್ಸಲ ತೀರ್ಮಾನ ತೊಗೊಂಡ ಮೇಲೆ ಅದನ್ನ ಬದಲಾಯಿಸಕ್ಕಾಗಲ್ಲ ಅನ್ನೋ ಮನೋಭಾವ ಬಿಟ್ಟುಬಿಡಿ

ನಾನು ನೂರಕ್ಕೆ ನೂರು ಪರ್ಫೆಕ್ಟಾಗಿರೋ ತೀರ್ಮಾನಾನೇ‌ ತೊಗೋಬೇಕು ಅನ್ಕೊಂಡ್ರೆ ಯೋಚನೆ ಮಾಡೋದು ಒಂದೊಂದ್ಸಲ ನಿಲ್ಲೋದೇ ಇಲ್ಲ. ಆದರೆ ಅರ್ಥ ಮಾಡ್ಕೊಳಿ: ನಿಮ್ಮ ತೀರ್ಮಾನವನ್ನ ನೀವು ಬದಲಾಯಿಸಬಹುದು. ಮುಂದೆ ಏನಾಗತ್ತೆ ಅಂತ ಯಾರೂ ಖಡಾಖಂಡಿತವಾಗಿ ಹೇಳಕ್ಕಾಗಲ್ಲ. ಅಷ್ಟೆಲ್ಲ ಭವಿಷ್ಯ ನುಡಿಯಕ್ಕೆ ಯಾರಿಗೂ ಆಗಲ್ಲ. ನೀವು ಎಷ್ಟೇ ತಯಾರಿ ಮಾಡ್ಕೊಂಡ್ರೂ ಜೀವನ ನಿಮಗೆ ಹೊಸ ಹೊಸ ಸವಾಲುಗಳ್ನ ಕೊಡ್ತಾನೇ ಇರುತ್ತೆ. ಪ್ಲಾನ್ ಮಾಡೋದು ತಪ್ಪಲ್ಲ, ಆದರೆ ತೀರಾ ಜಾಸ್ತಿ ಯೋಚನೆ ಮಾಡ್ತಾ ಕೂತ್ಕೊಂಡ್ರೆ ನಿಮಗೆ ಸಿಗಬೇಕಾದ ಯಶಸ್ಸು ಸಿಗಲ್ಲ.

ಮೂಲ

3. ಮುಂದೆ ಬರಬಹುದಾದ ತೊಂದರೆಗಳ್ನೆಲ್ಲ ಈಗಲೇ ಒಂದೂ ಬಿಡದೆ ಲೆಕ್ಕ ಹಾಕ್ತೀನಿ ಅಂತ ಹೊರಡಬೇಡಿ

ಹೆದರಿಕೆಯಿಂದ ಹೀಗ್ ಮಾಡ್ತಾರೆ. ಬರೀ ಕೆಟ್ಟದರ ಬಗ್ಗೆ ಯೋಚಎನ್ ಮಾಡ್ತಾ ಇದ್ದರೆ ಯೋಚನೆ ಮಾಡೋದು ನಿಲ್ಲಲ್ಲ. ನಾವು ಏನನ್ನ ಯೋಚನೆ ಮಾಡ್ತೀವೋ ಅದು ಆಗೋಹಾಗೆ ಪ್ರಪಂಚ ನೋಡ್ಕೊಳುತ್ತೆ ಅಂತ ನಂಬೋರಿದಾರೆ. ಉದಾಹರಣೆಗೆ, ನೀವು ಬರೀ ಸಿಟ್ಟು ಮಾಡ್ಕೊಂಡು ಕೆಟ್ಟ ಕೆಟ್ಟ ಯೋಚನೆ ಮಾಡ್ತಾ ಇದ್ದರೆ ಅದನ್ನ ಹೆಚ್ಚಿಸುವಂತ ವಾತಾವರಣ ನಿಮಗಾಗಿ ನಿರ್ಮಾಣ ಆಗುತ್ತೆ. ಅದೇ ನೀವು ಒಳ್ಳೇದನ್ನೇ ಯೋಚನೆ ಮಾಡ್ತಿದ್ರೆ ಅಂಥ ವಾತಾವರಣಾನೇ ನಿರ್ಮಾಣ ಆಗುತ್ತೆ.

ಮೂಲ

4. ವರ್ತಮಾನದಲ್ಲಿ ಜೀವನ ಮಾಡೋದು ಕಲಿತುಕೊಳ್ಳಿ

ಭೂತಕಾಲದಲ್ಲಿ ಜೀವನ ಮಾಡಿದ್ರೆ ಹಳೇ ನೋವುಗಳು ತೊಂದರೆಗಳೆಲ್ಲ ನೆನಪಾಗಿ ಕಷ್ಟಕ್ಕೆ ಸಿಕಾಕೋತೀರಿ. ಇಂಥ ಯೋಚನೆಗಳು ಬರಕ್ಕೆ ಶುರು ಆದಾಗ ಗುರುತಿಸಿಕೊಂಡು ನಿಮ್ನ ನೀವು ವರ್ತಮಾನ ಕಾಲಕ್ಕೆ ಕರ್ಕೊಂಡ್ ಬನ್ನಿ. ಭೂತಕಾಲದಲ್ಲಿ ಜೀವನ ಮಾಡೋದ್ರಿಂದ ಏನ್ ತೊಂದ್ರೆ ಆಗುತ್ತೆ ಅಂತ ನಿಮಗೆ ನೀವೇ ನೆನಪಿಸಿಕೊಳ್ಳಿ. ಸಂತೋಷವಾಗಿರಬೇಕಾದ್ರೆ ಹಿಂದೆ ನಡೆದಿದ್ದನ್ನ ಮರೆತು ಇವತ್ತಿನ ಜೀವನ ಮಾಡಲೇಬೇಕು.

ಮೂಲ

5. ನಿಮ್ಮ ಜೊತೆ ನೀವು ಪಾಸಿಟಿವ್ ಆಗಿ ಮಾತಾಡೋದನ್ನ ಅಭ್ಯಾಸ ಮಾಡ್ಕೊಳಿ

ಎಲ್ಲಿ ಕೆಡಬಹುದು, ಏನು ಹಾಳಾಗಬಹುದು ಅಂತ ಯೋಚನೆ ಮಾಡೋ ಬದಲು ಎಲ್ಲಿ ಒಳ್ಳೇದಾಗಬಹುದು, ಹೇಗೆ ಚೆನ್ನಾಗಾಗಬಹುದು ಅಂತ ಯೋಚನೆ ಮಾಡಕ್ಕೆ ಶುರು ಮಾಡಿ. ನಿಮ್ಮ ಸಾಧನೆಗಳ ಪಟ್ಟಿ ಮಾಡ್ಕೊಳಿ. ತೀರಾ ಹಿಂದಿನ ಸಾಧನೆಗಳನ್ನಲ್ಲ, ಕೆಲವು ತಿಂಗಳ ಹಿಂದಿನ ಸಾಧನೆಗಳ ಬಗ್ಗೆ ನಾವು ಹೇಳ್ತಿರೋದು ಇಲ್ಲಿ. ತೀರಾ ದೊಡ್ಡ ಸಾಧನೆಗಳೂ ಆಗಬೇಕಿಲ್ಲ… ನಿಮ್ಮ ಫ್ರೆಂಡ್ ನಿಮ್ಮ ಹೇರ್ ಕಟ್ ನೋಡಿ ಚೆನ್ನಾಗಿದೆ ಅಂದ್ರೆ ಅದನ್ನೂ ಪಟ್ಟಿ ಮ್ ಆಡಿ. ಹೀಗೆ ದಿನಾ ಮಾಡ್ಕೋತಾ ಬಂದ್ರೆ ನೀವು ನೆಗೆಟಿವ್ ಆಗಿ ಯೋಚನೆ ಮಾಡ್ಕೊಂಡು ಜೀವನ ಕಳೆಯೋ ಸುಳಿಗೆ ಬೀಳಲ್ಲ.

ಮೂಲ